Kapil Sharma: ಆಗ Akshay Kumar ಥರ ಇದ್ದೆ ಈಗ ದಪ್ಪ ಆಗಿದ್ದೇನೆ, ಸಣ್ಣ ಆಗೋ ಆಸೆ ಬಿಚ್ಚಿಟ್ಟ ಕಪಿಲ್ ಶರ್ಮಾ

ಹೊಸ ಪ್ರೋಮೋದಲ್ಲಿ, ಕಪಿಲ್ ಅವರು ಗಿನ್ನಿಯನ್ನು ಫೋನ್ ಕರೆ ಮೂಲಕ ಮದುವೆಯಾಗುವಂತೆ ಕೇಳಲು ಧೈರ್ಯವನ್ನು ನೀಡಿದ್ದಕ್ಕಾಗಿ ಆಲ್ಕೋಹಾಲ್ ಬ್ರ್ಯಾಂಡ್‌ವೊಂದಕ್ಕೆ ಧನ್ಯವಾದ ಅರ್ಪಿಸಿದ್ದನ್ನು ನಾವು ನೋಡಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮ್ಮ ವಿಭಿನ್ನವಾದ ಹಾಸ್ಯ ಪ್ರಜ್ಞೆ ಮತ್ತು ಕಾಮಿಡಿ ಪಂಚ್‌ಗಳಿಂದ ತುಂಬಾನೇ ಹೆಸರುವಾಸಿಯಾದ ಜನಪ್ರಿಯ ಕಾಮಿಡಿಯನ್ ಮತ್ತು ನಟ ಕಪಿಲ್ ಶರ್ಮಾ (Actor Kapil Sharma)‌ ಯಾರಿಗೆ ಗೊತ್ತಿಲ್ಲ ಹೇಳಿ..? ಎಲ್ಲರಿಗೂ ಚಿರಪರಿಚಿತವಾದ ಈ ಕಾಮಿಡಿಯನ್ ಹಾಸ್ಯಮಯವಾದ ಸ್ಟ್ಯಾಂಡ್-ಅಪ್ ವಿಶೇಷ 'ಐ ಯಾಮ್ ನಾಟ್ ಡನ್ ಯೆಟ್' ('I'm Not Done Yet') ನೊಂದಿಗೆ ನೆಟ್‌ಫ್ಲಿಕ್ಸ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂಬ ವಿಷಯ ಅವರ ಬಹುತೇಕ ಅಭಿಮಾನಿಗಳಿಗೆ ಗೊತ್ತಿರುವ ವಿಚಾರವೇ ಆಗಿರುತ್ತದೆ. ಈಗಾಗಲೇ ಇದರ ಟ್ರೈಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರು (Audience) ತುಂಬಾನೇ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಅದರ ಪ್ರೀಮಿಯರ್ ಪ್ರದರ್ಶನಕ್ಕೆ ಮೊದಲು, ಅನುಭವ್ ಸಿಂಗ್ ಬಸ್ಸಿ (Anubhav Singh Bassi.) ಅವರೊಂದಿಗೆ ಇರುವ ಸೆಷನ್ ಅನ್ನು ಕಪಿಲ್ ಚಿತ್ರೀಕರಿಸಿದ್ದಾರೆ.

ಶಿಸ್ತಿನ ಜೀವನಶೈಲಿ
ಇವರಿಬ್ಬರ ಸಂವಾದದ ಸಮಯದಲ್ಲಿ, ಕಪಿಲ್ ಅವರು ಫಿಟ್ನೆಸ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಸಮಯದಲ್ಲಿ ಶಿಸ್ತಿನ ಜೀವನಶೈಲಿಗೆ ಹೆಸರುವಾಸಿಯಾದ ಅಕ್ಷಯ್ ಕುಮಾರ್ ಅವರಂತೆ ಆಗಿದ್ದೆ ಎಂದು ಹೇಳಿದರು. ಬಸ್ಸಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಫೋಟೋಗಳಲ್ಲಿ ಒಂದನ್ನು ಕಪಿಲ್ ಅವರಿಗೆ ತೋರಿಸಿದಾಗ, ಅದರಲ್ಲಿ ಅವರು ಯೋಗ ಮಾಡುತ್ತಿದ್ದು ಮತ್ತು ಇದರ ಹಿಂದಿನ ಕಥೆಯ ಬಗ್ಗೆ ಕೇಳಿದಾಗ, ಹಾಸ್ಯನಟ "ಆ ದಿನಗಳು ತುಂಬಾನೇ ಚೆನ್ನಾಗಿದ್ದವು, ಆ ಸಮಯದಲ್ಲಿ ನಾನು ನನ್ನ ಫಿರಂಗಿ ಚಿತ್ರದ ಚಿತ್ರೀಕರಣದಲ್ಲಿದ್ದೆ.

ಅದ್ಭುತ ಮೈಕಟ್ಟಿನ ಹೊರತಾಗಿ ನಾನು ಚಿತ್ರದಿಂದ ಏನನ್ನೂ ಪಡೆಯಲಿಲ್ಲ. ನಾನು ಪ್ರತಿ ದಿನ ಬೆಳಗ್ಗೆ 4.30ಕ್ಕೆ ಹಾಸಿಗೆಯಿಂದ ಎದ್ದು ನನ್ನ ಫಿಟ್ನೆಸ್‌ನಲ್ಲಿ ತೊಡಗುತ್ತಿದ್ದೆ ಮತ್ತು ನಾನು ಅಕ್ಷಯ್ ಕುಮಾರ್‌ನಂತೆ ಅಗಿದ್ದೆ. ಇದು ಆ ಸಮಯದ ಫೋಟೋ" ಎಂದು ಕಪಿಲ್ ವಿವರಿಸಿದರು.

ಇದನ್ನೂ ಓದಿ: Kapil Sharma ಕಾರ್ಯಕ್ರಮಕ್ಕೆ ಎಂದು ಹೋಗಿ ಭಾಗವಹಿಸದೇ ಮರಳಿದ Smriti Irani, ಅಲ್ಲಿ ನಡೆದಿದ್ದೇನು?

ಚಿತ್ರವು ಫ್ಲಾಪ್ ಆಗಿತ್ತು
ಕಪಿಲ್ ಅವರು ಮತ್ತೆ ಆ ದೇಹದ ಆಕಾರಕ್ಕೆ ಮರಳಲು ಬಯಸುತ್ತಾರೆ ಎಂದು ಹೇಳಿದರು. "ಆ ಚಿತ್ರದಲ್ಲಿ ನಾನು 72 ಕೆಜಿ ತೂಕವನ್ನು ಹೊಂದಿದ್ದೆ, ಈಗ ಮತ್ತೆ 92 ಕೆಜಿ ಆಗಿದೆ, ಏಕೆಂದರೆ ಚಿತ್ರವು ಫ್ಲಾಪ್ ಆಗಿತ್ತು" ಎಂದು ನಗುತ್ತಾ ಹೇಳಿದರು.

ಈ ಮಧ್ಯೆ, ಕಪಿಲ್ ಶರ್ಮಾ ತಮ್ಮ ನೆಟ್‌ಫ್ಲಿಕ್ಸ್ ಸ್ಟ್ಯಾಂಡ್-ಅಪ್ ವಿಶೇಷದಲ್ಲಿ ತಮ್ಮ ಪತ್ನಿ ಗಿನ್ನಿ ಚತ್ರತ್ ಅವರೊಂದಿಗೆ ತಮ್ಮ ಪ್ರೇಮಕಥೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಹಂಚಿಕೊಂಡ ಹೊಸ ಪ್ರೋಮೋದಲ್ಲಿ, ಕಪಿಲ್ ಅವರು ಗಿನ್ನಿಯನ್ನು ಫೋನ್ ಕರೆ ಮೂಲಕ ಮದುವೆಯಾಗುವಂತೆ ಕೇಳಲು ಧೈರ್ಯವನ್ನು ನೀಡಿದ್ದಕ್ಕಾಗಿ ಆಲ್ಕೋಹಾಲ್ ಬ್ರ್ಯಾಂಡ್‌ವೊಂದಕ್ಕೆ ಧನ್ಯವಾದ ಅರ್ಪಿಸಿದ್ದನ್ನು ನಾವು ನೋಡಬಹುದಾಗಿದೆ.


View this post on Instagram


A post shared by Netflix India (@netflix_in)


ವಿಡಿಯೋ ವೈರಲ್
ಒಂದು ನಿಮಿಷದ ಸುದೀರ್ಘ ವಿಡಿಯೋದಲ್ಲಿ, ಕಪಿಲ್ ಶರ್ಮಾ ಅವರು ಮದ್ಯವನ್ನು ಕುಡಿದ ನಂತರ ಗಿನ್ನಿ ತನ್ನನ್ನು ಪ್ರೀತಿಸುತ್ತಾಳೆಯೇ ಎಂದು ಕೇಳಲು ಧೈರ್ಯವನ್ನು ಒಟ್ಟುಗೂಡಿಸಿದರು ಎಂದು ಬಹಿರಂಗಪಡಿಸಿದರು. ಗಿನ್ನಿಯನ್ನು "ಎಲ್ಲಾ ನಟಿಯರಲ್ಲಿ ನೆಚ್ಚಿನ ನಟಿ ನೀನು” ಎಂದು ಕರೆದ ಹಾಸ್ಯನಟ "ನಾನು ಅವಳಿಗೆ ಸಾಕಷ್ಟು ಕೆಲಸವನ್ನು ಕೊಡುತ್ತಿದ್ದೆ. ಅವಳು ನನಗೆ ಪ್ರತಿದಿನ ಏನೆಲ್ಲಾ ಕೆಲಸಗಳು ಆದವು ಮತ್ತು ಅವರು ಅಂದು ಎಷ್ಟು ಗಂಟೆಗಳ ತಾಲೀಮು ಮಾಡಿದ್ದಾರೆ ಎಂದು ಸಹ ನನಗೆ ವರದಿ ಮಾಡುತ್ತಿದ್ದರು” ಎಂದು ಕಪಿಲ್ ಹೇಳಿದರು.

ಇದನ್ನೂ ಓದಿ: TV Stars Payment: ಒಂದು ಎಪಿಸೋಡ್​ಗೆ ಲಕ್ಷಗಟ್ಟಲೆ ಚಾರ್ಜ್ ಮಾಡ್ತಾರೆ ಈ ಟಿವಿ ತಾರೆಯರು, ಯಾರು ಹೆಚ್ಚು ದುಬಾರಿ?

ನಂತರ, ಒಂದು ದಿನ ಕಪಿಲ್ ಮದ್ಯವನ್ನು ಕುಡಿಯುತ್ತಿದ್ದಾಗ ಅವನಿಗೆ ಗಿನ್ನಿ ಕರೆ ಮಾಡಿದಳು ಎಂದು ಅವನು ಹೇಳಿದನು. "ನಾನು ಆ ಕರೆಯನ್ನು ಸ್ವೀಕರಿಸಿದ ತಕ್ಷಣ, ನಾನು ಅವಳನ್ನು 'ನೀವು ನನ್ನನ್ನು ಪ್ರೀತಿಸುತ್ತೀರಾ' ಎಂದು ಕೇಳಿಯೇ ಬಿಟ್ಟೆ” ಎಂದು ಹೇಳಿದರು. ಅದಕ್ಕೆ ಅವಳು ದಿಗ್ಭ್ರಮೆಗೊಂಡಳು ಮತ್ತು 'ಏನು?' ಎಂದು ಆಶ್ಚರ್ಯಚಕಿತಳಾಗಿ ಕೇಳಿದಳು. 'ಈ ಮನುಷ್ಯನಿಗೆ ಇದನ್ನು ಕೇಳುವ ಧೈರ್ಯ ಹೇಗೆ ಬಂತು' ಎಂದು ಗಿನ್ನಿ ಆ ದಿನ ತುಂಬಾನೇ ಆಶ್ಚರ್ಯ ಪಟ್ಟಿದ್ದು ನನಗೆ ಇನ್ನೂ ನೆನಪಿದೆ” ಎಂದು ಕಪಿಲ್ ಹೇಳಿದರು.
Published by:vanithasanjevani vanithasanjevani
First published: