news18-kannada Updated:July 13, 2020, 10:13 AM IST
ಕರಣ್ ಜೋಹರ್ ಹಾಗೂ ಸುಶಾಂತ್
ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಬಾಲಿವುಡ್ನ ನಿರ್ಮಾಪಕ ಕರಣ್ ಜೋಹರ್ ಸೇರಿ ಸಾಕಷ್ಟು ದಿಗ್ಗಜರ ವಿರುದ್ಧ ಅಪಸ್ವರ ಕೇಳಿ ಬಂದಿತ್ತು. ಅಲ್ಲದೆ, ಕರಣ್ ಜೋಹರ್ ಸಿನಿಮಾಗಳನ್ನು ಬ್ಯಾನ್ ಮಾಡಿ ಎನ್ನುವ ಆಗ್ರಹಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ಈಗ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾದಿಂದ ನಿರ್ಮಾಪಕ ಕರಣ ಜೋಹರ್ ಅವರನ್ನು ಕೈ ಬಿಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾ ಮಾರ್ಚ್ ತಿಂಗಳಲ್ಲೇ ತೆರೆಕಾಣಬೇಕಿತ್ತು. ಆದರೆ, ಕೊರೋನಾ ವೈರಸ್ ಮಹಾಮಾರಿ ಕಾಣಿಸಿಕೊಂಡಿದ್ದರಿಂದ ಸಿನಿಮಾ ತೆರೆಕಂಡಿರಲಿಲ್ಲ. ಕೊರೋನಾ ವೈರಸ್ ಅಬ್ಬರ ಪೂರ್ಣಗೊಂಡ ನಂತರ ಸಿನಿಮಾ ಬಿಡುಗಡೆ ಆಗಲಿದೆಯಂತೆ.
ಹೀಗಿರುವಾಗಲೇ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಕರಣ್ ಜೋಹರ್ ಮೊದಲಾದವರು ಪರೋಕ್ಷ ಕಾರಣ ಎನ್ನಲಾಗಿತ್ತು. ಇದಾದ ಬೆನ್ನಲ್ಲೇ ಕರಣ್ ಸಿನಿಮಾಗಳನ್ನು ಬ್ಯಾನ್ ಮಾಡುವ ಆಗ್ರಹ ಕೇಳಿ ಬರುತ್ತಿದೆ. ಹೀಗಾಗಿ ಸೂರ್ಯವಂಶಿ ನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಕರಣ್ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎನ್ನಲಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಎಂಟರ್ಟೇನ್ಮೆಂಟ್ ಸ್ಪಷ್ಟನೆ ನೀಡಿದ್ದು, ಕರಣ್ರನ್ನು ಕೈ ಬಿಟ್ಟಿಲ್ಲ ಎಂದು ಹೇಳಿದೆ. ಕರಣ್ ಜೋಹರ್ ಸೂರ್ಯವಂಶಿ ಸಿನಿಮಾದಿಂದ ಕೈ ಬಿಡಲಾಗಿದೆ ಎನ್ನುವ ವಿಚಾರ ಸುಳ್ಳು ಎಂದಿದೆ ರಿಲಾಯನ್ಸ್ ಎಂಟರ್ಟೇನ್ಮೆಂಟ್.
Published by:
Rajesh Duggumane
First published:
July 2, 2020, 3:49 PM IST