• Home
  • »
  • News
  • »
  • entertainment
  • »
  • Kantara Movie: ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅರ್ಥ ಇದು, ಏನ್ ರೋಚಕ ಈ ಸ್ಟೋರಿ ನೋಡಿ

Kantara Movie: ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅರ್ಥ ಇದು, ಏನ್ ರೋಚಕ ಈ ಸ್ಟೋರಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kantara Kannada Film Ending Scene: ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ. ಈ ಚಿತ್ರವು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಬಗ್ಗೆ ಮತ್ತು ದೈವಿಕ ನೃತ್ಯ ರೂಪವಾದ ಭೂತ ಕೋಲದ ಮೂಲಕ ಹೇಳಲಾಗಿದೆ.

  • Share this:

ಕಾಂತಾರ ಸಿನಿಮಾದ (Kantara Film) ಹವಾ ಜೋರಾಗಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ (Collection) ಹೆಚ್ಚಾಗುತ್ತಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ ಕಾಂತಾರ ಹಿಂದಿಯಲ್ಲಿ ಅಬ್ಬರಿಸುತ್ತಿದೆ. ಹಿಂದಿಯ ಅನೇಕ ಸಿನಿಮಾಗಳ ಕಲೆಕ್ಷನ್ ಹಿಂದಿಕ್ಕಿ ರಿಷಬ್ ಶೆಟ್ಟಿ(Rishab Shetty)  ಸಿನಿಮಾ ಮುನ್ನುಗ್ಗುತಿದೆ. ರಿಷಬ್ ಅಬ್ಬರಕ್ಕೆ ಬಾಲಿವುಡ್ ದಂಗಾಗಿದೆ. ಅಂದಹಾಗೆ ಎಲ್ಲಾ ಭಾಷೆಗಳಿಂದಾನೂ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಸಿನಿಮಾ ಇಂದಿಗೂ ಎಲ್ಲ ಕಡೆ ಹೌಸ್ ಫುಲ್ 9Housefull) ಪ್ರದರ್ಶನ ಕಾಣುತ್ತಿದೆ. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.


ಆದರೆ ಭೂತ ಕೋಲದ ಸಾಂಸ್ಕೃತಿಕದ ಪ್ರಾಮುಖ್ಯತೆಯ ಬಗ್ಗೆ ತಿಳಿದಿಲ್ಲದವರಿಗೆ, ಅದರ ಕಿರುಚಾಟವು ಮೊದಲಿಗೆ ಭಯಾನಕವೆನಿಸಿದರೂ ಸಹ ಕ್ಲೈಮ್ಯಾಕ್ಸ್‌ನಲ್ಲಿ ಆ ಕಿರುಚಾಟವು ಶಾಂತಗೊಳಿಸುವ ಅಲೌಲಿಕ ಪರಿಣಾಮವನ್ನು ಹೊಂದಿದೆ. ಆದರೆ ಕಾಂತಾರ ಕ್ಲೈಮ್ಯಾಕ್ಸ್ ಆದ ನಂತರ ಪಾತ್ರಧಾರಿ ಶಿವನಿಗೆ ಏನಾಗುತ್ತದೆ? ಅವನು ಸತ್ತಿರುವನೇ ಅಥವಾ ಬದುಕಿರುವವನೇ? ಎಂಬುದನ್ನು ಕಂಡುಹಿಡಿಯೋಣ.


ಕಾಂತಾರ ಕ್ಲೈಮ್ಯಾಕ್ಸ್


ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿರುವ ಕನ್ನಡ ಚಿತ್ರ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಅಕ್ಟೋಬರ್ 14 ರಂದು ಬಿಡುಗಡೆಯಾದ ಚಿತ್ರದ ಹಿಂದಿ ಆವೃತ್ತಿಯು 4 ನೇ ದಿನದಂದು ಅಂದ್ರೆ ಅಕ್ಟೋಬರ್ 17 ರವರೆಗೆ ಸಖತ್ ಕಲೆಕ್ಷನ್ ಅನ್ನು ದಾಖಲಿಸಿದೆ. ವ್ಯಾಪಾರ ವರದಿಗಳ ಪ್ರಕಾರ, ಕಾಂತಾರ ಡೇ 4 ಸಂಗ್ರಹವು ಅದರ ಮೊದಲ ದಿನದ ಸಂಗ್ರಹಕ್ಕಿಂತ ಹೆಚ್ಚಾಗಿದೆ. ಕನ್ನಡದ ಹೊರತಾಗಿ, ತಮಿಳು ಮತ್ತು ತೆಲುಗಿನಲ್ಲೂ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ.


ಶಿವ ಸತ್ತಿರುವನೋ ಅಥವಾ ಬದುಕಿರುವನೋ? ಎಂಬುದಕ್ಕೆ ಇಲ್ಲಿದೆ ಉತ್ತರ


ಊರ ದೇವರು ಗುಳಿಗನು ಶಿವನ (ರಿಷಬ್‌ ಶೆಟ್ಟಿ) ಮೈಮೆಲೆ ಆಗಾಗ ಪ್ರವೇಶ ಮಾಡಿ ಊರಿನ ಸಮಸ್ಯೆಗಳನ್ನು ಬಗೆಹರಿಸುತ್ತಿರುತ್ತಾನೆ. ಈತನ ಮೇಲೆ ದೇವೇಂದ್ರ ಸುತ್ತೂರು (ಅಚ್ಯುತ್ ಕುಮಾರ್) ಆಗಾಗ ದಾಳಿ ಮಾಡುತ್ತಲೇ ಇರುತ್ತಾನೆ. ನಂತರ ಶಿವನು ದೇವೇಂದ್ರನನ್ನು ಮತ್ತು ಅವನ ಎಲ್ಲಾ ಸಹಾಯಕರನ್ನು ಕೊಲ್ಲುತ್ತಾನೆ.


ಕೆಲವು ತಿಂಗಳುಗಳ ನಂತರ, ಶಿವನನ್ನು ಮತ್ತೊಮ್ಮೆ ದೇವರು ವಶಪಡಿಸಿಕೊಳ್ಳುತ್ತದೆ. ಈ ಬಾರಿ ಅದು ಪಂಜುರುಲಿ ದೇವರು ಆಗಿರುತ್ತದೆ. ಇದು ಅಲೌಲಿಕ ಕಥೆಯಾಗಿ ಮೂಡಿ ಬಂದಿರುವುದರಿಂದ ಇಲ್ಲಿ ದೇವರು ಒಬ್ಬ ವ್ಯಕ್ತಿಯೊಳಗೆ ಪ್ರವೇಶ ಮಾಡುವುದು ಸಾಮಾನ್ಯ ವಿಷಯವಾಗಿದೆ.


ಇದನ್ನೂ ಓದಿ: ಪುನೀತ್ ಮಾಮ ಅಂದ್ರೆ ಇಷ್ಟ! ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ರು


ಶಿವನ ಮೈಯನ್ನು ಪ್ರವೇಶಿಸಿರುವ ದೈವವು, ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಹಾಯ ಹಸ್ತದಿಂದ ಅರಣ್ಯವನ್ನು ರಕ್ಷಿಸುವಂತೆ ಸನ್ನೆ ಮಾಡಿ ತೋರಿಸುತ್ತದೆ. ಅದೇ ಸಮಯದಲ್ಲಿ, ಶಿವನು ಕಾಡಿನ ಕಿರುಚಾಟವನ್ನು ಕೇಳಿ ಅದರ ಕಡೆಗೆ ಓಡುತ್ತಾನೆ. ಆ ಕಿರುಚಾಟವು ಬಹಳ ವರ್ಷಗಳಿಂದ ಕಳೆದುಹೋದ ಅವರ ತಂದೆ ಮತ್ತು ದೇವರ ಕೂಗು ಆಗಿರುತ್ತದೆ.


ಇದರ ನಂತರ, ಅವರಿಬ್ಬರೂ ಮತ್ತೆ ಬೆಂಕಿಯ ವೃತ್ತದಲ್ಲಿ ಭೇಟಿಯಾಗುತ್ತಾರೆ. ಆ ಹಳ್ಳಿಯಲ್ಲಿ ತಮ್ಮ ಕೆಲಸ ಮುಗಿಯುತ್ತಿದ್ದಂತೆ ಒಂದು ಕುರುಹು ಬಿಡದೆ ಕಣ್ಮರೆಯಾಗುತ್ತಾರೆ. ಕೆಲವು ವರ್ಷಗಳ ನಂತರ, ಶಿವನ ಮಗನು ತನ್ನ ತಂದೆಯ ಕಣ್ಮರೆಯಾದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾನೆ.


ಆಗ ಅದಕ್ಕೆ ಸಿಗುವ ಉತ್ತರ ಕೇವಲ ಒಂದು ಕಿರು ನಗೆ ಮಾತ್ರ. ಶಿವನ ತಂದೆಯು ಶಿವನಿಗೆ ಆತನ ಕರ್ತವ್ಯಗಳನ್ನು ನೆನಪಿಸಲು ಹಿಂದಿರುಗಿದಂತೆಯೇ, ಅವನ ತಂದೆ ಹಳ್ಳಿಯ ಅವನ ಜವಾಬ್ದಾರಿಗಳನ್ನು ಹೇಳಲು ಹಿಂತಿರುಗಬಹುದು ಎಂಬ ಆಶಯವನ್ನು ಹೊತ್ತು ಚಿತ್ರ ಮುಗಿಯುತ್ತದೆ. ಇದರರ್ಥ ಕಾಂತಾರ ಚಿತ್ರದ ಶಿವ ಬದುಕಿರುತ್ತಾನೆ ಆದರೆ ಸಮಯ ಬಂದಾಗ ಮಾತ್ರ ಜನರ ಕಣ್ಣ ಮುಂದೆ ಬರುತ್ತಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು.


ಇದನ್ನೂ ಓದಿ: ಪುನೀತ್ ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್! ಅಪ್ಪು ಸ್ಮರಿಸಿಕೊಂಡ ಅರವಿಂದ್ ಕೇಜ್ರಿವಾಲ್


ಏತನ್ಮಧ್ಯೆ, ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ. ಈ ಚಿತ್ರವು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಬಗ್ಗೆ ಮತ್ತು ದೈವಿಕ ನೃತ್ಯ ರೂಪವಾದ ಭೂತ ಕೋಲದ ಮೂಲಕ ಹೇಳಲಾಗಿದೆ. ರಿಷಬ್ ಶೆಟ್ಟಿ ಜೊತೆಗೆ ಅಚ್ಯುತ್ ಕುಮಾರ್, ಕಿಶೋರ್, ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by:Sandhya M
First published: