• Home
  • »
  • News
  • »
  • entertainment
  • »
  • Kantara Movie: ಅಮ್ಮ ಕರೆದ ಹಾಗೆ, ಮಾವ ಪ್ರೀತಿಯಿಂದ ತಬ್ಬಿಕೊಂಡ ಹಾಗೆ! ಚಿಕ್ಕ ಡೈಲಾಗ್​​ನಲ್ಲಿ ದೊಡ್ಡ ಅರ್ಥ

Kantara Movie: ಅಮ್ಮ ಕರೆದ ಹಾಗೆ, ಮಾವ ಪ್ರೀತಿಯಿಂದ ತಬ್ಬಿಕೊಂಡ ಹಾಗೆ! ಚಿಕ್ಕ ಡೈಲಾಗ್​​ನಲ್ಲಿ ದೊಡ್ಡ ಅರ್ಥ

ಕಾಂತಾರ

ಕಾಂತಾರ

Kantara Kannada Movie: ಕಾಂತಾರ ಸಿನಿಮಾದ ಆರಂಭದಲ್ಲಿ ಅಮ್ಮ ತಬ್ಬಿದ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ ಎನ್ನುವ ಒಂದು ಡೈಲಾಗ್ ಬರುತ್ತದೆ. ಈ ಡೈಲಾಗ್​ ಕೇಳುವುದಕ್ಕೆ ಸ್ಪೆಷಲ್ ಆಗಿದೆ. ಅಮ್ಮನ ಬಗ್ಗೆ ಹೇಳಿ ಅಪ್ಪನ ಬಗ್ಗೆ ಯಾಕೆ ಹೇಳಿಲ್ಲ? ಸುಧೀರ್ ಸಾಗರ್ ಎಂಬುವವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ, ಓದಿ...

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

ಕಾಂತಾರ ಸಿನಿಮಾದ (Cinema) ದೃಶ್ಯಗಳು, ಡೈಲಾಗ್​ಗಳು (Dialogue) ತುಂಬಾ ವಿಶೇಷವಾಗಿ ಮೂಡಿ ಬಂದಿವೆ. ಸಖತ್ ಸೌಂಡ್ ಮಾಡುತ್ತಿರುವ ಈ ಸಿನಿಮಾ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಕನ್ನಡ ಮಾತ್ರವಲ್ಲದೆ ಭಾರತದ ಮೂಲೆ ಮೂಲೆಗೂ ಕಾಂತಾರದ ಅಬ್ಬರ ತಲುಪಿದೆ. ಹಿಂದಿ, ಮಲಯಾಳಂ, ತೆಲುಗು, ತಮಿಳು ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ ಕನ್ನಡದ ಕಾಂತಾರ (Kantara). ಈ ಸಿನಿಮಾ ಪ್ರಾದೇಶಿಕವಾಗಿದೆ. ಕರಾವಳಿಯ (Coastal) ಸುತ್ತಮುತ್ತಲಿನ ಸಂಸ್ಕೃತಿಯೇ ಇದರಲ್ಲಿ ಹೈಲೈಟ್ ಆಗಿದೆ. ಅಲ್ಲಿ ಸಂಪ್ರದಾಯ, ಜನ ಜೀವನ, ನಂಬಿಕೆ, ಆರಾಧನೆಗಳು ಹೈಲೈಟ್ ಆಗಿವೆ. ಹಾಗಾಗಿ ಈ ಸಿನಿಮಾದ ಸಣ್ಣ ಸಣ್ಣ ಆ್ಯಕ್ಷನ್, ಡಯಲಾಗ್, ಮೂವ್​ಮೆಂಟ್​ಗಳು ಕೂಡಾ ವಿಶೇಷ ಅರ್ಥವನ್ನು ಕೊಡುತ್ತವೆ. ಇದೇ ದೃಷ್ಟಿಕೋನದಲ್ಲಿ ಸಿನಿಮಾ ನೋಡುವಾಗ ಕಾಣುವ ಮೊದಲ ವಿಶೇಷತೆ ರಾಜ ಕಾಡಿಗೆ ಬರುವಾಗ ಅವನಿಗಾಗುವ ಅನುಭವ. ಹಾಗಿದ್ರೆ ಮುಂದೇನಾಗುತ್ತೆ? ಸುಧೀರ್ ಸಾಗರ್ ಎಂಬುವವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ನಿಮ್ಮ ಮಾಹಿತಿಗಾಗಿ ಅದನ್ನೇ ಇಲ್ಲಿ ಪ್ರಕಟಿಸುತ್ತಿದ್ದೇವೆ.


ಅಶಾಂತಿಯಿಂದ ಇದ್ದ ರಾಜನಿಗೆ ಕಾಡಿನಲ್ಲಿ ಸಮಾಧಾನ ಸಿಗುತ್ತದೆ. ಒಂದು ಕಲ್ಲನ್ನು ನೋಡಿದ ರಾಜನಿಗೆ ವಿಶೇಷ ಅನುಭವವಾಗುತ್ತದೆ. ಅಮ್ಮ ಪ್ರೀತಿಯಿಂದ ಕರೆದ ಹಾಗೆ, ಮಾವ ತಬ್ಬಿಕೊಂಡ ಅನುಭವ. ಇಲ್ಲಿ ಅಮ್ಮ , ಮಾವನನ್ನು ವಿವರಿಸಿದ ನಂತರ ಅಪ್ಪನನ್ನು ಯಾಕೆ ಬಿಟ್ಟರುಬ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಲ್ಲೇ ಇರುವುದು ನೋಡಿ ಕರಾವಳಿಯ ಮನೆತನದ, ಒಡೆತನದ ರಹಸ್ಯ.




ಅಮ್ಮ ಆದ ಮೇಲೆ ಮಾವ ಯಾಕೆ ಮುಖ್ಯ?


ನೆಮ್ಮದಿಯನ್ನು ಅರಸುತ್ತಾ ಹೊರಟ ರಾಜನಿಗೆ ದೂರದಲ್ಲೆಲ್ಲೋ ಗಗ್ಗರ ಸದ್ದು ಕೇಳಿಸುತ್ತದೆ. ನಿರ್ಜನ ಪ್ರದೇಶದಲ್ಲಿ ಆ ಸದ್ದು ಕೇಳಿದರೂ ರಾಜನಿಗೆ ಭಯವೇ ಆಗುವುದಿಲ್ಲ. ಬದಲಾಗಿ ಅಮ್ಮ ಪ್ರೀತಿಯಿಂದ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ ಅನುಭವಾಗುತ್ತದೆ. ಅಲ್ಲಿ ಒಂದು ಕಲ್ಲು ಕಾಣಿಸುತ್ತದೆ. ಆಗ ಅಮ್ಮ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ತಲೆ ಸವರಿದ ಹಾಗೆ ಅನುಭವಾಗುತ್ತದೆ.


ಅಮ್ಮನಷ್ಟೇ ಮಾವನೂ ಮುಖ್ಯ


ಕರಾವಳಿಯಲ್ಲಿ ಬಹುತೇಕ ಎಲ್ಲರಲ್ಲೂ ಸೋದರ ಮಾವನಿಗೆ ವಿಶೇಷ ಸ್ಥಾನವಿದೆ. ತಾಯಿಯ ಅಣ್ಣ ಅಥವಾ ತಮ್ಮ ಹಿರಿಯರಾದರೂ ಕಿರಿಯರಾದರೂ ಅವರ ಮೇಲಿರುವ ಜವಾಬ್ದಾರಿ ದೊಡ್ಡದು. ಶೆಟ್ಟಿ ಸಮುದಾಯ ಮಾತ್ರವಲ್ಲದೆ ಹೆಚ್ಚಿನ ಸಮುದಾಯದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಈಗಲೂ ಅನುಸರಿಸಲಾಗುತ್ತದೆ.


ಇದನ್ನೂ ಓದಿ: Puneetha Parva-Sumalatha Ambareesh: ಸುಮಲತಾರನ್ನು ತುಂಬಾ ಪ್ರೀತಿಸ್ತಿದ್ರು ಅಪ್ಪು!


ಅಪ್ಪನಿಗಿಂತಲೂ ಅಮ್ಮನಿಗೆ ಪವರ್


ಮನೆಯ ಮುಖ್ಯಸ್ಥೆ ಅಮ್ಮನದ್ದಾಗುತ್ತದೆ. ಅಮ್ಮನ ಅಣ್ಣ-ತಮ್ಮ ಕುಟುಂಬದ ಯಜಮಾನ ಹಾಗೂ ಮುಖಂಡನಾಗುತ್ತಾನೆ. ಕುಟುಂಬದ ಕಾರ್ಯಕ್ರಮ, ಮದುವೆ, ಇತರ ಕಾರ್ಯಗಳಲ್ಲಿ ಮಾವನ ಮೇಲ್ವಿಚಾರಣೆ ಇರಲೇಬೇಕು. ಜಗಳ, ಕುಟುಂಬ ಕಲಹ ಸರಿ ಮಾಡುವುದು ಮಾವನ ಜವಾಬ್ದಾರಿ. ಇದು ಅಳಿಯಕಟ್ಟು ಪದ್ಧತಿ ಎಂದೇ ಪ್ರಸಿದ್ಧ.


Kannada Film Kantara will be screened in Ho Chi Minh City Vietnam soon
ಕನ್ನಡದ ಕಾಂತಾರ ಸಿನಿಮಾದ ಹೊಸ ಕ್ರಾಂತಿ


ಮಾವನಾದವನು ಅಕ್ಕ ಹಾಗೂ ಅಕ್ಕನ ಮಕ್ಕಳನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚು ಜವಾಬ್ದಾರಿ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ.


ಕಿವಿ ಚುಚ್ಚಿಸೋದು, ಮದುವೆ ಎಲ್ಲವೂ ಮಾವನ ಜವಾಬ್ದಾರಿ


ಇದು ಮಾವನಿಗೆ ಜವಾಬ್ದಾರಿ ಹಾಗೂ ಹೆಮ್ಮೆಯೂ ಹೌದು. ಸೋದರ ಮಾವ ಹೆಮ್ಮೆಯಿಂದ ಅಕ್ಕನ ಮಕ್ಕಳ ಮದುವೆ ಮಾಡುತ್ತಾನೆ, ಕಿವಿ ಚುಚ್ಚಿಸುತ್ತಾನೆ. ಹಾಗೆ ಅಪ್ಪನ ಸ್ಥಾನದಲ್ಲಿದ್ದು ಮಾಡಬೇಕಾದ ಬಹುತೇಕ ಎಲ್ಲ ಜವಾಬ್ದಾರಿಗಳು ಇಲ್ಲಿ ಮಾವನ ಹೆಗಲಿಗೆ ಬೀಳುತ್ತದೆ.


ಇದನ್ನೂ ಓದಿ: Kantara In Indonesia: ಇಂಡೋನೇಷ್ಯಾದಲ್ಲಿ ಇಂದು ಕಾಂತಾರ ರಿಲೀಸ್! ವಿಯಟ್ನಾಂನಲ್ಲೂ ರಿಷಬ್ ಸಿನಿಮಾ ಮೋಡಿ


ಬದುಕಿದ್ದಾಗ ಅಣ್ಣ ನೋಡಿಕೊಳ್ಳುತ್ತಾನೆ


ಅಣ್ಣ ಅಥವಾ ತಮ್ಮ ಅವರ ಕೊನೆಯುಸಿರಿನ ತನಕ ಸಹೋದರಿ ಹಾಗೂ ಆಕೆಯ ಕುಟುಂಬವನ್ನು ನೋಡಿಕೊಳ್ಳುತ್ತಾನೆ. ಆದರೆ ಆತ ಮೃತಪಟ್ಟಾಗ ಆತನ ಮೃತದೇಹ ಸಹೋದರಿಯ ಜವಾಬ್ದಾರಿಯಾಗುತ್ತದೆ. ಮೃತದೇಹ ಅಕ್ಕ ಅಥವಾ ತಂಗಿ ಇರುವ ತವರು ಮನೆಗೆ ಹೋಗುತ್ತದೆ. ಅಲ್ಲಿನ ಸಂಪೂರ್ಣ ವಿಧಿ ವಿಧಾನ ನಡೆಸುವುದು ಅಕ್ಕ ಅಥವಾ ತಂಗಿಯ ಜವಾಬ್ದಾರಿಯಾಗಿರುತ್ತದೆ.

Published by:Divya D
First published: