ಸ್ಯಾಂಡಲ್ ವುಡ್ನ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ (Sudeep) ಸದ್ಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ‘ (Vikrant Rona) ಚಿತ್ರದ ಬಿಡುಗಡೆಯ ಸನಿಹದಲ್ಲಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಸುದೀಪ್ ಗೆ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿಯಿದೆ. ಅಲ್ಲದೇ ಆವರು ಐಪಿಎಲ್ ನ (IPL) ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡದ ಬ್ರಾಂಡ್ ಅಂಬಾಸಿಟರ್ ಆಗಿದ್ದಾರೆ. ಹೌದು, ಕೆಲ ದಿನಗಳ ಹಿಂದೆ ಬ್ಯಾಟ್ ಹಿಡಿದು ಮೈದಾನದಲ್ಲಿ ಅಬ್ಬರಿಸಿದ್ದರು. ಅದಕ್ಕೂ ಮುಂಚೆ ಅವರಿಗೆ ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ನಟ ಸುದೀಪ್ ಗೆ ತಮ್ಮ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದರು. ಇದಕ್ಕೆ ಸ್ವತಃ ಕಿಚ್ಚನೇ ಸಂತಸ ವ್ಯಕ್ತಪಡಿಸಿ ಬಟ್ಲರ್ ಗೆ ಧನ್ಯವಾದನ್ನೂ ತಿಳಿಸಿದ್ದರು. ಆದರೆ ಇದೀಗ ಸುದೀಪ್ಗೆ ಮತ್ತೊಂದು ಸ್ಪೇಷಲ್ ಗಿಫ್ಟ್ ಬಂದಿದೆ. ಅಲ್ಲದೇ ಇದು ಅವರ ಜೀವನದಲ್ಲಿನ ಅತ್ಯಂತ ಮಹತ್ವದ ಉಡುಗೆಯಂತೆ. ಹಾಗಿದ್ರೆ ಆ ಗಿಫ್ಟ್ ಏನೆಂದು ನೋಡೋಣ ಬನ್ನಿ.
ಮತ್ತೊಂದು ಬ್ಯಾಟ್ ಗಿಫ್ಟ್:
ಹೌದು, ಈಗಾಗಲೇ ಬಟ್ಲರ್ ಸುದೀಪ್ಗೆ ತಮ್ಮ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದರು. ಇದೀಗ ಕಿಚ್ಚನಿಗೆ ಮತ್ತೊಂದು ಬ್ಯಾಟ್ ಗಿಫ್ಟ್ ಆಗಿ ದೊರಕಿದೆ. ಅಲ್ಲದೇ ಈ ಬ್ಯಾಟ್ ಮೇಲೆ ಟೀಂ ಇಒಂಡಿಯಾದ ದಿಗ್ಗಜ ಕ್ರಿಕೆಟಿಗರ ಸಹಿ ಸಹ ಇದೆ. 1983ರಲ್ಲಿ ವಿಶ್ಕಪ್ ಗೆದ್ದ ತಂಡದ ಆಟಗಾರರು ಸಹಿ ಮಾಡಿರುವ ಬ್ಯಾಟ್ ಒಂದು ಸುದೀಪ್ಗೆ ಉಡುಗರೆಯಾಗಿ ದೊರಕಿದೆ. ಈ ಬ್ಯಾಟ್ ನ್ನು ಸ್ವತಃ 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಕಪೀಲ್ ದೇವ್ ನೀಡಿದ್ದಾರೆ ಎನ್ನುವುದು ವಿಶೇಷ. ಈ ಬ್ಯಾಟ್ ನ ಫೋಟೋವನ್ನು ಸುದೀಪ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕಪೀಲ್ ದೇವ್ ಅವರಿಗೆ ಧನ್ಯವಾದ ತಿಳಿಸಿದ ಕಿಚ್ಚ:
ಇನ್ನು, ಇಂತಹ ಅದ್ಭುತ ಉಡುಗರೆ ನೀಡಿದ ದಿಗ್ಗಜ ಆಟಗಾರ ಕಪೀಲ್ ದೇವ್ ಅವರಿಗೆ ಕಿಚ್ಚ ಟವೀಟ್ ಮೂಲಕ ಧನ್ಯವಾದ ತಿಳಸಿದ್ದಾರೆ. ಪೋಟೋವನ್ನು ಹಂಚಿಕೊಂಡಿರುವ ಸುದೀಪ್, ‘ವಾವ್.. ಎಂತಹ ಸಂಡೆ. ಇಂತಹದೊಂದು ದೊಡ್ಡ ಸರ್ಪ್ರೈಸ್ಗೆ ನಿಮಗೆ ಧನ್ಯವಾದಗಳು. ಇದನ್ನು ಖಂಡಿತವಾಗಿಯೂ ನಾನು ನಿರೀಕ್ಷಿಸಿರಲಿಲ್ಲ. ಈ ಉಡುಗರೆ ಸಿಕ್ಕಿದ ಮೇಳೆ ನಾನು ವಿಶ್ವದ ತುತ್ತ ತುದಿಯಲ್ಲಿಂತೆ ಭಾಸವಾಗುತ್ತಿದೆ. ಧನ್ಯವಾದಗಳು‘ ಎಂದು ಬರೆದುಕೊಂಡಿದ್ದಾರೆ.
Wohhhhhhhhhhhhhhhhhhhhh🥳🥳...
What a Sunday .. thank uuuu @therealkapildev sirrrrr for this hugeeeeeee surprise I'm waking th to.
Wowwww... wasnt expecting this. This a classic piece and I'm right now feeling on top of the world. Thank you thank you ❤️❤️❤️❤️ pic.twitter.com/9z3XlMFpoQ
ಇನ್ನು, ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್ ನಟ ಸುದೀಪ್ ಗೆ ತಮ್ಮ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದರು. 2022ನೇ ಐಪಿಎಲ್ ಆವೃತ್ತಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಬ್ಯಾಟ್ಸಮನ್ ಜೋಸ್ ಬಟ್ಲರ್. ಹೀಗೆ ತಾವು ಟೂರ್ನಿಯಲ್ಲಿ ಆಡಲು ಬಳಸಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್ ಗೆ ಕೊಡುಗೆಯಾಗಿ ನೀಡಿದ್ದಾರೆ. ಕೊಡುಗೆಯಿಂದ ಖುಷಿಯಾಗಿದ್ದು ಪೋಟೋಸನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಸದ್ಯ ಕಿಚ್ಚ ಸುದೀಪ್ ತಮ್ಮ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕಥೆಯಲ್ಲಿನ ಟ್ವಿಸ್ಟ್ ಗಳು ಸಿನಿ ಪ್ರೇಮಿಗಳಲ್ಲಿ ಸಿನಿಮಾ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ನಿರ್ದೇಶಕ ಅನುಫ್ ಭಂಡಾರಿ ಸಖತ್ ಟ್ವಿಸ್ಟ್ ನೀಡಿದ್ದು, ಟ್ರೈಲರ್ ನೋಡಿದವರಲ್ಲಿ ಸುದೀಪ್ ಚಿತ್ರದಲ್ಲಿ ಡಬಲ್ ರೋಲ್ ನಲ್ಲಿ ನಟಿಸಿದ್ದಾರಾ ಎಂಬ ಸಂಶಯ ಮೂಡುವಂತಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ