• Home
  • »
  • News
  • »
  • entertainment
  • »
  • Kantara Movie: ಬಾಲಿವುಡ್​ನಲ್ಲಿ ಕಾಂತಾರ ಕಮಾಲ್; ಪರಭಾಷೆಯಲ್ಲಿ 100 ಕೋಟಿ ಕಲೆಕ್ಷನ್​!

Kantara Movie: ಬಾಲಿವುಡ್​ನಲ್ಲಿ ಕಾಂತಾರ ಕಮಾಲ್; ಪರಭಾಷೆಯಲ್ಲಿ 100 ಕೋಟಿ ಕಲೆಕ್ಷನ್​!

ಕಾಂತಾರ ಅಬ್ಬರ

ಕಾಂತಾರ ಅಬ್ಬರ

ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ (Rishab Shetty) ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಕಾಂತಾರ ರಿಲೀಸ್ ಆಗಿ ಒಂದು ತಿಂಗಳಾಗಿದೆ. ಆದಾಗ್ಯೂ ಈ ಚಿತ್ರದ ಅಬ್ಬರ ಕಡಿಮೆಯಾಗಿಲ್ಲ. ಎಲ್ಲಾ ಭಾಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.

  • Share this:

ಕನ್ನಡಲ್ಲಿ ಕಮಾಲ್ ಮಾಡಿರುವ ಕಾಂತಾರ ಸಿನಿಮಾ ಬಾಲಿವುಡ್​ (Bollywood) ನಲ್ಲೂ ಧೂಳೆಬ್ಬಿಸಿದೆ. ರಿಷಬ್​ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಚಿತ್ರ ಸದ್ಯಕ್ಕೆ ಸಖತ್ ಸಖತ್​ ಸುದ್ದಿಯಲ್ಲಿದೆ. ಕಡಿಮೆ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ (Hombale) ಫಿಲ್ಮ್ಸ್​ಗೆ ಒಳ್ಳೆಯ ಲಾಭ ಆಗಿದೆ. ಕಾಂತಾರ ಸಿನಿಮಾ (Kantara Movie) ಎಲ್ಲಾ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಕಾಂತಾರ ಮುಂದೆ ಸಾಗಿದೆ. 


ಕಾಂತಾರ ಭರ್ಜರಿ ಕಲೆಕ್ಷನ್​


ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ (Rishab Shetty) ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಕಾಂತಾರ ರಿಲೀಸ್ ಆಗಿ ಒಂದು ತಿಂಗಳಾಗಿದೆ. ಆದಾಗ್ಯೂ ಈ ಚಿತ್ರದ ಅಬ್ಬರ ಕಡಿಮೆ ಆಗುತ್ತಿಲ್ಲ. ಸಿನಿಮಾ ನೋಡಿದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲೆಲ್ಲೂ ಕಾಂತಾರದ್ದೇ ಸುದ್ದಿಯಾಗಿದೆ. ಕನ್ನಡದಲ್ಲಿ ಸೂಪರ್​ ಸಕ್ಸಸ್​ ಕಾಣುತ್ತಿದ್ದಂತೆ ಡಬ್ ಆಗಿ ತೆರೆಕಂಡ ಮೂರು ಭಾಷೆಗಳಲ್ಲಿ ಕಾಂತಾರ 100 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಸುದ್ದಿ ಮಾಡಿದೆ.
100 ಕೋಟಿ ಬಾಚಿಕೊಂಡ


ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಯಿತು. ಇದಾದ ಕೆಲ ವಾರಗಳ ಬಳಿಕ ಹಿಂದಿಯಲ್ಲಿ, ತೆಲುಗಿನಲ್ಲಿ ಹಾಗೂ ತಮಿಳಿನಲ್ಲಿ ಸಿನಿಮಾ ಬಿಡುಗಡೆ ಆಯಿತು. ಈ ಚಿತ್ರ ನೋಡಿದ ಪರಭಾಷಿಗರು ಸಹ ಕಥೆ ಹಾಗೂ ರಿಷಬ್​ ನಟನೆಗೆ ಫಿದಾ ಆಗಿದ್ದಾರೆ. ಮೂಲಗಳ ಪ್ರಕಾರ ತೆಲುಗು, ತಮಿಳು ಹಾಗೂ ಹಿಂದಿ ಸೇರಿ ಈ ಚಿತ್ರ  100 ಕೋಟಿ ರೂಪಾಯಿ ಬಾಚಿಕೊಂಡಿದೆ.


ಇದನ್ನೂ ಓದಿ: Kantara Movie: ಕಾಂತಾರ ಗುಂಗಿನಲ್ಲಿ ಕನ್ನಡಿಗರು! ಚಿತ್ರ ರಿಲೀಸ್ ಮಾಡಲು ನಿರ್ಮಾಪಕರಿಗೆ ಭಯ!ಬಾಲಿವುಡ್​ನಲ್ಲಿ ಕಾಂತಾರ ಅಬ್ಬರ


ಬಾಲಿವುಡ್​ನಲ್ಲಿ ಕಾಂತಾರ ಅಬ್ಬರಿಸುತ್ತಿದೆ. ಹಿಂದಿಯಲ್ಲಿ ಈ ಚಿತ್ರ ಭಾರೀ ಸದ್ದು ಮಾಡಿದೆ. ಈ ಬಗ್ಗೆ ಪಕ್ಕಾ ಲೆಕ್ಕ ಸಿಕ್ಕಿದೆ. ಗುರುವಾರ (ಅಕ್ಟೋಬರ್ 27) ಈ ಚಿತ್ರ ಬಾಲಿವುಡ್​ನಲ್ಲಿ 2.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಹಿಂದಿ ಭಾಗದ ಕಲೆಕ್ಷನ್ 31.70 ಕೋಟಿ ರೂಪಾಯಿ ಆಗಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.


ಇದನ್ನೂ ಓದಿ: Kantara Telugu: ತೆಲುಗಿನಲ್ಲಿ ಕಾಂತಾರ ಹವಾ! 13 ದಿನದಲ್ಲಿ 45 ಕೋಟಿ ಬಾಚಿದ ಸಿನಿಮಾ


ಕೆಜಿಎಫ್ ದಾಖಲೆ ಮುರಿಯಲಿದ್ಯಾ ಕಾಂತಾರ?


ಈ ಮೊದಲು ಹಿಂದಿಗೆ ಡಬ್ ಆಗಿ ತೆರೆಕಂಡಿದ್ದ ‘ಕೆಜಿಎಫ್’ ಚಿತ್ರ 44 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಕಾಂತಾರ’ ಚಿತ್ರ ನುಗ್ಗುತ್ತಿರುವ ವೇಗ ನೋಡಿದರೆ ಈ ಸಿನಿಮಾ ಬಾಲಿವುಡ್​ನಲ್ಲಿ ‘ಕೆಜಿಎಫ್’ ದಾಖಲೆಯನ್ನು ಮುರಿಯುವ ಎಲ್ಲಾ ಸಾಧ್ಯತೆ ಗೋಚರವಾಗುತ್ತಿದೆ.


ಕಾಂತಾರಕ್ಕೆ ಶಾಕ್ ಕೊಟ್ಟ ಕೇರಳ ಕೋರ್ಟ್


ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡಿಗೆ  ವಿವಾದ ಸುತ್ತಿಕೊಂಡಿತ್ತು. ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ  ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿತ್ತು. ಈ ಸಂಬಂಧ ಮಲಯಾಳಂನ  ‘ತೈಕ್ಕುಡಂ ಬ್ರಿಡ್ಜ್​’  ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ, ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ. ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್​’ ಚಿತ್ರತಂಡವೇ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ.

Published by:ಪಾವನ ಎಚ್ ಎಸ್
First published: