ಕಾಂತಾರ (Kantara) ಸಿನಿಮಾ (Cinema) ಈಗ ವಿಶ್ವಾದ್ಯಂತ ಸುದ್ದಿಯಾಗಿದೆ. ರಿಷಬ್ ಶೆಟ್ಟಿ (Rishab Shetty) ಬರೆದು, ನಿರ್ದೇಶಿಸಿ ನಟಿಸಿರುವ ಕನ್ನಡದ ಸಿನಿಮಾ (Cinema) ಬೇರೆ ಭಾಷೆಗಳಲ್ಲಿಯೂ ಡಬ್ ಆಗಿ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಸಿನಿಮಾದಲ್ಲಿ ಕೆಲವೇ ಹಾಡುಗಳಿದ್ದರೂ (Song) ಇವೆಲ್ಲವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಕಾಂತಾರ ಸಿನಿಮಾ ವರಾಹ ರೂಪಂ (Varaha Roopam) ಹಾಡು ಹಾಗೂ ಸಿಂಗಾರ ಸಿರಿಯೇ (Singara Siriye) ಪ್ರೇಕ್ಷರನ್ನು ಮೋಡಿ ಮಾಡಿದೆ. ವಿಶೇಷವಾಗಿ ವರಾಹ ರೂಪಂ ಸಾಂಗ್ ದೊಡ್ಡ ಮಟ್ಟದಲ್ಲಿ ವೈರಲ್ (Viral) ಆಗಿದ್ದು ವಿವಾದಕ್ಕೂ ಗುರಿಯಾಯಿತು. ಇದೀಗ ಈ ಹಾಡನ್ನು ಜರ್ಮನ್ (Germany) ಮೂಲಕ ಗಾಯಕಿಯೊಬ್ಬರು ಹಾಡಿದ್ದು ವಿಡಿಯೋವನ್ನು (Video) ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಕ್ಯಾಸ್ಮಾ ಎನ್ನುವ ಜರ್ಮನ್ ಗಾಯಕಿ
ಜರ್ಮನ್ನ ಖ್ಯಾತ ಗಾಯಕಿಯಾಗಿರುವ ಕ್ಯಾಸ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಹುಟ್ಟಿನಿಂದಲೇ ಅಂಧತ್ವದೊಂದಿಗೆ ಬಾಳುತ್ತಿರುವ ಇವರು ಬೇರೆ ಬೇರೆ ಭಾಷೆಗಳ ಹಾಡುಗಳನ್ನು ಹಾಡಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಶೇರ್ ಮಾಡುತ್ತಾರೆ. ಇವು ವೈರಲ್ ಆಗುತ್ತವೆ. ಅದೇ ರೀತಿ ಅವರ ಅಭಿಮಾನಿಗಳು ಅವರಿಗೆ ಕಮೆಂಟ್ ಮಾಡಿ ತಮಗೆ ಕೇಳಬೇಕಾದ ಹಾಡನ್ನು ಮೆನ್ಶನ್ ಮಾಡುತ್ತಾರೆ.
ಕಾಂತಾರ ಹಾಡಿಗೆ ಬೇಡಿಕೆ ಇಟ್ಟಿದ್ದ ಮಂದಿ
ಅವರ ಅಭಿಮಾನಿಗಳಿಗೆ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ಹವಾ ತಲುಪಿದೆ. ಅವರೆಲ್ಲರೂ ವರಾಹ ರೂಪಂ ಕನ್ನಡ ಹಾಡನ್ನು ಹಾಡಿ ಎಂದು ಕಾಮೆಂಟ್ ಬಾಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಗಮನಿಸಿದ ಕ್ಯಾಸ್ಮಾ ಅವರು ವರಾಹ ರೂಪಂ ಹಾಡನ್ನು ಹಾಡಿದ್ದಾರೆ.
View this post on Instagram
ನಿಮ್ಮಲ್ಲಿ ಬಹಳಷ್ಟು ಜನರು ನಾನು ಕನ್ನಡದಲ್ಲಿ ಹಾಡಬೇಕೆಂದು ಕೇಳಿದ್ದೀರಿ. ನಾನು ಹಾಡಿನ ಸಾಲುಗಳನ್ನು ಸರಿಯಾಗಿ ಹಾಡಿದ್ದೇನೆ ಎಂದುಕೊಳ್ಳುತ್ತೇನೆ. ವರಾಹ ರೂಪಂಗೆ ಸ್ಪೆಷಲ್ ಪಿಯಾನೋ ಸೌಂಡ್ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಎಂದು ಅವರು ಕ್ಯಾಪ್ಶನ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Kantara Movie Varaha Roopam Song: ವರಾಹ ರೂಪಂ ಹಾಡು ಬಳಸಬಹುದು, ಆದರೆ..! ತೈಕ್ಕುಡಂ ಬ್ರಿಡ್ಜ್ ತಂಡ ಹೇಳಿದ್ದೇನು?
ವೈರಲ್ ಆಯ್ತು ಸಾಂಗ್
ಜರ್ಮನ್ ಯುವತಿ ಹಾಡಿರುವ ಈ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಡಿಗೆ 83 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 2 ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೂ ಜರ್ಮನ್ ಗಾಯಕಿ ಬಾಯಲ್ಲೂ ಕಾಂತಾರ ಹಾಡು ಬಂದಿರುವುದು ವಿಶೇಷ ಅಂತಿದ್ದಾರೆ ದೇಸಿ ನೆಟ್ಟಿಗರು.
ಜರ್ಮನ್ನ ಈ ಯುವ ಗಾಯಕಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈಗಾಗಲೇ 700ಕ್ಕೂ ಹೆಚ್ಚು ಪೋಸ್ಟ್ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಇವರಿಗೆ 148 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದು ವಿಶ್ವಾದ್ಯಂತ ಜನರು ಇವರ ಧ್ವನಿಯಲ್ಲಿ ತಮ್ಮ ದೇಶದ ಹಿಟ್ ಹಾಡನ್ನು ಹಾಡಿಸುತ್ತಾರೆ. ಅವರು ತಮ್ಮ ಫಾಲೋವರ್ಸ್ ಬೇಡಿಕೆ ಪರಿಗಣಿಸಿ ಹೆಚ್ಚಿನ ಭಾಷೆಗಳಲ್ಲಿ ಹಾಡಲು ಪ್ರಯತ್ನಿಸುತ್ತಾರೆ.
ಹಾಡಿನ ಸುತ್ತ ವಿವಾದ
ಈ ಹಾಡು ಮಲಯಾಳಂ ಆಲ್ಬಂ ಸಾಂಗ್ನ ಟ್ಯೂನ್ ಕಾಪಿ ಆಗಿದೆ ಎಂದು ಬಹಳಷ್ಟು ವಿವಾದ ಆಗಿದೆ. ಕೇರಳದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಹಾಡಿರುವ ಈ ಹಾಡಿನ ಟ್ಯೂನ್ ಅಜನೀಶ್ ಕಾಪಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ