ರಿಷಬ್ ಶೆಟ್ಟಿ (Rishab Shetty) ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ದುಬೈ (Dubai) ಪ್ರವಾಸಕ್ಕೆ ತೆರಳಿದ್ದರು. ಈ ಬಗ್ಗೆ ನಟ ಕೂಡಾ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಫ್ಯಾಮಿಲಿ ವೆಕೇಷನ್ (Family Vacation) ಬಗ್ಗೆ ಮಾತನಾಡಿ, ಎಲ್ಲವನ್ನೂ ನನ್ನ ಪತ್ನಿಯೇ ಮ್ಯಾನೇಜ್ ಮಾಡುತ್ತಾರೆ. ಅವರು ಎಲ್ಲವನ್ನೂ ರೆಡಿ ಮಾಡುತ್ತಾರೆ ಎಂದು ಹೇಳಿದ್ದರು. ಈಗ ಕಾಂತಾರದ (Kantara) ಹೀರೋ ರಿಷಬ್ ಅವರು ಪತ್ನಿ ಪ್ರಗತಿ ಶೆಟ್ಟಿ ಜೊತೆ ದುಬೈ ಸುತ್ತಾಡಿ ಬಂದಿದ್ದಾರೆ. ಅವರ ವೆಕೇಷನ್ನಲ್ಲಿ ಸುತ್ತಾಡಿದ ವಿಡಿಯೋವನ್ನು (Video) ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
ದುಬೈ ಸಾಟಿಯಿಲ್ಲದ ಅನುಭವ!
ದುಬೈ ಸಾಟಿಯಿಲ್ಲದ ಅನುಭವ ಎಂದು ಕ್ಯಾಪ್ಶನ್ ಕೊಟ್ಟು ಪ್ರಗತಿ ಶೆಟ್ಟಿ ಅವರು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮೋಡಿಮಾಡುವ, ಮೋಹಕವಾಗಿರುವ ಮತ್ತು ಚಿಕ್ಕ ಮಕ್ಕಳಿಗೆ ಕೆಲವೊಮ್ಮೆ ಆಶ್ಚರ್ಯಕರ ಎನಿಸುವ ದುಬೈ. ಅಲ್ಲಿನ ವಾತಾವರಣ ಮತ್ತು ಆತಿಥ್ಯ ತುಂಬಾ ಚೆನ್ನಾಗಿದೆ. ಕುಟುಂಬದೊಂದಿಗೆ ಅದ್ಭುತ ಸಮಯವನ್ನು ಕಳೆದೆವು ಎಂದು ಬರೆದಿದ್ದಾರೆ.
ಇದರಲ್ಲಿ ಪ್ರಗತಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮಕ್ಕಳೊಂದಿಗೆ ದುಬೈಗೆ ಹೊರಡುವಲ್ಲಿಂದ ಅಲ್ಲಿ ಎಂಜಾಯ್ ಮಾಡಿದ ಪ್ರತಿ ಘಟನೆ, ವಿಸಿಟ್ ಮಾಡಿದ ಸ್ಥಳ ಎಲ್ಲವನ್ನೂ ಸೇರಿಸಿ ವಿಡಿಯೋವನ್ನು ರೆಡಿ ಮಾಡಲಾಗಿದೆ. ಟನಲ್ ಅಕ್ವೇರಿಯಂನಲ್ಲಿ ಪ್ರಗತಿ ಶೆಟ್ಟಿ ಅವರ ಮಗ ರಣ್ವಿತ್ ದೊಡ್ಡ ದೊಡ್ಡ ಮೀನುಗಳನ್ನು ನೋಡಿ ಅಚ್ಚರಿಪಡುವಲ್ಲಿಂದ ತೊಡಗಿ, ಡಾಲ್ಫಿನ್ ಶೋ, ಕ್ರೂಸ್ ಟ್ರಿಪ್, ಕೆಲವು ಸಾಹಸಮಯ ಗೇಮ್ಗಳನ್ನು ಕಾಣಬಹುದು.
ಆಕಾಶದೆತ್ತರ ಹಾರುವ ಒಂದು ಗೇಮ್ನಲ್ಲಿ ಅಂತೂ ರಣ್ವಿತ್ ಭಯದಲ್ಲಿ ಕಿರುಚುತ್ತಿದ್ದರೆ ರಿಷಬ್ ಶೆಟ್ಟಿ ಅವರು ಜೋರಾಗಿ ನಗುತ್ತಿದ್ದರು. ಪ್ರಗತಿ ಶೆಟ್ಟಿ ಅವರೂ ಈ ಎಲ್ಲ ಗೇಮ್ಸ್, ಮೊಮೆಂಟ್ಗಳನ್ನು ಎಂಜಾಯ್ ಮಾಡಿದ್ದಾರೆ.
ಮರಳುಗಾಡಿನಲ್ಲಿ ಸವಾರಿ
ಮರಳುಗಾಡಿನಲ್ಲಿ ಸವಾರಿ ಮಾಡಿರುವ ಜೋಡಿ ಸಖತ್ ಎಂಜಾಯ್ ಮಾಡಿದ್ದಾರೆ. ದುಬೈನ ಮರಳಿನಲ್ಲಿ ವಿಶೇಷ ಗಾಡಿ ಓಡಿಸೋದನ್ನು ಪ್ರವಾಸಿಗರು ಮಿಸ್ ಮಾಡುವುದೇ ಇಲ್ಲ. ರಿಷಬ್ ಅವರು ಗಾಡಿ ಓಡಿಸಿದರೆ ರಣ್ವಿತ್ ಹಾಗೂ ಪ್ರಗತಿ ಶೆಟ್ಟಿ ಅವರಿಗೆ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: Pragathi Shetty: ಪ್ರಗತಿ ಶೆಟ್ಟಿ ಸ್ಪೆಷಲ್ ಪೋಸ್ಟ್! 2022ರ ಬಗ್ಗೆ ರಿಷಬ್ ಪತ್ನಿ ಏನಂದ್ರು?
ಮಕ್ಕಳಿಗೆ ಸೂಪರ್ ಫನ್
ರಣ್ವಿತ್ ಶೆಟ್ಟಿ ದುಬೈ ಪ್ರವಾಸವನ್ನು ಸಖತ್ತಾಗಿ ಎಂಜಾಯ್ ಮಾಡಿದ್ದು ಎಲ್ಲವನ್ನೂ ಅಚ್ಚರಿಯಿಂದ ವೀಕ್ಷಿಸಿದ್ದು ಮುದ್ದಾಗಿ ವಿಡಿಯೋದಲ್ಲಿ ದಾಖಲಾಗಿದೆ. ಎಲ್ಲವನ್ನೂ ವಿಶೇಷ ಆಸಕ್ತಿಯಿಂದ ಕಣ್ಣರಳಿಸಿ ನೋಡಿ ಅಚ್ಚರಿಪಟ್ಟ ಪುಟ್ಟ ಮಗನನ್ನು ನೋಡಿ ರಿಷಬ್ ದಂಪತಿ ಕೂಡಾ ಖುಷ್ ಆಗಿದ್ದಾರೆ.
ಅವರು ಜೊತೆಯಾಗಿ ನೈಟ್ ಡಿನ್ನರ್ ಎಂಜಾಯ್ ಮಾಡುವುದು, ಡ್ಯಾನ್ಸ್, ಶೋಗಳನ್ನು ನೋಡಿ ಎಂಜಾಯ್ ಮಾಡಿದ್ದು ಇದೆಲ್ಲವೂ ತುಂಬಾ ಸುಂದರವಾಗಿ ಮೂಡಿ ಬಂದಿದೆ.
ವೈರಲ್ ಆಯ್ತು ವೆಕೇಷನ್ ವಿಡಿಯೋ
ಈ ವಿಡಿಯೋ ಸಖತ್ ವೈರಲ್ ಆಗಿದ್ದು ಅಭಿಮಾನಿಗಳೆಲ್ಲ ರಣ್ವಿತ್ ಅವರ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ರಣ್ವಿತ್ ಅಚ್ಚರಿ ವ್ಯಕ್ತಪಡಿಸುವುದನ್ನೇ ಎಲ್ಲರೂ ಗಮನಿಸಿದ್ದು ಡಾಲ್ಫಿನ್ ಶೋ ನೋಡಿ ಕೊಟ್ಟ ಎಕ್ಸ್ಪ್ರೆಷನ್ ಮೆಚ್ಚಿಕೊಂಡಿದ್ದಾರೆ.
ಅದೇ ರೀತಿ ಅಮ್ಮ ಹಾರಿದಾಗ ಜೋರಾಗಿ ಅತ್ತ ರಣ್ವಿತ್ನ ಕ್ಯೂಟ್ನೆಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ವೆಕೇಷನ್ ವಿಡಿಯೋಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 381ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ