Kantara: ವಿಜಯ್ ಕಿರಗಂದೂರು, ರಿಷಬ್​ಗೆ ಸಿಕ್ತು ಮುಂಗಡ ಜಾಮೀನು! ಕೋರ್ಟ್ ಹೇಳಿದ್ದೇನು?

ನವರಸಂ-ವರಾಹ ರೂಪಂ

ನವರಸಂ-ವರಾಹ ರೂಪಂ

ಕಾಂತಾರ ಹಾಡಿನ ಕಾಪಿರೈಟ್ ಕೇಸ್​​ಗೆ ಸಂಬಂಧಿಸಿ ಕೇರಳ ಹೈಕೋರ್ಟ್ ನಟ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಮುಂಗಡ ಜಾಮೀನು ಮಂಜೂರು ಮಾಡಿದೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ (Kerala Highcourt) ಮುಂಗಡ ಜಾಮೀನು ಕೊಟ್ಟಿದೆ. ಕಾಂತಾರ ಸಿನಿಮಾದಲ್ಲಿ ತೈಕ್ಕುಡಂ ಬ್ರಿಡ್ಜ್​ನ ನವರಸಂ ಹಾಡನ್ನು ಕಾಪಿ ಮಾಡಿ ವರಾಹರೂಪಂ (Varaha Roopam) ಹಾಡಿನಲ್ಲಿ ಬಳಸಲಾಗಿದೆ ಎಂದು ಕೇರಳದ ಮ್ಯೂಸಿಕ್ ಬ್ಯಾಂಡ್ ಆರೋಪಿಸಿತ್ತು. ಇದೀಗ ನ್ಯಾ. ಬದ್ರುದ್ದೀನ್ ಅವರು ಜಾಮೀನು ಮಂಜೂರು ಮಾಡಿದ್ದು ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ಬರುವ ತನಕ ಹಾಡನ್ನು ಬಳಸುವ ಹಾಗಿಲ್ಲ ಎಂದು ಷರತ್ತು ವಿಧಿಸಿದೆ.


ವರಾಹರೂಪಂ ಹಾಡಿನ ಕಾಪಿರೈಟ್ ವಿಚಾರದ ವಿಚಾರಣೆ ನಡೆದು ಮಧ್ಯಂತರ ಆದೇಶ ಬರುವ ತನಕ ಅರ್ಜಿದಾರರು ಯಾವುದೇ ಕಾರಣಕ್ಕೆ ಆ ಹಾಡನ್ನು ಒಳಗೊಂಡ ಕಾಂತಾರ ಸಿನಿಮಾವನ್ನು ಪ್ರಸಾರ ಮಾಡಬಾರದು ಎಂದು ಷರತ್ತು ವಿಧಿಸಲಾಗಿದೆ. ಕಾನೂನಿನ ಪ್ರಕಾರ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ಅರ್ಹವಾದ ನಿರ್ಧಾರವನ್ನು ತೆಗೆದುಕೊಳ್ಳಲು ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮುಂದೆ ಹೋಗಬಹುದು ಎಂದು ತಿಳಿಸಲಾಗಿದೆ.




ಕೋಝಿಕ್ಕೋಡ್ ನಗರ ಪೊಲೀಸ್ ಠಾಣೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್​ನ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕ್ರೈಂ ನಂ.703/2022 ರಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಕಾಪಿರೈಟ್ ಆ್ಯಕ್ಟ್ 1956ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಅನುಮತಿ ಇಲ್ಲದೆ ಕಾಪಿ ಮಾಡಲಾಗಿದೆ


ಅರ್ಜಿದಾರರ ಪ್ರಕಾರ ವರಾಹರೂಪಂ ಹಾಡು ನವರಸಂ ಹಾಡಿನ ಅನಧಿಕೃತ ಕಾಪಿಯಾಗಿದೆ ಎಂದು ಹೇಳಲಾಗಿದೆ. ಮಾತೃಭೂಮಿ ಮುದ್ರಣ ಹಾಗೂ ಪ್ರಸರಣ ಕಂಪೆನಿ ಲಿಮಿಟೆಡ್​​ನ ಕಪ್ಪ ಟಿವಿಯಲ್ಲಿ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನವರಸಂ ಹಾಡನ್ನು ಪರ್ಫಾರ್ಮ್ ಮಾಡಿದ್ದರು.




ಆದರೆ ವರಾಹ ರೂಪಂ ಹಾಡಿನ ತಂಡ ಇದು ಒಂದು ಸ್ವತಂತ್ರ ರಚನೆಯಾಗಿದ್ದು ಯಾವುದನ್ನೂ ಕಾಪಿ ಮಾಡಿಲ್ಲ ಎಂದು ಹೇಳಿತ್ತು. ಆದರೆ ವಿವಾದ ಇನ್ನೂ ಕೊನೆಯಾಗಿಲ್ಲ.


ಇದನ್ನೂ ಓದಿ: Kiara Advani: ಗ್ರ್ಯಾಂಡ್ ಅಲ್ಲ, ಸಿಂಪಲ್ ಮೇಕಪ್ ಸಾಕು ಅಂತಿದ್ದಾರೆ ಬಾಲಿವುಡ್ ಬೆಡಗಿಯರು! ಇವರ ಬ್ರೈಡಲ್ ಲುಕ್ ಈಗ ಟ್ರೆಂಡ್


ಇದು ಕಾಪಿ ಅಲ್ಲ, ಸ್ಫೂರ್ತಿ ಎಂದಿದ್ದ ಕಾಂತಾರ ತಂಡ


‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್​ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು.


ಮ್ಯೂಸಿಕ್ ಆ್ಯಪ್​​ಗಳಿಂದ ಡಿಲೀಟ್ ಮಾಡಿದ್ದ ಹಾಡು


ಮ್ಯೂಸಿಕ್ ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಪಿ ರೈಟ್ ಎನ್ನುವುದು ಸೂಕ್ಷ್ಮ ಸಂಗತಿ. ಹಾಡು, ಕಂಟೆಂಟ್​​ಗಳು ಕಾಪಿ ಆದಾಗ ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಹಾಡನ್ನು ಪ್ಲೇ ಮಾಡದಂತೆ ಕೋರ್ಟ್ ಆದೇಶಿಸಿದ ಕೆಲವು ದಿನಗಳ ನಂತರ ಈಗ ಹಾಡನ್ನು ಎಲ್ಲೆಡೆ ಡಿಲೀಟ್ ಮಾಡಲಾಗಿತ್ತು.


kerala high court has stayed the kozikod court order that removed the ban on kantara s varaha roopam song
ವರಾಹ ರೂಪಂ ಹಾಡು


ಕೇರಳದ ಸ್ಥಳೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಹಾಡನ್ನು ಬಳಸದಂತೆ ಕಾಂತಾರ ತಂಡಕ್ಕೆ ಆದೇಶ ಹೊರಡಿಸಿತ್ತು. ಈಗ ಈ ಆದೇಶಕ್ಕೆ ಚಿತ್ರತಂಡ ತಲೆಬಾಗಿದ್ದು ಯೂಟ್ಯೂಬ್, ಮ್ಯೂಸಿಕ್ ಆ್ಯಪ್​ಗಳಾದ ಸಾವನ್, ಗಾನ ಮೊದಲಾದ ಪ್ಲಾಟ್​ಫಾರ್ಮ್​ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿತ್ತು.

Published by:Divya D
First published: