• Home
  • »
  • News
  • »
  • entertainment
  • »
  • Kantara Movie: ರಿಷಬ್ ಸಿನಿಮಾಗಳಲ್ಲಿ ಶೆಟ್ಟಿಗಳಿಗೆ ಮಾತ್ರ ಅವಕಾಶ? ನಟ ಏನಂದ್ರು?

Kantara Movie: ರಿಷಬ್ ಸಿನಿಮಾಗಳಲ್ಲಿ ಶೆಟ್ಟಿಗಳಿಗೆ ಮಾತ್ರ ಅವಕಾಶ? ನಟ ಏನಂದ್ರು?

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ

Kantara Movie: ರಿಷಬ್ ಶೆಟ್ಟಿ ತಮ್ಮ ಸಿನಿಮಾದಲ್ಲಿ ಶೆಟ್ಟಿಯವರಿಗೆ ಮಾತ್ರ ಅವಕಾಶ ನೀಡುತ್ತಾರೆ ಎನ್ನುವ ಆರೋಪದ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ. ಏನಂದಿದ್ದಾರೆ ಗೊತ್ತೇ?

  • Share this:

ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ (Kantara Movie) ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಹಿಟ್ ಆಗುವುದರ ಜೊತೆಗೆ ವ್ಯಾಪಕ ವಿಮರ್ಶೆಗಳನ್ನು (Review) ಪಡೆಯುತ್ತಿದ್ದು ಹಾಗೆಯೇ ಬಾಕ್ಸ್ ಆಫೀಸ್​​ನಲ್ಲಿಯೂ ಹಿಟ್ ಆಗಿದೆ. ಉತ್ತಮ ವಿಮರ್ಶೆ ಪಡೆದ ಸಿನಿಮಾಗಳೆಲ್ಲಾ ಹಿಟ್ ಆಗುತ್ತವೆ ಎನ್ನುವುದಕ್ಕೂ ಆಗುವುದಿಲ್ಲ. ಆದರೆ ಕಾಂತಾರ ವಿಚಾರದಲ್ಲಿ ಸಿನಿಮಾ ಹಿಟ್ ಆಗಿದೆ, ಬಾಕ್ಸ್ ಆಫೀಸ್​ನಲ್ಲಿಯೂ ಹಿಟ್ ಆಗಿದೆ. ರಿಷಬ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿದ್ದು ಸ್ಯಾಂಡಲ್​ವುಡ್ ನಟಿ ಸಪ್ತಮಿ ಗೌಡ (Sapthami Gowda) ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸ್ಥಳೀಯ ಬಹಳಷ್ಟು ಕಲಾವಿದರು ನಟಿಸಿದ್ದು ವಿಶೇಷ. ಶಿವನ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್  (Manasi Sudhir) ಕಾಣಿಸಿಕೊಂಡಿದ್ದು ಹೊಸಬರಿಗೂ ಅವಕಾಶ ಕೊಡಲಾಗಿದೆ.


ಕಾಂತಾರ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ತಮ್ಮ ಡಿಫರೆಂಟ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಶೆಟ್ಟಿಯವರಿಗೆ ರಿಷಬ್ ಹೆಚ್ಚು ಅವಕಾಶ ಕೊಡುತ್ತಾರೆ ಎನ್ನುವ ಮಾತಿಗೆ ನಟ ಪ್ರತಿಕ್ರಿಯಿಸಿದ್ದಾರೆ.




ಈ ಬಗ್ಗೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ರಿಷಬ್ ಅವರು ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ, ಜಾತಿ ಹಿಡಿದು ಯಾಕೆ ಒದ್ದಾಡ್ತಾರೆ ಗೊತ್ತಾಗ್ತಿಲ್ಲ. ಅದರಲ್ಲಿ ನಂಬಿಕೆಯೂ ಇಲ್ಲ. ಸುಮಾರು ಸಲ ಕೇಳಿ ಕೇಳಿ ಕಿವಿ ದಪ್ಪ ಆಗುತ್ತಂತೆ. ಹಾಗೆ ಈಗ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಒಟ್ಟಿಗೆ ನಾಟಕ ಮಾಡಿಕೊಂಡು ಬಂದವರು. ಟೀ ಕುಡಿಯೋಕೆ ಹಣ ಇರ್ಲಿಲ್ಲ. ರಸ್ತೆ ಬದಿಯಲ್ಲಿ, ಬೇಕರಿ ಕೆಳಗೆ ಕುಳಿತಿರುತ್ತಿದ್ದೆವು. ನಾವು ಒಟ್ಟಿಗೆ ನಾಟಕ ಮಾಡಿ ಒಟ್ಟಿಗೆ ಸಿನಿಮಾ ಮಾಡಿದೆವು. ಏನು ತಪ್ಪದರಲ್ಲಿ? ಟೀಂ ನಾವು. ಕರೆದುಕೊಂಡು ಬರುತ್ತೇವೆ. ಏನು ತಪ್ಪದರಲ್ಲಿ ಎಂದಿದ್ದಾರೆ ರಿಷಬ್ ಶೆಟ್ಟಿ.




ಈ ಬಗ್ಗೆ ಪ್ರತಿಕ್ರಿಯಿಸಿದ ಸಪ್ತಮಿ ಅವರು ನಾನು ಸಪ್ತಮಿ ಗೌಡ ಎಂದು ಅವಕಾಶ ಕೊಟ್ಟಿಲ್ಲ. ಈ ಸಿನಿಮಾ ಮಾಡಬಹುದು ಎಂದುಕೊಂಡು ಅವಕಾಶ ಕೊಟ್ಟರು ಎಂದಿದ್ದಾರೆ.


ಇದನ್ನೂ ಓದಿ: Kantara Movie: ಎಲ್ಲೆಡೆ ಸೌಂಡ್ ಮಾಡ್ತಿರೋ ಸಿನಿಮಾ! ಕಾಂತಾರ ಪದದ ಅರ್ಥ ಗೊತ್ತೇ?


ಕನ್ನಡದ ಕಾಂತಾರ ಬೇರೆ ಭಾಷೆಯಲ್ಲೂ ರಿಲೀಸ್?


ಕಾಂತಾರ ಸಿನಿಮಾ ಈಗ ಕನ್ನಡಕ್ಕೆ ಮಾತ್ರ ಸೀಮತ ಅನ್ನೊ ಹಾಗಿದೆ. ಆದರೆ ಇದೇ ಚಿತ್ರ ಬೇರೆ ಭಾಷೆಯಲ್ಲೂ ರಿಲೀಸ್ ಮಾಡೋ ಪ್ಲಾನ್ ಆಗಿದೆ. ಇತರ ಭಾಷಾ ಸಿನಿ ಪ್ರೇಮಿಗಳು ತಮ್ಮ ತಮ್ಮ ಭಾಷೆಯಲ್ಲಿಯೇ ಕನ್ನಡದ ಕಾಂತಾರ ಚಿತ್ರವನ್ನ ಇನ್ಮುಂದೆ ನೋಡಬಹುದಾಗಿದೆ.




ಹೌದು, ಈ ನಿಟ್ಟಿನಲ್ಲಿ ಕಾಂತಾರ ಸಿನಿಮಾ ಡಬ್ಬಿಂಗ್ ಪ್ಲಾನ್ ನಡೀತಾ ಇದೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ಕಾಂತಾರ ಸಿನಿಮಾ ರಿಲೀಸ್ ಆಗುತ್ತದೆ. ಈ ಬಗ್ಗೆ ಚಿತ್ರದ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kantara: ಕಾಂತಾರ ಸಿನಿಮಾ ಮಾಡೋ ಮುನ್ನ ರಿಷಬ್​ ಶೆಟ್ಟಿ ಧರ್ಮಸ್ಥಳಕ್ಕೆ ಹೋಗಿದ್ದೇಕೆ?


ಕಾಂತಾರ ಅನ್ನೋ ಸಿನಿಮಾ ಈಗ ಕೇವಲ ಕರಾವಳಿ ಭಾಗದ ಸಿನಿಮಾ ಆಗಿ ಉಳಿದಿಲ್ಲ. ಅದು ಎಲ್ಲರ ಕಾಂತಾರ ಆಗಿ ಬಿಟ್ಟಿದೆ. ಕಾಂತಾರ ಸಿನಿಮಾ ಪ್ರೇಕ್ಷಕರಲ್ಲಿ ದೈವಿ ಶಕ್ತಿಯ ಬಗ್ಗೆ ನಂಬಿಕೆ ಹೆಚ್ಚಿಸುತ್ತಿದೆ. ಇದನ್ನ ನಿರ್ಮಿಸೊ ಸಮಯದಲ್ಲಿ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾಂಸಾಹಾರ ಸೇವನೆ ಬಿಟ್ಟಿದ್ದರು.


ಅದೇ ರೀತಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಮಾಂಸಾಹಾರ ತ್ಯಜಿಸಿದ್ದರು. ದೈವದ ಆರಾಧನೆಯೊಂದಿಗೆ ಸಂಗೀತ ಸಂಯೋಜನೆಗೂ ಕುಳಿತು ಕೊಳ್ಳುತ್ತಿದ್ದರು.

Published by:Divya D
First published: