ಕಾಂತಾರ ಕನ್ನಡದ ಹೆಮ್ಮೆಯ (Kantara Movie) ಸಿನಿಮಾ. ಈ ಸಿನಿಮಾ ದಾಖಲೆ ಸದ್ಯಕ್ಕೆ ಯಾರು ಮುರಿಯೋಕೆ ಆಗೋದಿಲ್ಲ. ದಾಖಲೆ ಮಾಡುತ್ತಲೇ ಕನ್ನಡ ಹೆಸರನ್ನ ವಿಶ್ವದೆಲ್ಲೆಡೆ ತೆಗೆದುಕೊಂಡು ಹೋಗಿದೆ. ಸೆಪ್ಟೆಂಬರ್-30 ರಂದು ರಿಲೀಸ್ ಆಗಿದ್ದ ಕಾಂತಾರ (Rishab Shetty Kantara Movie) ಸಿನಿಮಾ, ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದ ಎದುರೇ ರಿಲೀಸ್ ಆಗಿತ್ತು. ದೊಡ್ಡ ಚಿತ್ರದ ಎದುರು (Kantara 100 Days Soon) ನಿಮ್ಮ ಚಿತ್ರ ಬರ್ತಿದೆ. ಏನ್ ಅಂತೀರಿ ಅಂತ ಕೇಳಿದ್ರೆ, ರಿಷಬ್ ಶೆಟ್ರು, ಅವರ ಸಿನಿಮಾ ಅವರಿಗೆ, ನಮ್ಮ ಸಿನಿಮಾ ನಮ್ಮಗೆ, ಜನ ತಮ್ಮ ಚಿತ್ರವನ್ನ ಗೆಲ್ಲಿಸುತ್ತಾರೆ ಅನ್ನೋ ಭರವಸೆಯ ಮಾತುಗಳನ್ನೆ ಆಡಿದ್ದರು. ಅದು ನಿಜವಾಯ್ತು ನೋಡಿ, ರಿಲೀಸ್ ಆದ ಮರು ದಿನದಿಂದಲೇ ಕಾಂತಾರ (Kantara Craze) ಹೊಸ ಅಲೆಯನ್ನೆ ಎಬ್ಬಿಸಿತ್ತು.
ಕಾಂತಾರ ಸಿನಿಮಾ ಅನಿರೀಕ್ಷಿತ ಡಿವೈನ್ ಹಿಟ್
ಕಾಂತಾರ ಸಿನಿಮಾ ಗೆಲ್ಲುತ್ತದೆ ಅನ್ನೋ ನಂಬಿಕೆ ಸಿನಿಮಾ ತಂಡಕ್ಕೆ ಇತ್ತು. ಆದರೆ ಅದು ದೊಡ್ಡಮಟ್ಟದಲ್ಲಿಯೇ ಗೆಲ್ಲುತ್ತದೆ ಅನ್ನೋ ನಿರೀಕ್ಷೆ ಯಾರಿಗೂ ಇರಲಿಲ್ಲ. ಕನ್ನಡದಲ್ಲಿಯೇ ಎಲ್ಲ ಭಾಷೆಯಲ್ಲಿ ರಿಲೀಸ್ ಆದ ಕಾಂತಾರಕ್ಕೆ ಆ ಮೇಲೆ ಭಾರೀ ಬೇಡಿಕೆ ಬಂದಿತ್ತು.
ಬೇಡಿಕೆ ಮೇರೆಗೆ ಕನ್ನಡದ ಕಾಂತಾರ ಸಿನಿಮಾ ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲಿ ಕನ್ನಡದ ಕಾಂತಾರ ಡಬ್ ಆಯಿತು. ಅದಾದ್ಮೇಲೆ ಮುಂದೆ ಆಗಿದ್ದೆಲ್ಲವೂ ಇತಿಹಾಸವೇ ಬಿಡಿ. ಹೊಸ ಇತಿಹಾಸವನ್ನೆ ಬರೆದ ಕಾಂತಾರ ಸಿನಿಮಾ ರಿಲೀಸ್ ಆಗಿ ಈಗ ಎಷ್ಟು ದಿನಗಳು ಕಳೆದಿವೆ.
ಕನ್ನಡದ ಕಾಂತಾರ ರಿಲೀಸ್ ಆಗಿ 100 ದಿನ ಆಯಿತೇ?
ರಿಷಬ್ ಶೆಟ್ರ ಕಾಂತಾರ ರಿಲೀಸ್ ಆಗಿ ಈಗ ಎಷ್ಟು ದಿನ ಆಯಿತು. ಈ ಒಂದು ಪ್ರಶ್ನೆ ಈಗ ಕುತೂಹಲ ಮೂಡಿಸಿದೆ. ರಾಜ್ಯದ ಬಹುತೇಕ ಊರುಗಳಲ್ಲಿ ಕಾಂತಾರ ಸಿನಿಮಾ ಇನ್ನೂ ಇದೆ. ಆ ಹಿನ್ನೆಲೆಯಲ್ಲಿ ಈ ಒಂದು ಪ್ರಶ್ನೆ ಈಗ ಕ್ಯೂರಿಯೋಸಿಟಿ ಮೂಡಿಸಿದೆ.
ಕಾಂತಾರ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್-30 ರಂದು ಎಲ್ಲೆಡೆ ರಿಲೀಸ್ ಆಗಿತ್ತು. ಸುಮಾರು 250 ರಿಂದ 300 ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಆ ಲೆಕ್ಕದಂತೆ ದಿನ ಉರುಳಿದಂತೆ ಚಿತ್ರ ಥಿಯೇಟರ್ ಲೆಕ್ಕ ಜಾಸ್ತಿನೇ ಆಗಿದೆ. ಹೆಚ್ಚು ಕಡಿಮೆ ಒಂದೂವರೆ ತಿಂಗಳು ಎಲ್ಲ ಥಿಯೇಟರ್ನಲ್ಲೂ ಕಾಂತಾರ ಆವರಿಸಿಕೊಂಡಿತ್ತು.
ಕಾಂತಾರ ರಿಲೀಸ್ ಆಗಿ ಈಗ ಸುಮಾರು 95 ದಿನ ಪೂರ್ಣ!
ಹೌದು, ಸೆಪ್ಟೆಂಬರ್-30 ರ ಲೆಕ್ಕವನ್ನ ತೆಗೆದುಕೊಂಡ್ರೆ ಇಂದಿಗೆ ಹೆಚ್ಚು ಕಡಿಮೆ 95 ದಿನಗಳು ಕಳೆದಿವೆ. ಇನ್ನೇನು ಐದು ದಿನಗಳು ಉರುಳಿದ್ರೆ, 100 ಡೇಸ್ ಆಗುತ್ತದೆ. ಇಲ್ಲಿವರೆಗೂ ಇಷ್ಟು ದಿನ ಸಿನಿಮಾಗಳು ಓಡಿದ್ದೇ ಇಲ್ಲ. ಆದರೆ ಕಾಂತಾರ ಆ ಸಾಧನೆಯನ್ನ ಮಾಡಿದೆ ಅಂತಲೇ ಹೇಳಬಹುದೇನೋ.
ಅಂದ್ಹಾಗೆ ಕಾಂತಾರ ಸಿನಿಮಾ ಹಿಂದಿ ಡಬ್ ಆಗಿ ಅಲ್ಲೂ ಮೋಡಿ ಮಾಡಿತ್ತು. ಅಕ್ಟೋಬರ್-14 ರಂದು ಹಿಂದಿ ಭಾಷೆಯಲ್ಲಿ ಕಾಂತಾರ ರಿಲೀಸ್ ಆಗಿತ್ತು. ಹೆಚ್ಚು ಕಡಿಮೆ 800 ತೆರೆಯಲ್ಲಿ ಚಿತ್ರ ಪ್ರದರ್ಶನ ಆಗಿತ್ತು. ನಂತರ ತೆರೆಯ ಲೆಕ್ಕ 2,500 ಆಯಿತು.
ನವೆಂಬರ್-18 ಕ್ಕೆ ಕಾಂತಾರ 50 ದಿನ ಪೂರ್ಣ
ಕನ್ನಡದ ಕಾಂತಾರ ನವೆಂಬರ್-18 ರಂದು 300 ಥಿಯೇಟರ್ ನಲ್ಲಿ 50 ದಿನ ಪೂರೈಸಿದೆ. ಹೀಗೆ ನವೆಂಬರ್ ತಿಂಗಳಲ್ಲಿಯೇ ಹಾಫ್ ಸೆಂಚ್ಯೂರಿ ಹೊಡೆದ ಕಾಂತಾರ ಕನ್ನಡದ ಅಲ್ಲದೇ ತೆಲುಗು-ತಮಿಳು ಭಾಷೆಯಲ್ಲೂ ದಾಖಲೆಯ ಪ್ರದರ್ಶನ ಕಂಡಿದೆ.
ಅಕ್ಟೋಬರ್-15 ರಂದು ತಮಿಳು ಮತ್ತು ತೆಲುಗು ಭಾಷೆಯ ಕಾಂತಾರ ರಿಲೀಸ್ ಆಗಿತ್ತು. ಅದಾದ್ಮೇಲೆ ಡಿಸೆಂಬರ್-2 ರಂದು ತುಳು ಭಾಷೆಯಲ್ಲೂ ಕಾಂತಾರ ಬಿಡುಗಡೆಯಾಗಿತ್ತು. ತುಳು ಭಾಷಾ ಪ್ರೇಮಿಗಳಿಗೂ ಹೊಸದೊಂದು ಅನುಭವ ನೀಡಿತ್ತು.
ವಿಯಟ್ನಾಂನಲ್ಲಿ ರಿಲೀಸ್ ಕನ್ನಡದ ಮೊದಲ ಸಿನಿಮಾ
ಕನ್ನಡದ ಕಾಂತಾರ ದಾಖಲೆ ಮೇಲೆ ದಾಖಲೆ ಮಾಡುತ್ತಲೇ ಬಂದಿತ್ತು. ಆ ಒಂದು ವಿಷಯದಲ್ಲಿ ಕನ್ನಡದ ಕಾಂತಾರ ವಿಯಟ್ನಾಂ ನಲ್ಲೂ ರಿಲೀಸ್ ಆಗಿತ್ತು. ಈ ಮೂಲಕ ಕನ್ನಡದ ಮೊದಲ ಸಿನಿಮಾ ಆದ ಖ್ಯಾತಿನೂ ಈ ಚಿತ್ರಕ್ಕೇನೆ ಸಲ್ಲುತ್ತದೆ.
ಇದನ್ನೂ ಓದಿ: Rashmika Mandanna-Sai Pallavi: ಹಿಮ ಬೀಳುವಲ್ಲಿ ಶೂಟಿಂಗ್! ರಶ್ಮಿಕಾರನ್ನು ನೋಡಿ ಓವರ್ ಆ್ಯಕ್ಟಿಂಗ್ ಎಂದ ನೆಟ್ಟಿಗರು
ಹೀಗೆ ಕಾಂತಾರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಲೇ ಮುನ್ನುಗ್ಗಿತ್ತು. ಹಾಗೆ ಈಗಲೂ ರಾಜ್ಯದ ಹಲವಡೆ ಇನ್ನೂ ಥಿಯೇಟರ್ನಲ್ಲಿ ಕಾಂತಾರ ಓಡ್ತಾನೇ ಇದೆ. ಜನ ಚಿತ್ರವನ್ನ ಈಗಲೂ ನೋಡ್ತಾಯಿದ್ದಾರೆ ಅನ್ನೋದೇ ವಿಶೇಷ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ