Lust Stories: ಕಿಯಾರಾಗೇ ಡಿಫರೆಂಟ್ ಇಮೇಜ್ ಕೊಟ್ಟ ಈ ಚಿತ್ರಕ್ಕೆ ಬೇರೆ ಹಿರೋಯಿನ್ ಸೆಲೆಕ್ಟ್ ಆಗಿದ್ರಂತೆ!

ಇತ್ತೀಚೆಗಷ್ಟೇ ಹಿಂದಿಯ ಆರ್ಯ ಸೀರಿಸ್‌ ಗಳನ್ನು ಸುಶ್ಮಿತಾ ಸೇನ್‌ ಬದಲಿಗೆ ಕಾಜೋಲ್‌ ಮಾಡಬೇಕಿತ್ತು ಎಂದು ಸ್ವತಹಃ ಕಾಜೋಲ್‌ ಅವರೇ ಹೇಳಿಕೊಂಡಿದ್ದರು. ಇದೇ ರೀತಿ 2018ರಲ್ಲಿ ತೆರೆಕಂಡಿದ್ದ ʼಲಸ್ಟ್‌ ಸ್ಟೋರಿಸ್‌ʼ ನಲ್ಲಿ ಕಿಯಾರಾ ಅಡ್ವಾಣಿ ಆಯ್ಕೆಗೂ ಮುನ್ನ ಆ ನಟಿಗೆ ಆಫರ್‌ ನೀಡಿದ್ದೆ ಎಂದು ಕರಣ್‌ ಜೋಹರ್‌ ಕಾಫಿ ವಿತ್‌ ಕರಣ್‌ ಶೋನಲ್ಲಿ ಹೇಳಿದ್ದಾರೆ.

‌ʼಲಸ್ಟ್‌ ಸ್ಟೋರಿಸ್‌ʼ

‌ʼಲಸ್ಟ್‌ ಸ್ಟೋರಿಸ್‌ʼ

  • Share this:
ಸಿನಿಮಾ ರಂಗದಲ್ಲಿ ಒಂದು ಪಾತ್ರಕ್ಕೆ (Character) ತಕ್ಕನಾದವರನ್ನು ಹುಡುಕುವುದು ನಿರ್ದೇಶಕರ (Director) ಜವಾಬ್ದಾರಿಯಾಗಿರುತ್ತದೆ. ಈ ಪಾತ್ರವನ್ನು ಇವರೇ, ಇಂಥವರೇ ಮಾಡಿದರೆ ಪಾತ್ರಕ್ಕೆ ಜೀವ ತುಂಬಿಸಬಹುದು ಎಂಬ ಹಲವಾರು ಲೆಕ್ಕಚಾರಗಳನ್ನು ಹಾಕಿಕೊಂಡಿರುತ್ತಾರೆ ನಿರ್ದೇಶಕರು. ಆದರೆ ಕೆಲವೊಮ್ಮೆ ಕಲಾವಿದರು ನಿರ್ದೇಶಕರ ಆಫರ್‌ ಅನ್ನು ನಿರಾಕರಿಸಿದರೆ ಸ್ವಾಭಾವಿಕವಾಗಿ ನಿರ್ದೇಶಕರು ಬೇರೆ ಆಯ್ಕೆಗೆ (Choice) ಹೋಗಬೇಕಾಗುತ್ತದೆ. ಎಲ್ಲಾ ಸಿನಿಮಾ ರಂಗದಲ್ಲೂ ಇದು ಸರ್ವೇ ಸಾಮಾನ್ಯ. ನಿರ್ದೇಶಕರು, ನಟರು ಹಲವಾರು ಕಾರ್ಯಕ್ರಮಗಳಲ್ಲಿ ನಾನು ಆ ಪಾತ್ರ ಮಾಡಬೇಕಿತ್ತು, ಮೊದಲು ನನಗೆ ಆಫರ್‌ ಬಂದಿತ್ತು, ಡೈರೆಕ್ಟರ್‌ ಕೂಡ ಈ ಪಾತ್ರವನ್ನು ಅವರು ಮಾಡಬೇಕಿತ್ತು ಅಂತಾ ಹಲವಾರು ಬಾರಿ ಈ ಬಗ್ಗೆ ರಿವೀಲ್‌ ಮಾಡಿರುತ್ತಾರೆ.

ಇತ್ತೀಚೆಗಷ್ಟೇ ಹಿಂದಿಯ ಆರ್ಯ ಸೀರಿಸ್‌ ಗಳನ್ನು ಸುಶ್ಮಿತಾ ಸೇನ್‌ ಬದಲಿಗೆ ಕಾಜೋಲ್‌ ಮಾಡಬೇಕಿತ್ತು ಎಂದು ಸ್ವತಹಃ ಕಾಜೋಲ್‌ ಅವರೇ ಹೇಳಿಕೊಂಡಿದ್ದರು. ಇದೇ ರೀತಿ 2018ರಲ್ಲಿ ತೆರೆಕಂಡಿದ್ದ ʼಲಸ್ಟ್‌ ಸ್ಟೋರಿಸ್‌ʼ ನಲ್ಲಿ ಕಿಯಾರಾ ಅಡ್ವಾಣಿ ಆಯ್ಕೆಗೂ ಮುನ್ನ ಆ ನಟಿಗೆ ಆಫರ್‌ ನೀಡಿದ್ದೆ ಎಂದು ಕರಣ್‌ ಜೋಹರ್‌ ಕಾಫಿ ವಿತ್‌ ಕರಣ್‌ ಶೋನಲ್ಲಿ ಹೇಳಿದ್ದಾರೆ.

2018ರಲ್ಲಿ ತೆರೆಕಂಡ 'ಲಸ್ಟ್ ಸ್ಟೋರಿಸ್' ಕಿರುಚಿತ್ರ
ಸಿನಿ ಪ್ರೇಕ್ಷಕರಿಗೆ 2018ರಲ್ಲಿ ತೆರೆಕಂಡ ಕಿರುಚಿತ್ರ 'ಲಸ್ಟ್ ಸ್ಟೋರಿಸ್' ಬಗ್ಗೆ ಗೊತ್ತೇ ಇರುತ್ತದೆ. ಚಿತ್ರದ ಕೆಲವು ದೃಶ್ಯಗಳಿಂದ ಕಿಯಾರ ಅಡ್ವಾನಿ ಸಾಕಷ್ಟು ಸುದ್ದಿ ಕೂಡ ಆಗಿದ್ದರು ಮತ್ತು ರಾತ್ರೋರಾತ್ರಿ ಸ್ಟಾರ್‌ ಪಟ್ಟ ಕೂಡ ಗಿಟ್ಟಿಸಿಕೊಂಡು ಫೇಮಸ್‌ ಆಗಿದ್ದರು.

ಇದನ್ನೂ ಓದಿ: Kriti Sanon: ಗಾಢ ನೀಲಿ ಬಣ್ಣದ ಡ್ರೆಸ್​ನಲ್ಲಿ ಕೃತಿ ಸನೋನ್! ಮಿಮಿ ನಟಿಯ ಲುಕ್ ನೋಡಿ

ಮೊದಲು ಆ ಆಫರ್ ಯಾರಿಗೆ ಬಂದಿತ್ತು
'ಕಾಫಿ ವಿತ್ ಕರಣ್ 7' ನ ಇತ್ತೀಚಿನ ಸಂಚಿಕೆಯಲ್ಲಿ, ಈ ಕಿರುಚಿತ್ರಕ್ಕೆ ಮೊದಲು ಕೃತಿ ಸನೊನ್ ಅವರನ್ನು ಕೇಳಲಾಗಿತ್ತು ಎಂದು ಕಿರುಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ನಿರೂಪಕ ಕರಣ್ ಜೋಹರ್ ತಿಳಿಸಿದ್ದಾರೆ.

ಲಸ್ಟ್‌ ಸ್ಟೋರಿಸ್ ನಲ್ಲಿ ಕಿಯಾರಾ ನಿರ್ವಹಿಸಿದ ಪಾತ್ರಕ್ಕೆ ಈ ನಟಿ ಮೊದಲ ಆಯ್ಕೆಯಲ್ಲ ಎಂದು ಬಹಿರಂಗಪಡಿಸಿದರು. ವಾಸ್ತವವಾಗಿ, ಕರಣ್‌ ಜೋಹರ್‌, ಕಿಯಾರ ನಿರ್ವಹಿಸಿದ್ದ ಪಾತ್ರವನ್ನು ಕೃತಿ ಸನೊನ್ ಗೆ ಮಾಡುವಂತೆ ಸಂಪರ್ಕಿಸಿದ್ದರು, ಆದರೆ ಕೃತಿ ಸನೊನ್ ತಾಯಿ ನಟಿಗೆ ಆ ಪಾತ್ರವನ್ನು ಮಾಡಲು ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಅವರು ಕರಣ್‌ ಜೋಹರ್‌ ನೀಡಿದ್ದ ಆಫರ್‌ ಅನ್ನು ತಿರಸ್ಕರಿಸಿದ್ದರಂತೆ.

ಈ ಬಗ್ಗೆ ಸ್ವತಃ ಹೇಳಿದ ಕರಣ್‌ ಜೋಹರ್‌ "ಎಲ್ಲರ ತಾಯಿಯು ತಮ್ಮ ಹೆಣ್ಣುಮಕ್ಕಳನ್ನು ಅನುಮತಿಸದೆ ಇರುವ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನಾನು ಆಗ ಭಾವಿಸಿದೆ. ಇದು ವಾಸ್ತವವಾಗಿ ಬಹಳ ಸಬಲೀಕರಣದ ಕಥೆ ಮತ್ತು ಪಾತ್ರವಾಗಿದೆ. ಇದು ಮಹಿಳೆಯ ಸಂತೋಷದ ಹಕ್ಕಿನ ಬಗ್ಗೆ" ತೋರಿಸುವ ಚಿತ್ರವಷ್ಟೇ ಆಗಿತ್ತು ಎಂದು ಕರಣ್‌ ಹೇಳಿದರು.

ಕಿಯಾರಾ ಅಡ್ವಾನಿ ಈ ಸಿನೆಮಾಕ್ಕೆ ಸೆಲೆಕ್ಟ್ ಆಗಿದ್ದು ಹೇಗೆ?
ಮಾತು ಮುಂದುವರಿಸಿದ ಕರಣ್‌, ಹೀಗೆ ನಂತರ ಮತ್ತೆ ಪಾತ್ರವರ್ಗಕ್ಕೆ ಹುಡುಕಾಟ ನಡೆಸಿದೆ. ಒಂದು ದಿನ ನಾನು ಮನೀಷ್ ಮಲ್ಹೋತ್ರಾ ಅವರ ಮನೆಯಲ್ಲಿ ಕಿಯಾರಾ ಅವರನ್ನು ಭೇಟಿಯಾದೆ ಮತ್ತು ಒಂದು ಕಿರುಚಿತ್ರ ಮಾಡುತ್ತಿದ್ದೇನೆ, ನೀವು ನಾಳೆ ಬಂದು ನನ್ನನ್ನು ಭೇಟಿ ಮಾಡಬಹುದೇ ಎಂದು ಕೇಳಿದೆ. ಆಕೆ ಬಂದು ಕಥೆ ಕೇಳಿದಳು ನಂತರ ಸ್ವಲ್ಪ ಕಸಿವಿಸಿಗೊಂಡಳು. ಮತ್ತೆ ಒಂದು ಕ್ಷಣ ಯೋಚಿಸಿ 'ನೀವು ಚಿತ್ರವನ್ನು ನಿರ್ದೇಶಿಸುತ್ತಿದ್ದೀರಾ? ಎಂದು ನನ್ನನ್ನು ಕೇಳಿದಳು. ನಾನು ಅದಕ್ಕೆ ಹೌದು ಎಂದೆ. ಹಾಗಾದರೆ ಈ ಪಾತ್ರ ಮಾಡುತ್ತೇನೆ ಎಂದು ಒಪ್ಪಿಕೊಂಡರು" ಎಂದು ಲಸ್ಟ್‌ ಸ್ಟೋರಿಸ್‌ ಚಿತ್ರದ ಪಾತ್ರ ವರ್ಗದ ಹುಡುಕಾಟದ ಬಗ್ಗೆ ಕರಣ್‌ ತಮ್ಮ ಶೋ ನಲ್ಲಿ ತಿಳಿಸಿದರು. ಕರಣ್ ನಿರ್ದೇಶನದ ಕಾರಣದಿಂದ ಆ ಕಿರುಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಕಿಯಾರಾ ಸಹ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Vijay Deverakonda: ನಟ ವಿಜಯ್​ಗೆ ಹೆಣ್ಮಕ್ಕಳನ್ನು ಕಂಡ್ರೆ ತುಂಬಾ ಭಯವಂತೆ!

'ಲಸ್ಟ್ ಸ್ಟೋರಿಸ್' 2018 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಸಂಕಲನ ಚಲನಚಿತ್ರವು ನಾಲ್ಕು ಕಿರುಚಿತ್ರಗಳನ್ನು ಒಳಗೊಂಡಿದೆ, ಪ್ರತಿಯೊಂದನ್ನು ಅನುರಾಗ್ ಕಶ್ಯಪ್, ಜೋಯಾ ಅಖ್ತರ್, ದಿಬಾಕರ್ ಬ್ಯಾನರ್ಜಿ ಮತ್ತು ಕರಣ್ ಜೋಹರ್ ನಿರ್ದೇಶಿಸಿದ್ದಾರೆ.
Published by:Ashwini Prabhu
First published: