• Home
  • »
  • News
  • »
  • entertainment
  • »
  • Rishab Shetty: ರಿಷಬ್ ಶೆಟ್ಟಿ ನವೆಂಬರ್ ಕನ್ನಡಿಗರಲ್ಲ, ರಿಯಲ್ ಕನ್ನಡಿಗ: ಕೆ ವಿ ಚಂದ್ರಶೇಖರ್

Rishab Shetty: ರಿಷಬ್ ಶೆಟ್ಟಿ ನವೆಂಬರ್ ಕನ್ನಡಿಗರಲ್ಲ, ರಿಯಲ್ ಕನ್ನಡಿಗ: ಕೆ ವಿ ಚಂದ್ರಶೇಖರ್

ಕನ್ನಡ ಅಭಿಮಾನ-ಮೊದಲ ದಿನವೇ ದೇಶ-ವಿದೇಶದಲ್ಲೂ ಕಾಂತಾರ

ಕನ್ನಡ ಅಭಿಮಾನ-ಮೊದಲ ದಿನವೇ ದೇಶ-ವಿದೇಶದಲ್ಲೂ ಕಾಂತಾರ

ರಿಷಬ್ ಶೆಟ್ಟಿ ನಿಜಕ್ಕೂ ರಿಯಲ್ ಕನ್ನಡಿಗ ಅಂತಲೇ ಹೇಳಬಹುದು. ತಮ್ಮ ಕಾಂತಾರ ಚಿತ್ರವನ್ನ ಎಲ್ಲೆಡೆ ಏಕಕಾಲದಲ್ಲಿ ಕನ್ನಡದಲ್ಲಿಯೇ ರಿಲೀಸ್ ಮಾಡಿಸಿದ ಖ್ಯಾತಿನೂ ರಿಷಬ್​ಗೆ ಸಲ್ಲಬೇಕು ಎಂದು ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ನಾಡಿನಲ್ಲಿ (Real Kannadiga) ಅನೇಕ ನಟರು ಇದ್ದಾರೆ. ನಟಿಯರೂ ಇದ್ದಾರೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಕನ್ನಡ ಸೇವೆ ಮಾಡ್ತಾನೇ ಇದ್ದಾರೆ. ತಮ್ಮದೇ ರೀತಿಯಲ್ಲಿ ಕನ್ನಡ ಪ್ರೇಮವನ್ನೂ ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಇವರೆಲ್ಲ ನವೆಂಬರ್ ವರೆಗೂ ಕಾಯೋದಿಲ್ಲ. ಕನ್ನಡ (Kannada Launge) ಭಾಷೆ ಬಗ್ಗೆ ಅವಕಾಶ ಸಿಕ್ಕರೆ ಮಾತನಾಡದೇ ಇರೋದಿಲ್ಲ. ಇಂತಹ ನಟ-ನಟಿಯರ ಸಾಲಿನಲ್ಲಿ ಅನೇಕರು ಇದ್ದಾರೆ. ಅದೇ ರೀತಿ ರಿಷಬ್ (Rishab Shetty) ಶೆಟ್ಟಿ ಕೂಡ ಕನ್ನಡದ ಬಗ್ಗೆ ಪ್ರೀತಿ ಉಳಿಸಿಕೊಂಡಿದ್ದಾರೆ. ತಮ್ಮ ಸೂಪರ್ (Super Hit Cinema) ಹಿಟ್ ಸಿನಿಮಾ ಕಾಂತಾರವನ್ನ ಕನ್ನಡದಲ್ಲಿಯೇ ಮಾಡಿರೋದು ಅಲ್ವೇ?


ಆ ನಂತರ ಈ ಸಿನಿಮಾ ಬೇರೆ ಬೇರೆ ಭಾಷೆಗೆ ಡಬ್ ಆಯಿತು. ಜನರ ಮನಸ್ಸಿಗೂ ತಲುಪಿತು. ಆದರೆ ಇದೆಲ್ಲ ಸಕ್ಸಸ್ ಅಬ್ಬರದ ಮಧ್ಯೆ ರಿಷಬ್ ಶೆಟ್ಟಿ ರಿಯಲ್ ಕನ್ನಡಿಗ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.


ರಿಯಲ್ ಕನ್ನಡಿಗ ತುಳುನಾಡಿನ ನಟ-ನಿರ್ದೇಶಕ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಕನ್ನಡ ಸಿನಿಮಾರಂಗದಲ್ಲಿಯೇ ಬೆಳೆದಿದ್ದಾರೆ. ಇಲ್ಲಿಯೇ ಅಸಿಸ್ಟಂಟ್ ನಿರ್ದೇಶಕರಾಗಿ ಗೆದ್ದಿದ್ದಾರೆ. ಸಿನಿಮಾ ಜರ್ನಿಯಲ್ಲಿ ಏಳು-ಬೀಳನ್ನ ಸಹ ಕಂಡಿದ್ದಾರೆ.
ಆದರೆ ರಿಷಬ್ ಶೆಟ್ಟಿ ಎಲ್ಲೂ ಭಾಷೆಯ ಬಗ್ಗೆ ಮಾತನಾಡಲಿಲ್ಲ. ನಮ್ಮದು ತುಳು ಭಾಷೆ ಅಂತಲೂ ಎಲ್ಲೂ ಹೇಳಿದಂಗೆ ಕಾಣಲೇ ಇಲ್ಲ. ಆದರೆ ಕನ್ನಡ ಭಾಷೆಯ ಸಿನಿಮಾ ಎಲ್ಲ ಕಡೆಗೂ ಹೋಗಲೇಬೇಕು ಅಂತಲೇ ಪಣತೊಟ್ಟಿರೋದಂತು ಅಷ್ಟೇ ಸತ್ಯ.


Kantara Film Hero Rishab Shetty Real Kannadiga Says K V Chandrashekar
ಕನ್ನಡದ ಕಾಂತಾರ ಚಿತ್ರದ ಮೂಲಕ ಕನ್ನಡ ಅಭಿಮಾನ


ಕನ್ನಡದ ಕಾಂತಾರ ಚಿತ್ರದ ಮೂಲಕ ಕನ್ನಡ ಅಭಿಮಾನ
ಹೌದು, ಇದಂತೂ ಸತ್ಯವಾದ ಮಾತು ಆಗಿದೆ. ರಿಷಬ್ ಶೆಟ್ಟಿ ಕನ್ನಡದಲ್ಲಿಯೇ ಕಾಂತಾರ ಸಿನಿಮಾ ಮಾಡಿದರು. ಆದರೆ, ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯನ್ನ ಚಿತ್ರಣ ಕಟ್ಟಿಕೊಟ್ಟರು. ಅಲ್ಲಿಯ ಆಚರಣೆಯನ್ನ ತೋರುತ್ತಲೇ ಈಗ ಇಡೀ ದೇಶ-ವಿದೇಶದ ಹೀರೋ ಆಗಿ ಬಿಟ್ಟಿದ್ದಾರೆ.


ಕಾಂತಾರ ಸಿನಿಮಾ ಕಳೆದ ತಿಂಗಳು 30 ರಂದು ರಿಲೀಸ್ ಆಗಿತ್ತು. ಆಗ ಈ ಚಿತ್ರ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದ ಎದುರೇ ರಿಲೀಸ್ ಆಗಿತ್ತು. ಕನ್ನಡದ ತೋತಾಪುರಿ ಚಿತ್ರೂ ರಿಲೀಸ್ ಆಗಿತ್ತು. ಆದರೂ ಯಾವುದೇ ಭಯವಿಲ್ಲದೇ ಕಾಂತಾರ ರಿಲೀಸ್ ಆಯಿತು.


ಕನ್ನಡ ಅಭಿಮಾನ-ಮೊದಲ ದಿನವೇ ದೇಶ-ವಿದೇಶದಲ್ಲೂ ಕಾಂತಾರ
ಕಾಂತಾರ ರಿಲೀಸ್ ಕೇವಲ ಮಂಗಳೂರು ಬೆಲ್ಟ್​  ಸಿನಿಮಾ ಅಂತಲೇ ನಂಬಲಾಗಿತ್ತು. ಅಲ್ಲಿಗೆ ಮಾತ್ರ ಸೀಮಿತ ಅಂತಲೇ ಗಾಂಧಿನಗರದ ಪಂಡಿತರು ಲೆಕ್ಕ ಹಾಕಿದ್ದರು. ನಿರ್ಮಾಪಕರಿಗೂ ಅದೇ ಫೀಲ್ ಆಗಿತ್ತು. ಆದರೆ ಈಗ ನೋಡಿ, ಎಲ್ಲ ಅಡೆ-ತಡೆಗೆಳನ್ನ ಮೀರಿ ಕನ್ನಡದ ಕಾಂತಾರ ಮುನ್ನುಗುತ್ತಿದೆ.


ಇದನ್ನೂ ಓದಿ: Ramachari: ಚಾರುಗೆ ತಿಳಿಯಿತು ತನ್ನ ಅಮ್ಮನ ತಪ್ಪು, ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ!


ಮೊದಲ ದಿನ ಸೆಪ್ಟೆಂಬರ್-30 ರಂದು ಕಾಂತಾರ ಕನ್ನಡದಲ್ಲಿಯೇ ಎಲ್ಲ ಕಡೆ ರಿಲೀಸ್ ಆಗಿತ್ತು. ಕಾಂತಾರ ಚಿತ್ರಕ್ಕೆ ಕನ್ನಡಿಗರು ಮನಸೋತ್ತಿದ್ದರು. ಇತರ ಭಾಷೆಯ ಪ್ರೇಕ್ಷಕರಲ್ಲೂ ಕಾಂತಾರ ಒಂದು ಸಣ್ಣ ಗುಂಗು ಹಿಡಿಸಿತ್ತು. ಆದರೆ ಭಾಷೆನೆ ಅರ್ಥ ಆಗಿರಲಿಲ್ಲ. ಸಬ್ ಟೈಟಲ್ ಕೂಡ ಅಷ್ಟೇನೂ ಫೀಲ್ ಆಗ್ತಾನೇ ಇರಲಿಲ್ಲ.


ಕಾಂತಾರ ಚೆನ್ನಾಗಿದೆ-ನಮ್ಮ ಭಾಷೆಯಲ್ಲಿಯೇ ಕೊಡಿ ಎಂಬ ಬೇಡಿಕೆ
ಕಾಂತಾರ ಸಿನಿಮಾವನ್ನ ಕನ್ನಡದಲ್ಲಿ ನೋಡಿದ ಪ್ರೇಕ್ಷಕರು ಡಬ್ಬಿಂಗ್ ಮಾಡಿ ಕೊಡಿ ಅಂತಲೇ ಕೇಳಿದ್ದರು. ಆ ಬೇಡಿಕೆಯ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು. ಅದರಂತೆ ಹೊಂಬಾಳೆ ಪ್ರೋಡಕ್ಷನ್ ಹೌಸ್ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ರಿಲೀಸ್ ಮಾಡ್ತು.


Kantara Film Hero Rishab Shetty Real Kannadiga Says K V Chandrashekar
ಕನ್ನಡದ ಕಾಂತಾರ ರಿಲೀಸ್ ಹಿಂದಿನ ಅಸಲಿ ಸತ್ಯ ಏನು?
ಕನ್ನಡದ ಕಾಂತಾರ ಮೊದಲ ದಿನ ಕನ್ನಡದಲ್ಲಿಯೇ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈ ಒಂದು ದೊಡ್ಡ ಹೆಜ್ಜೆಯ ರೂವಾರಿ ಬೇರೆ ಯಾರೋ ಅಲ್ಲ. ಅದು ಸ್ವತಃ ರಿಷಬ್ ಶೆಟ್ಟಿ ಅಂದ್ರೆ ತಪ್ಪೇ ಇಲ್ಲ. ನಿರ್ಮಾಪಕರ ಮೇಲೆ ಹೇರಿದ ಪ್ರೀತಿಯ ಒತ್ತಾಯಕ್ಕೆ ಇದೆಲ್ಲ ಸಾಧ್ಯವಾಗಿದೆ. ಹಾಗೆ ತಮ್ಮ ಕನ್ನಡ ಪ್ರೀತಿಯನ್ನ ರಿಷಬ್ ಅಂದೇ ಕಾಂತಾರ ಚಿತ್ರದ ಮೂಲಕ ತೋರಿದ್ದರು.


ರಿಷಬ್ ಶೆಟ್ಟಿ ರಿಯಲ್ ಕನ್ನಡಿಗ-ಕೆ.ವಿ.ಚಂದ್ರಶೇಖರ್
ರಿಷಬ್ ಶೆಟ್ಟಿ ನಿಜಕ್ಕೂ ರಿಯಲ್ ಕನ್ನಡಿಗ ಅಂತಲೇ ಹೇಳಬಹುದು. ತಮ್ಮ ಕಾಂತಾರ ಚಿತ್ರವನ್ನ ಎಲ್ಲೆಡೆ ಏಕಕಾಲದಲ್ಲಿ ಕನ್ನಡದಲ್ಲಿಯೇ ರಿಲೀಸ್ ಮಾಡಿಸಿದ ಖ್ಯಾತಿನೂ ರಿಷಬ್​ಗೆ ಸಲ್ಲಬೇಕು.


ನಿರ್ಮಾಣ ಸಂಸ್ಥೆ ಕೂಡ ಈ ಬಗ್ಗೆ ಅಷ್ಟೇನೂ ಒಲವು ತೋರಿಸಿರಲಿಲ್ಲ. ಆದರೆ ರಿಷಬ್ ಒತ್ತಾಯದಿಂದಲೇ ಇದು ಸಾಧ್ಯವಾಯಿತು ಎಂದು ಫಿಲ್ಮಂ ಚೇಂಬರ್ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹೇಳಿದರು.


Kantara Film Hero Rishab Shetty Real Kannadiga Says K V Chandrashekar
ರಿಷಬ್ ನವೆಂಬರ್ ಕನ್ನಡಿಗ ಅಲ್ಲವೇ ಅಲ್ಲ-ಕೆ.ವಿ.ಚಂದ್ರಶೇಖರ್


ರಿಷಬ್ ಶೆಟ್ಟಿ ತಮ್ಮ ಈ ಚಿತ್ರದ ಮೂಲಕ ಎಲ್ಲರ ಫೇವರಿಟ್ ನಟ ಕೂಡ ಆಗಿದ್ದಾರೆ. ಜೊತೆಗೆ ಕನ್ನಡ ನಾಡಿನ ಜನರಿಗೂ ಧನ್ಯವಾದ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಬಂದ ಕಾಂತಾರ ಸಿನಿಮಾವನ್ನ ಜನ ಕಾಡ್ಗಿಚ್ಚಿನಂತೆ ಪ್ರಚಾರ ಮಾಡಿದರು.


ಒಬ್ಬರಿಂದ ಒಬ್ಬರಿಗೆ ಈ ಸಿನಿಮಾ ಹರಡಿ ಈಗ ಬಾಲಿವುಡ್ ಗೂ ತಲುಪಿದೆ ಅಂತಲೂ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ರಿಷಬ್ ಅವರ ಈ ಪ್ರಯತ್ನಕ್ಕೆ ಕನ್ನಡ ಇಂಡಸ್ಟ್ರಿಯ ಮಂದಿ ಹೊಗಳುತ್ತಿದ್ದಾರೆ.


ಇದನ್ನೂ ಓದಿ: Ghost Film Update: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಘೋಸ್ಟ್ ಚಿತ್ರಕ್ಕೆ ಮಲೆಯಾಳಂ ನಟ ಜಯರಾಮ್ ಎಂಟ್ರಿ, ಸಿನಿಮಾ ತಂಡ ರಿವೀಲ್ ಮಾಡ್ತು ಎಂಟ್ರಿ ವೀಡಿಯೋ


ರಿಯಲ್ ಕನ್ನಡಿಗ ರಿಷಬ್ ಶೆಟ್ಟಿ-ಎಲ್ಲರೂ ಬಾಯಿ ಮಾತಿಗೆ ಹೇಳುತ್ತಾರೆ. ಆದರೆ ನಿಜವಾದ ಕನ್ನಡ ಅಭಿಮಾನವನ್ನ ರಿಷಬ್ ಶೆಟ್ಟಿ ತೋರಿದ್ದಾರೆ ಎಂದು ಕೆ.ವಿ.ಚಂದ್ರಶೇಖರ್ ಹೇಳಿಕೊಂಡಿದ್ದಾರೆ.

First published: