ರಾಮಾಯಣದಲ್ಲಿ ನಟಿಸಿದ್ದಕ್ಕೇ ಬೋಲ್ಡ್​ ಫೋಟೋಶೂಟ್​ ಅವಕಾಶ ಅರಸಿ ಬಂದಿತ್ತಂತೆ ಇವರಿಗೆ..!

33 Years Of Ramayan: ಕಿರುತೆರೆಯಲ್ಲಿ ಪ್ರಸಾರಗೊಳ್ಳುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿನ ಪಾತ್ರಗಳು ಜನರ ಮೇಲೆ ತುಂಬಾ ಪರಿಣಾಮ ಬೀರಿದ್ದವು. ಅಂದರೆ ರಾಮ, ಸೀತೆ ಹಾಗೂ ಲಕ್ಷ್ಮಣನ ಪಾತ್ರಧಾರಿಗಳ ಫೋಟೋಗಳನ್ನೇ ಇಟ್ಟುಕೊಂಡು ಜನರು ಪೂಜಿಸತೊಡಗಿದ್ದರು. ಇದು ಮಹಾಭಾರತದಲ್ಲಿನ ಕೃಷ್ಣನ ಪಾತ್ರಧಾರಿಯ ವಿಷಯದಲ್ಲೂ ಹೀಗೆ ಆಗಿತ್ತು. 

'ರಾಮಾಯಣ' ಧಾರಾವಾಹಿಯ ಚಿತ್ರ

'ರಾಮಾಯಣ' ಧಾರಾವಾಹಿಯ ಚಿತ್ರ

  • Share this:
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ನೋಡುತ್ತಲೇ ಬೆಳೆದವರಿದ್ದಾರೆ. ಈ ಧಾರಾವಾಹಿ ಪ್ರಸಾರಗೊಂಡು 33 ವರ್ಷಗಳೇ ಕಳೆದಿವೆ. ಈ ಧಾರಾವಾಹಿಯ ತಂಡ ಸದ್ಯದಲ್ಲೇ ಕಿರುತೆರೆಯ ಕಾಮಿಡಿ ಶೋ ದ ಕಪಿಲ್ ಶರ್ಮಾ ಶೋ ಸೀಸನ್​ 2ನಲ್ಲಿ ಕಾಣಿಸಿಕೊಳ್ಳಲಿದೆ.

ಕಿರುತೆರೆಯಲ್ಲಿ ಪ್ರಸಾರಗೊಳ್ಳುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿನ ಪಾತ್ರಗಳು ಜನರ ಮೇಲೆ ತುಂಬಾ ಪರಿಣಾಮ ಬೀರಿದ್ದವು. ಅಂದರೆ ರಾಮ, ಸೀತೆ ಹಾಗೂ ಲಕ್ಷ್ಮಣನ ಪಾತ್ರಧಾರಿಗಳ ಫೋಟೋಗಳನ್ನೇ ಇಟ್ಟುಕೊಂಡು ಜನರು ಪೂಜಿಸತೊಡಗಿದ್ದರು. ಇದು ಮಹಾಭಾರತದಲ್ಲಿನ ಕೃಷ್ಣನ ಪಾತ್ರಧಾರಿಯ ವಿಷಯದಲ್ಲೂ ಹೀಗೆ ಆಗಿತ್ತು.ಇಂತಹ ಧಾರಾವಾಹಿಯಲ್ಲಿ ನಟಿಸಿದ್ದ ಪಾತ್ರಧಾರಿಗಳು ಈಗ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. 'ಪೌರಾಣಿಕ ಧಾರಾವಾಹಿಯಾದ ರಾಮಾಯಣದಲ್ಲಿ ನಟಿಸುತ್ತಿದ್ದ ಕಾರಣಕ್ಕೆ ಇಡೀ ತಂಡಕ್ಕೆ ಬೋಲ್ಡ್​ ಫೋಟೋಶೂಟ್​ ಅವಕಾಶಗಳು ಅರಸಿ ಬಂದಿದ್ದವು' ಎಂದು ರಾಮನ ಪಾತ್ರಧಾರಿ ಅರುಣ್​ ಗೋವಿಲ್​ ಹೇಳಿದ್ದಾರೆ.

ಇದನ್ನೂ ಓದಿ: Niveditha-Chandan Shetty: ದಿನಕ್ಕೊಂದು ಫೋಟೋ ಹಂಚಿಕೊಳ್ಳುತ್ತಿದ್ದಾರೆ ರೊಮ್ಯಾಂಟಿಕ್​ ಕಪಲ್​ ಚಂದನ್-ನಿವೇದಿತಾ..!

'ಹಲವಾರು ನಿಯತಕಾಲಿಕೆಗಳು ನಮ್ಮನ್ನ ಸಂಪರ್ಕಿಸಿದ್ದವು. ನಾನೂ ಸೇರಿದಂತೆ ಹಲವರಿಗೆ ಬೋಲ್ಡ್​ ಫೋಟೋಶೂಟ್​ ಅವಕಾಶ ಅರಸಿ ಬಂದಿತ್ತು. ಅದಕ್ಕಾಗಿ ದೊಡ್ಡ ಮೊತ್ತವನ್ನೇ ಕೊಡಲು ಸಿದ್ಧರಿದ್ದರು. ಆದರೆ ನಮ್ಮಲ್ಲಿ ಯಾರೊಬ್ಬರೂ ಹಣಕ್ಕಾಗಿ ಆ ಅವಕಾಶವನ್ನು ಒಪ್ಪಿಕೊಳ್ಳಲಿಲ್ಲ. ನಮಗೆ ಗೊತ್ತಿತ್ತು ನಮ್ಮನ್ನು ತೆರೆ ಮೇಲೆ ನೋಡುತ್ತಿದ್ದ ಪ್ರೇಕ್ಷಕರು ಶ್ರದ್ಧೆಯಿಂದಲೇ ನೋಡಲು ಬಯಸುತ್ತಾರೆಂದು' ಎಂದು ಅರುಣ್​ ಕಾಮಿಡಿ ಶೋನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Samyuktha Hegde: ಕಿರಿಕ್​ ಪಾರ್ಟಿ 2 ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಕಮ್​ಬ್ಯಾಕ್​ ಮಾಡ್ತಾರಾ ಸಂಯುಕ್ತಾ ಹೆಗಡೆ..!

ರಾಮಾಯಣದಲ್ಲಿ ಅರುಣ್​ ಗೋವಿಲ್​ ರಾಮನ ಪಾತ್ರದಲ್ಲಿ, ದೀಪಿಕಾ ಚಿಕ್ಲಿಯಾ ಸೀತೆಯಾಗಿ ಹಾಗೂ ಲಕ್ಷ್ಮಣನನಾಗಿ ಸುನಿಲ್​ ಲಹರಿ ನಟಿಸಿದ್ದಾರೆ.

Urvashi Rautela: ಮಾಲ್ಡೀವ್ಸ್​ನ ನೀಲಿ ಕಡಲ ಕಿನಾರೆಯಲ್ಲಿ ಬಿಕಿನಿಯಲ್ಲಿ ಮಿಂಚಿದ ಐರಾವತ ಚೆಲುವೆ ಊರ್ವಶಿ..!


First published: