• Home
  • »
  • News
  • »
  • entertainment
  • »
  • Kantara: ಕಾಂತಾರ ನಿರ್ಮಾಣ ಸಂಸ್ಥೆಗೂ ಸಚಿವ ಅಶ್ವತ್ಥ್ ನಾರಾಯಣ್​ಗೂ ಇದೆ ಸಂಬಂಧ

Kantara: ಕಾಂತಾರ ನಿರ್ಮಾಣ ಸಂಸ್ಥೆಗೂ ಸಚಿವ ಅಶ್ವತ್ಥ್ ನಾರಾಯಣ್​ಗೂ ಇದೆ ಸಂಬಂಧ

ಸಿಎನ್ ಅಶ್ವತ್ಥ್ ನಾರಾಯಣ್

ಸಿಎನ್ ಅಶ್ವತ್ಥ್ ನಾರಾಯಣ್

ಸಿ ಎನ್ ಅಶ್ವಥ್ ನಾರಾಯಣ್ ಹೊಂಬಾಳೆ ಫಿಲ್ಮ್ಸ್ ಮತ್ತು ಅದರಲ್ಲಿ ಒಳಗೊಂಡ ಇತರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವ ವಿಚಾರ ಗೊತ್ತೇ?

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್​ನ ಹಿಟ್ ಸಿನಿಮಾ ಕಾಂತಾರವನ್ನು (Kantara) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ಪಿಯೂಷ್ ಗೋಯಲ್ ಅವರು ವ್ಯಾಪಕವಾಗಿ ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದ ನಿರ್ಮಾಣ (Movie Producer) ಸಂಸ್ಥೆಯ ಹಿನ್ನೆಲೆಯನ್ನು ಆಳವಾದಗಿ ನೋಡಿದರೆ ಇಲ್ಲಿ ಸಂಸ್ಥೆಗೆ ಬಿಜೆಪಿಯೊಂದಿಗೆ ನಿಕಟ ಸಂಪರ್ಕವಿರುವುದು ಬಹಿರಂಗವಾಗುತ್ತದೆ. ಹೌದು, ಬಿಜೆಪಿ ಮುಖಂಡ ಮತ್ತು ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ (Dr CN Ashwath Narayan) ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಂಪನಿಯು ಈ ಚಿತ್ರವನ್ನು ನಿರ್ಮಿಸಿದೆ. ನಿರ್ಮಾಪಕ (Producer) ವಿಜಯ್ ಕಿರಗಂದೂರು ಅಶ್ವತ್ಥ್ ನಾರಾಯನ್ ಅವರ ಸೋದರಸಂಬಂಧಿ ಎಂದು ಸಚಿವರು ಹೇಳಿದ್ದು, ದಿ ಇಂಡಿಯನ್ ಎಕ್ಸ್‌ಪ್ರೆಸ್​ಗೆ ಸಿಕ್ಕಿರುವ ದಾಖಲೆಗಳಲ್ಲಿ ಇವರಿಬ್ಬರ ನಡುವಿನ ಸಂಪರ್ಕ (Contact) ಕಾಣಿಸುತ್ತದೆ ಎನ್ನಲಾಗಿದೆ.


ಹೊಂಬಾಳೆ ಪಡೆದ ಸಾಲಕ್ಕೆ ಜಾಮೀನು ನಿಂತಿದ್ದು ಬಿಜೆಪಿ ಸಚಿವ


ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತು ನಿರ್ಮಾಪಕರು ಕುಟುಂಬ ಸಂಬಂಧಗಳಿಗಿಂತ ಹೆಚ್ಚು ಆಳವಾದ ಬಾಂಡಿಂಗ್ ಹೊಂದಿದ್ದಾರೆ. ಕರ್ನಾಟಕದ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಸಚಿವರಾದ ನಾರಾಯಣ್ ಅವರು ಹೊಂಬಾಳೆ ಪ್ರೊಡಕ್ಷನ್ಸ್ ಎರಡು ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಪಡೆದ ಸಾಲಕ್ಕೆ ಬ್ಯಾಂಕ್ ಗ್ಯಾರಂಟರ್ ಆಗಿದ್ದರು. ಕಿರಗಂದೂರು ನಡೆಸುತ್ತಿರುವ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕೂಡಾ ದಾಖಲೆಗಳು ತೋರಿಸುತ್ತವೆ.


2017ರಲ್ಲಿ ಆರಂಭವಾದ ಸಂಸ್ಥೆ


ವರದಿಯ ಪ್ರಕಾರ ಹೊಂಬಾಳೆ ಫಿಲ್ಮ್ಸ್ 2017 ರಲ್ಲಿ ಪ್ರಾರಂಭವಾಯಿತು. ಎರಡು ಸಹೋದರ ಸಂಸ್ಥೆಗಳಾದ ಹೊಂಬಾಳೆ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಮತ್ತು ಹೊಂಬಾಳೆ ಕನ್ಸ್ಟ್ರಕ್ಷನ್ಸ್ ಮತ್ತು ಎಸ್ಟೇಟ್‌ಗಳಲ್ಲಿ ಅದರ ನಿರ್ದೇಶಕರಾಗಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ಇದ್ದಾರೆ. ಕಾಂತಾರ ನಿರ್ಮಾಪಕರಲ್ಲಿ ಗೌಡರೂ ಒಬ್ಬರು.


ವಿಜಯ ಬ್ಯಾಂಕ್​ನಿಂದ ಪಡೆದ ಸಾಲ


2008-2013ರ ಅವಧಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಹೊಂಬಾಳೆ ನಿರ್ಮಾಣ ಸಂಸ್ಥೆ 2011-2012ರಲ್ಲಿ 64 ಲಕ್ಷ ರೂ.ಗಳಿಂದ 2012-13ರಲ್ಲಿ 42 ಕೋಟಿ ರೂ, 2013ರಲ್ಲಿ 49 ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ದಾಖಲೆಗಳು ತೋರಿಸಿವೆ. 2014-15 ರಿಂದ 92 ಕೋಟಿ. ಅಶ್ವತ್ಥ್ ನಾರಾಯಣ್ ಅವರು 2012ರಲ್ಲಿ ವಿಜಯಾ ಬ್ಯಾಂಕ್‌ನಿಂದ ಹೊಂಬಾಳೆ ಇನ್‌ಫ್ರಾಸ್ಟ್ರಕ್ಚರ್‌ ಪಡೆದ 15 ಕೋಟಿ ರೂ.ಗಳ ಬ್ಯಾಂಕ್ ಸಾಲಕ್ಕೆ ಜಾಮೀನುದಾರರಾಗಿದ್ದರು ಎಂದು ವರದಿ ತಿಳಿಸಿದೆ.


ಕಾಂತಾರ


ಸಾಲಗಾರರೊಂದಿಗಿನ ಸಚಿವರ ಸಂಬಂಧ?


ಸಾಲ ಮಂಜೂರಾತಿ ದಾಖಲೆಗಳ ಪ್ರಕಾರ, ಸಾಲಗಾರನೊಂದಿಗಿನ ಸಚಿವರ ಸಂಬಂಧವನ್ನು ಸೋದರಸಂಬಂಧಿ ಎಂದು ಬಹಿರಂಗಪಡಿಸಲಾಗಿದೆ. ಹೊಂಬಾಳೆ ಕನ್‌ಸ್ಟ್ರಕ್ಷನ್ಸ್ 2018ರಲ್ಲಿ ಪಡೆದ ಸಾಲಕ್ಕೆ ವಿಜಯಾ ಬ್ಯಾಂಕ್‌ನಲ್ಲಿ ಬ್ಯಾಂಕ್ ಗ್ಯಾರಂಟಿಯನ್ನು 95 ಕೋಟಿ ರೂ.ಗಳಿಂದ 175 ಕೋಟಿ ರೂ.ಗೆ ಹೆಚ್ಚಿಸುವ ಗ್ಯಾರಂಟಿಯಾಗಿ ಸಚಿವರು ಹೆಸರು ದಾಖಲೆಗಳಲ್ಲಿದೆ.


hombale films to produce bollywood film soon
ಹೊಂಬಾಳೆ ಫಿಲ್ಮ್ಸ್​


ಇದನ್ನೂ ಓದಿ: Shivaraj Kumar: ಹ್ಯಾಟ್ರಿಕ್ ಹೀರೋ ಫುಲ್ ಬ್ಯುಸಿ! ಜೈಲರ್ ಚಿತ್ರದಲ್ಲಿ ಶಿವನ ಹೊಸ ರೂಪ


ಹೊಂಬಾಳೆ ಫಿಲ್ಮ್ಸ್‌ನ ಫೈಲಿಂಗ್‌ಗಳ ಪ್ರಕಾರ, ಕಂಪನಿಯು 2017-18 ರಲ್ಲಿ 36.43 ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿತ್ತು. 2018-19 ರಲ್ಲಿ 58 ಕೋಟಿ ರೂಪಾಯಿಗಳಿಗೆ ಏರಿಕೆಯನ್ನು ತೋರಿಸಿದೆ. ನಂತರ 2019-20 ರಲ್ಲಿ 1.21 ಕೋಟಿ ರೂಪಾಯಿಗಳಿಗೆ ಮತ್ತು 2.59 ಕೋಟಿ ರೂಪಾಯಿಗಳಿಗೆ ಕುಸಿದಿದೆ. 2020-21ರಲ್ಲಿ ಪ್ರೊಡಕ್ಷನ್ ಹೌಸ್‌ನ ಹೊಣೆಗಾರಿಕೆಗಳು 2017-2018ರಲ್ಲಿ ರೂ 37.94 ಲಕ್ಷದಿಂದ 2020-2021 ರಲ್ಲಿ ರೂ 225 ಕೋಟಿಗೆ ಏರಿಕೆಯಾಗಿದ್ದು, ಸುಮಾರು ರೂ 188 ಕೋಟಿ ಸಾಲವಾಗಿ ತೋರಿಸಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

Published by:Divya D
First published: