ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಸೋನು ಸೂದ್​: ಸದ್ಯದಲ್ಲೇ ಚಿತ್ರೀಕರಣ ಆರಂಭ..!

Sonu Sood: ಕಪಿಲ್​ ಶರ್ಮಾ ಮತ್ತೆ ಕಿರುತೆರೆ ಮೇಲೆ ಹಾಸ್ಯ ಹೊಳೆ ಹರಿಸಲು ಸಿದ್ಧರಾಗುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ನಿಂತಿದ್ದ ಈ ಕಾರ್ಯಕ್ರಮ ಮತ್ತೆ ಆರಂಗವಾಗಲಿದೆ. ಈ ಸಲ ಮೊದಲು ನಟ ಸೋನು ಸೂದ್​ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

Anitha E | news18-kannada
Updated:July 6, 2020, 4:03 PM IST
ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಸೋನು ಸೂದ್​: ಸದ್ಯದಲ್ಲೇ ಚಿತ್ರೀಕರಣ ಆರಂಭ..!
ಸೋನು ಸೂದ್
  • Share this:
ಕಪಿಲ್ ಶರ್ಮಾ ನಡೆಸಿಕೊಡುವ ಖ್ಯಾತ ಕಾಮಿಡಿ ಕಾರ್ಯಕ್ರಮದ ಚಿತ್ರೀಕರಣ ಇನ್ನೇನು ಆರಂಭವಾಗಲಿದೆಯಂತೆ. ಕೊರೋನ ಲಾಕ್​ಡೌನ್​ನಿಂದಾಗಿ ಧಾರಾವಾಹಿ ಸೇರಿದಂತೆ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್​ ಹಾಕಲಾಗಿತ್ತು. 

ಲಾಕ್​ಡೌನ್​ನಲ್ಲಿ ಹಳೇ ಸಂಚಿಕೆಗಳನ್ನೇ ಜನರು ವೀಕ್ಷಿಸುತ್ತಿದ್ದರು. ಆದರೆ ಇನ್ನು ಜುಲೈ ಮಧ್ಯದಿಂದ ಈ ಕಾರ್ಯಕ್ರಮದ ಹೊಸ ಸಂಚಿಕೆ ನೋಡಲು ಸಿಗಲಿದೆ ಎನ್ನಲಾಗುತ್ತಿದೆ. ಇಂಗ್ಲಿಷ್​ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ಜುಲೈ ಮಧ್ಯದಿಂದ ಕಪಿಲ್​ ಶರ್ಮಾ ಕಾಮಿಡಿ ಕಾರ್ಯಕ್ರಮದ ಚಿತ್ರೀಕರಣ ಆರಂಭವಾಗಲಿದೆಯಂತೆ.

Kapil Sharma to Start Shooting for Comedy Show Mid July Sonu Sood Could Be Among First Guests
ಕಪಿಲ್ ಶರ್ಮಾ ಕಾಮಿಡಿ ಶೋ


ಕಪಿಲ್​ ಶರ್ಮಾ ಮತ್ತೆ ಕಿರುತೆರೆ ಮೇಲೆ ಹಾಸ್ಯ ಹೊಳೆ ಹರಿಸಲು ಸಿದ್ಧರಾಗುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ನಿಂತಿದ್ದ ಈ ಕಾರ್ಯಕ್ರಮ ಮತ್ತೆ ಆರಂಗವಾಗಲಿದೆ. ಈ ಸಲ ಮೊದಲು ನಟ ಸೋನು ಸೂದ್​ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಫೋನ್​ನಲ್ಲಿ ಮಾತನಾಡುತ್ತಿರುವ ರಾಜ್​ಕುಮಾರ್​ರ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್..!

ಸೋನು ಸೂದ್ ವಲಸೆ ಕಾರ್ಮಿಕರಿಗೆ ಸಾಹಯ ಮಾಡುವ ಮೂಲಕ ಲಾಕ್​ಡೌನ್​ ಆರಂಭವಾದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಅವರನ್ನೇ ಮೊದಲ ಅತಿಥಿಯಾಗಿ ಕರೆತರಲು ನಿರ್ಧರಿಸಲಾಗಿದೆಯಂತೆ.

Bihari migrant Woman named her newborn child as sonu sood
ಸೋನು ಸೂದ್​
ಮುಂಬೈನಲ್ಲಿರುವ ಫಿಲ್ಮ್​ ಸಿಟಿಯಲ್ಲಿ ಈಗಾಗಲೇ ಈ ಕಾರ್ಯಕ್ರಮದ ಸೆಟ್ ಅನ್ನು ಸ್ಯಾನಿಟೈಸ್ ಮಾಡುವ ಕಾರ್ಯ ಸಹ ಆರಂಭವಾಗಿದೆಯಂತೆ. ಆದರೆ ಈ ಹಿಂದೆ ಪ್ರೇಕ್ಷಕರನ್ನು ಸಹ ಕಾರ್ಯಕ್ರಮದಲ್ಲಿ ನೋಡಬಹುದಾಗಿತ್ತು. ಆದರೆ ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿ ಇರುವುದರಿಂದ ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಭಾಗವಹಿಸಲು ಅನುಮತಿ ಇಲ್ಲವಂತೆ.

 

ಇದನ್ನೂ ಓದಿ: ದರ್ಶನ್​ ಚಿನ್ನದಂತ ಮನಸ್ಸಿರುವ ಮನುಷ್ಯ ಎಂದ ಪ್ರಣೀತಾ ಸುಭಾಷ್​..!
Published by: Anitha E
First published: July 6, 2020, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading