ದೇಶಾದ್ಯಂತ ಸೂಪರ್ ಹಿಟ್ ಆಗಿರುವ ಕಾಂತಾರ (Kantara) ಸಿನಿಮಾ ಸಖತ್ ವೈರಲ್ ಆಗಿದೆ. ರಿಷಬ್ ಶೆಟ್ಟಿ (Rishab Shetty) ಕಥೆ ಬರೆದು, ನಿರ್ದೇಶಿಸಿ, ನಟಿಸಿರುವ ಸಿನಿಮಾ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಿಸಿದ್ದು ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಸಿನಿಮಾ ಈಗ ದೇಶಾದ್ಯಂತ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಅಂತೂ ಭಾರೀ ಹಿಟ್ ಆಗಿದ್ದು ಕಡೆಯ 20 ನಿಮಿಷಗಳ ಬಗ್ಗೆ ಸಿನಿಮಾ ನೋಡಿದ ಬಹುತೇಕ ಎಲ್ಲರೂ ಮಾತನಾಡಿದ್ದಾರೆ. ಇದೀಗ ರಿಷಬ್ ಅವರು ಕಾಂತಾರ ಕ್ಲೈಮ್ಯಾಕ್ಸ್ ಸೀನ್ ಬಗ್ಗೆ ನೆಟ್ಫ್ಲಿಕ್ಸ್ (Netflix) ಜೊತೆ ಮಾತನಾಡಿದ್ದು ವೈರಲ್ ಆಗಿದೆ.
ಕಾಂತಾರದ ಕಡೆಯ 20 ನಿಮಿಷ
ಎಲ್ಲೂ ಡ್ರಾಗ್ ಮಾಡಿದಂತೆ ಅನಿಸದೆ ಚೊಕ್ಕದಾಗಿ ಮೂಡಿ ಬಂದ ಕಾಂತಾರ ಸಿನಿಮಾ ಸಖತ್ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಕೊನೆಯ 20 ನಿಮಿಷದ ಬಗ್ಗೆ ಬಾಹುಬಲಿ ಸ್ಟಾರ್ ಪ್ರಭಾಸ್, ಕ್ವೀನ್ ಕಂಗನಾ ಸೇರಿದಂತೆ ಸ್ಟಾರ್ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ವ್ಯಾಪಕ ಮೆಚ್ಚುಗೆ ಪಡೆದ ಕ್ಲೈಮ್ಯಾಕ್ಸ್ ಸೀನ್ ಗೂಸ್ಬಂಪ್ಸ್ ತರುತ್ತದೆ ಎನ್ನುವುದು ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕರ ಮಾತುಗಳು.
ಉರಿಯೋ ಕಟ್ಟಿಗೆಯಲ್ಲಿ ಹೊಡೆತ
ರಿಷಬ್ ಶೆಟ್ಟಿ ಅವರು ಕೊನೆಯ ಸೀನ್ನಲ್ಲಿ ಉರಿಯೋ ಕಟ್ಟಿಗೆಯಿಂದ ವಿಲನ್ಗಳಿಂದ ಹೊಡೆಸಿಕೊಂಡ ದೃಶ್ಯದ ಬಗ್ಗೆ ನೆಟ್ಫ್ಲಿಕ್ಸ್ನಲ್ಲಿ ಮಾತನಾಡಿದ್ದಾರೆ. ವಿಲನ್ಗಳೆಲ್ಲರೂ ಸೇರಿ ರಿಷಬ್ ಅವರಿಗೆ ಉರಿಯುತ್ತಿರೋ ಕಟ್ಟಿಗೆಯಿಂದ ಜೋರಾಗಿ ಹೊಡೆಯುತ್ತಿರುತ್ತಾರೆ. ಆ ಸಂದರ್ಭ ಆ ಸೀನ್ ಕೂಡಾ ಸರಿಯಾಗಿ ಬರುತ್ತಿರಲಿಲ್ಲ. ಆ ಸೀನ್ ಬೇಗನೆ ಮುಗಿಸುವ ಒತ್ತಡವೂ ಇತ್ತು. ದೃಶ್ಯ ನೈಜ್ಯವಾಗಿರಲಿ ಎಂದು ನಟ ಡ್ಯೂಪ್ ಕೂಡಾ ಬಳಸಿರಲಿಲ್ಲ. ಬದಲಾಗಿ ರಿಷಬ್ ಅವರೇ ಸ್ವತಃ ಈ ಸೀನ್ ಮಾಡಿದ್ದರು.
View this post on Instagram
ಈ ದೃಶ್ಯದ ಶೂಟಿಂಗ್ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ ಕಟ್ಟಿಗೆಯ ಹೊಡೆತಕ್ಕೆ ಬೆನ್ನಿನ ಮೇಲೆ ಸ್ಕ್ರಾಚ್ಗಳಾಗಿದ್ದವು. ಬೆನ್ನೆಲ್ಲ ಬೆಂಕಿಯ ಬಿಸಿ ತಾಗಿ ಉರಿಯುತ್ತಿತ್ತು. ಸೀನ್ ಮುಗಿಸಬೇಕಾದ ಒತ್ತಡದಲ್ಲಿ ಆ ಸಂದರ್ಭದಲ್ಲಿ ನನ್ನೊಳಗಿನ ತಾಳ್ಮೆ ಮುಗಿದು ಎದುರು ಸಿಕ್ಕರೆ ನಿಜಕ್ಕೂ ಹೊಡೆಯುವಷ್ಟು ಫಸ್ಟ್ರೇಷನ್ ಇತ್ತು. ಅದುವೇ ಸಿನಿಮಾದಲ್ಲಿ ನಿಜವಾಗಿ ವ್ಯಕ್ತವಾಯಿತು. ಹಾಗಾಗಿ ಈ ದೃಶ್ಯ ಸುಂದರವಾಗಿ ಮೂಡಿಬಂದಿತು ಎಂದು ರಿಷಬ್ ಹೇಳಿದ್ದಾರೆ.
ಸಿನಿಮಾದಲ್ಲಿ ನೈಜ್ಯತೆಯೇ ಹೈಲೈಟ್
ಕಾಂತಾರ ಸಿನಿಮಾದಲ್ಲಿ ಎಲ್ಲವೂ ಸಹಜವಾಗಿ ಕಾಣುವುದು ಚಿತ್ರದ ಹೈಲೈಟ್. ಹೆಚ್ಚು ಆರ್ಟಿಫಿಶಿಯಲ್ ತಂತ್ರ ಬಳಸದೆ ಸಿನಿಮಾವನ್ನು ಇದ್ದಹಾಗೆಯೇ ಚಿತ್ರೀಕರಿಸಲಾಗಿದೆ. ಹಾಗಾಗಿ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದೆ.
ಕಾಂತಾರದ ಬಜೆಟ್-ಲಾಭ
ಕಾಂತಾರ ಸಿನಿಮಾ ಕೇವಲ 16 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಬಹಳಷ್ಟು ಕಡಿಮೆ ಬಜೆಟ್ನಲ್ಲಿ ನಿರ್ಮಿಸಲಾಗಿದ್ದರೂ ಲಾಭ ಮಾತ್ರ ನಂಬಲಸಾಧ್ಯವಾದ ಮಟ್ಟದಲ್ಲಿ ಬಂದಿದೆ. ಸಿನಿಮಾ ಒಟ್ಟು ಸುಮಾರು 500 ಕೋಟಿಯಷ್ಟು ಲಾಭ ಮಾಡಿದೆ. ಸಿನಿಮಾ ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಲಾಭ ಗಳಿಸಿತು. ಹಿಂದಿಯಲ್ಲಿ ಕಮಾಲ್ ಮಾಡಿದ ಸಿನಿಮಾ 75 ಕೋಟಿಗೂ ಹೆಚ್ಚು ಲಾಭ ಮಾಡಿ ಸೂಪರ್ ಹಿಟ್ ಆಗಿ ಹೊರಹೊಮ್ಮಿತು. ನಾರ್ತ್ ಬೆಲ್ಟ್ನಲ್ಲಿ ಸಿನಿಮಾ ಅಲ್ಲಿನ ಒರಿಜಿನಲ್ ಸಿನಿಮಾಗಳನ್ನೇ ಮೀರಿಸಿದ್ದು ನಿಜಕ್ಕೂ ಗಮನಾರ್ಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ