ಕಾಂತಾರ ಚಿತ್ರದ ನಾಯಕ ಶಿವ ಕಾಡು (Kantara Prequel Movie Updates) ಸೇರಿದ್ದಾರೆ. ದೂರ ಕಾನನೊಳಗೆ ಹೋಗಿ ಧ್ಯಾನಸ್ಥರಾದ್ರೇ? ಇಲ್ಲ ದೈವವನ್ನ ಹುಡುಕಿ ಸುತ್ತಾಡುತ್ತಿದ್ದಾರೆಯೇ? ಇಲ್ಲವೇ ಹಾಗೆ ಸುಮ್ಮನೆ ಜಾಲಿ (Kantara-2 Film New Updates) ಟ್ರಿಪ್ ಹೋದ್ರೆ? ಹೌದು, ಕಾಂತಾರ ಸಿನಿಮಾದ ಶಿವ ಪಾತ್ರಧಾರಿ ರಿಷಬ್ ಶೆಟ್ರು, ಎಲ್ಲ ಜಂಟಾಟದಿಂದ ದೂರ ಉಳಿಯೋ ನಿರ್ಧಾರ ಮಾಡಿದ್ದಾರೆ. ಕಾಂತಾರ ಸಿನಿಮಾ (Rishab Busy with Script Work) ಯಶಸ್ವಿ ಆಗಿದ್ದೇ ತಡ, ಎಲ್ಲೆಡೆ ರಿಷಬ್ ಶೆಟ್ರಿಗೆ ಬುಲಾವ್ ಬರ್ತಾನೇ ಇದ್ವು. ಅದನ್ನ ಒಲ್ಲೆ ಅಂತ ಹೇಳೋದು ಹೇಗೆ? ಇಲ್ಲ ಅಲ್ವೇ? ಅದಕ್ಕೇನೆ ರಿಷಬ್ ಶೆಟ್ರು ಸಿನಿಮಾ ಕೆಲಸ ಬಿಟ್ಟು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿಬಿಟ್ಟಿದ್ದರು.
ಆದರೆ ಇದೀಗ ರಿಷಬ್ ಶೆಟ್ರು (Kantara Cinema Latest News) ಕಾನನ ವಾಸಿ ಆಗಿ ಬಿಟ್ಟಿದ್ದಾರೆ ನೋಡಿ.
ಕಾಂತಾರ ಸಿನಿಮಾದ ಪ್ರಿಕ್ವೆಲ್ ಕೆಲಸ ಎಲ್ಲಿಗೆ ಬಂತು?
ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ರು ಎಲ್ಲರಿಗೂ ಪರಿಚಯ ಆಗಿದ್ದಾರೆ. ಕನ್ನಡ ಸಿನಿಮಾ ಆಗಿ ಮಾತ್ರ ಉಳಿದಿದ್ದ ಕಾಂತಾರ ಸಿನಿಮಾ, ರಿಲೀಸ್ ಬಳಿಕ ಪ್ಯಾನ್ ಇಂಡಿಯಾ ಆಗಿ ಬದಲಾಗಿರೋದು ಗೊತ್ತೇ ಇದೆ. ಅದೇ ಪ್ಯಾನ್ ಇಂಡಿಯಾ ಸಿನಿಮಾದ ಕ್ರೇಜ್ ಇನ್ನೂ ಇದೆ. ಕಾಂತಾರ ಅಂದ್ರೆ ಎಲ್ಲರಲ್ಲೂ ಒಂದು ಖುಷಿ ಮೂಡುತ್ತದೆ. ಒಂದು ಹೆಮ್ಮೆ ಕೂಡ ಆ ಮೂಲಕ ಹೊರ ಹೊಮ್ಮುತ್ತದೆ.
ಕಾಂತಾರ ಸಿನಿಮಾದ ಕಥೆಯನ್ನ ಅನೇಕರು ಮೆಚ್ಚಿದರು. ಬಾಲಿವುಡ್ ಮಂದಿ ಕೂಡ ಅದ್ಭುತವಾಗಿಯೇ ಕರಾವಳಿ ಕಥೆಯನ್ನ ಕೊಂಡಾಡಿದರು. ಬಾಲಿವುಡ್ ನಟ ಅನುಪಮ್ ಖೇರ್ ಬಹುವಾಗಿಯೇ ಈ ಚಿತ್ರವನ್ನ ಹೊಗಳಿದರು.
ಜನರ ಮನದಲ್ಲಿ ಕಾಂತಾರ ಶಿವನ ಪ್ರಿಕ್ವೆಲ್ ಕಥೆ ಧ್ಯಾನ
ಕಾಂತಾರ ಶಿವನ ರೂಪಾಂತರದ ಕಥೆ ಜನಕ್ಕೆ ಬಹುವಾಗಿಯೇ ಇಷ್ಟವಾಗಿದೆ. ಇದನ್ನ ಮೆಚ್ಚಿಕೊಂಡು ಖುಷಿಪಟ್ಟ ಜನ, ಕಾಂತಾರ-೨ ಸಿನಿಮಾ ಬರುತ್ತದೆ ಅಂದಹಾಗೆ ಸಾಕಷ್ಟು ಖುಷಿಪಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿ ಒಂದೊಂದು ಕಥೆಯನ್ನ ಮನದಲ್ಲಿ ಕಟ್ಟಿಕೊಂಡಿದ್ದಾರೆ.
ಆದರೆ ರಿಷಬ್ ಶೆಟ್ರು ಓಪನ್ ಆಗಿಯೇ ಹೇಳಿಯೇ ಬಿಟ್ಟರು. ಕಾಂತಾರ ಚಿತ್ರದಲ್ಲಿ ಕಾಂತಾರ-2 ಕಥೆ ಹೇಳುತ್ತಿಲ್ಲ. ಕಾಂತಾರ ಪ್ರಿಕ್ವೆಲ್ ಕಥೆ ಹೇಳುತ್ತಿದ್ದೇನೆ ಎಂದು ತಿಳಿಸಿದ್ದರು. ಈ ಚಿತ್ರದ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡವರ ಮನಸ್ಥಿತಿಯಲ್ಲಿ ಕಾಂತಾರ ಶಿವನ ಮುಂಚಿನ ಕಥೆಯ ಚಿತ್ರಣ ಮೂಡುತ್ತಿದೆ.
ಕಾಂತಾರ ಪ್ರಿಕ್ವೆಲ್ ಸಿನಿಮಾ ಕಥೆಯ ಕೆಲಸ ಎಲ್ಲಿಗೆ ಬಂತು?
ಕಾಂತಾರ-2 ಸಿನಿಮಾದ ಕಥೆಯನ್ನ ಶೆಟ್ರು ಬರೆದು ಮುಗಿಸಿದ್ರಾ? ಅನ್ನುವ ಒಂದು ಪ್ರಶ್ನೆ ಇದೆ. ಆ ಪ್ರಶ್ನೆಗೆ ಉತ್ತರ ಸಿಕ್ತಾ? ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಒಂದಷ್ಟು ಮಾಹಿತಿ ಸಿಕ್ಕಿದೆ. ಆ ಮಾಹಿತಿ ನಿಮ್ಮನ್ನ ಕಾಡಿಗೆ ಕರೆದುಕೊಡು ಹೋಗುತ್ತದೆ.
ನಿಜ, ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಇದೀಗ ಕಥೆ ಬರೆಯೋಕೆ ರೆಡಿ ಆಗಿದ್ದಾರೆ. ಸಿನಿಮಾಗೆ ಬೇಕಾಗೋ ಎಲ್ಲ ಸಂಶೋಧನೆಗಳು ಜೊತೆ ಜೊತೆಯಲ್ಲಿ ನಡೆಯುತ್ತಿದ್ದವು. ಇದಕ್ಕಾಗಿ ಒಂದು ಟೀಮ್ ರಿಸರ್ಚ್ ಮಾಡ್ತಾನೇ ಇದೆ.
ದಟ್ಟ ಕಾನನದಲ್ಲಿ ಕಾಂತಾರ ಶಿವನ ಕಥೆ ಬರೆಯೋ ಕೆಲಸ ಶುರು
ಇತ್ತ ರಿಷಬ್ ಶೆಟ್ರು ಕೂಡ ರಿಸರ್ಚ್ ಮಾಡ್ತಾನೇ ಇದ್ದರು. ಊರಿನ ಎಲ್ಲ ಕೆಲಸವನ್ನ ಮುಗಿಸಿಕೊಂಡು ಕಾಂತಾರದ ಶಿವ ಇದೀಗ ಅದ್ಯಾವುದೋ ಕಾಡಿಗೆ ಹೊರಟು ಹೋಗಿದ್ದಾರೆ. ಅಲ್ಲಿ ಕುಳಿತು ತನ್ಮಯತೆಯಿಂದಲೇ ಕಥೆ ಬರೆಯೋಕೆ ಶುರು ಮಾಡಿದ್ದಾರೆ.
ಮುಂದಿನ ಮೂರು ತಿಂಗಳು ರಿಷಬ್ ಶೆಟ್ರು ಯಾರಿಗೂ ಸಿಗೋದಿಲ್ಲ ಬಿಡಿ. ಫೋನ್ ಮತ್ತು ಇತರ ಕಾಂಟ್ಯಾಕ್ಟ್‌ಗಳೆಲ್ಲವನ್ನೂ ತೊರೆದು ರಿಷಬ್ ಶೆಟ್ರು, ಕಾಂತಾರದ ಶಿವನ ಕಥೆ ಬರೆಯೋವಲ್ಲಿ ಮಗ್ನರಾಗಿದ್ದಾರೆ. ಆದರೆ ಯಾವ ಕಾಡು? ಯಾರೆಲ್ಲ ಹೋಗಿದ್ದಾರೆ? ಇದುವೇ ಈಗಿನ ಕುತೂಹಲ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ