ಕನ್ನಡದ ಕಾಂತಾರ (Kantara) ಕನ್ನಡಿಗರ ಹೃದಯ ಗೆದ್ದಿದೆ. ಕರಾವಳಿ ಭಾಗದ ದೈವದ ಆಚರಣೆ, ದೈವಿ (Divine) ನಂಬಿಕೆಗಳೆಲ್ಲ ಇಡೀ ಕರ್ನಾಟಕಕ್ಕೆ ಪರಿಚಯವಾಗಿವೆ. ಕರಾವಳಿ ಜಾನಪದ (Folk Music) ನಂಬಿಕೆಗಳು ಮತ್ತು ದೈವದ ಶಕ್ತಿಯ ಪರಿಚಯವೂ ಈಗ ಎಲ್ಲರಿಗೂ ಈ ಕಾಂತಾರ ಮೂಲಕ ಆಗಿದೆ. ದೈವ ಬಲದಿಂದಲೇ ಕಾಂತಾರ (Kantara Cinema) ಎಲ್ಲ ಮನಸ್ಸುಗಳ ಎದೆಯಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡುತ್ತಿದೆ. ಕಾಂತಾರ ಅನ್ನೋ ಸಿನಿಮಾ ಈಗ ಕೇವಲ ಕರಾವಳಿ ಭಾಗದ ಸಿನಿಮಾ ಆಗಿ ಉಳಿದಿಲ್ಲ. ಅದು ಎಲ್ಲರ ಕಾಂತಾರ ಆಗಿ ಬಿಟ್ಟಿದೆ. ಕಾಂತಾರ ಸಿನಿಮಾ ಪ್ರೇಕ್ಷಕರಲ್ಲಿ ದೈವಿ ಶಕ್ತಿಯ ಬಗ್ಗೆ ನಂಬಿಕೆ ಹೆಚ್ಚಿಸುತ್ತಿದೆ. ಇದನ್ನ ನಿರ್ಮಿಸೊ ಸಮಯದಲ್ಲಿ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾಂಸಾಹಾರ ಸೇವನೆ ಬಿಟ್ಟಿದ್ದರು.
ಅದೇ ರೀತಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಮಾಂಸಾಹಾರ ತ್ಯಜಿಸಿದ್ದರು. ದೈವದ ಆರಾಧನೆಯೊಂದಿಗೆ ಸಂಗೀತ ಸಂಯೋಜನೆಗೂ ಕುಳಿತು ಕೊಳ್ಳುತ್ತಿದ್ದರು.
ಹೀಗೆ ಕಾಂತಾರದ ವಿಶೇಷ ಅನುಭವಗಳ ಬಗ್ಗೆ ವಿಶೇಷವಾಗಿಯೇ ನಮ್ಮ ಜೊತೆಗೆ ಅಜನೀಶ್ ಲೋಕನಾಥ್ ಮಾತನಾಡಿದ್ದಾರೆ. ಅವರ ಮಾತಿನ ಒಟ್ಟು ಚಿತ್ರಣ ನಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ರೂಪದಲ್ಲಿಯೇ ಇದೆ ಓದಿ.
ಕಾಂತಾರ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಸಂಗೀತದ ಬಗ್ಗೆನೂ ಒಳ್ಳೆ ಮಾತುಗಳೇ ಕೇಳಿ ಬರ್ತಿವೆ. ಏನ್ ಹೇಳಲಿಕ್ಕೆ ಇಷ್ಟಪಡ್ತಿರಾ?
ಅಜನೀಶ್: ಮಾತುಗಳೇ ಬರುತ್ತಿಲ್ಲ. ನಿರೀಕ್ಷೆ ಮೀರಿ ಅಭಿಪ್ರಾಯ ಬರ್ತಾ ಇದೆ.
ಕಾಂತಾರ ಸಿನಿಮಾದ ಭಾರೀ ಪ್ರತಿಕ್ರಿಯೆ ಬಗ್ಗೆ ನಿರೀಕ್ಷೆ ಇತ್ತೇ?
ಅಜನೀಶ್: ಹೌದು, ಸಣ್ಣ ಒಂದು ನಂಬಿಕೆ ಇತ್ತು. ಆದರೆ ಈ ಮಟ್ಟಿನ ಪ್ರತಿಕ್ರಿಯೆ ಸಿಗುತ್ತಿದೆ ಅಂತ ಅಂದುಕೊಂಡಿರಲಿಲ್ಲ. ಈಗ ಅದು ಸಿಕ್ಕಾಗಿದೆ. ಅದರಿಂದ ಜಾಸ್ತಿನೇ ಖುಷಿ ಆಗಿದೆ.
ಕಾಂತಾರಾ ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಿದ್ರಾ?
ಅಜನೀಶ್: ನಮ್ಮ ಚಿತ್ರ ನೋಡಲು ನಮಗೆ ಈಗ ಟೆಕೆಟ್ ಸಿಗುತ್ತಿಲ್ಲ. ಎಲ್ಲೆಡೆ ಹೌಸ್ ಫುಲ್ ಶೋ ಓಡ್ತಿದೆ. ಇದು ನನಗೆ ತುಂಬಾ ಖುಷಿ ತಂದಿದೆ.
ಇದನ್ನೂ ಓದಿ: Kantara: ಅಂದು ಒಂದೇ ಒಂದು ಶೋಗಾಗಿ ಪರದಾಟ, ಇಂದು ಅದೇ ಮಲ್ಟಿಪ್ಲೆಕ್ಸ್ನಲ್ಲಿ 10 ಶೋ! ಇದೇ ಅಲ್ವಾ ನಿಜವಾದ ಗೆಲುವು
ಕಾಂತಾರ ಸಿನಿಮಾಗೋಸ್ಕರ ರಿಷಬ್ ಶೆಟ್ಟಿ ನಾನ್ ವೆಜ್ ಬಿಟ್ರು ?
ಅಜನೀಶ್: ಹೌದು, ರಿಷಬ್ ಶೆಟ್ಟಿ ದೈವ ರೂಪದ ಪಾತ್ರ ಮಾಡಲು ನಾನ್ ವೆಜ್ ಬಿಟ್ಟರು. ದೈವದ ಆರಾಧನೆಯೊಂದಿಗೆ ಆ ಪಾತ್ರ ನಿರ್ವಹಿಸಿದರು.
ದೈವದ ಹಾಡುಗಳನ್ನ ಸಂಯೋಜಿಸೋವಾಗ ನೀವೂ ನಾನ್ ವೆಜ್ ಬಿಟ್ಟಿದ್ರಾ?
ಅಜನೀಶ್: ಇದು ನಿಜಾನೇ, ನಾನು ನಾನ್ ವೆಜ್ ಬಿಟ್ಟಿದ್ದೇನೆ. ಚಿತ್ರದ ಅದರಲ್ಲೂ ದೈವದ ಹಾಡುಗಳನ್ನ ಮಾಡೋವಾಗ ಹೆಚ್ಚು ಕಡಿಮೆ ಎರಡು ತಿಂಗಳು ನಾನ್ ವೆಜ್ ಬಿಟ್ಟು ಹಾಡುಗಳನ್ನ ಸಂಯೋಜಿಸಿದ್ದೇನೆ.
ಕಾಂತಾರ ಸಿನಿಮಾ ಜನರನ್ನ ರೀಚ್ ಆಗುತ್ತಿದೆ. ಇದಕ್ಕೆ ಏನ್ ಕಾರಣ ಇರಬಹುದು?
ಅಜನೀಶ್: ಜನ ಚಿತ್ರವನ್ನ ಸ್ವೀಕರಿಸಿದ್ದಾರೆ. ಇದಕ್ಕೆ ದೈವದ ಶಕ್ತಿನೇ ಕಾರಣ ಅಂತ ಹೇಳಬಹುದು.ಈ ಚಿತ್ರಕ್ಕೆ ಒಂದು ಡಿವೈನ್ ಪವರ್ ಬಂದಿದೆ. ಹಾಗಾಗಿಯೇ ಜನ ಈ ಚಿತ್ರಕ್ಕೆ ಬೇಗ ಕನೆಕ್ಟ್ ಕೂಡ ಆಗುತ್ತಿದ್ದಾರೆ.
ಕಾಂತಾರ ಚಿತ್ರದ ಭೂತದ ಕೋಲು ಹಾಡಿನ ಬಗ್ಗೆ ಒಂದಷ್ಟು ಹೇಳಿ?
ಅಜನೀಶ್: ಭೂತದ ಕೋಲು ಹಾಡು ವಿಶೇಷವಾಗಿಯೆ ಕಂಪೋಜ್ ಆಗಿದೆ. ಈ ಹಾಡಿಗೆ ಕ್ಲಾಸಿಕಲ್ ಟಚ್ ಇದೆ. ರಾಗ ಆಧಾರಿತ ಹಾಡು ಕೂಡ ಇದಾಗಿದೆ.
ಕಾಂತಾರ ಚಿತ್ರದ ಕಥೆ ಮತ್ತು ಸಂಗೀತದಲ್ಲಿ ಒಂದು ಸೆಳೆತ ಇದೆ ಅಲ್ವೇ?
ಅಜನೀಶ್: ಕಾಂತಾರ ಚಿತ್ರದಲ್ಲಿ ಒಂದು ಸೆಳೆತ ಇದೆ. ಇದಕ್ಕೆ ಕಾರಣ ಅಲ್ಲಿಯ ಜಾನಪದ ಸಂಗೀತದ ಶಕ್ತಿನೇ ಆಗಿದೆ. ದೈವಗಳ ಚಿತ್ರಣ ನೀಡೋ ಹಾಡುಗಳನ್ನ ಇಲ್ಲಿ ಬಳಸಿದ್ದೇವೆ. ಹಾಗಾಗಿಯೇ ಈ ಸಿನಿಮಾ ಅನೇಕರನ್ನ ಸೆಳೆಯುತ್ತಲೇ ಇದೆ.
ಕಾಂತಾರ ಚಿತ್ರಕ್ಕೆ ಬರ್ತಿರೋ ಆ ಪ್ರತಿಕ್ರಿಯೆ ಬಗ್ಗೆ ಹೇಳಬಹುದೇ?
ಅಜನೀಶ್: ಕಾಂತಾರ ಸಿನಿಮಾ ನೋಡಿದವ್ರು ತಮ್ಮ ಬಾಲ್ಯದ ದಿನಗಳು ನೆನಪಾದವು ಅಂತಲೇ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಹಳೆ ದಿನಗಳನ್ನ ನೆನಪಿಸೋ ಶಕ್ತಿ ಕೂಡ ಇದೆ ಅಂತಲೂ ಇನ್ನೂ ಕೆಲವರು ತಿಳಿಸುತ್ತಿದ್ದಾರೆ.
ಕಾಂತಾರ ಸಿನಿಮಾದ ಸೆಳೆತಕ್ಕೆ ಇರೋ ಆ ಶಕ್ತಿ ಯಾವುದು?
ಅಜನೀಶ್: ಕಾಂತಾರ ಚಿತ್ರಕ್ಕೆ ಡಿವೈನ್ ಪವರ್ ಬಂದು ಬಿಟ್ಟಿದೆ. ಪಂಜುರ್ಲಿ ದೈವ, ಗುಳಿಗಾ ದೈವದ ಆಶೀರ್ವಾದ ನಮ್ಮ ಚಿತ್ರದ ಮೇಲೆ ಇದೆ.
ಇದನ್ನೂ ಓದಿ: Kudroli Ganesh Kantara Review: ಕಾಂತಾರ ಸಿನಿಮಾ ನೋಡಿದ ಜಾದೂಗಾರ ಕುದ್ರೋಳಿ ಗಣೇಶ್ ಏನಂದ್ರು?
ಕಾಂತಾರ ಸಿನಿಮಾವನ್ನ ಜನ ತುಂಬಾ ಚೆನ್ನಾಗಿಯೇ ಸ್ವೀಕರಿಸಿದ್ದಾರೆ. ಇವರ ಪ್ರೀತಿಗೆ ಧನ್ಯವಾದ ಹೇಳಲು ಕಾಂತಾರ ಟೀಮ್ ಪ್ರವಾಸ ಆರಂಭಿಸಿದೆ. ಕೆಲಸ ಇರೋದ್ರಿಂದ ಈ ಒಂದು ಪ್ರವಾಸವನ್ನ ಅಜನೀಶ್ ಈಗ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ