• Home
  • »
  • News
  • »
  • entertainment
  • »
  • Kantara Movie: ಕಾಂತಾರ ಸಿನಿಮಾಗೆ ಉದ್ಯಮಿಗಳಿಂದಲೂ ಮೆಚ್ಚುಗೆ

Kantara Movie: ಕಾಂತಾರ ಸಿನಿಮಾಗೆ ಉದ್ಯಮಿಗಳಿಂದಲೂ ಮೆಚ್ಚುಗೆ

ಕಾಂತಾರ ಸಿನಿಮಾ

ಕಾಂತಾರ ಸಿನಿಮಾ

ಉದ್ಯಮಿ ನಿತಿನ್‌ ಅವರು ನಾನೊಬ್ಬ ಕನ್ನಡಿಗ ಎನ್ನಲು ಹೆಮ್ಮೆಯಾಗುತ್ತದೆ ಎಂದಿದ್ದಾರೆ. ಇನ್ನೂ ಈ ಸಿನಿಮಾ ಚಿತ್ರೀಕರಿಸಿದಲ್ಲಿ ನನ್ನ ಮೂಲವಿದೆ ಎಂದು ಹೇಳಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಕನ್ನಡದ ಹೆಮ್ಮೆ ಕಾಂತಾರದ ಅಬ್ಬರ ಇನ್ನೂ ನಿಂತಿಲ್ಲ. ಯಶಸ್ಸಿನ ಓಟ ಓಡುತ್ತಲೇ ಇರುವ ಕಾಂತಾರದ (Kantara) ಮೇಲೆ ವಿಶ್ವದಾಂದ್ಯಂತ ಅಭಿಮಾನ, ಮೆಚ್ಚುಗೆಯ ಸುರಿಮಳೆಯೇ ಆಗುತ್ತಿದೆ. ಈ ಮಧ್ಯೆ ಬ್ಲಾಕ್‌ ಬಸ್ಟರ್‌ ಕಾಂತಾರಕ್ಕೆ ಮತ್ತಷ್ಟು ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. Zerodha ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಇತ್ತೀಚಿಗೆ ಕಾಂತಾರ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ ನಲ್ಲಿ 466.6K ಫಾಲೋವರ್ಸ್‌ ಹೊಂದಿರುವ ಉದ್ಯಮಿ ನಿತಿನ್‌ ಅವರು ನಾನೊಬ್ಬ ಕನ್ನಡಿಗ ಎನ್ನಲು ಹೆಮ್ಮೆಯಾಗುತ್ತದೆ ಎಂದಿದ್ದಾರೆ. ಇನ್ನೂ ಈ ಸಿನಿಮಾ ಚಿತ್ರೀಕರಿಸಿದಲ್ಲಿ ನನ್ನ ಮೂಲವಿದೆ ಎಂದು ಹೇಳಿದ್ದಾರೆ. ಅಲ್ಲದೇ ಚಿತ್ರವನ್ನು ಮಸ್ಟ್‌ ವಾಚ್‌ ಎಂದಿರುವ ಉದ್ಯಮಿ, ಕೊನೆಯ 30 ನಿಮಿಷ ತನಗೆ ಗೂಸ್‌ ಬಂಪ್ಸ್‌ ಬಂದಿದ್ದಾಗಿ ಹೇಳಿದ್ದಾರೆ. ಇನ್ನು ಕಾಮತ್‌ ಅವರ ಪೋಸ್ಟ್‌ ಗೆ ನಟ ನಿರ್ದೇಶಕ ರಿಶಬ್‌ ಶೆಟ್ಟಿ ಹಾರ್ಟ್‌ ಎಮೋಜಿ ಹಾಗೂ ಪ್ರೀತಿ ವ್ಯಕ್ತಪಡಿಸಿದ್ದಾರೆ.


ಇನ್ನು "ಶಿವ' ಟ್ರೈಲಾಜಿ ಖ್ಯಾತಿಯ ಲೇಖಕ ಅಮಿಶ್ ತ್ರಿಪಾಠಿ ಕೂಡ ವಾರಾಂತ್ಯದಲ್ಲಿ ಚಲನಚಿತ್ರವನ್ನು ವೀಕ್ಷಿಸಿದರು. ಅಲ್ಲದೇ, 'ವರಾಹ ರೂಪಂ ಹಾಡಿನ ಮಾಧುರ್ಯ ತಮ್ಮನ್ನು ಇನ್ನೂ ಅದೇ ಗುಂಗಿನಲ್ಲಿರಿಸಿದೆ ಎಂದು ಹೇಳಿದ್ದು, ತಮ್ಮ ಪೋಸ್ಟ್‌ ಗೆ "ವಾಟ್ ಎ ಸಿನಿಮಾ" ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು ರಿಶಬ್‌ ಶೆಟ್ಟಿ ಅವರನ್ನು ಶ್ಲಾಘಿಸಿದ ಬರಹಗಾರರು, ನಿರ್ದೇಶಕ-ನಟರಿಗೆ ‘ಅಪರೂಪದ ಪ್ರತಿಭೆ’ ವರದಾನವಾಗಿದೆ ಎಂದಿದ್ದಾರೆ.


ನಿರ್ಮಲಾ ಸೀತಾರಾಮನ್ ಮೆಚ್ಚುಗೆ


ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಚಲನಚಿತ್ರವನ್ನು ಭರ್ಜರಿಯಾಗಿದೆ ಎಂದು ಹೊಗಳಿದ್ದಾರೆ. ಅನೇಕರಿಂದ ಪ್ರಶಂಸೆಗೆ ಒಳಗಾದ ನಂತರ, ಆಕ್ಷನ್ ಥ್ರಿಲ್ಲರ್ ಚಿತ್ರ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಅಕ್ಟೋಬರ್ 14 ರಂದು ಬಿಡುಗಡೆಯಾಗಿದೆ.


ಇದನ್ನೂ ಓದಿ: Kantara: ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದ ಕಾಂತಾರ, ರಾಜ್ಯದಲ್ಲಿ ಈವರೆಗೂ 1 ಕೋಟಿ ಟಿಕೆಟ್‌ಗಳು ಸೇಲ್!


ಚಲನಚಿತ್ರ ವ್ಯಾಪಾರ ತಜ್ಞ ತರಣ್ ಆದರ್ಶ್ ಪ್ರಕಾರ, ಹಿಂದಿ ಆವೃತ್ತಿಯು ಬಿಡುಗಡೆಯಾದ ನಂತರ ನಾಲ್ಕನೇ ವಾರಾಂತ್ಯದಲ್ಲಿ 62 ಕೋಟಿ ರೂ. ಅಂದರೆ ಮೊದಲ ವಾರಾಂತ್ಯಕ್ಕಿಂತ ನಾಲ್ಕನೇ ವಾರದ ಕಲೆಕ್ಷನ್ ಹೆಚ್ಚಾಗಿದೆ. ನಟ ಯಶ್ ಅಭಿನಯದ 'ಕೆಜಿಎಫ್: ಅಧ್ಯಾಯ 1' ಕಲೆಕ್ಷನ್‌ ಅನ್ನು ಈ ಬ್ಲಾಕ್‌ಬಸ್ಟರ್ ಚಿತ್ರ ದಾಟಿದೆ.ಬಾಲಿವುಡ್ ಎಂಟ್ರಿ?


ಇನ್ನು ಕಳೆದ ವಾರ, ರಿಶಬ್‌ ಶೆಟ್ಟಿ 'ಕಾಂತಾರ'ದ ಯಶಸ್ಸಿನ ನಂತರ ತಮ್ಮ ಮುಂದಿನ ಪ್ಲಾನ್‌ ಗಳ ಬಗ್ಗೆ ಮಾತನಾಡಿದರು. ವಿಶೇಷ ಸಂದರ್ಶನವೊಂದರಲ್ಲಿ ಬಾಲಿವುಡ್ ಚಲನಚಿತ್ರ ನಿರ್ಮಾಪಕರಿಂದ ಆಫರ್‌ಗಳು ಬರುತ್ತಿವೆ. ಆದರೆ ತಾವು ಕನ್ನಡ ಚಲನಚಿತ್ರಗಳತ್ತ ಗಮನ ಹರಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ. "ನನಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕರಿಂದ ಆಫರ್‌ಗಳು ಬಂದಿವೆ, ಆದರೆ ಇದೀಗ, ನಾನು ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಲು ಬಯಸುತ್ತೇನೆ. ನಾನು ಅಮಿತಾಭ್ ಬಚ್ಚನ್ ಅವರನ್ನು ಆರಾಧಿಸುತ್ತೇನೆ. ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಶಾಹಿದ್ ಕಪೂರ್ ಅಥವಾ ಸಲ್ಮಾನ್ ಭಾಯ್ ಅವರಂತಹ ನಟರನ್ನು ಇಷ್ಟಪಡುವುದಾಗಿ ಅವರು ಹೇಳಿದ್ದಾರೆ.


ಇದನ್ನೂ ಒದಿ: Rocking Star Yash: ಡಬ್ಬಿಂಗ್ ಸ್ಟುಡಿಯೋದಲ್ಲಿ ಯಶ್! ಕೆಜಿಎಫ್‌ 3 ಅಲ್ಲ, ಕೆಂಪೇಗೌಡರ ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ದನಿ!


ರಿಶಬ್‌ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಕನ್ನಡದಲ್ಲಿ ಸೆಪ್ಟೆಂಬರ್ 30 ರಂದು ಬಿಡುಗಡೆಯಾದಾಗಿನಿಂದ ಯಶಸ್ಸಿನ ಓಟ ಮುಂದುವರಿಸಿದೆ. ಇದು ತನ್ನ ಕಥಾ ಹಂದರ ಮತ್ತು ಅದ್ಭುತ ದೃಶ್ಯಗಳಿಗಾಗಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿದ 'ಕಾಂತಾರ' ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಮತ್ತು ದಕ್ಷಿಣ ನಟ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by:Divya D
First published: