• Home
  • »
  • News
  • »
  • entertainment
  • »
  • Kantara Rishab Shetty: ಕನ್ನಡದ 'ಕ' ಅಕ್ಷರ ರಿಷಬ್ ಶೆಟ್ರಿಗೆ ಲಕ್ಕಿನಾ? ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್ ಸ್ಟೋರಿ

Kantara Rishab Shetty: ಕನ್ನಡದ 'ಕ' ಅಕ್ಷರ ರಿಷಬ್ ಶೆಟ್ರಿಗೆ ಲಕ್ಕಿನಾ? ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್ ಸ್ಟೋರಿ

ಕಾಂತಾರ ಸಿನಿಮಾ ಗೆಲ್ಲೋಕೆ "ಕ" ಅಕ್ಷರ ಹೆಲ್ಪ್ ಆಯಿತೇ?

ಕಾಂತಾರ ಸಿನಿಮಾ ಗೆಲ್ಲೋಕೆ "ಕ" ಅಕ್ಷರ ಹೆಲ್ಪ್ ಆಯಿತೇ?

ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಕೂಡ "ಕ" ಅಕ್ಷರದಿಂದಲೇ ಶುರು ಆಗುತ್ತದೇಯೇ? ಅಕ್ಷರಗಳ ವಿಚಾರದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ನಂಬಿಕೆಗಳು ಇವೆ. ಅಷ್ಟೇ ಕುತೂಹಲ ಮತ್ತು ಅದನ್ನ ಲಕ್ಕಿ ಅನ್ನೋರು ಇದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Cinema) ಸಿನಿಮಾ ಈ ವರ್ಷದ ಡಿವೈನ್ ಸೂಪರ್ (Devine Super Hit) ಹಿಟ್ ಸಿನಿಮಾ. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲಿಯೇ ಡಿವೈನ್ ಹಿಟ್ ಆಗಿರೋದು ಈ ಚಿತ್ರದ ವಿಶೇಷವೇ ಆಗಿದೆ. ಆದರೆ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆ ಅಂತ ಹೇಳೋದು ಕಷ್ಟ. ಒಳ್ಳೆ ಸಿನಿಮಾಗಳು (Reach) ರೀಚ್ ಆಗದೇ ಇರಬಹುದು. ಆ ಕಾರಣಕ್ಕೆ ಆ ಚಿತ್ರಗಳು ಸೋತು ಹೋದ (Example) ಉದಾಹರಣೆಗಳಿವೆ. ಆದರೆ ಕಾಂತಾರ ಸಿನಿಮಾ ವಿಚಾರದಲ್ಲಿ ಇಲ್ಲಿ ಎಲ್ಲವೂ ಕೂಡಿ ಬಂದಿದೆ. ಕಾಂತಾರ ಅನ್ನೋ ಟೈಟಲ್, ದೊಡ್ಡ ಪ್ರೋಡಕ್ಷನ್ ಹೌಸ್, ಒಳ್ಳೆ ಕತೆ, ಒಳ್ಳೆ ನಿರ್ದೇಶನ ಎಲ್ಲವೂ ಇಲ್ಲಿ ಕೂಡಿ ಬಂದಿವೆ. ಇದರಿಂದ ಕನ್ನಡದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲೂ ರೀಚ್ ಆಗಿದೆ. ಸೂಪರ್ ಹಿಟ್ ಕೂಡ ಆಗಿ ಬಿಟ್ಟಿದೆ.


ಕಾಂತಾರ ಸಿನಿಮಾ ಗೆಲ್ಲೋಕೆ "ಕ" ಅಕ್ಷರ ಹೆಲ್ಪ್ ಆಯಿತೇ?
ರಿಷಬ್ ಶೆಟ್ಟಿಗೆ ಸದ್ಯ ಗಜಕೇಸರಿ ಯೋಗ ಇದೆ. ಈ ವಿಚಾರವನ್ನ ಅವರ ತಂದೆ ಹೇಳಿಕೊಂಡಿದ್ದಾರೆ. ಇದರಿಂದ ರಿಷಬ್ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತದೆ ಅನ್ನೋ ನಂಬಿಕೆ ಕೂಡ ಇದೆ.


ಇದರ ಹೊರತಾಗಿ ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ರಿಗೆ "ಕ" ಅಕ್ಷರದ ಬಲ ಇದ್ದಂತೆ ಇದೆ. ಇದಕ್ಕೆ ಇನ್ನೂ ಒಂದು ಉದಾಹರಣೆನೂ ಇದೆ. ಆ ಚಿತ್ರದ ಟೈಟಲ್ ಕೂಡ "ಕ" ಅಕ್ಷರದಿಂದಲೇ ಶುರು ಆಗುತ್ತಿತ್ತು. ಇಂಗ್ಲೀಷ್ ನಲ್ಲಿ "K" ಅಕ್ಷರದಿಂದಲೇ ಅದು ಹೆಚ್ಚು ಪ್ರಚಲಿತವಾಗಿತ್ತು.


"ಕಿರಿಕ್ ಪಾರ್ಟಿ" ಸಿನಿಮಾ ಸೂಪರ್ ಹಿಟ್
ಹೌದು, ರಿಷಿಬ್ ನಿರ್ದೇಶನದ ಕಿರಿಕ್ ಪಾರ್ಟಿ ಹಿಟ್ ಆಗಿದೆ. ಇದು ಕೂಡ ಸಾಮಾನ್ಯವಾಗಿಯೇ ಶುರು ಆಗಿತ್ತು. ಯಾವುದೇ ಬಿಲ್ಡಪ್ ಕೂಡ ಕೊಟ್ಟಿರಲಿಲ್ಲ. ಬೆಂಗಳೂರಿನ ದೇವಸ್ಥಾನದಲ್ಲಿ ಸಿಂಪಲ್ ಆಗಿಯೇ ಪೂಜೆ ನೆರವೇರಿತ್ತು. ಅದು ಬಿಟ್ರೆ, ಈ ಚಿತ್ರ ಆ ಟೈಮ್​ ನಲ್ಲಿ ಹೊಸ ಅಲೆಯನ್ನೆ ಎಬ್ಬಿಸಿ ಬಿಡ್ತು.


Kantara Rishab Shetty lucky K letter Story
"ಕಿರಿಕ್ ಪಾರ್ಟಿ" ಸಿನಿಮಾ ಸೂಪರ್ ಹಿಟ್


ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಮಂದಣ್ಣರಂತಹ ನಟಿ ಕನ್ನಡಕ್ಕೆ ಸಿಕ್ರು. ಸಂಯುಕ್ತಾ ಹೆಗಡೆ ಕೂಡ ಇದೇ ಚಿತ್ರದಿಂದಲೇ ಮಿಂಚಿದರು. ರಕ್ಷಿತ್ ಶೆಟ್ಟಿ ಕಾಲೇಜ್ ಹುಡುಗನಾಗಿಯೇ ಕನ್ನಡ ಸಿನಿಪ್ರೇಮಿಗಳ ದಿಲ್ ಕದ್ದರು.ಇಂತಹ ಈ ಸಿನಿಮಾದ ಕಥೆ ಕೂಡ ಗಟ್ಟಿಯಾಗಿಯೇ ಇತ್ತು. ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಅಷ್ಟೆ ಚೆನ್ನಾಗಿಯೇ ಸ್ವೀಕರಿಸಿದರು.


ಡೈರೆಕ್ಟರ್ ರಿಷಬ್ ಶೆಟ್ಟಿ ತುಂಬಾ ಚೆನ್ನಾಗಿ ಕಥೆ ಹೇಳ್ತಾರೆ
ರಿಷಬ್ ಶೆಟ್ಟಿ ತಮ್ಮ ಸಿನಿ ಕರಿಯರ್ ನಲ್ಲಿ ಒಬ್ಬ ಅಸಿಸ್ಟಂಟ್ ಡೈರೆಕ್ಟರ್ ಆಗಿಯೇ ಕೆಲಸ ಮಾಡ್ತಾ ಬಂದಿದ್ದಾರೆ. ಅದರಿಂದ ಕಥೆಯ ಓಟ ಮತ್ತು ಅದರ ಪ್ರಸ್ತುತಿ ಆಳವಾಗಿಯೇ ತಿಳಿದುಕೊಂಡಿದ್ದಾರೆ.


ಇದನ್ನೂ ಓದಿ:  Ashwini Puneeth Rajkumar: ನನಗೆ ಫೋನ್ ಕಾಲ್ ಮಾಡಲು ಬೆಟ್ಟ ಹತ್ತಿದ್ರು ಅಪ್ಪು; ಮೊದಲ ಬಾರಿಗೆ ಪುನೀತ್ ಬಗ್ಗೆ ಮನಬಿಚ್ಚಿ ಮಾತಾಡಿದ ಅಶ್ವಿನಿ


ಈ ಕಾರಣಕ್ಕೇನೆ ರಿಷಬ್ ನಿರ್ದೇಶನದ ಸಿನಿಮಾದ ಕಥೆ ಚೆನ್ನಾಗಿಯೇ ಇರುತ್ತವೆ. ಅದನ್ನ ಹೇಳುವ ರೀತಿ ಕೂಡ ಜನರಿಗೆ ಹಿಡಿಸುತ್ತದೆ. ಅದಕ್ಕೆ ಕಿರಿಕ್ ಪಾರ್ಟಿ ಒಂದು ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಹೇಳಬಹುದು.


ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಪರ್ ಹಿಟ್
ಇದೇ ಕಿರಿಕ್ ಪಾರ್ಟ್ ಬಳಿಕ ಇನ್ನೂ ಒಂದು ಸಿನಿಮಾ ಬಂತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನ ಈ ಚಿತ್ರವೂ ಹೊಸ ಅಲೆ ಎಬ್ಬಿಸಿತು. ಇಲ್ಲೂ ಒಳ್ಳೆ ಕಥೆ ಇತ್ತು. ಒಳ್ಳೆ ಉದ್ದೇಶವೂ ಇತ್ತು. ಒಳ್ಳೆ ಹೋರಾಟವೂ ಇತ್ತು. ರಿಷಬ್ ಶೆಟ್ಟಿ ನಿರ್ದೇಶನವೂ ಇತ್ತು. ಆದರೆ "ಕ" ಅಕ್ಷರ ಇರಲಿಲ್ಲ ಬಿಡಿ.


ಕಾಂತಾರ ಚಿತ್ರದ ಶೆಟ್ರಿಗೆ "ಕ" ಅಕ್ಷರದ ಬಲ
ಇಂತಹ ಸಿನಿಮಾದ ಬಳಿಕ "ಕ" ಅಕ್ಷರದ ಚಿತ್ರವನ್ನೇ ರಿಷಬ್ ಮಾಡಿದ್ರು. ಈ ಚಿತ್ರಕ್ಕೆ ಕಾಂತಾರ ಅಂತಲೂ ಹೆಸರಿಟ್ಟರು. ಆ ಕಾಂತಾರವೇ ಈಗ ಇಡೀ ದೇಶ-ವಿದೇಶದಲ್ಲೂ ಹೆಸರು ಮಾಡಿದೆ. ಕನ್ನಡ ಸಿನಿಮಾ ಇಂಡಸ್ಟ್ರೀಯ ಖ್ಯಾತಿಯನ್ನೂ ದೂರದ ದೇಶಕ್ಕೂ ತಲುಪಿಸಿದೆ.


Kantara Rishab Shetty lucky K letter Story


"ಕ" ಅಕ್ಷರ ಕಾಂತಾರ ಇಡೀ ತುಳುನಾಡಿನ ಸಂಸ್ಕೃತಿಯನ್ನ ಎಲ್ಲೆಡೆ ಪಸರಿಸಿದೆ. "ಕ" ಅಕ್ಷರದ ಕೆಆರ್​ಜಿ ಸಂಸ್ಥೆನೇ ಈ ಚಿತ್ರವನ್ನ ನಿರ್ಮಿಸಿದೆ. ಇಲ್ಲಿ ಎರಡು ಕೆ ಗಳು ಸೇರಿ ಇಡೀ ಕನ್ನಡ ಇಂಡಸ್ಟ್ರೀಯಲ್ಲಿ ಹೊಸ ಅಲೆ ಮತ್ತು ಹೊಸ ಭರವಸೆಯನ್ನೆ ಮೂಡಿಸಿವೆ.


ರಿಷಬ್ ಮುಂದಿನ ಚಿತ್ರ "ಕ" ಅಕ್ಷರದ್ದೇ ಆಗಿರುತ್ತದೇಯೇ?
ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಕೂಡ "ಕ" ಅಕ್ಷರದಿಂದಲೇ ಶುರು ಆಗುತ್ತದೇಯೇ? ಅಕ್ಷರಗಳ ವಿಚಾರದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ನಂಬಿಕೆಗಳು ಇವೆ. ಅಷ್ಟೇ ಕುತೂಹಲ ಮತ್ತು ಅದನ್ನ ಲಕ್ಕಿ ಅನ್ನೋರು ಇದ್ದಾರೆ.


ಆದರೆ ರಿಷಬ್ ಶೆಟ್ರು ಏನ್ ಮಾಡ್ತಾರೋ ಏನೋ. ಆದರೆ ಮುಂದಿನ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಸದ್ಯಕ್ಕೆ ಏನೂ ಬಿಟ್ಟುಕೊಟ್ಟಿಲ್ಲ. ಕಾಂತಾರ ಸಿನಿಮಾದ ಪ್ರಮೋಷನ್ ಕೆಲಸದಲ್ಲಿಯೇ ಬ್ಯುಸಿಯಾದ್ದಾರೆ. ಈ ಸಿನಿಮಾದ ಮುಗಿದ್ಮೇಲೆ ಒಂದೆರಡು ತಿಂಗಳು ರಿಲ್ಯಾಕ್ಸ್ ಆಗಲಿದ್ದಾರೆ.


ಬೆಲ್ ಬಾಟಂ-2 ಯಾವಾಗ-ಕಿರಿಕ್ ಪಾರ್ಟಿ-2 ಯಾವಾಗ?
ಬೆಲ್ ಬಾಟಂ-2 ಸಿನಿಮಾದಲ್ಲಿ ರಿಷಬ್ ಹೀರೋ ಆಗಿಯೇ ಮಿಂಚಿದರು. ಈ ಚಿತ್ರವೂ ಸೂಪರ್ ಹಿಟ್ ಆಗಿದೆ. ಕಿರಿಕ್ ಪಾರ್ಟಿ-2 ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಇನ್ನು ಎಲ್ಲೂ ರಿವೀಲ್ ಆಗಿಲ್ಲ. ಆದರೆ ಕಿರಿಕ್ ಪಾರ್ಟಿ-2 ಚಿತ್ರದ ಪ್ಲಾನಿಂಗ್ ಅಂತೂ ಇದೆ.


ಇದನ್ನೂ ಓದಿ: Villain Loki-Kantara: ರಿಷಬ್ ಶೆಟ್ಟಿಯ ಆ ಕಟ್ಟೆ ಕಡೆಯ 2 ನಿಮಿಷದ ದೃಶ್ಯ ಇನ್ನೂ ಕಾಡುತ್ತಿದೆ ಎಂದ ಭಜರಂಗಿ ಲೋಕಿ


ಒಟ್ಟಾರೆ, ರಿಷಬ್ ಶೆಟ್ಟಿ ನಿರ್ದೇಶನದ ಕ ಅಕ್ಷರದ ಎರಡು ಸಿನಿಮಾ ಸೂಪರ್ ಹಿಟ್ ಆಗಿವೆ. ಕಿರಿಕ್ ಪಾರ್ಟಿ ಮತ್ತು ಕಾಂತಾರ ಎರಡೂ ರಿಷಬ್ ಹೆಸರನ್ನ ಇತಿಹಾಸ ಪುಟದಲ್ಲಿ ದಾಖಲಿಸಿವೆ. ಯಾವುದಕ್ಕೂ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಮಾಹಿತಿಗೆ ವೇಟ್ ಮಾಡಿ.

First published: