• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kantara-Rishab Shetty: ವರಾಹ ರೂಪಂ ಹಾಡಿನ ವಿವಾದ; ಕೇರಳ ಪೊಲೀಸರ ಮುಂದೆ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಜರು!

Kantara-Rishab Shetty: ವರಾಹ ರೂಪಂ ಹಾಡಿನ ವಿವಾದ; ಕೇರಳ ಪೊಲೀಸರ ಮುಂದೆ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಜರು!

ರಿಪಬ್ ಶೆಟ್ಟಿ

ರಿಪಬ್ ಶೆಟ್ಟಿ

ಕೃತಿಚೌರ್ಯ ಆರೋಪ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಬ್ ಮತ್ತು ವಿಜಯ್ ಕಿರಗಂದೂರು ವಿಚಾರಣೆಗೆ ಹಾಜರಾಗಿದ್ದಾರೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ದೇಶವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ ಕಾಂತಾರ (Kantara Movie) ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡು ಸೂಪರ್ ಹಿಟ್​ ಆಗಿದೆ. ಕನ್ನಡ ಚಿತ್ರರಂಗದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಕಾಂತಾರ ಸಿನಿಮಾ ಹಾಡು ವಿವಾದಕ್ಕೆ ಸಿಲುಕಿದೆ. ಕಾಂತಾರ ಸಿನಿಮಾದ  ವರಾಹರೂಪಂ ಹಾಡಿನ (Varaha Roopam Song) ಮೇಲೆ ಕೇರಳದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ಕೃತಿಚೌರ್ಯ ಆರೋಪ ಮಾಡಿತ್ತು. ಈ ಸಂಬಂಧ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty), ನಿರ್ಮಾಪಕ ವಿಜಯ ಕಿರಗಂದೂರು (Vijay Kiragandur) ಕೇರಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.


ಪೊಲೀಸರ ಮುಂದೆ ರಿಷಬ್-ವಿಜಯ್ ಕಿರಗಂದೂರು


ಕೃತಿಚೌರ್ಯ ಆರೋಪ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಬ್ ಮತ್ತು ವಿಜಯ್ ಕಿರಗಂದೂರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತನಿಖಾಧಿಕಾರಿ ಡಿಸಿಪಿ ಕೆಇ ಬೈಜು ತಿಳಿಸಿದ್ದಾರೆ.


ರಿಪಬ್ ಶೆಟ್ಟಿ


2015ರಲ್ಲಿ ಕೇರಳದಲ್ಲಿ ಬಿಡುಗಡೆಯಾಗಿದ್ದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ನ ನವರಸದ ನಕಲು ಎಂದು ಆರೋಪಿಸಿತ್ತು. ಅಲ್ಲದೆ ಕೃತಿಚೌರ್ಯ ಆರೋಪದಡಿ ನಿರ್ದೇಶಕ ಮತ್ತು ನಿರ್ಮಾಪಕರನ್ನು ಬಂಧಿಸಬೇಕು ಎಂದು ಪ್ರಕರಣ ದಾಖಲಿಸಿತ್ತು.


ಮುಂಗಡ ಜಾಮೀನು ಪಡೆದ ರಿಷಬ್​-ವಿಜಯ್​


ನಟ-ನಿರ್ದೇಶಕ ರಿಷಬ್ ಶೆಟ್ಟಿ  ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ ಮುಂಗಡ ಜಾಮೀನು ಕೊಟ್ಟಿದೆ. ವರಾಹರೂಪಂ (Varaha Roopam) ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ  ನ್ಯಾ. ಬದ್ರುದ್ದೀನ್ ಅವರು ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ಬರುವ ತನಕ ಹಾಡನ್ನು ಬಳಸುವ ಹಾಗಿಲ್ಲ ಎಂದು ಷರತ್ತು ವಿಧಿಸಿದೆ.


ವರಾಹರೂಪಂ ಹಾಡಿನ ಕಾಪಿರೈಟ್


ವರಾಹರೂಪಂ ಹಾಡಿನ ಕಾಪಿರೈಟ್ ವಿಚಾರದ ವಿಚಾರಣೆ ನಡೆದು ಮಧ್ಯಂತರ ಆದೇಶ ಬರುವ ತನಕ ಅರ್ಜಿದಾರರು ಯಾವುದೇ ಕಾರಣಕ್ಕೆ ಆ ಹಾಡನ್ನು ಒಳಗೊಂಡ ಕಾಂತಾರ ಸಿನಿಮಾವನ್ನು ಪ್ರಸಾರ ಮಾಡಬಾರದು ಎಂದು ಷರತ್ತು ವಿಧಿಸಲಾಗಿದೆ. ಕಾನೂನಿನ ಪ್ರಕಾರ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ಅರ್ಹವಾದ ನಿರ್ಧಾರವನ್ನು ತೆಗೆದುಕೊಳ್ಳಲು ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮುಂದೆ ಹೋಗಬಹುದು ಎಂದು ತಿಳಿಸಲಾಗಿದೆ.


ಕೋಝಿಕ್ಕೋಡ್ ನಗರ ಪೊಲೀಸ್ ಠಾಣೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್​ನ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕ್ರೈಂ ನಂ.703/2022 ರಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಕಾಪಿರೈಟ್ ಆ್ಯಕ್ಟ್ 1956ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಇದು ಕಾಪಿ ಅಲ್ಲ, ಸ್ಫೂರ್ತಿ ಎಂದಿದ್ದ ಕಾಂತಾರ ತಂಡ


‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್​ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು..


ಇದನ್ನೂ ಓದಿ: Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು


ಮ್ಯೂಸಿಕ್ ಆ್ಯಪ್​​ಗಳಿಂದ ಡಿಲೀಟ್ ಮಾಡಿದ್ದ ಹಾಡು


ಮ್ಯೂಸಿಕ್ ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಪಿ ರೈಟ್ ಎನ್ನುವುದು ಸೂಕ್ಷ್ಮ ಸಂಗತಿ. ಹಾಡು, ಕಂಟೆಂಟ್​​ಗಳು ಕಾಪಿ ಆದಾಗ ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಹಾಡನ್ನು ಪ್ಲೇ ಮಾಡದಂತೆ ಕೋರ್ಟ್ ಆದೇಶಿಸಿದ ಕೆಲವು ದಿನಗಳ ನಂತರ ಈಗ ಹಾಡನ್ನು ಎಲ್ಲೆಡೆ ಡಿಲೀಟ್ ಮಾಡಲಾಗಿತ್ತು.

Published by:ಪಾವನ ಎಚ್ ಎಸ್
First published: