ಕಾಂತಾರ (Kantara) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ಕಥೆ ಬರೆದು, ನಟಿಸಿದ ಕಾಂತಾರ ಸಿನಿಮಾ ಸಖತ್ ಹಿಟ್ ಆಗಿದೆ. ಈ ಸಿನಿಮಾ ಬಿಡುಗಡೆಯಾದ ಎಲ್ಲ ಭಾಷೆಗಳಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿದ್ದು ಬಾಕ್ಸ್ ಆಫೀಸ್ (Box Office) ಕೊಳ್ಳೆ ಹೊಡೆದಿದೆ. ಸಿನಿಮಾ (Cinema) ಬಗ್ಗೆ ಎಲ್ಲಾ ಕಡೆಗಳಲ್ಲಿ ಕ್ರೇಜ್ ಹುಟ್ಟಿದೆ. ಸಿನಿಮಾದ ಡೈಲಾಗ್
(Dialogue), ಸಾಂಗ್, ಥೀಮ್ ಎಲ್ಲವೂ ಸೂಪರ್ ಹಿಟ್ ಆಗಿದೆ. ಬಹುತೇಕ ಎಲ್ಲ ಕಡೆಗಳಲ್ಲಿಯೂ ಕಾಂತಾರದ ಹವಾವನ್ನು ಕಾಣಬಹುದು. ಸೋಷಿಯಲ್ ಮೀಡಿಯಾದಲ್ಲಿ (Social Media) ಇದಕ್ಕೆ ಸಂಬಂಧಿಸಿದ ರೀಲ್ಸ್ ಓಡಾಡುತ್ತಿವೆ. ಇದೀಗ ಕಾಂತಾರದ ಹವಾ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದೀಗ ಪರೀಕ್ಷೆಯಲ್ಲಿಯೂ (Exam)ಕಾಂತಾರ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಪ್ರಶ್ನೆ ಪತ್ರಿಕೆಯಲ್ಲಿ ಕಾಂತಾರ ಬಗ್ಗೆ ಪ್ರಶ್ನೆ
ಇದೀಗ ಪ್ರಶ್ನೆ ಪತ್ರಿಕೆಯೊಂದರ ಫೊಟೋ ವೈರಲ್ ಆಗಿದ್ದು ಇದರಲ್ಲಿ ಕಾಂತಾರ ಕುರಿತು ಪ್ರಶ್ನೆ ಕೇಳಲಾಗಿತ್ತು. ರೀಸೆಂಟ್ ಆಗಿ ರಿಲೀಸ್ ಆದ ಕಾಂತಾರ ಸಿನಿಮಾ ಯಾವುದರ ಮೇಲೆ ಆಧರಿತವಾಗಿದೆ ಎಂದು ಪ್ರಶ್ನೆ ಕೇಳಲಾಗಿದೆ. ಇದರಲ್ಲಿ ಜಲ್ಲಿಕಟ್ಟು, ಭೂತಕೋಲ, ಯಕ್ಷಗಾನ, ದಮ್ಮಾಮಿ ಎಂದು ಆಯ್ಕೆಗಳನ್ನು ಕೊಡಲಾಗಿದೆ.
ಸ್ಟೋರಿ ಶೇರ್ ಮಾಡಿದ ಸಪ್ತಮಿ
ಕಾಂತಾರ ಹೀರೋಯಿನ್ ಸಪ್ತಮಿ ಗೌಡ ಅವರು ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಶೇರ್ ಮಾಡಿದ್ದು ಇದರಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ಸ್ಟೋರಿ ಹಂಚಿಕೊಂಡಿದ್ದಾರೆ. ನಟಿ ಪೋಸ್ಟ್ಗೆ ದಿ ಬೆಸ್ಟ್ ಪಾರ್ಟ್ ಆರ್ಫ ದಿ ಕ್ವಶ್ಚನ್ ಪೇಪರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಪ್ರಶ್ನೆ ಬಂದಿದ್ದೆಲ್ಲಿ?
ಕರ್ನಾಟಕ ಮಿಲ್ಕ್ ಫೆಡರೇಷನ್ ಇಲಾಖೆ ನಡೆಸಿದ ಇತ್ತೀಚಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. ನಟಿ ಹಂಚಿಕೊಂಡ ಸ್ಟೋರಿಯಲ್ಲಿ ಈ ವಿಚಾರವನ್ನೂ ನಮೂದಿಸಲಾಗಿದೆ.
ಇದನ್ನೂ ಓದಿ: Rishab Shetty: ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟ ರಿಷಬ್ ಶೆಟ್ರು ಬದಲಾಗಲೇ ಇಲ್ಲ-ಯಾಕ್ ಗೊತ್ತೇ?
ಕಾಂತಾರ ಕಲೆಕ್ಷನ್ ಎಷ್ಟು?
ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಸಿನಿಮಾ ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿಯೂ ತೆರೆ ಕಂಡಿದೆ. ದೇಶಾದ್ಯಂತ ಸಿನಿಮಾ ಭರ್ಜರಿ ಪ್ರತಿಕ್ರಿಯೆ ಪಡೆದರೂ ಹೆಚ್ಚಿನ ಕ್ರೇಜ್ ಸೃಷ್ಟಿಸಿದ್ದು ತೆಲುಗು ಹಾಗೂ ಹಿಂದಿಯಲ್ಲಿ. ಹಿಂದಿಯಲ್ಲಿ ಸಿನಿಮಾ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಗಳಿಸಿದೆ.
ಕಾಂತಾರ 2 ಬರುತ್ತಾ?
ಕಾಂತಾರ 2 ಸಿನಿಮಾ ರಿಲೀಸ್ ಆಗುತ್ತಾ ಎನ್ನುವ ಪ್ರಶ್ನೆಗೆ ರಿಷಬ್ ಉತ್ತರಿಸಿಲ್ಲ. ಆದರೆ ಸಿನಿಮಾ ಮಾಡಲು ಅವರು ಇತ್ತೀಚೆಗೆ ಭೂತಕೋಲವೊಂದರಲ್ಲಿ ಅನುಮತಿ ಕೇಳಿದ್ದಾರೆ. ಹೀಗಾಗಿ ಕಾಂತಾರ 2 ಸಿನಿಮಾ ಬರುವುದು ಪಕ್ಕಾ ಆಗಿದೆ. ಕಾಂತಾರ 2 ಸಿನಿಮಾದಲ್ಲಿಯೂ ಕಾಂತಾರ ಸಿನಿಮಾದ ಕಲಾವಿದರೇ ನಟಿಸಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ನಿರ್ಮಿಸಿದ ಸಿನಿಮಾಗೆ ಸುಮಾರು 16 ಕೋಟಿ ಬಜೆಟ್ ಹಾಕಲಾಗಿದೆ. ಸಿನಿಮಾ ಈಗಾಗಲೇ 400 ಕೋಟಿಗೂ ಹೆಚ್ಚು ಗಳಿಸಿದ್ದು ಬಾಕ್ಸ್ ಆಫೀಸ್ ಗಳಿಕೆ ಭರ್ಜರಿಯಾಗಿದೆ.
ಕಾಂತಾರ ಚಿತ್ರವನ್ನು ಈಗಾಗಲೇ ಹಲವು ಸಿನಿ ಗಣ್ಯರು ಹೊಗಳಿದ್ದಾರೆ. ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನ ನಟರು ಮತ್ತು ನಿರ್ದೇಶಕರು ಕಾಂತಾರ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ, ಇತ್ತೀಚೆಗೆ ರಾಜಮೌಳಿ ಕೂಡ ಕಾಂತಾರ ಚಿತ್ರದ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಮುಂತಾದ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿಯನ್ನು ಹೊಗಳಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ನ ಯುವ ನಾಯಕಿ ಜಾನ್ವೊ ಕಪೂರ್ ಕಾಂತಾರ ಚಿತ್ರವನ್ನು ನೋಡಿರುವುದಾಗಿ ಟ್ವೀಟ್ ಮಾಡಿದ್ದರು.
ದಿವಂಗತ ಖ್ಯಾತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಇತ್ತೀಚೆಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಕಾಂತಾರ ಚಿತ್ರವನ್ನು ಹೊಗಳಿದ್ದಾರೆ. "ರಿಷಬ್ ಶೆಟ್ಟಿಗೆ ಹ್ಯಾಟ್ಸಾಫ್" ಎಂದು ಜಾನ್ವಿ ಕಪೂರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇಡೀ ಚಿತ್ರವು ತುಂಬಾ ಪ್ರಭಾವಶಾಲಿಯಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ