Anitha EAnitha E
|
news18-kannada Updated:June 19, 2020, 11:48 AM IST
ಕರಣ್ ಜೋಹರ್ ಹಾಗೂ ಸುಶಾಂತ್
ಸುಶಾಂತ್ ಸಿಂಗ್ ರಾಜಪೂತ್ ಅವರ ನಿಧನ ಸಾಮಾಜಿಕ ಜಾಲತಾಣದಲ್ಲಿ ಬಿ-ಟೌನ್ನಲ್ಲಿರುವ ಸ್ವಜನಪಕ್ಷಪಾತ ಕುರಿತಂತೆ ಚರ್ಚೆಗೆ ನಾಂದಿ ಹಾಡಿದೆ. ಬಾಲಿವುಡ್ನಲ್ಲಿ ದೊಡ್ಡ ಕುಟುಂಬಗಳು ಎನಿಸಿಕೊಂಡವರು ಹೊರಗಿನಿಂದ ಬಂದ ಕಲಾವಿದರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಕೆಲ ಸೆಲೆಬ್ರಿಟಿಗಳೇ ಈ ಆರೋಪ ಮಾಡುತ್ತಿದ್ದು, ತಮಗಾದ ಅನುಭವ ಹಾಗೂ ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದಾರೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು ಬಿ-ಟೌನ್ನ ದೊಡ್ಡ ದೊಡ್ಡ ಫಿಲ್ಮೇಕರ್ಸ್ ಹಾಗೂ ಕೆಲ ಸ್ಟಾರ್ಗಳು ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಜೊತೆಗೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿ ಹಾಗೂ ಅವರ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ ನೆಟ್ಟಿಗರು.

ನಟ, ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕ ಕರಣ್ ಜೋಹರ್
ಕರಣ್ ಜೋಹರ್, ಯಶ್ ರಾಜ್ ಫಿಲ್ಮ್ಸ್, ನಾಡಿಯಾದ್ವಾಲ ಪ್ರೊಡಕ್ಷನ್ಸ್, ಏಕ್ತಾ ಕಪೂರ್, ಸಲ್ಮಾನ್ ಖಾನ್, ಆಲಿಯಾ ಭಟ್ ಹಾಗೂ ಸೋನಮ್ ಕಪೂರ್ ಅವರನ್ನು ಈ ಕಾರಣದಿಂದಾಗಿ ಟ್ರೋಲ್ ಮಾಡಲಾಗುತ್ತಿದೆ.

ಸುಶಾಂತ್ ಸಿಂಗ್, ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್
ಅಲ್ಲದೆ ಸುಶಾಂತ್ ಅಗಲಿದ ದಿನದಿಂದ ಇಲ್ಲಿಯವರೆಗೆ ಈ ಸೆಲೆಬ್ರಿಟಿಗಳು ಹಾಗೂ ಸ್ಟಾರ್ ಕಿಡ್ಸ್ಗಳನ್ನು ಸಾಮಾಜಿಕ ಜಾಲತಾಣದಿಂದ ಲಕ್ಷಾಂತರ ಮಂದಿ ಅನ್ಫಾಲೋ ಮಾಡುತ್ತಿದ್ದಾರೆ. ಹೀಗಿರುವಾಗಲೇ ಫಿಲ್ಮ್ ಮೇಕರ್ ಕರಣ್ ಜೋಹರ್ ಸಹ ಟ್ವಿಟರ್ನಲ್ಲಿ 8 ಮಂದಿಯನ್ನು ಬಿಟ್ಟು ಉಳಿದವರನ್ನು ಅನ್ಫಾಲೋ ಮಾಡಿದ್ದಾರೆ.

ಕರಣ್ ಜೋಹರ್ ಟ್ವಿಟರ್
ಇದನ್ನೂ ಓದಿ: ಸುಶಾಂತ್ರಂತೆಯೇ ಆಗಿತ್ತಾ ಟಾಲಿವುಡ್ ನಟ ಉದಯ್ ಕಿರಣ್ ಪರಿಸ್ಥಿತಿ..?
ಕರಣ್ ಜೋಹರ್ ಸಾಕಷ್ಟು ಸೆಲೆಬ್ರಿಟಿಗಳನ್ನು ಹಿಂಬಾಲಿಸುತ್ತಿದ್ದರು. ಆದರೆ ಈಗ ಅವರಲ್ಲಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇವಲ 8 ಮಂದಿಯನ್ನು ಮಾತ್ರ ಕರಣ್ ಫಾಲೋ ಮಾಡುತ್ತಿದ್ದಾರೆ. ಉಳಿದವರನ್ನು ಅನ್ಫಾಲೋ ಮಾಡಿದ್ದಾರೆ.
Nithya Menen: ನಾವು ಚೆನ್ನಾಗಿದ್ದರೆ ಮಾತ್ರ ಬೇರೆಯವರಿಗೆ ನೆರವಾಗಬಹುದು ಎಂದ ನಿತ್ಯಾ ಮೆನನ್..!
ಇದನ್ನೂ ಓದಿ: ತನ್ನ ನೃತ್ಯ ಪ್ರದರ್ಶನದಲ್ಲಿ ಸಹ ನೃತ್ಯಗಾರನಾಗಿದ್ದ ಸುಶಾಂತ್ ಅಗಲಿಕೆಗೆ ಕಂಬನಿ ಮಿಡಿದ ಐಶ್ವಯಾ ರೈ..!
First published:
June 19, 2020, 11:42 AM IST