ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) ಸಾವಿನ ನಂತರ ಬಾಲಿವುಡ್ (Bollywood) ನೆಪೊಟಿಸಂ ಚರ್ಚೆ ಮುನ್ನೆಲೆಗೆ ಬಂತು. ಬಾಲಿವುಡ್ನಲ್ಲಿ ನಿರ್ಮಾಪಕ ಕರಣ್ ಜೋಹರ್ (Karan Johar) ಅವರನ್ನು ಎದುರಿಸಿ ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಎಂದೇ ಹೇಳಲಾಗುತ್ತದೆ. ಅಷ್ಟೊಂದು ಪ್ರಭಾವಿ ಸೆಲೆಬ್ರಿಟಿಯಾಗಿ (Celebrity) ಗುರುತಿಸಿಕೊಂಡಿದ್ದಾರೆ ಕರಣ್. ಅನುಷ್ಕಾ ಶರ್ಮಾ (Anushka Sharma) ಕೆರಿಯರ್ ಮುಗಿಸಲು ಪ್ಲ್ಯಾನ್ ಮಾಡಿದ್ದೆ ಎಂದು ನಿರ್ಮಾಪಕ ಕರಣ್ ಜೋಹರ್ ಹೇಳುವ ವಿಡಿಯೋ ಕ್ಲಿಪ್ ಒಂದು ವೈರಲ್ (Viral) ಆಗಿದೆ. ರಬ್ ನೇ ಬನಾದಿ ಜೋಡಿ ಸಿನಿಮಾ (Cinema) ಬರುವ ಮೊದಲು ತಾನು ಯಾವ ರೀತಿ ಅನುಷ್ಕಾ ಕೆರಿಯರ್ ಮುಗಿಸಲು ಬಯಸಿದ್ದೆ ಎನ್ನುವುದಾಗಿ ಅವರು ಹೇಳಿದ್ದಾರೆ.
ನಂತರ ಅನುಷ್ಕಾ ಶರ್ಮಾಗೆ ಕ್ಷಮೆ ಕೇಳಿದ್ದಾರೆ. ಅನುಷ್ಕಾ ಅವರ ಕೆಲಸ ನೋಡಿದ ನಂತರ ಮನಸು ಬದಲಾಯಿಸಿದೆ ಎಂದಿದ್ದಾರೆ. ಕರಣ್ ಜೋಹರ್ ಕೊಟ್ಟ ಈ ಹೇಳಿಕೆಗೆ ವಿವೇಕ್ ಅಗ್ನಿಹೋತ್ರಿ ಹಾಗೂ ಅಪೂರ್ವ ಅಸ್ರಾನಿ ಪ್ರತಿಕ್ರಿಯಿಸಿದ್ದಾರೆ.
ಹಳೆಯ ವಿಡಿಯೋ ವೈರಲ್
ಈ ಹಳೆಯ ವಿಡಿಯೋ 18ನೇ ಮಮಿ ಮುಂಬೈ ಫಿಲ್ಮ್ ಫೆಸ್ಟಿವಲ್ನದ್ದಾಗಿದೆ. 2016ರಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಕರಣ್ ಜೋಹರ್ ಅವರು ಐಶ್ವರ್ಯಾ ರೈ ಹಾಗೂ ಅನುಷ್ಕಾ ಶರ್ಮಾ ಜೊತೆ ಬಂದಿದ್ದರು. ಇವರು ಮೂವರು ಯೇ ದಿಲ್ ಹೇ ಮುಷ್ಕಿಲ್ ಸಿನಿಮಾದ ಪ್ರಮೋಷನ್ಗಾಗಿ ಬಂದಿದ್ದರು.
ಕೆರಿಯರ್ ಮರ್ಡರ್ ಮಾಡಲು ನಿರ್ಧಾರ
ರಾಜೀವ್ ಮಸಂದ್ ಹಾಗೂ ಅನುಪಮಾ ಚೋಪ್ರಾ ಅವರೊಂದಿಗೆ ಮಾತನಾಡಿದ ಕರಣ್ ಜೋಹರ್ ಅವರು, ನಾನು ಕಂಪ್ಲೀಟ್ ಆಗಿ ಅನುಷ್ಕಾ ಶರ್ಮಾ ಕೆರಿಯರ್ ಮರ್ಡರ್ ಮಾಡಲು ಬಯಸಿದ್ದೆ. ಆದಿತ್ಯ ಚೋಪ್ರಾ ನನಗೆ ಅನುಷ್ಕಾ ಫೋಟೋ ತೋರಿಸಿದರು. ಇಲ್ಲ ಇಲ್ಲ. ಈಕೆ ಬೇಡ , ಅನುಷ್ಕಾ ಜೊತೆ ಸೈನ್ ಮಾಡಬೇಡಿ. ಬೇರೆ ನಟಿ ಇದ್ದಾರೆ. ಅವರು ಸೈನ್ ಮಾಡಲಿ ಎಂದು ನಾನು ಹೇಳಿದ್ದೆ ಎಂದು ಕರಣ್ ರಿವೀಲ್ ಮಾಡಿದ್ದಾರೆ.
'I totally wanted to murder Anushka Sharma's career' - Karan Johar confesses to Rajeev Masand & Anupama Chopra in 2016. Said in jest, I'm sure, but still a worthy point in the raging insider-outsider debate. pic.twitter.com/8JNLp8Kyud
— Apurva (@Apurvasrani) April 6, 2023
ಈ ಹಿಂದೆ ಸೋನಂ ಕಪೂರ್ ಅವರು ರಬ್ ನೇ ಬನಾದಿ ಜೋಡಿ ಸಿನಿಮಾಗೆ ತಾನಿ ಪಾತ್ರಕ್ಕೆ ಶಾರ್ಟ್ಲಿಸ್ಟ್ ಆಗಿದ್ದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಆದರೆ ಆದಿತ್ಯ ಚೋಪ್ರಾ ಅವರು ಹೊಸ ನಟಿಯನ್ನು ಹೀರೋಯಿನ್ ಮಾಡಬೇಕೆಂದು ಬಯಸಿ ಸೋನಂ ಅವರನ್ನು ಲಿಸ್ಟ್ನಲ್ಲಿ ಎರಡನೇ ಸ್ಥಾನದಲ್ಲಿಟ್ಟಿದ್ದರು.
ನಮ್ಮಲ್ಲಿ ಹೊಸ ಹುಡುಗಿ ಒಬ್ಬಳಿದ್ದಾಳೆ. ನಂತರ ಲಿಸ್ಟ್ನಲ್ಲಿ ನೀನಿದ್ದಿ. ಹೊಸ ಹುಡುಗಿಯ ಆಡಿಷನ್ ಚೆನ್ನಾಗಿ ಬಂದರೆ ಆಕೆಯನ್ನೇ ಆಯ್ಕೆ ಮಾಡುತ್ತೇವೆ. ಏಕೆಂದರೆ ನಮಗೆ ಹೊಸ ನಟಿ ಬೇಕು. ಇಲ್ಲದಿದ್ದರೆ ನಿನ್ನನ್ನು ಆಯ್ಕೆ ಮಾಡುತ್ತೇವೆ ಎಂದಿದ್ದರು ಎಂದು ಸೋನಂ ರಿವೀಲ್ ಮಾಡಿದ್ದರು.
Someone’s only hobby is to make or break careers. If Bollywood is in gutter, it’s because of some people’s dirty ‘backroom’ politics against talented outsiders. https://t.co/GNPRjiW5ry
— Vivek Ranjan Agnihotri (@vivekagnihotri) April 6, 2023
ಕರಣ್ ವಿಡಿಯೋಗೆ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ ಅವರು, ಯಾರದ್ದೋ ಕರಿಯರ್ ನಿರ್ಮಿಸುವುದು ಅಥವಾ ಹಾಳು ಮಾಡುವುದಷ್ಟೇ ಕೆಲವರ ಹವ್ಯಾಸ. ಬಾಲಿವುಡ್ ಇಂದು ತೊಂದರೆಯಲ್ಲಿ ಸಿಲುಕಿದ್ದರೆ ಅದಕ್ಕೆ ಕಾರಣ ಕೆಲವು ಜನರ ಕೊಳಕು ರಾಜಕೀಯ. ಪ್ರತಿಭಾನ್ವಿತರ ವಿರುದ್ಧ ಬ್ಯಾಕ್ರೂಮ್ನಲ್ಲಿ ಮಾಡುವ ಪಾಲಿಟಿಕ್ಸ್ ಇದಕ್ಕೆ ಕಾರಣ ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಬಾಲಿವುಡ್ನಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹೇಳಿದ ಒಂದು ವಾರದ ನಂತರ ಈ ವಿಡಿಯೋ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ