ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾ (Cinema) ಪತ್ರಕರ್ತರ ಜೊತೆ ಸಂವಾದ ನಡೆಸಿದ್ದಾರೆ. ಈ ಸಂದರ್ಭ ನಟ, ನಿರ್ದೇಶಕ ರಿಷಬ್ ಅವರು ಸಿನಿಮಾ ಸಂಬಂಧ ಬಹಳಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಗಾಂಧಿ ಭವನದಲ್ಲಿ ನಡೆಯುತ್ತಿರೋ ನಡೆಯುತ್ತಿರುವ ಸಂವಾದದಲ್ಲಿ ರಿಷಬ್ ಅವರು ಸಿನಿಮಾ ಹಾಗೂ ಸಿನಿಮಾ ಕಥೆ (Movie Story) ಹುಟ್ಟಿಕೊಂಡ ಬಗ್ಗೆ ಹಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ. ಸಂವಾದದಲ್ಲಿ ಕಾಂತಾರ (Kantara) ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕಾಂತಾರ ಸಿನಿಮಾ ಹುಟ್ಟಿದ ಕಥೆ ಹೇಳಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಕಥೆ ಹುಟ್ಟಿದ ಬಗ್ಗೆ ಹೇಳಿದ್ದಾರೆ. ನಾನು ರೈತಾಪಿ ಕುಟುಂಬದಿಂದ ಬಂದ ಹುಡುಗ. ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೃಷಿಯ ಕಡೆಗೆ ಮುಖ ಮಾಡುತ್ತಿದ್ದರು. ಆಗ ನಮ್ಮ ಸ್ನೇಹಿತ ಒಬ್ಬ ಒಂದು ಘಟನೆಯನ್ನು ಹೇಳಿದ.
ಗೆಳೆಯ ಹೇಳಿದ ಕಥೆ
ಗೆಳೆಯನ ಮನೆಯಲ್ಲಿ ಸಾವಯುವ ಕೃಷಿ ಮಾಡಿದ್ದರು. ಭತ್ತ ಕಟಾವಿಗ ಬಂದಿತ್ತು. ಆಗ ಒಂದು ಕಾಡು ಹಂದಿ ಆ ಭತ್ತದ ಗದ್ದೆಗೆ ನುಗ್ಗಿ ಭತ್ತ ತಿಂದಿರುತ್ತದೆ. ಆ ಹಂದಿ ಹೊಡೆಯೋಣ ಅಂತ ಒಂದು ವಾರ ಹುಡುಕುತ್ತಾರೆ.
ಆದರೆ ಆ ಹಂದಿ ಸಿಗೋದಿಲ್ಲ. ಕೊನೆಗೆ ಒಂದು ಮರದಲ್ಲಿ ಹಂದಿ ಹೊಡೆಯಲು ಕಾದು ಕುಳಿತುಕೊಳ್ಳುತ್ತಾರೆ. ಆ ಹಂದಿ ಹೊಡೆಯೋಕೆ ಕೂತಿರೋ ಮಾಹಿತಿ ಫಾರಿಸ್ಟ್ ಆಫೀಸರ್ಗೆ ಸಿಗುತ್ತದೆ. ಅವರು ನಮ್ಮ ಸ್ನೇಹಿತನ ಮನೆಗೆ ರೈಡ್ ಮಾಡುತ್ತಾರೆ. ಆಗ ಲೋಡೆಡ್ ಗನ್ ಸಿಗುತ್ತದೆ. ಆ ಗನ್ ಹಿಡಿದು ಫಾರೆಸ್ಟ್ ಆಫೀಸರ್ ಶೂಟ್ ಮಾಡುತ್ತಾರೆ.
ಆಗ ಆ ಫಾರೆಸ್ಟ್ ಆಫೀಸರ್ ಕಣ್ಣಿಗೆ ಸಮಸ್ಯೆ ಆಗಿತ್ತೆ. ಈ ಕಥೆಯನ್ನ ನಮ್ಮೂರಲ್ಲಿರೋ ಒಬ್ಬ ಸ್ನೇಹಿತ ಹೇಳುತ್ತಾರೆ. ಅದರಿಂದಲೇ ಕಾಂತಾರ ಸಿನಿಮಾದ ಕಥೆ ಹುಟ್ಟಿಕೊಂಡಿತು ಎಂದಿದ್ದಾರೆ ರಿಷಬ್.
ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ನಾನು ಯಾವುದೇ ಗೆಲುವನ್ನ ಸೋಲನ್ನ ತಲೆಗೆ ತೆಗೆದುಕೊಳ್ಳುವುದಿಲ್ಲ. ನಾನು ಕೆಲಸ ಮಾಡೋಣ ಅಂತ ಯಾವಾಗಲೂ ಯೋಚನೆ ಮಾಡುತ್ತೇನೆ. ಯಾವುದೇ ವೇದಿಕೆಗಾಗಲಿ, ಸಿನಿಮಾ ಅವಾರ್ಡ್ಗೆ ಹೋಗಲಿ ಅಂತ ಸಿನಿಮಾ ಮಾಡಲ್ಲ ಎಂದಿದ್ದಾರೆ.
ಇದನ್ನೂ ಓದಿ: Kantara-2 Updates: ರಿಷಬ್ ಶೆಟ್ಟಿ ಕಾಂತಾರ-2 ಚಿತ್ರ ಯಾವಾಗ ಆರಂಭಿಸುತ್ತಾರೆ? ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ
ಕಾಂತಾರ ಸಿನಿಮಾ ಬೇರೆ ಭಾಷೆಗೆ ಹೋಗುತ್ತೆ ಅಂತ ನಾನು ಅಂದು ಕೊಂಡಿರಲಿಲ್ಲ. ಕಾಂತಾರ ಈಗ ಇಂಗ್ಲೀಷ್ ನಲ್ಲೂ ಬರುತ್ತಿದೆ. ನೆಟ್ ಫ್ಲಿಕ್ಸ್ ನಲ್ಲಿ ಇಂಗ್ಲಿಷ್ ಅವತರಣಿಕೆ ಬರುತ್ತಿದೆ. ಕಾಂತಾರ ಸಿನಿಮಾವನ್ನ ಸಣ್ಣ ಸಿನಿಮಾ ಅಂತಲೇ ಅಂದುಕೊಂಡಿದ್ದೇನೆ. ಬಾಹುಬಲಿ, ಆರ್ ಆರ್ ಆರ್, ಕೆಜಿಎಫ್ ಸಿನಿಮಾದಷ್ಟು ದೊಡ್ಡ ಬಜೆಟ್ ಸಿನಿಮಾ ನಮ್ಮದಲ್ಲ ಎಂದಿದ್ದಾರೆ.
ಕಾಂತಾರ ನನ್ನ ಸಿನಿ ಜೀವನದ ದೊಡ್ಡ ಬಜೆಟ್ ಸಿನಿಮಾ. ಕಾಂತಾರ ಸಿನಿಮಾ ಜನರನ್ನ ತಲುಪಿದ್ದು ನಮ್ಮ ಕನ್ನಡ ಜನರಿಂದ. ನಿರ್ದೇಶಕ ನಿರ್ಮಾಪಕರಿಗೆ ಸಿನಿಮಾದ ಬಗ್ಗೆ ಕ್ಲಾರಿಟಿ ಇರಬೇಕು. ಕಾಂತಾರ ಸಿನಿಮಾ ಜನರಿಗೆ ತಲುಪಿಸೋಕೆ ನಮ್ಮ ತಂಡಕ್ಕೆ ತುಂಬಾ ಚನ್ನಾಗಿ ಕ್ಲಾರಿಟಿ ಇತ್ತು. ನಾವು ಸಿನಿಮಾ ರಿಲೀಸ್ ನಂತರ ಪ್ರಮೋಷನ್ ಮಾಡೋಕೆ ಪ್ಲಾನ್ ಮಾಡಿದ್ದೆವು. ಅದರ ಪ್ರಕಾರವೇ ಎಲ್ಲವೂ ನಡೆಯಿತು. ಹಿಂದಿ, ತೆಲುಗು ಭಾಷೆಯಲ್ಲಿ ಒಂದೇ ತರದ ಕಲೆಕ್ಷನ್ ಮಾಡಿದೆ ಎಂದಿದ್ದಾರೆ.
ನಮ್ಮ ದೇಶ ವೈವಿಧ್ಯಮಯವಾಗಿದೆ. ನಮ್ಮಲ್ಲಿ ಹಲವಾರು ಸಂಸ್ಕೃತಿ ಇದೆ. ಪ್ರತಿಯೊಬ್ಬರು ಈ ಸಿನಿಮಾ ನೋಡಿ ಅವರವರ ದೈವಗಳ, ದೇವರ ಜೊತೆ ಕನೆಕ್ಟ್ ಆಗುತ್ತಾ ಹೋದರು. ಈ ಸಿನಿಮಾ ಬರಿ ದೈವದ ಬಗ್ಗೆ, ಅಲ್ಲ ಒಂದು ಸಮಾಜದ, ಹಾಡಿ ಜನರ ಬಗ್ಗೆ ಆಗಿದೆ. ಹೀಗಾಹಿ ಎಲ್ಲರಿಗೂ ಈ ಸಿನಿಮಾ ಕನೆಕ್ಟ್ ಆಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ