ಕನ್ನಡದ ಕಾಂತಾರ 100 (Rishab Shetty) ದಿನ ಪೂರೈಸಿ ಆಗಿದೆ. ಆಸ್ಕರ್ ಪ್ರಶಸ್ತಿ ರೇಸ್ಗೂ ಅರ್ಹತೆ ಪಡೆದಿದೆ. ಇದರ ಮಧ್ಯ ರಿಷಬ್ ಶೆಟ್ರು ತಮ್ಮ ಚಿತ್ರವನ್ನ ನೋಡಿರೋ ಹಿಂದಿ (Kantara Movie) ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಚಿತ್ರವನ್ನ ಮತ್ತೆ ಮತ್ತೆ ನೋಡಿ ಅಂತಲೂ ಕೇಳಿಕೊಳ್ಳುತ್ತಿದ್ದಾರೆ. ಈ ಕೇಳಿಕೊಳ್ಳುವಿಕೆ ಯಾಕೆ ಅಂತಲೂ ಹೇಳುತ್ತೇವೆ. ಇದಕ್ಕೂ ಒಂದು (Kantara Qualified for Oscar) ಇಂಟ್ರಸ್ಟಿಂಗ್ ಕಾರಣವೂ ಇದೆ. ಅದಕ್ಕೂ ಹೆಚ್ಚಾಗಿ ಈಗ ರಿಷಬ್ ಶೆಟ್ಟಿ ತಮ್ಮ ಚಿತ್ರ ಆಸ್ಕರ್ ಪ್ರಶಸ್ತಿಗೆ ಅರ್ಹತೆ (Oscar Award) ಪಡೆದಿದೆ ಅಂತಲೂ ಎಲ್ಲೆಡೆ ಹೇಳುತ್ತಿದ್ದಾರೆ. ರಿಷಬ್ ಶೆಟ್ರು ಈಗೊಂದು ವೀಡಿಯೋ ಕೂಡ ಮಾಡಿದ್ದಾರೆ. ಅದರಲ್ಲಿ ಏನ್ ಇದೆ ಗೊತ್ತೇ? ಇಲ್ಲಿದೆ ನೋಡಿ.
ರಿಷಬ್ ಶೆಟ್ಟಿ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ಯಾಕೆ?
ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್ಗೆ ಅಹರ್ತೆ ಪಡೆದಿದೆ. ಇದರ ಬೆನ್ನಲ್ಲಿಯೇ ಕನ್ನಡ ಸಿನಿಪ್ರೇಮಿಗಳಿಗೂ ಒಂದು ವಿಶೇಷ ಹೆಮ್ಮೆನೂ ಆಗಿದೆ. ಆಸ್ಕರ್ ಪ್ರಶಸ್ತಿ ರೇಸ್ಗೆ ಅರ್ಹತೆ ಪಡೆಯೋದೇ ಒಂದು ದೊಡ್ಡ ಹಮ್ಮೆ. ಇನ್ನು ಆಸ್ಕರ್ ಬಂದ್ರೆ ಏನ್ ಆಗಬಹುದು ಹೇಳಿ.
ನಿಜ, ಕಾಂತಾರ ಚಿತ್ರ ಎರಡು ಕ್ಯಾಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ರೇಸ್ಗೆ ಅರ್ಹತೆ ಪಡೆದಿದೆ. ಅತ್ಯುತ್ತಮ ನಟನೆ ಮತ್ತು ಅತ್ಯುತ್ತಮ ಸಿನಿಮಾ ಅನ್ನೋ ಎರಡು ಕ್ಯಾಟಗರಿಯ ಆಸ್ಕರ್ ರೇಸ್ನಲ್ಲಿಯೇ ಕನ್ನಡದ ಕಾಂತಾರ ಈಗ ಇದೆ.
ಕಾಂತಾರ ಚಿತ್ರದ ರಿಷಬ್ ಶೆಟ್ರು ಈಗ ಏನ್ ಹೇಳ್ತಾರೆ?
ಕಾಂತಾರ ಸಿನಿಮಾದ ರಿಷಬ್ ಶೆಟ್ರು ತುಂಬಾ ಖುಷಿಯಲ್ಲಿದ್ದಾರೆ. ತಮ್ಮ ಚಿತ್ರ ಆಸ್ಕರ್ ರೇಸ್ ಅಲ್ಲಿದೆ ಅನ್ನೋದೇ ಇವರಿಗೆ ಬಹು ದೊಡ್ಡ ಹೆಮ್ಮೆನೇ ಆಗಿದೆ. ಅದೇ ಖುಷಿಯಲ್ಲಿಯೇ ರಿಷಬ್ ಶೆಟ್ರು ಮಾತನಾಡುತ್ತಾರೆ. ಅದನ್ನೇ ಎಲ್ಲರಿಗೂ ಈಗ ಹೇಳುತ್ತಿದ್ದಾರೆ.
ನಮ್ಮ ಸಿನಿಮಾ ಎರಡು ಕ್ಯಾಟಗರಿಯಲ್ಲಿ ಆಸ್ಕರ್ ಪ್ರಶಸ್ತಿಗೆ ಕ್ವಾಲಿಫೈ ಆಗಿದೆ. ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಟನೆಯ ಕ್ಯಾಟಗರಿಗೆ ಕಾಂತಾರ ಅರ್ಹತೆ ಪಡೆದಿದೆ ಅಂತಲೇ ರಿಷಬ್ ಶೆಟ್ರು ಹೇಳಿಕೊಂಡಿದ್ದಾರೆ.
ನಮ್ಮ ಕಾಂತಾರ ಚಿತ್ರ ಬೆಂಬಲಿಸಿದಕ್ಕೆ ನಿಮಗೆ ಧನ್ಯವಾದ!
ಕಾಂತಾರ ಚಿತ್ರ ಥಿಯೇಟರ್ ಬಂದಾಗಲೂ ಬೆಂಬಲಿಸಿದ್ದೀರಿ. ನೆಟ್ಫ್ಲಿಕ್ಸ್ಗೂ ಬಂದಾಗ ನೋಡಿ ಪ್ರೋತ್ಸಾಹಿಸಿದ್ದೀರಿ. ಹೀಗೆ ನಮ್ಮ ಚಿತ್ರಕ್ಕೆ ಪ್ರೀತಿ ತೋರಿಸಿದ್ದ ಎಲ್ಲ ಪ್ರೇಕ್ಷಕರಿಗೆ ಧನ್ಯವಾದ ಅಂತಲೂ ರಿಷಬ್ ಶೆಟ್ಟಿ ತಿಳಿಸಿದ್ದಾರೆ.
If you heard someone screaming, that's probably us because Kantara has made it to the Oscar's contention list! 🥳 pic.twitter.com/N9MtWpOB4A
— Netflix India (@NetflixIndia) January 12, 2023
ನೆಟ್ಫ್ಲಿಕ್ಸ್ನಲ್ಲಿ ಹಿಂದಿ ಕಾಂತಾರ ಸಿನಿಮಾ!
ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ಇದೆ. ಈ ಚಿತ್ರ ಹಿಂದಿ ಭಾಷೆಯಲ್ಲೂ ನೆಟ್ಫ್ಲಿಕ್ಸ್ ನಲ್ಲಿದೆ. ಇದನ್ನ ಇನ್ನೂ ಯಾರೆಲ್ಲ ನೋಡಿಲ್ವೋ ಅವರೂ ಈಗ ನೋಡಬಹುದು ಎಂದು ರಿಷಬ್ ಶೆಟ್ಟಿ ಹಿಂದಿ ಪ್ರೇಕ್ಷಕರಿಗೆ ತಿಳಿಸಿದ್ದಾರೆ.
ಕಾಂತಾರ ಸಿನಿಮಾದ ಪ್ರಮೋಷನ್ ಇನ್ನೂ ಮುಗಿದಿಲ್ಲ. ಅದನ್ನ ಎಲ್ಲ ಹಂತದಲ್ಲೂ ಪ್ರಮೋಟ್ ಮಾಡ್ತಾನೇ ಇದ್ದಾರೆ. ರಿಷಬ್ ಶೆಟ್ರು ತಮ್ಮ ಈ ಸಿನಿಮಾವನ್ನ ಮೊದಲಿನಷ್ಟೇ ಪ್ರೀತಿಯಿಂದಲೇ ಪ್ರಮೋಟ್ ಮಾಡ್ತಾನೇ ಇದ್ದಾರೆ ಅಂತಲೇ ಹೇಳಬಹುದು.
100 ದಿನ ಪೂರೈಸಿದ ಕನ್ನಡ ಕಾಂತಾರ ಸಿನಿಮಾ
ಕನ್ನಡದಲ್ಲಿ ಇಲ್ಲಿವರೆಗೂ 100 ದಿನ ಪೂರೈಸೋದು ತುಂಬಾ ಕಷ್ಟವೇ ಸರಿ. ಆದರೆ ಬಹು ದಿನಗಳ ಬಳಿಕ ಡಿವೈನ್ ಹಿಟ್ ಆಗಿರೋ ಕಾಂತಾರ ಸಿನಿಮಾ, ಸೂಪರ್ ಹಿಟ್ ಆಗೋದಲ್ಲದೇ, ಎಲ್ಲಡೆ 100 ದಿನವನ್ನೂ ಪೂರೈಸಿದೆ.
ಇದನ್ನೂ ಓದಿ: Dhananjaya: ವಸಿಷ್ಠ ಸಿಂಹ-ಹರಿಪ್ರಿಯಾರನ್ನ ಒಟ್ಟಿಗೆ ನೋಡಿ ಡಾಲಿ ಏನಂದ್ರು ಗೊತ್ತಾ?
ಕಳೆದ ವರ್ಷ 2022 ಸೆಪ್ಟಂಬರ್-30ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆದ ಕಾಂತಾರ ಮುಂದೆ ಮಾಡಿದ್ದೆಲ್ಲ ಇತಿಹಾಸವೇ ಬಿಡಿ. ಇಂತಹ ಇತಿಹಾಸ ಸೃಷ್ಟಿಸಿದ್ದ ಕನ್ನಡದ ಕಾಂತಾರ ಈಗ ಆಸ್ಕರ್ ರೇಸ್ ನಲ್ಲಿಯೇ ಇದೆ. ಆ ರೇಸ್ನಲ್ಲಿ ಗೆದ್ದು ಬರಲಿ ಅನ್ನೋದೇ ಸದ್ಯದ ಎಲ್ಲರ ಹಾರೈಕೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ