• Home
  • »
  • News
  • »
  • entertainment
  • »
  • Pramod Maravanthe: ಕಾಂತಾರ ಸಿಂಗಾರ ಸಿರಿಯೇ ಲಿರಿಕ್​ ರೈಟರ್ ಬರೆದರು ಮತ್ತೊಂದು ಹಾಡು; ಇದು ಕೂಡ ಸಖತ್

Pramod Maravanthe: ಕಾಂತಾರ ಸಿಂಗಾರ ಸಿರಿಯೇ ಲಿರಿಕ್​ ರೈಟರ್ ಬರೆದರು ಮತ್ತೊಂದು ಹಾಡು; ಇದು ಕೂಡ ಸಖತ್

80ರ ದಶಕದ ಪ್ರೇಮ ಗೀತೆ-2022 ರಲ್ಲಿ ಮನಮೋಹಕ

80ರ ದಶಕದ ಪ್ರೇಮ ಗೀತೆ-2022 ರಲ್ಲಿ ಮನಮೋಹಕ

ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಬರೆದ ಪ್ರಮೋದ್ ಮರವಂತೆ ಈಗ ಇನ್ನೂ ಒಂದು ಹಾಡು ಬರೆದಿದ್ದಾರೆ. 80 ರ ದಶಕದ ಕಥೆ ಹೇಳುವ ದೂರದರ್ಶನ ಚಿತ್ರದಲ್ಲಿ ಕಣ್ಣು ಕಣ್ಣು ಕಾದಾಡುತ ಇರಲಿ ಅನ್ನೋ ಹಾಡನ್ನ ಬರೆದಿದ್ದಾರೆ. ಈ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ಗೂ ಮಾತನಾಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಾಂತಾರ (Kantara Cinema) ಸಿನಿಮಾ ಎಲ್ಲ ವಿಷಯದಲ್ಲೂ ಹಿಟ್ ಆಗಿದೆ. ಸಿನಿಮಾದ ಕಂಟೆಂಟ್ ಕೂಡ ಸೂಪರ್. ಸ್ಥಳೀಯ ಕಂಟೆಂಟ್ ಮೂಲಕವೇ ಇಡೀ ಕನ್ನಡ ನಾಡಿಗೆ ಹೊಸ ಹೆಸರು ತಂದು ಕೊಟ್ಟಿದೆ. ದೇಶ-ವಿದೇಶದಲ್ಲೂ ಕಾಂತಾರ ಹೆಸರು ಮಾಡಿದೆ. ಸಿನಿಮಾ ಹಿಟ್ ಆಗುವ ಮುಂಚೆ ಕಾಂತಾರ ಚಿತ್ರದ ಸಿಂಗಾರ (Singara Siriye) ಸಿರಿಯೇ ಹಾಡು ಹಿಟ್ ಆಗಿದೆ. ಅನನ್ಯ ಭಟ್ (Ananya Bhat) ಹಾಗೂ ವಿಜಯ್​  ಪ್ರಕಾಶ್ (Vijay Prakash) ಹಾಡಿರೋ ಈ ಗೀತೆ ಸೂಪರ್ ಆಗಿಯೇ ಬಂದಿತ್ತು. ಜನ ಇದನ್ನ ಕೇಳಿ ತುಂಬಾ ಖುಷಿಪಟ್ಟರು. ಸರಳವಾದ ಪದಗಳ ಈ ಗೀತೆ ಅಜನೀಶ್ ಸಂಗೀತದಲ್ಲೂ ಅದ್ಭುತವಾಗಿಯೇ ರೆಡಿ ಆಗಿತ್ತು. ಇದನ್ನ ಕೂಡ ಪ್ರಮೋದ್ ಮರವಂತೆ ಬರೆದಿದ್ದರು. ಈಗ ಇದೇ ಪ್ರಮೋದ್ ಮರವಂತೆ ಮತ್ತೊಂದು ಅದ್ಬುತ ಹಾಡನ್ನ ಬರೆದಿದ್ದಾರೆ.


ಇದರ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.


80ರ ದಶಕದ ಪ್ರೇಮ ಗೀತೆ-2022 ರಲ್ಲಿ ಮನಮೋಹಕ
ಕನ್ನಡದಲ್ಲಿ ಒಳ್ಳೆ ಹಾಡುಗಳು ಬರ್ತಾನೆ ಇವೆ. ವರ್ಷದಲ್ಲಿ ಒಂದಷ್ಟು ಹಾಡುಗಳು ಹಿಟ್ ಆಗುತ್ತವೆ. ಸಿನಿಮಾ ಹಿಟ್ ಆಗ್ತವೋ ಬಿಡ್ತವೋ. ಆದರೆ ಹಾಡುಗಳು ಗೆದ್ದು ಬೀಗುತ್ತವೆ. ಕಾಂತಾರ ಸಿನಿಮಾ ರಿಲೀಸ್​ ಆಗೋ ಮುಂಚೆ ಸಿಂಗಾರ ಸಿರಿಯೇ ಹಾಡು ಹಿಟ್ ಆಗಿತ್ತು.


ಕಾಂತಾರ ಇಡೀ ಸಿನಿಮಾ ನೋಡುವಾಗ ಸಿಂಗಾರ ಸಿರಿಯೇ ಹಾಡಿನ ಫೀಲ್ ಚೇಂಜ್ ಆಗುತ್ತದೆ. ಕಥೆಯೊಳಗೇನೆ ಈ ಗೀತೆ ಇರೋದ್ರಿಂದ ಎಲ್ಲರಿಗೂ ಇನ್ನಷ್ಟು ಹತ್ತಿರ ಅನಿಸಿ ಬಿಡುತ್ತದೆ. ಅಂತಹ ಅದ್ಭುತ ಹಾಡನ್ನ ಬರೆದ ಯುವ ಲಿರಿಕ್​ ರೈಟರ್ ಈಗ ಮತ್ತೊಂದು ಚಿತ್ರಕ್ಕೆ ಹಾಡು ಬರೆದಿದ್ದಾರೆ. ಇದು ಕೂಡ ಸೂಪರ್ ಆಗಿದೆ.


Lyric Writer Pramod Maravanthe Talk About his new Song
ಕಣ್ಣು ಕಣ್ಣು ಕಾದಾಡುತ ಇರಲಿ ಬಾಕಿ ಮಾತು ಉಸಿರೆ ಆಡಲಿ


ದೂರದರ್ಶನ ಚಿತ್ರಕ್ಕೆ ಪ್ರಮೋದ್ ಮರವಂತೆ 80ರ ಪ್ರೇಮ ಗೀತೆ
80ರ ದಶಕದಲ್ಲಿ ಇದ್ದ ಬದುಕು ಬೇರೆ. ಆಗೆಲ್ಲ ರೇಡಿಯೋ ಮತ್ತು ಪತ್ರಗಳ ಕಾಲವೇ ಆಗಿತ್ತು. ಮೊಬೈಲ್ ಎಲ್ಲಾ ಆಗೆಲ್ಲಿ ಇದ್ವು. ಪ್ರೇಮಿಗಳಿಗೆ ಪತ್ರಗಳೇ ಆಧಾರ ಆಗಿದ್ದವು. ಕಣ್ಣು ಸನ್ನೆಗಳೆ ಮೆಸೆಂಜರ್ ಆಗಿದ್ದವು.


ಇದನ್ನೂ ಓದಿ: Bigg Boss Kannada: ನೀವು ಸತ್ತ ಕುದುರೆ ತರ, ಆರ್ಯವರ್ಧನ್-ರೂಪೇಶ್ ರಾಜಣ್ಣ ಮಧ್ಯೆ ಜೋರು ಜಗಳ!


ಇದನ್ನ ಗಮನದಲ್ಲಿಟ್ಟುಕೊಂಡೆ ಪ್ರಮೋದ್ ಮರವಂತೆ ತುಂಬಾ ಸರಳ ಪದದಲ್ಲಿ ಈಗೊಂದು ಹಾಡು ಬರೆದಿದ್ದಾರೆ. ಅದರ ಲಿರಿಕ್ಸ್ ಹೀಗಿದೆ ನೋಡಿ.


ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿ ಮಾತು ಉಸಿರೆ ಆಡಲಿ


ಕಣ್ಣು ಕಣ್ಣು ಕಾದಾಡುತ ಇರಲಿ..
ಬಾಕಿ ಮಾತು ಉಸಿರೆ ಆಡಲಿ..
ಬಾಕಿ ಕನಸು ಎದುರೇ ಬೀಳಲಿ..


ಹೀಗೆ ಸಾಗುವ ಈ ಹಾಡಿನಲ್ಲಿ ಒಲವಿನ ಝರಿನೆ ಹರೆಯುತ್ತದೆ. ಪ್ರೀತಿ ಮಾಡುವ ಹೃದಯಗಳ ಉಸಿರಿನ ಚಿತ್ರಣವೇ ಇದರಲ್ಲಿ ದೊರೆಯುತ್ತದೆ. ದೂರದರ್ಶನ ಬಂದ ಕಾಲದ ಕಥೆಯನ್ನೆ ಈ ಚಿತ್ರ ಹೊಂದಿದೆ. ಇದನ್ನ ಅಷ್ಟೇ ಅದ್ಭುತವಾಗಿಯೇ ಹಾಡಿನಲ್ಲೂ ತರುವ ಕೆಲಸ ಆಗಿದೆ.


ಪ್ರಮೋದ್ ಇಷ್ಟು ಒಳ್ಳೆ ಹಾಡು ಹೇಗೆ ಬರೆಯುತ್ತಾರೆ?
ಸಾಮಾನ್ಯವಾಗಿ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಹಾಡು ಬರೆಯುವ ಮುಂಚೆ ಸಿನಿಮಾದ ಕಥೆ ಬಗ್ಗೆ ತಿಳಿದುಕೊಳ್ಳುತ್ತಾರೆ. ಚಿತ್ರದ ಒಂದೋ ಎರಡೋ ಹಾಡು ಬರೆಯೋದಿದ್ರೆ, ಇಡೀ ಕಥೆ ಕೇಳೋದಿಲ್ಲ. ಸನ್ನಿವೇಶ ಕೇಳಿಯೇ ಹಾಡು ಬರೆದುಕೊಡುತ್ತಾರೆ.
ದೂರದರ್ಶನ ಹಾಡಿನ ವಿಷಯದಲ್ಲಿ ಬಹುತೇಕ ಕತೆಯನ್ನ ಪ್ರಮೋದ್ ಕೇಳಿದ್ದಾರೆ.


ಇವರಿಗೆ ಸಿನಿಮಾದ ಕ್ಲೈಮ್ಯಾಕ್ಸ್ ಏನೂ ಅನ್ನೋದು ಗೊತ್ತಿಲ್ಲ. ಆದರೆ ಇಡೀ ಚಿತ್ರದ ಕಥೆ ಗೊತ್ತಿದೆ. ಆ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಎರಡು ಹಾಡುಗಳನ್ನ ಬರೆದಿದ್ದಾರೆ.


ಕಣ್ಣು ಕಣ್ಣು ಕಾದಾಡುತ ಇರಲಿ ಹುಟ್ಟಿದ್ದು ಹೇಗೆ?
ಕಣ್ಣು ಅನ್ನೋ ಪದವನ್ನ ಚಿ.ಉದಯಶಂಕರ್ ಹಾಡುಗಳಲ್ಲೂ ನೋಡಬಹುದು. ಅದೇ ರೀತಿ 80 ರಿಂದ 90ರ ದಶಕದ ಹಾಡನ್ನ ಬರೆಯೋವಾಗ, ಆ ಫೀಲ್ ಬರಲಿ ಎಂದು ಕಣ್ಣು ಪದವನ್ನ ಪ್ರಮೋದ್ ಮರವಂತೆ ಇಲ್ಲಿ ಬಳಸಿಕೊಂಡಿದ್ದಾರೆ. ಕಣ್ಣು ಕಣ್ಣು ಕಾದಾಡುತ ಇರಲಿ ಎಂದು ಬರೆದುಕೊಟ್ಟಿದ್ದಾರೆ.
ಒಂದು ವಾರದಲ್ಲಿಯೇ ರೆಡಿ ಆಯ್ತು ಕಣ್ಣು ಕಣ್ಣು ಹಾಡು
ಕಣ್ಣು ಕಣ್ಣು ಕಾದಾಡುತ ಇರಲಿ ಹಾಡನ್ನ ಪ್ರಮೋದ್ ಮರವಂತೆ ಒಂದು ವಾರದಲ್ಲಿ ಬರೆದುಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕೊಟ್ಟ ಅದ್ಭುತ ಟ್ಯೂನ್​ಗೆ ಪ್ರಮೋದ್ ಮರವಂತೆ ಸರಳ ಪದಗಳಲ್ಲಿಯೇ ಹಾಡು ಬರೆದುಕೊಟ್ಟಿದ್ದಾರೆ. ಈ ರೀತಿ...


ಮರೆಯಾಗಿ ಇರುವಾ
ನೆನದಾಗ ಬರುವಾ..
ನಯವಾದ ನಸುಕು
ನೀನೇನೆ
ದಿನವೂ ನಿನ್ನದೆ ಸಿಹಿ ವಾರ್ತೆ
ತರುವ ಗಾಳಿ..


ಪ್ರಮೋದ್ ಬರೆದ ಸರಳ ಸಾಲುಗಳನ್ನ ವಾಸುಕಿ ವೈಭವ ಅದ್ಭುತವಾಗಿಯೆ ಹಾಡಿದ್ದಾರೆ. ಇನ್ನು ಸಿನಿಮಾದ ಈ ಹಾಡಿನಲ್ಲಿ ಪೃಥ್ವಿ ಅಂಬರ್ ಹಾಗೂ ಅಯಾನಾ ಮೇಲೆನೆ ಇಡೀ ಹಾಡು ಚಿತ್ರೀಕರಣಗೊಂಡಿದೆ.


ಒಂದು ಊರಿಗೆ ಟಿವಿ ಬಂದ್ರೆ ಏನೆಲ್ಲ ಆಗುತ್ತದೆ ಅನ್ನೋ ಕಥೆಯನ್ನೆ ಚಿತ್ರ ಹೊಂದಿದೆ. ಸುಕೇಶ್ ಶೆಟ್ಟಿ ಈ ಚಿತ್ರವನ್ನ ನಿರ್ದೇಶನದ ಮಾಡಿದ್ದಾರೆ. ರಾಜೇಶ್ ಭಟ್ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ.


ಇದನ್ನೂ ಓದಿ: Samantha: ರೊಮ್ಯಾನ್ಸ್ ಬದಲಾಗಿದೆ ಎಂದ ಸಮಂತಾ! ಕಾರಣ ಏನು?


ದೂರದರ್ಶನ ಚಿತ್ರದ ವೀಡಿಯೋ ಹಾಡು ಈಗ ರಿಲೀಸ್ ಆಗಿದೆ. ಒಳ್ಳೆ ಫೀಲ್ ಇರೋ ಈ ಗೀತೆ ಕೇಳುಗರ ಹೃದಯ ಗೆಲ್ಲೋದು ಗ್ಯಾರಂಟಿ ಅಂತಲೇ ಹೇಳಬಹುದು. ಅಷ್ಟು ವಿಶೇಷ ಅನಿಸೋ ಈ ಗೀತೆ ಈಗ ಎಲ್ಲರ ಗಮನ ಸೆಳೆಯಲು ಆರಂಭಿಸಿದೆ.

First published: