Karabuu Telugu Video Song: ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ತೆಲುಗಿನಲ್ಲಿ ರಿಲೀಸ್ ಆಗಿರುವ ಖರಾಬು ಹಾಡು..!

Pogaru Movie: ಕನ್ನಡದಲ್ಲಿ ಪೊಗರು ಸಿನಿಮಾದ ಖರಾಬು ಹಾಡು ದಾಖಲೆಗಳ ಮೇಲೆ ದಾಖಲೆ ಮಾಡಿದೆ. ಚಂದನ್​ ಶೆಟ್ಟಿ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಖರಾಬು ಹಾಡು ಈಗ ತೆಲುಗಿಲ್ಲೂ ರಿಲೀಸ್​ ಆಗಿದೆ.

ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ

ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ

  • Share this:
ಧ್ರುವ ಸರ್ಜಾ ಹಾಗೂ ರಶ್ಮಿಕಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಪೊಗರು. ಸ್ಯಾಂಡಲ್​ವುಡ್​ನಲ್ಲಿ ಈ ಚಿತ್ರದ ಕುರಿತಾಗಿ ಬೆಟ್ಟದಷ್ಟು ನಿರೀಕ್ಷೆ ಇದೆ. ಡೈಲಾಗ್​ ಟೀಸರ್​ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿರುವ ಪೊಗರು ಸಿನಿಮಾ ಸಿನಿಪ್ರಿಯರಲ್ಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 

ಕನ್ನಡದಲ್ಲಿ ಪೊಗರು ಸಿನಿಮಾದ ಖರಾಬು ಹಾಡು ದಾಖಲೆಗಳ ಮೇಲೆ ದಾಖಲೆ ಮಾಡಿದೆ. ಚಂದನ್​ ಶೆಟ್ಟಿ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಖರಾಬು ಹಾಡು ಈಗ ತೆಲುಗಿಲ್ಲೂ ರಿಲೀಸ್​ ಆಗಿದೆ.ಚಿತ್ರತಂಡ ಈ ಹಿಂದೆಯೇ ಹೇಳಿದಂತೆ ಖರಾಬು ಹಾಡನ್ನು ಇಂದು ತೆಲುಗಿನಲ್ಲಿ ರಿಲೀಸ್​ ಮಾಡಿದೆ. ಟಾಲಿವುಡ್​ನಲ್ಲೂ ಈ ಹಾಡಿಗೆ ಕನ್ನಡದಂತೆಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಸದ್ಯ ಟಾಪ್​ನಲ್ಲಿದೆ.

Rana Miheeka Wedding: ರಾಣಾ ದಗ್ಗುಬಾಟಿ-ಮಿಹಿಕಾ ವಿವಾಹ: ವೈರಲ್​ ಆಗುತ್ತಿವೆ ಅರಿಶಿಣ ಶಾಸ್ತ್ರದ ಫೋಟೋಗಳು..!


ಸ್ಯಾಂಡಲ್​ವುಡ್​ನಲ್ಲಿ ದಾಖಲೆಗಳ ಜೊತೆಗೆ ವಿವಾದಕ್ಕೂ ಕಾರಣವಾಗಿತ್ತು ಈ ಖರಾಬು ಹಾಡು. ಈ ಹಾಡಿನಲ್ಲಿ ನಾಯಕಿಗೆ ಸಿಕ್ಕಾಪಟ್ಟೆ ಕಾಟ ಕೊಡಲಾಗಿದ್ದು, ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಈ ಕಾರಣದಿಂದ ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಕೆಲವು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು.

ಇದನ್ನೂ ಓದಿ: Mahesh Babu: ಮಹೇಶ್​ ಬಾಬು ಬಾಲಿವುಡ್​ ಎಂಟ್ರಿ: ಸಂಭ್ರಮದಲ್ಲಿ ಅಭಿಮಾನಿಗಳು ..!

ಕನ್ನಡದಲ್ಲಿ ಖರಾಬು ಹಾಡು ಏಪ್ರಿಲ್​ನಲ್ಲಿ ರಿಲೀಸ್​ ಆಗಿದ್ದು, ಮೂರು ತಿಂಗಳಿನಲ್ಲಿ ಹತ್ತು ಕೋಟಿ ಜನ ವೀಕ್ಷಿಸಿದ್ದಾರೆ. ನಂದ ಕಿಶೋರ್​ ನಿರ್ದೇಶನದ ಈ ಸಿನಿಮಾದಲ್ಲಿ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಧ್ರುವ ಜೊತೆ ಅಂತರರಾಷ್ಟ್ರೀಯ ಫೈಟರ್​ಗಳೂ ಕೈ ಮಿಲಾಯಿಸಿದ್ದಾರೆ.
Published by:Anitha E
First published: