ಇಯರ್ ಎಂಡರ್ನಲ್ಲಿ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ರೀಕ್ಯಾಪ್ ವಿಡಿಯೋಗಳನ್ನು (Video) ಶೇರ್ ಮಾಡುತ್ತಾರೆ. ತಮ್ಮ ಕಳೆದ ವರ್ಷ ಹೇಗೆ ನಡೆದಿತ್ತು? ಯಾವ್ಯಾವ ಮುಖ್ಯ ಘಟನೆ ಆಯಿತು? ಲೈಫ್ ಹೇಗೆ ಇತ್ತು? ಏನು ಕಷ್ಟಗಳು ಎದುರಾದವು? ಏನು ಒಳ್ಳೆಯ ಘಟನೆಗಳು ನಡೆದವು ಎಂದು ಬಹಳಷ್ಟು ವಿಚಾರಗಳನ್ನು ಎಲ್ಲವನ್ನೂ ಒಂದೇ ವಿಡಿಯೋದಲ್ಲಿ ಸೇರಿಸಿ ಶೇರ್ ಮಾಡುತ್ತಾರೆ. ಇದೀಗ ಪ್ರಗತಿ ಶೆಟ್ಟಿ (Pragathi shetty) ಅವರೂ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಕಾಂತಾರ (Kanatar) ಹೀರೋ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು 2022ರ ವಿಡಿಯೋ (Video) ಶೇರ್ ಮಾಡಿದ್ದಾರೆ. ಇದರಲ್ಲಿ ಅವರ 2022ರ ಚಿಕ್ಕ ಝಲಕ್ ಕಾಣಬಹುದು.
ರೀಕ್ಯಾಪ್ ವಿಡಿಯೋ ಶೇರ್ ಮಾಡಿದ ಪ್ರಗತಿ ಶೆಟ್ಟಿ
2022 ನನಗೂ ನನ್ನ ಕುಟುಂಬಕ್ಕೂ ಒಂದು ಅದ್ಭುತ ವರ್ಷವಾಗಿತ್ತು. ಇದು ನನ್ನನ್ನು ಮತ್ತೊಮ್ಮೆ ತಾಯಿ ಮಾಡಿತು. ರಾಧ್ಯ ನಮ್ಮ ಜೀವನದೊಂದಿಗೆ ಸೇರಿಕೊಂಡು ನಮ್ಮ ಜೀವನವನ್ನು ಮತ್ತಷ್ಟು ಸುಂದರವಾಗಿಸಿದಳು.
777ಚಾರ್ಲಿಯ ಭಾಗವಾಗಿದ್ದಕ್ಕೆ ಖುಷಿ ಇದೆ. ಕಾಂತಾರವನ್ನು ಕೊಟ್ಟಿದ್ದಕ್ಕೆ ಜಗತ್ತಿಗೆ ಧನ್ಯವಾದಗಳು. ಬಹಳಷ್ಟು ಖುಷಿ, ಧನ್ಯತೆ, ಆಕಾಂಕ್ಷೆಯೊಂದಿಗೆ 2023ಕ್ಕೆ ಕಾಲಿಡುತ್ತಿದ್ದೇವೆ. ಲವ್ ಯೂ ಆಲ್ ಎಂದು ಪ್ರಗತಿ ಶೆಟ್ಟಿ ಅವರು ವಿಡಿಯೋ ಪೋಸ್ಟ್ಗೆ ಕ್ಯಾಪ್ಶನ್ ಬರೆದಿದ್ದಾರೆ.
ವೈರಲ್ ಆಯ್ತು ವಿಡಿಯೋ
ಪ್ರಗತಿ ಶೆಟ್ಟಿ ವಿಡಿಯೋ ಶೇರ್ ಮಾಡಿದ ಕೂಡಲೇ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಪ್ರಗತಿ ಶೆಟ್ಟಿ ಅವರ ವಿಡಿಯೋವನ್ನು ಮೆಚ್ಚಿಕೊಂಡಿದ್ದು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
ಅಭಿಮಾನಿಯಿಂದ ಶುಭ ಹಾರೈಕೆ
ಅಭಿಮಾನಿಯೊಬ್ಬರು ಕಮೆಂಟ್ ಮಾಡಿ ಹೊಸ ವರ್ಷದ ಶುಭಾಶಯಗಳು ಅಕ್ಕ, ನಿಮ್ಮ ಹಾಗೂ ರಿಷಭ್ ಶೆಟ್ಟಿಯವರ ಯಶಸ್ವಿ ಪಯಣ ಹೀಗೆ ಮುಂದುವರೆಯಲಿ, ನಿಮ್ಮಿಬ್ಬರ ಯಶಸ್ಸಿನಲ್ಲಿ ಒಬ್ಬೊರಿಗೊಬ್ಬರ ಬೆಂಬಲ ಬೇರೆಯವರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Fahad Faasil-Rishab Shetty: ಪುಷ್ಪಾ ನಟನ ಜೊತೆ ರಿಷಬ್ ದಂಪತಿ! ಪ್ರಗತಿ ಶೆಟ್ಟಿ ಏನಂದ್ರು?
ಇನ್ನೊಬ್ಬರು ಅಭಿಮಾನಿ ಕಮೆಂಟ್ ಮಾಡಿ ನನ್ನ ಮಗಳಿಗೂ ನಿಮ್ಮಂತೆಯೇ ಸುಂದರವಾದ ಗುಂಗುರು ಕೂದಲಿದೆ. ಶುಭವಾಗಲಿ ಎಂದು ಹಾರೈಸಿದ್ದಾರೆ. ನಟಿಯ ಪೋಸ್ಟ್ಗೆ ಲೈಕ್ಸ್ ಕೊಟ್ಟು ಜನರು ಕಮೆಂಟ್ ಮೂಲಕ ವಿಶ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ ಪ್ರಗತಿ
ರಿಷಬ್ ಶೆಟ್ಟಿ ಅವರ ಪತ್ನಿ ಕಾಂತಾರ ಸಿನಿಮಾದಲ್ಲಿ ರಾಣಿಯ ಪಾತ್ರವನ್ನು ಮಾಡಿದ್ದರು. ಅವರು ರಾಣಿಯ ಪಾತ್ರ ಮಾಡಿದ್ದರು ಎನ್ನುವುದನ್ನು ಯಾರೂ ನಂಬಿರಲಿಲ್ಲ. ಪ್ರಗತಿ ಅವರು ರಿಷಬ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಈ ಜೋಡಿಗೆ ರಣ್ವಿತ್ ಹಾಗೂ ರಾಧ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಫ್ಯಾಮಿಲಿ ಫೋಟೋಗಳನ್ನು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
62 ಸಾವಿರ ಫಾಲೋವರ್ಸ್
ಸದ್ಯ ಪ್ರಗತಿ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 62 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಕಾಂತಾರ ಸಕ್ಸಸ್ಗೂ ಮುನ್ನ ಇದು ಇಷ್ಟು ಹೆಚ್ಚಿರಲಿಲ್ಲ. ಆದರೆ ಈಗ ಕಾಂತಾರ ಸಿನಿಮಾದ ಸಕ್ಸಸ್ ನಂತರ ಭರ್ಜರಿಯಾಗಿ ಫ್ಯಾನ್ಸ್ ಫಾಲೋವರ್ಸ್ಗನ್ನು ಗಳಿಸಿಕೊಂಡಿದ್ದಾರೆ.
ಇನ್ನು ಕಾಂತಾರ 2 ಸಿನಿಮಾ ಸೆಟ್ಟೇರಲಿದ್ದು ಇದರಲ್ಲಿ ಕೂಡಾ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಲಿದ್ದಾರಾ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇನ್ನು 2023 ಕೂಡಾ ಈ ಸ್ಟಾರ್ ದಂಪತಿಯ ಪಾಲಿಗೆ ಸ್ವಲ್ಪ ಬ್ಯುಸಿ ವರ್ಷವಾಗುವ ಎಲ್ಲ ಸಾಧ್ಯತೆ ಇದೆ. ಕಾರಣ ಕಾಂತಾರ 2 ಸಿನಿಮಾ ಕೂಡಾ ಸೆಟ್ಟೇರುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ