• Home
  • »
  • News
  • »
  • entertainment
  • »
  • Kantara: 'ಸಿಂಗಾರ ಸಿರಿಯೇ'ನೂ ಕದ್ದ ಟ್ಯೂನಾ? ವಿಡಿಯೋ ನೋಡಿ ನೀವೇ ಡಿಸೈಡ್​ ಮಾಡಿ ಅಂತಿದ್ದಾರೆ ನೆಟ್ಟಿಗರು!

Kantara: 'ಸಿಂಗಾರ ಸಿರಿಯೇ'ನೂ ಕದ್ದ ಟ್ಯೂನಾ? ವಿಡಿಯೋ ನೋಡಿ ನೀವೇ ಡಿಸೈಡ್​ ಮಾಡಿ ಅಂತಿದ್ದಾರೆ ನೆಟ್ಟಿಗರು!

ಕಾಂತಾರ ಸಿನಿಮಾದ ಪೋಸ್ಟರ್​

ಕಾಂತಾರ ಸಿನಿಮಾದ ಪೋಸ್ಟರ್​

ಸಿಂಗಾರ ಸಿರಿಯೇ ಹಾಡು ಎಲ್ಲರಿಗೂ ಇಷ್ಟವಾಗಿದೆ. ಎಲ್ಲಿ ನೋಡಿದರೂ, ಎಲ್ಲರ ಬಾಯಲ್ಲೂ ಈ ಸಾಂಗ್​ ಬರುತ್ತಿದೆ. ಆದರೆ, ಈ ಹಾಡಿನ ಟ್ಯೂನ್ ಅನ್ನು ಬೇರೆ ಭಾಷೆಯಿಂದ ಕಾಪಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

  • Share this:

ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ಅಭಿನಯಿಸಿದ ಕಾಂತಾರ (Kantara) ಸಿನಿಮಾ ಥಿಯೇಟರ್​​ನಲ್ಲಿ ಸೂಪರ್ ಹಿಟ್ (Super Hit) ಆಗಿದೆ. ಬಾಕ್ಸ್ ಆಫೀಸ್ (BOx Office) ರೇಸ್ ಮುಂದುವರಿಸಿದೆ. ಕಾಂತಾರ ಸಿನಿಮಾ ಸಖತ್ ಹಿಟ್ ಆಗಿದೆ. ಪ್ರೇಕ್ಷಕರ ವಿಮರ್ಶೆಯಿಂದಲೇ ವೈರಲ್ ಆದ ಸಿನಿಮಾ ಬಗ್ಗೆ ಅನ್ಯ ಭಾಷೆಗಳಿಂದಲೂ ರಿವ್ಯೂ ಬರುತ್ತಿದೆ. ಬೇರೆ ಭಾಷೆಗಳಲ್ಲೂ ಕಾಂತಾರ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಕಾಂತಾರ ಸಿನಿಮಾ  ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಸಿನಿಮಾದ ಹಾಡು (Kantara Songs) ಗಳು ಕೂಡ ಎಲ್ಲರ ಮನಸ್ಸು ಗೆದ್ದಿದೆ. ಸಿಂಗಾರ ಸಿರಿಯೇ (Singara Siriye) ಹಾಗೂ ವರಾಹ ರೂಪಂ ಹಾಡುಗಳಂತೂ ಎಲ್ಲರ ತಲೆಯಲ್ಲಿ ಹಾಗೇ ಉಳಿದಿದೆ. ವರಾಹ ರೂಪಂ ಹಾಡಿನ ಟ್ಯೂನ್​ ಅನ್ನು ಮಲಯಾಳಂ ಆಲ್ಬಂ ಹಾಡಿನಿಂದ ಕಾಪಿ (Copy) ಮಾಡಿದ್ದಾರೆ ಅಂತ ನೆಟ್ಟಿಗರು ಹೇಳುತ್ತಿದ್ದಾರೆ. ಇದೀಗ ಸಿಂಗಾರ ಸಿರಿಯೇ ಹಾಡು ಕೂಡ ಕಾಪಿ ಮಾಡಿದ್ದಾರೆ ಅಂತ ಚರ್ಚೆ ನಡೆಸುತ್ತಿದ್ದಾರೆ.


ಸಿಂಗಾರ ಸಿರಿಯೇ ಟ್ಯೂನ್​ ಕೂಡ ಕದ್ದಿದ್ದಾ?


ಸಿಂಗಾರ ಸಿರಿಯೇ ಹಾಡು ಎಲ್ಲರಿಗೂ ಇಷ್ಟವಾಗಿದೆ. ಎಲ್ಲಿ ನೋಡಿದರೂ, ಎಲ್ಲರ ಬಾಯಲ್ಲೂ ಈ ಸಾಂಗ್​ ಬರುತ್ತಿದೆ. ಆದರೆ, ಈ ಹಾಡಿನ ಟ್ಯೂನ್ ಅನ್ನು ಬೇರೆ ಭಾಷೆಯಿಂದ ಕಾಪಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಮರಾಠಿ ಭಾಷೆಯ ಅಪ್ಸರಾ ಅಲಿ ಎಂಬ ಸಾಂಗ್​ನಿಂದ ಕಾಪಿ ಮಾಡಿದ್ದಾರೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಮರಾಠಿ ಭಾಷೆಯ ಹಾಡನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿ ಚರ್ಚೆ ನಡೆಸುತ್ತಿದ್ದಾರೆ.


ಸಿನಿಮಾದ ಸಂಗೀತಕ್ಕೆ ಸಂಬಂಧಿಸಿದಂತೆ ಮ್ಯೂಸಿಕ್​ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಟ್ಯೂನ್​ವೊಂದನ್ನು ಮರಾಠಿ ಸಿನಿಮಾದಿಂದ ಕದಿದ್ದಾರೆ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: ಕಾಂತಾರ ಸಿನಿಮಾದ ವರಾಹ ರೂಪಂ ಟ್ಯೂನ್ ಕಾಪಿ ಮಾಡಿದ್ದಾ? ಮಲಯಾಳಂನ ಹಳೆ ಆಡಿಯೋ ಈಗ ವೈರಲ್


ವರಾಹ ರೂಪಂ ಕೂಡ ಕದ್ದಾ ಟ್ಯುನಾ?


ಹೊಂಬಾಳೆ ಪ್ರೊಡಕ್ಷನ್​ ಕಾಂತಾರ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ದೇಶ-ವಿದೇಶಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಈ ಮ್ಯೂಸಿಕ್​ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇಂಥಹದ್ದೊಂದು ಅನುಮಾ ಮೂಡಿಸಲು ಒಂದು ಕಾರಣ ಕೂಡ ಇದೆ. ಅದು ಏನೆಂದರೆ ಹೊಂಬಾಳೆ ಯುಟ್ಯೂಬ್​ ಚಾನೆಲ್​ನಲ್ಲಿ ವರಾಹ ರೂಪಂ ಹಾಡನ್ನು ರಿಲೀಸ್​ ಮಾಡಿಲ್ಲ.  ಅಜನೀಶ್​ ಲೋಕನಾಥ್​ ತಮ್ಮ ವೈಯಕ್ತಿಕ ಚಾನೆಲ್​ನಲ್ಲಿ ಈ ಸಾಂಗ್​ ರಿಲೀಸ್ ಮಾಡಿದ್ದಾರೆ. ಹೀಗಾಗಿ ಈ ಹಾಡಿನ ಮೇಲೆ ಸಾಕಷ್ಟು  ಅನುಮಾನ ಮೂಡಿಸಿದೆ.


ವರಾಹ ರೂಪಂ ಹಾಡಿನ ಮೂಲ ಇದು?


ವರಾಹ ರೂಪಂ ಹಾಡು ಕೇಳಿ ಮನಸೋಲದೇ ಇರುವವರಲಿಲ್ಲ. ಅಂತಹ ಹಾಡಿನ ಟ್ಯೂನ್​ ಅನ್ನು ಮಲಯಾಳಂ ಹಾಡಿನಿಂದ ಕದ್ದಿದ್ದಾರೆ ಅಂತ ನಂಬಲಿಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಕೆಲ ಅಭಿಮಾನಿಗಳು.  ಇನ್ನೂ ಎರಡು ಹಾಡನ್ನು ಕೇಳಿಸಿಕೊಂಡರೇ ಯಾವುದು ಕಾಂತಾರ ಸಿನಿಮಾದ್ದು ಅಂತಾನೂ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಈ ಎರಡು ಹಾಡುಗಳು ಸಿಂಕ್ ಆಗಿವೆ.


ಇದನ್ನೂ ಓದಿ: 50 ಕೋಟಿ ಬಾಚಿಕೊಂಡು ಮುನ್ನುಗ್ಗುತ್ತಿದೆ ಕಾಂತಾರ!



ಈ ಟ್ಯೂನ್​ ಅನ್ನು ಚಿತ್ರತಂಡ ಹಣ ಕೊಟ್ಟು ಕೂಡ ಖರೀದಿ ಮಾಡಿರಬಹುದು. ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಈ ಬಗ್ಗೆ ಎಲ್ಲಿಯೂ ಕಾಂತಾರ ಚಿತ್ರತಂಡದ ಸದಸ್ಯರು ಮಾತನಾಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಎರಡು ಹಾಡುಗಳನ್ನು ಇಟ್ಟುಕೊಂಡು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ.

Published by:ವಾಸುದೇವ್ ಎಂ
First published: