• Home
  • »
  • News
  • »
  • entertainment
  • »
  • Kantara Song: ನಂಬರ್ ವನ್ ಆದ ಸಿಂಗಾರ ಸಿರಿಯೇ! ಕಾಂತಾರದ ರೊಮ್ಯಾಂಟಿಕ್ ಸಾಂಗ್ ವೈರಲ್

Kantara Song: ನಂಬರ್ ವನ್ ಆದ ಸಿಂಗಾರ ಸಿರಿಯೇ! ಕಾಂತಾರದ ರೊಮ್ಯಾಂಟಿಕ್ ಸಾಂಗ್ ವೈರಲ್

ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು

ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು

ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್ ಆಗಿದೆ. ಸ್ಪಾಟಿಫೈನಲ್ಲಿ ಹಾಡು ಲಭ್ಯವಿದ್ದು ಇದು ನಂಬರ್ ವನ್ ಪಟ್ಟವನ್ನು ಅಲಂಕರಿಸಿದೆ.

  • Share this:

ಕಾಂತಾರ ಸಿನಿಮಾ (Kantara Movie) ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ (Rishab shetty) ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು ಸಿನಿಮಾಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಭಿನಯ, ಹಾಡು (Song), ಚಿತ್ರೀಕರಣ, ಛಾಯಾಗ್ರಹಣ ಸೇರಿ ಸಂಪೂರ್ಣ ಸಿನಿಮಾವನ್ನೇ (Cinema) ಮೆಚ್ಚಿಕೊಂಡು ಪಾಸಿಟಿವ್ ರಿವ್ಯೂ ಕೊಡುತ್ತಿದ್ದಾರೆ ಪ್ರೇಕ್ಷಕರು. ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸುವುದರ ಜೊತೆಗೆ ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ರೇಸ್​ ಸ್ಪೀಡ್ ಹೆಚ್ಚಿಸುತ್ತಲೇ ಇದೆ. ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಕಾಂತಾರ ಫಿವರ್ ಶುರು ಮಾಡಿದೆ. ಸದ್ಯ ಸ್ಯಾಂಡಲ್​ವುಡ್ (Sandalwood) ಮಂದಿ ಕಾಂತಾರ ಗುಂಗಿನಲ್ಲಿದ್ದಾರೆ. ಈಗಾಗಲೇ ಸಕ್ಸಸ್ ಖುಷಿಯಲ್ಲಿರುವ ಚಿತ್ರತಂಡಕ್ಕೆ ಇನ್ನೊಂದು ಖುಷಿ ಸಿಕ್ಕಿದ್ದು ಈ ಸಿನಿಮಾದ ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್ ಆಗಿದೆ. ಸ್ಪಾಟಿಫೈನಲ್ಲಿ (Spotify) ಹಾಡು ಲಭ್ಯವಿದ್ದು ಇದು ನಂಬರ್ ವನ್ ಪಟ್ಟವನ್ನು ಅಲಂಕರಿಸಿದೆ. ಈ ಗುಡ್ ನ್ಯೂಸ್​ನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಫೇಸ್​​ಬುಕ್ ಪೇಜ್​ನಲ್ಲಿ ಶೇರ್ ಮಾಡಲಾಗಿದೆ.


ಸಿಂಗಾರ ಸಿರಿಯೇ


ಸಿಂಗಾರ ಸಿರಿಯೇ ಕಾಂತಾರ ಸಿನಿಮಾದ ಸಿಂಗಲ್ ರೊಮ್ಯಾಂಟಿಕ್ ಹಾಡು. ಸಪ್ತಮಿ ಗೌಡ ಲೀಲಾ ಆಗಿ ಅಭಿನಯಿಸಿದ್ದು ರಿಷಬ್ ಶೆಟ್ಟಿ ಶಿವ ಆಗಿ ನಟಿಸಿದ್ದಾರೆ. ಈ ಜೋಡಿಯ ನಡುವಿನ ಪ್ರೇಮವನ್ನು ತಿಳಿಸೋ ಈ ಹಾಡು ಸಿನಿಮಾದಲ್ಲಿ ಪ್ರೇಕ್ಷಕರು ನೋಡಬಹುದು ಸಿಂಗಲ್ ರೊಮ್ಯಾಂಟಿಕ್ ಸಾಂಗ್ ಎನ್ನುವುದು ವಿಶೇಷ.




ಸಿಂಪಲ್ ಲೊಕೇಷನ್, ಸಿಂಪಲ್ ಕಾನ್ಸೆಪ್ಟ್


ಸಾಧಾರಣವಾಗಿ ರೊಮ್ಯಾಂಟಿಕ್ ಸಾಂಗ್ ಅಥವಾ ಸಿನಿಮಾದ ಡ್ಯುಯೆಟ್ ಎಂದರೆ ಅದಕ್ಕಾಗಿ ಭಾರೀ ಖರ್ಚು ಮಾಡುತ್ತಾರೆ. ಲೊಕೇಷನ್, ಕಾಸ್ಟ್ಯೂಮ್ ಎಂದು ಕೋಟಿ ಬಜೆಟ್​ನಲ್ಲಿಯೂ ಸಾಂಗ್ ಸಿದ್ಧವಾಗುತ್ತದೆ. ಆದರೆ ಇಲ್ಲಿ ಎಲ್ಲವೂ ತದ್ವಿರುದ್ಧ. ಸಿಂಪಲ್ ಗ್ರಾಮೀಣ ಸೊಗಡಿರುವಂತಹ ಲೊಕೇಷನ್, ಹಳ್ಳಿಯ ಯುವ ಪ್ರೇಮಿಗಳ ಪ್ರಣಯವನ್ನು ಈ ಹಾಡಿನಲ್ಲಿ ಸುಂದರವಾಗಿ ತೋರಿಸಲಾಗಿದೆ.




ಹಾಡಿನ ಕುರಿತು


ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಅನನ್ಯಾ ಭಟ್, ವಿಜಯ್ ಪ್ರಕಾಶ್, ನಾಗರಾಜ್ ಪನರ್ ಅವರು ಹಾಡಿದ್ದಾರೆ.


Kannada Kantara Cinema now Going to Release In other Language
ಕಾಂತಾರ ಸಿನಿಮಾದ ಹೊಸ ಅಧ್ಯಾಯ ಶೀಘ್ರದಲ್ಲಿ ಶುರು


ಇದನ್ನೂ ಓದಿ: Kantara Box Office Collection: ಮತ್ತಷ್ಟು ವೇಗ ಪಡೆದ ಕಾಂತಾರ ಓಟ, 5ನೇ ದಿನ ಕಲೆಕ್ಷನ್ ಎಷ್ಟು?


ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಮಾಂಸಾಹಾರ ತ್ಯಜಿಸಿದ್ದರು. ದೈವದ ಆರಾಧನೆಯೊಂದಿಗೆ ಸಂಗೀತ ಸಂಯೋಜನೆಗೂ ಕುಳಿತು ಕೊಳ್ಳುತ್ತಿದ್ದರು. ನಾನು ನಾನ್​ ವೆಜ್ ಬಿಟ್ಟಿದ್ದೇನೆ. ಚಿತ್ರದ ಅದರಲ್ಲೂ ದೈವದ ಹಾಡುಗಳನ್ನ ಮಾಡೋವಾಗ ಹೆಚ್ಚು ಕಡಿಮೆ ಎರಡು ತಿಂಗಳು ನಾನ್​ ವೆಜ್​ ಬಿಟ್ಟು ಹಾಡುಗಳನ್ನ ಸಂಯೋಜಿಸಿದ್ದೇನೆ ಎಂದು ಅವರು ತಮ್ಮ ಹಾಡಿನ ಬಗ್ಗೆ ಹೇಳಿದ್ದಾರೆ.




ಬೇರೆ ಭಾಷೆಗೆ ಡಬ್ಬಿಂಗ್?


ಸದ್ಯ ಕಾಂತಾರ ಸಿನಿಮಾದ ಪ್ರಯಾಣದಲ್ಲಿರೋ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಚಿತ್ರ ಬೇರೆ ಭಾಷೆಗೂ ಡಬ್ ಆಗುತ್ತದೆ ಅಂತಲೇ ಹೇಳಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲು ಈ ಸಿನಿಮಾ ಡಬ್ ಆಗುತ್ತಿದೆ.




ಈಗಾಗಲೇ ಆಯಾ ಭಾಷೆಯ ಸಿನಿಮಾ ವಿತರಕರು ಈ ಬೇಡಿಕೆಯನ್ನ ಹೊಂಬಾಳೆ ಪ್ರೋಡಕ್ಷನ್ ಹೌಸ್ ಅನ್ನ ಸಂಪರ್ಕಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರೋಡಕ್ಷನ್ ಹೌಸ್ ತಮ್ಮ ಸಿನಿಮಾದ ಇತರ ಭಾಷೆಯ ಡಬ್ಬಿಂಗ್ ರಿಲೀಸ್ ಬಗ್ಗೆ ಮಾಹಿತಿ ಕೊಡಲಿದೆ ಎಂದು ರಿಷಬ್ ಈಗ ಹೇಳಿಕೊಂಡಿದ್ದಾರೆ.

Published by:Divya D
First published: