ವಿವಾಹದ ನಂತರ ಸಲಿಂಗಿಯಾದ ನಟ ರಣವೀರ್​ ಸಿಂಗ್​..!

ಬಿಂದಾಸ್​ ನಡೆ, ಆಡುವ ಪ್ರತಿ ಮಾತಿನಲ್ಲೂ ನಗೆಯ ಚಟಾಕಿ ಹಾರಿಸುವ ರಣವೀರ್​ ಸಿಂಗ್​ ಅವರ ಗುಣಕ್ಕೆ ಮಾರು ಹೋಗದವರು ಅತಿ ವಿರಳ. ಆದರೆ ಸದಾ ಎಲ್ಲರನ್ನೂ ನಗುತ್ತಾ ಮಾತನಾಡಿಸುವ ವ್ಯಕ್ತಿ ಸಲಿಂಗಿಯಂತೆ. ಹೌದು, ಇತ್ತೀಚೆಗಷ್ಟೆ ದೀಪಿಕಾರನ್ನು ವಿವಾಹದ ರಣವೀರ್​ ಸಲಿಂಗಿಯಾಗಿ ಎಂಬ ವಿಷಯ ಈಗ ಹೊರ ಬಿದ್ದಿದೆ.

Anitha E | news18
Updated:February 7, 2019, 11:17 AM IST
ವಿವಾಹದ ನಂತರ ಸಲಿಂಗಿಯಾದ ನಟ ರಣವೀರ್​ ಸಿಂಗ್​..!
ಸಲಿಂಗಿಯಾದ ನಟ ರಣವೀರ್​ ಸಿಂಗ್​
Anitha E | news18
Updated: February 7, 2019, 11:17 AM IST
ಇತ್ತೀಚೆಗಷ್ಟೆ ನಟ ರಣವೀರ್​ ಸಿಂಗ್​ ಗುಳಿಕೆನ್ನೆ ಸುಂದರಿ ದೀಪಿಕಾರನ್ನ ವಿವಾಹವಾಗಿದ್ದಾರೆ. ಆದರೆ ಆಗಲೇ ರಣವೀರ್​ ಆಘಾತಕಾರಿ ಸುದ್ದಿಯನ್ನು ಕೊಟ್ಟಿದ್ದಾರೆ. ಅದು ಅವರು ಸಲಿಂಗಿಯಾಗಿದ್ದಾರೆ ಅನ್ನೋದು. ಏನಿದು ವಿವಾಹದ ನಂತರ ಈ ಸುದ್ದಿ ಹೊರ ಬಿದ್ದಿದೆ ಅಂತೀರಾ..? ಇದರ ವಿವರ ತಿಳಿಯೋಕೆ ವರದಿ ಓದಿ...

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಯಂಗ್​​ ರೆಬೆಲ್ ಅಭಿಷೇಕ್​ರಿಂದ​ ಪ್ರೇಮದ ಕಾಣಿಕೆ..!

ರಣವೀರ್​ ಸಿಂಗ್​ ಸದಾ ತಮ್ಮ ಬಿಂದಾಸ್​ ಗುಣ ಹಾಗೂ ಹಾವಾ-ಭಾವಕ್ಕೆ ಖ್ಯಾತರಾದವರು. ಇವರು ಎಲ್ಲೇ ಇರಲಿ ಅಲ್ಲಿ ನಗುವಿನ ಬುಗ್ಗೆ ಚುಮ್ಮುತ್ತದೆ. ಆದರೆ ಇಂತಹ ನಟ ಈಗ ಸಲಿಂಗಿ ಎಂದರೆ ಅವರ ಅಭಿಮಾನಿಗಳಿಗೆ ಹೇಗಾಗಬೇಡ.

ಆದರೆ ಇದು ಸತ್ಯ. ಇದನ್ನು ನಂಬಲೇಬೇಕು. ರಣವೀರ್​ ಸಿಂಗ್​ ಸದಾ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟ. ಈಗಲೂ ಅಷ್ಟೆ ರಣವೀರ್​ ಅಂತಹದೊಂದು ವಿಭಿನ್ನ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ದೇಶಕ ಕರಣ್​ ಜೋಹರ್​ ಅವರ ಸಲಿಂಗಿಗಳ ಕುರಿತಾದ ಹೊಸ ಸಿನಿಮಾದಲ್ಲಿ ರಣವೀರ್​ ಸಲಿಂಗಿಯಾಗಿ ಅಭಿನಯಿಸಲಿದ್ದು, ಅವರಿಗೆ ರಾಜ್​ಕುಮಾರ್​ ರಾವ್​ ಸಹ ಕೈ ಜೋಡಿಸಿದ್ದಾರೆ.

ಇನ್ನೂ ಈ ಸಿನಿಮಾ ಕುರಿತಾಗಿ ಮಾತನಾಡಿರುವ ರಾಜ್​ಕುಮಾರ್​ ರಾವ್​, 'ರಣವೀರ್​ ಸಿಂಗ್​ ನನ್ನ ಆಪ್ತ ಸ್ನೇಹಿತರಲ್ಲೊಬ್ಬರು. ಅವರೊಂದಿಗೆ ಸಿನಿಮಾ ಮಾಡಬೇಕೆಂಬ ಆಸೆ ಇದೆ' ಎಂದಿದ್ದಾರೆ.

ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ ಬಾಬು ಜತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ..!

ಸದ್ಯ ಕರಣ್​ ದೊಡ್ಡ ಬಜೆಟ್​ನಲ್ಲಿ 'ತಖ್ತ್​' ಎಂಬ ಸಿನಿಮಾ ನಿರ್ಮಿಸುತ್ತಿದ್ದು, ಇದಾದ ನಂತರ ರಣವೀರ್​-ರಾಜ್​ಕುಮಾರ್​ ಜತೆ ಸಲಿಂಗಿಗಳ ಕುರಿತಾದ ಚಿತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಈ ವಿಷಯ ಸುತ್ತಲೇ ಒಂದು ಸಿನಿಮಾ ಮಾಡುವುದಾಗಿ ಈ ಹಿಂದೆ ಕರಣ್​ ಪ್ರಕಟಿಸಿದ್ದರು.
Loading...

ಒಟ್ಟಾರೆ ಸದಾ ವಿಭಿನ್ನ ಹಾಗೂ ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಾಜ್​ಕುಮಾರ್​-ರಣವೀರ್​ ಜೋಡಿ ಈ ಸಿನಿಮಾದಲ್ಲಿ ಒಂದಾದರೆ, ಯಾವ ರೀತಿಯ ಕಮಾಲ್​ ಮಾಡುತ್ತೆ ಎಂದು ಕಾದುನೋಡಬೇಕಿದೆಯಷ್ಟೆ.

 

'ಕೆ.ಜಿ.ಎಫ್​' ನಿರ್ದೇಶಕರ ರೊಮ್ಯಾಂಟಿಕ್​ ಲುಕ್ಸ್​
First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...