• Home
  • »
  • News
  • »
  • entertainment
  • »
  • Kantara Break KGF Record: ಬಾಲಿವುಡ್​​ನಲ್ಲಿ ಕೆಜಿಎಫ್ ದಾಖಲೆ ಬ್ರೇಕ್ ಮಾಡ್ತಿದೆ ಕಾಂತಾರ! ತರಣ್ ಆದರ್ಶ್ ಹೇಳಿದ್ದಿಷ್ಟು

Kantara Break KGF Record: ಬಾಲಿವುಡ್​​ನಲ್ಲಿ ಕೆಜಿಎಫ್ ದಾಖಲೆ ಬ್ರೇಕ್ ಮಾಡ್ತಿದೆ ಕಾಂತಾರ! ತರಣ್ ಆದರ್ಶ್ ಹೇಳಿದ್ದಿಷ್ಟು

ಬಾಲಿವುಡ್ ಅಂಗಳದಲ್ಲಿ ಕಾಂತಾರ ಖದರ್

ಬಾಲಿವುಡ್ ಅಂಗಳದಲ್ಲಿ ಕಾಂತಾರ ಖದರ್

ಬಾಲಿವುಡ್ ನಲ್ಲಿ ಕಾಂತಾರ ತನ್ನ ಮೋಡಿ ಮುಂದುವರೆಸಿದೆ. ಈ ಮೋಡಿಯಿಂದಲೇ ಬಾಲಿವುಡ್​ ನಲ್ಲಿ ಕಲೆಕ್ಷನ್ ಲೆಕ್ಕ ಜೋರಾಗಿಯೇ ಏರುತ್ತಿದೆ. ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಸಿನಿಮಾ ಕೂಡ ಇದರ ಮುಂದೆ ನಿಂತಿಯೇ ಇಲ್ಲ. ಅದು ಡಲ್ ಆಗಿ ಬಿಟ್ಟಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬಾಲಿವುಡ್​ ನಲ್ಲಿ ಕಾಂತಾರ (Kantara Hindi Version) ಕಮಾಲ್ ಮಾಡ್ತಾನೇ ಇದೆ. ಈ ಹಿಂದಿನ ಎಲ್ಲ ಸಿನಿಮಾಗಳನ್ನ ದಾಖಲೆಯನ್ನು ಉಡೀಸ್ ಮಾಡ್ತಾನೇ ಇದೆ. ದೀಪಾವಳಿ (Festival) ಹಬ್ಬಕ್ಕೆ ಬಂದ ಹಿಂದಿ ಸಿನಿಮಾಗಳ ಕಲೆಕ್ಷನ್ ಕೂಡ ಕಾಂತಾರ ಚಿತ್ರದ ಮುಂದೆ ಫುಲ್ (Full Dull) ಡಲ್ ಆಗಿವೆ. ಯಾವ ಸಿನಿಮಾಗಳೂ ಕನ್ನಡದ ಕಾಂತಾರ ಮುಂದೆ ನಿಂತಿಯೇ ಇಲ್ಲ. ಬಾಲಿವುಡ್ ಟ್ರೇಡ್ ಪಂಡಿತರು ದಕ್ಷಿಣದ ಕಾಂತಾರ ಸಿನಿಮಾವನ್ನ ಹೊಗಳುತ್ತಲೇ ಇದ್ದಾರೆ. ಬಾಲಿವುಡ್ ಪಂಡಿತರ ಲೆಕ್ಕದ ಪ್ರಕಾರ ಕನ್ನಡದ ಹಿಂದಿ ಭಾಷೆಯ ಕಾಂತಾರ ಚಿತ್ರದ ಓಟವನ್ನ ಸದ್ಯಕ್ಕೆ (Unstoppable) ಸ್ಟಾಪ್ ಮಾಡಲು ಆಗೋದೇ ಇಲ್ಲ ಅನ್ನೋ ಮಟ್ಟಿಗೆ ಅಭಿಪ್ರಾಯ ಪಟ್ಟಿದ್ದಾರೆ. ಆ ಅಭಿಪ್ರಾಯದ ಸುತ್ತದ ಒಂದು ಸ್ಟೋರಿ ಇಲ್ಲಿದೆ ಓದಿ.


ಬಾಲಿವುಡ್ ನಲ್ಲಿ ಅಂದು ಕೆಜಿಎಫ್ ಇಂದು ಕಾಂತಾರ


ಕಾಂತಾರ ಸಿನಿಮಾ ಹಿಟ್ ಆಗಿದೆ. ಡಿವೈನ್ ಬ್ಲಾಕ್ ಬಸ್ಟರ್ ಹಿಟ್ ಅನ್ನೋದು ಅಷ್ಟೇ ಸತ್ಯ. ಕನ್ನಡದಲ್ಲಿ ಮೋಡಿ ಮಾಡಿದ ಕಾಂತಾರ ಹಿಂದಿ ಭಾಷೆಯಲ್ಲೂ ಅದೇ ಮೋಡಿಯನ್ನ ಮುಂದುವರೆಸಿದೆ.


ಕಾಂತಾರ ಸಿನಿಮಾ ಮೆಚ್ಚಿದ ಹಿಂದಿ ಭಾಷಿಗರು ದಕ್ಷಿಣದ ಈ ಚಿತ್ರವನ್ನ ನೋಡ್ತಾನೇ ಇದ್ದಾರೆ. ಇದರಿಂದ ಸಿನಿಮಾ ಕಲೆಕ್ಷನ್ ಕೂಡ ಎಲ್ಲೂ ಡೌನ್ ಆಗಿಲ್ಲ. ಅದು ಅಪ್, ಅಪ್ ಅನ್ನೋ ಹಾಗೆ ಮೇಲೆ ಹೋಗ್ತಾನೇ ಇದೆ.


ಬಾಲಿವುಡ್ ಅಂಗಳದಲ್ಲಿ ಕಾಂತಾರ ಖದರ್


ಬಾಲಿವುಡ್ ನಲ್ಲಿ ಕಾಂತಾರ ತನ್ನ ಮೋಡಿ ಮುಂದುವರೆಸಿದೆ. ಈ ಮೋಡಿಯಿಂದಲೇ ಬಾಲಿವುಡ್​ ನಲ್ಲಿ ಕಲೆಕ್ಷನ್ ಲೆಕ್ಕ ಜೋರಾಗಿಯೇ ಏರುತ್ತಿದೆ. ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಸಿನಿಮಾ ಕೂಡ ಇದರ ಮುಂದೆ ನಿಂತಿಯೇ ಇಲ್ಲ. ಅದು ಡಲ್ ಆಗಿ ಬಿಟ್ಟಿದೆ.


Kantara Hindi Version Film Beat KGF Part-1 Record
ಕಾಂತಾರ 3 ನೇ ವಾರಕ್ಕೆ 50 ಕೋಟಿ ಕ್ರಾಸ್-ತರಣ್ ಆದರ್ಶ್


ಕಾಂತಾರ ಸಿನಿಮಾದ ಕ್ರೇಜ್ ಎಷ್ಟಿದೆ ಅಂದ್ರೆ, ಕನ್ನಡದ ಈ ಹಿಂದಿನ KGF ಕ್ರೇಜ್ ಅನ್ನೂ ಕಾಂತಾರ ಕೇವಲ 19 ದಿನಕ್ಕೇನೆ ದಾಟಿದೆ. ಇದನ್ನ ನಾವು ಸುಮ್ನೆ ಹೇಳುತ್ತಿಲ್ಲ. ಬಾಲಿವುಡ್ ನ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅಂದಾಜು ಮಾಡಿದ್ದಾರೆ. ಅದು ಇಂತಿದೆ.


ಇದನ್ನೂ ಓದಿ: Daali Dhananjaya: ಮತ್ತೆ ಒಂದಾದ ರತ್ನನ್ ಪ್ರಪಂಚದ ಜೋಡಿ! ಡಾಲಿ ಧನಂಜಯ್​ಗೆ ರೋಹಿತ್ ಪದಕಿ ಮತ್ತೊಂದು ಸಿನಿಮಾ


ಕಾಂತಾರ 3 ನೇ ವಾರಕ್ಕೆ 50 ಕೋಟಿ ಕ್ರಾಸ್-ತರಣ್ ಆದರ್ಶ್


ಕಾಂತಾರ ಹಿಂದಿ Version ಸಿನಿಮಾ ಕೆಜಿಎಫ್ ಪಾರ್ಟ್​-1 ಚಿತ್ರದ ಆ ಬಜ್​ ಅನ್ನೂ ದಾಟಲಿದೆ. ಮೊದಲ ವಾರ ಮತ್ತು ಎರಡನೇ ವಾರ ಎರಡನ್ನೂ ಹೋಲಿಸಿದ್ರೆ, ಮೂರನೇ ವಾರ ಕಾಂತಾರ ಸಿನಿಮಾದ ಕಲೆಕ್ಷನ್ 50 ಕೋಟಿ ಕ್ರಾಸ್ ಆಗಲಿದೆ.


Kantara Hindi Version Film Beat KGF Part-1 Record
ಬಾಲಿವುಡ್ ನಲ್ಲಿ ಅಂದು ಕೆಜಿಎಫ್ ಇಂದು ಕಾಂತಾರ


ಈ ಹಿಂದೆ ಕೆಜಿಎಫ್ ಚಿತ್ರದ ಬಜ್ ಕೂಡ ಇದೇ ರೀತಿ ಇತ್ತು. ಇದು ಒಂದು ರೀತಿ ಲೈಫ್​​ಟೈಮ್ ಬಜ್ ಆಗಿತ್ತು. ಆದರೆ ಆ ದಾಖಲೆಯನ್ನ ಈಗ ಕಾಂತಾರ ಬ್ರೇಕ್ ಮಾಡುತ್ತಿದೆ ಅಂತಲೂ ತರಣ್ ದರ್ಶನ್ ಅಂದಾಜು ಮಾಡಿದ್ದಾರೆ.


ಇದನ್ನೂ ಓದಿ: PHOTOS: ಮೇಕಪ್ ಇಲ್ಲದೇ ಕಾಣಿಸಿಕೊಂಡ ನುಸ್ರತ್ ಜಹಾನ್, ಸರ್ಜರಿ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು!


ಇದೇ ತರಣ್ ಆದರ್ಶ್ ಕಾಂತಾರ ಹಿಂದಿ ವರ್ಶನ್ ವಾರಾಂತ್ಯದ ಲೆಕ್ಕ ಕೊಟ್ಟಿದ್ದರು. ಹಾಗೇನೆ ಈಗ ಸೋಮವಾರ ಹಾಗೂ ಮಂಗಳವಾರದ ಲೆಕ್ಕವೂ ಹೊರ ಬಿದ್ದಿದೆ. ಅದು ಹೀಗಿದೆ ನೋಡಿ.


ಶುಕ್ರವಾರ:2.75 ಕೋಟಿ,
ಶನಿವಾರ 4.10 ಕೋಟಿ,
ಭಾನುವಾರ 4.40 ಕೋಟಿ,
ಸೋಮವಾರ 2.30 ಕೋಟಿ,
ಮಂಗಳವಾರ 2.30 ಕೋಟಿ.
ಒಟ್ಟು: 47.55 ಕೋಟಿ


ಬಾಲಿವುಡ್​ ನಲ್ಲಿ ಕಾಂತಾರದ ಕಲೆಕ್ಷನ್ ಖದರ್ ಬಲು ಜೋರಾಗಿಯೇ ಇದೆ. ಮೂರನೇ ವಾರವೂ ಸಿನಿಮಾ ಓಟ ನಿಲ್ತಾನೇ ಇಲ್ಲ. ಅಷ್ಟು ಜೋರಾಗಿಯೇ ಕಾಂತಾರ ಸಿನಿಮಾ ಓಡ್ತಾನೇ ಇದ್ದು, ಸದ್ಯಕ್ಕಂತೂ ಇದರ ಓಟ ನಿಲ್ಲೋ ಹಾಗೆ ಕಾಣ್ತಾನೇ ಇಲ್ಲ.

First published: