• Home
  • »
  • News
  • »
  • entertainment
  • »
  • Kantara Movie: ಹಿಂದಿಯಲ್ಲೂ ಕಾಂತಾರ ಅಬ್ಬರ! ವೀಕೆಂಡ್‌ನಲ್ಲಿ ಬಾಚಿಕೊಂಡ ಹಣವೆಷ್ಟು?

Kantara Movie: ಹಿಂದಿಯಲ್ಲೂ ಕಾಂತಾರ ಅಬ್ಬರ! ವೀಕೆಂಡ್‌ನಲ್ಲಿ ಬಾಚಿಕೊಂಡ ಹಣವೆಷ್ಟು?

ಕಾಂತಾರ

ಕಾಂತಾರ

ಹಿಂದಿ (Hindi) ಭಾಷೆಯ ಕಾಂತಾರ ಬಿಡುಗಡೆಯಾದ (Release) ದಿನದಿಂದ ಭರ್ಜರಿಯಾಗಿಯೇ ಸದ್ದುಮಾಡುತ್ತಿದ್ದು ಊಹಿಸ್ದಕ್ಕಿಂತಲೂ ಹೆಚ್ಚಿನ ದಾಖಲೆಯನ್ನು ನಿರ್ಮಿಸುತ್ತಲೇ ಇದೆ. ಟ್ರೇಡ್ ವರದಿಗಳ ಪ್ರಕಾರ, ಅಕ್ಟೋಬರ್ 16 ರ ಶನಿವಾರದ ದಾಖಲೆಗಳಿಗೆ ಹೋಲಿಸಿದರೆ ಕನ್ನಡದ ಹಿಂದಿ ಆವೃತ್ತಿಯ ಕಾಂತಾರ ಚಿತ್ರವು ಅಕ್ಟೋಬರ್ 16 ರ ಭಾನುವಾರದಂದು ದುಪ್ಪಟ್ಟು ಲಾಭ ಗಳಿಸಿ ದಾಖಲೆ ಸೃಷ್ಟಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ರಿಷಬ್ ಶೆಟ್ಟಿ ಅಭಿನಯದ ಕಾಂತಾರ (Kantara) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಹವಾ ಸೃಷ್ಟಿಸುತ್ತಿದೆ. ಇತ್ತೀಚೆಗಷ್ಟೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕೂಡ ಬಿಡುಗಡೆಯಾದ ಕಾಂತಾರ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಹಿಂದಿ (Hindi) ಭಾಷೆಯಲ್ಲಿ ಕಾಂತಾರ ಬಿಡುಗಡೆಯಾದ (Release) ದಿನದಿಂದ ಭರ್ಜರಿಯಾಗಿಯೇ ಸದ್ದು ಮಾಡುತ್ತಿದ್ದು ಊಹಿಸಿದ್ದಕ್ಕಿಂತ ಹೆಚ್ಚಿನ ದಾಖಲೆಯನ್ನು ನಿರ್ಮಿಸುತ್ತಲೇ ಇದೆ. ಟ್ರೇಡ್ ವರದಿಗಳ ಪ್ರಕಾರ, ಅಕ್ಟೋಬರ್ 16 ರ ಶನಿವಾರದ ದಾಖಲೆಗಳಿಗೆ ಹೋಲಿಸಿದರೆ ಕನ್ನಡದ ಹಿಂದಿ ಆವೃತ್ತಿಯ ಕಾಂತಾರ ಚಿತ್ರವು ಅಕ್ಟೋಬರ್ 16 ರ ಭಾನುವಾರದಂದು ದುಪ್ಪಟ್ಟು ಲಾಭ ಗಳಿಸಿ ದಾಖಲೆ ಸೃಷ್ಟಿಸಿದೆ. ಚಿತ್ರ ಇತ್ತೀಚೆಗೆ ವಿಶ್ವದಾದ್ಯಂತ  100 ಕೋಟಿ ರೂ ಗಿಂತಲೂ ಅಧಿಕ ಹಣವನ್ನು ಬಾಚಿಕೊಂಡಿದೆ ಮತ್ತು ನಾಗಲೋಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ (Box Office) ಇನ್ನೂ ಪ್ರಬಲವಾಗಿ ಸಾಗುತ್ತಿದೆ.


ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಸದ್ದುಮಾಡುತ್ತಿರುವ ಕಾಂತಾರ ಹಿಂದಿ ಅವತರಣಿಕೆ
ರಿಷಭ್ ಶೆಟ್ಟಿಯವರ ಕಾಂತಾರ ಚಿತ್ರವು ಯಶ್‌ ಅಭಿನಯದ ಕೆಜಿಎಫ್ 2 ವನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಹಾಗೂ ಅತ್ಯಧಿಕ ರೇಟಿಂಗ್ ಪಡೆದುಕೊಂಡ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಇದನ್ನೂ ಓದಿ: Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ


ಚಿತ್ರ ಬಿಡುಡೆಯಾದ ದಿನದಿಂದಲೂ ವಿಭಿನ್ನ ಕಥೆ, ಕಥಾಪಾತ್ರ, ಪ್ರಕೃತಿ ಹಾಗೂ ಮಾನವನ ನಡುವಿನ ಹೋರಾಟದ ವಿಶಿಷ್ಟ ಕಥಾಹಂದರವುಳ್ಳ ಚಿತ್ರವನ್ನು ಕರುನಾಡ ಜನತೆ ಒಪ್ಪಿಕೊಂಡಂತೆ ಹಿಂದಿ ಭಾಷಿಗರೂ ಬಹುಪರಾಕ್ ಹೇಳಿದ್ದಾರೆ. ಪ್ರೇಕ್ಷಕರೂ ಕೂಡ ಚಿತ್ರಕ್ಕೆ ಉತ್ತಮ ವಿಮರ್ಶೆಗಳನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಭರ್ಜರಿ ಕಲೆಕ್ಶನ್ ಸೃಷ್ಟಿಸುತ್ತಿರುವ ಹಿಂದಿ ಕಾಂತಾರ
ಸಿನಿ ಮಾರುಕಟ್ಟೆ ಅಂಕಿ ಅಂಶಗಳ ಪ್ರಕಾರ ಕಾಂತಾರ ಹಿಂದಿ ಅವತರಣಿಕೆ ಮೂರನೇ ದಿನದ ಕಲೆಕ್ಶನ್ ಹಿಂದಿನ ಎರಡು ದಿನಗಳಿಗಿಂತ ಹೆಚ್ಚಾಗಿದೆ. ಮೂರನೇ ದಿನದಂದು ಕಾಂತಾರ ಬೆಳವಣಿಗೆಯನ್ನು ದುಪ್ಪಟ್ಟಾಗಿಸಿಕೊಂಡಿದೆ. ಚಿತ್ರವು 4.28 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಚಿತ್ರದ ಮೊದಲ ದಿನದ ಕಲೆಕ್ಷನ್ ಅನ್ನು 8.30 ಕೋಟಿ ರೂ ಆಗಿದ್ದು, ಚಿತ್ರವು ಪಡೆದುಕೊಂಡಿರುವ ಧನಾತ್ಮಕ ವಿಮರ್ಶೆಗಳಿಂದಾಗಿ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ದಾಖಲೆ ಮಾಡುವ ನಿರೀಕ್ಷೆ ಇದೆ.


ವಿಶ್ವದಾದ್ಯಂತ 100 ಕೋಟಿಗಿಂತ ಹೆಚ್ಚಿನ ದಾಖಲೆ
ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಹೇಳುವಂತೆ ಕಾಂತಾರ ವಿಶ್ವದಾದ್ಯಂತ 100 ಕೋಟಿ ಮೊತ್ತವನ್ನು ಮೀರಿ ದಾಖಲೆ ಸೃಷ್ಟಿಸಿದೆ. ಚಿತ್ರವು ಹೆಚ್ಚಿನ ದಾಖಲೆಯನ್ನು ಕನ್ನಡ ಆವೃತ್ತಿಯಿಂದಲೇ ಪಡೆದುಕೊಂಡಿದೆ ಎಂದು ರಮೇಶ್ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂತಿಕೊಂಡಿರುವ ರಮೇಶ್, ಹೆಚ್ಚಿನ ಗಳಿಕೆ ಕನ್ನಡ ಆವೃತ್ತಿಯಿಂದಲೇ ದೊರಕಿದೆ ಎಂದು ತಿಳಿಸಿದ್ದಾರೆ.


ಕಾಂತಾರ ಚಿತ್ರ ಪ್ರಕೃತಿ ಹಾಗೂ ಮಾನವನರ ನಡುವಿನ ಹೋರಾಟಕ್ಕೆ ಸಾಕ್ಷಿ
ಕಾಂತಾರ ಚಿತ್ರವು ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು ಭೂತಕೋಲದ ಅಂಶಗಳನ್ನು ಒಳಗೊಂಡಿದೆ. ಭೂತಕೋಲವು ದೈವದ ಸಾಂಪ್ರದಾಯಿಕ ನರ್ತನಾಗಿದ್ದು ತುಳುನಾಡಿನಲ್ಲಿ ಈ ದೈವಗಳನ್ನು ಪೂಜನೀಯವಾಗಿ ಕಾಣುತ್ತಾರೆ ಹಾಗೂ ದೇವರನ್ನು ಕಾಯುವವರು ಎಂದೇ ಪೂಜಿಸುತ್ತಾರೆ. ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ದೈವವೇ ಪರಿಹಾರವನ್ನು ನೀಡುತ್ತದೆ ಎಂಬುದು ತುಳುನಾಡಿಗರ ನಂಬಿಕೆಯಾಗಿದೆ. ಆ ನಂಬಿಕೆಯನ್ನು ಚಿತ್ರದಲ್ಲಿ ರಿಷಭ್ ಜೀವಂತಗೊಳಿಸಿದ್ದಾರೆ ಹಾಗೂ ಸ್ವತಃ ದೈವ ನರ್ತಕರಾಗಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


ಇದನ್ನೂ ಓದಿ:  Kantara: ಕಾಂತಾರವನ್ನು ನೀವ್ಯಾಕೆ ನೋಡಬೇಕು? ಇಲ್ಲಿದೆ ಓದಿ ಮಹತ್ವದ ಕಾರಣ!


ಪ್ರಕೃತಿಗೆ ಸವಾಲೊಡ್ಡುವ ಮಾನವ ಹಾಗೂ ಅನ್ಯಾಯದಿಂದ ಹಳ್ಳಿಗರಿಗೆ ನ್ಯಾಯ ಒದಗಿಸಿಕೊಡುವ ದೈವದ ವಿಶಿಷ್ಟವಾದ ಕಥಾ ಹಂದರ ಚಿತ್ರದಲ್ಲಿದೆ. ಚಿತ್ರಕಥೆಯನ್ನು ಸ್ವತಃ ರಿಷಭ್ ಅವರೇ ಬರೆದಿದ್ದು ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಅತಿರಥರ ತಾರಾಗಣವೇ ಇದ್ದು ಅತ್ಯುತ್ತಮವಾಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ ಕುಮಾರ್, ಸಪ್ತಮಿ ಗೌಡ ಹಾಗೂ ಪ್ರಮೋದ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ.

Published by:Ashwini Prabhu
First published: