• Home
  • »
  • News
  • »
  • entertainment
  • »
  • Kantara For Oscars: ಆಸ್ಕರ್ ಅಂಗಳಕ್ಕೆ ಹೋಗುತ್ತಾ ಕಾಂತಾರ? ಅಭಿಮಾನಿಗಳಿಂದ ಶುರುವಾಗಿದೆ ಕ್ಯಾಂಪೇನ್!

Kantara For Oscars: ಆಸ್ಕರ್ ಅಂಗಳಕ್ಕೆ ಹೋಗುತ್ತಾ ಕಾಂತಾರ? ಅಭಿಮಾನಿಗಳಿಂದ ಶುರುವಾಗಿದೆ ಕ್ಯಾಂಪೇನ್!

ಕಾಂತಾರ ಪರ ಅಭಿಮಾನಿಗಳ ಅಭಿಯಾನ

ಕಾಂತಾರ ಪರ ಅಭಿಮಾನಿಗಳ ಅಭಿಯಾನ

ಈ ಎಲ್ಲಾ ದಾಖಲೆಗಳ ನಡುವೆಯೇ ಕಾಂತಾರ ಸಿನಿಮಾ ಈಗಾಗಲೇ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕಾಂತಾರ ಸಿನಿಮಾ ಆಸ್ಕರ್‌ಗೆ (Oscar Award) ಭಾರತದಿಂದ ನಾಮನಿರ್ದೇಶನಗೊಳ್ಳಬೇಕು ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ Kantara For Oscars ಅಂತ ಭಾರೀ ಅಭಿಯಾನ ಶುರು ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕಾಂತಾರ (Kantara) ಅಬ್ಬರ ಮುಂದುವರೆದಿದೆ. ಕರ್ನಾಟಕದಲ್ಲಂತೂ (Karnataka) ಬಿಡುಗಡೆಯಾದ ಚಿತ್ರ ಮಂದಿರಗಳಲ್ಲೆಲ್ಲ ಕಾಂತಾರ ಹೌಸ್‌ ಫುಲ್ ಪ್ರದರ್ಶನ (Houseful Show) ಕಾಣುತ್ತಿದೆ. ಅತ್ತ ತೆಲುಗು (Telugu), ಮಲಯಾಳಂನಲ್ಲೂ (Malayalam) ಕಾಂತಾರಕ್ಕೆ ಅಲ್ಲಿನ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮತ್ತೊಂದೆಡೆ ಹಿಂದಿಯಲ್ಲೂ  ಸೂಪರ್‌ ಸ್ಟಾರ್‌ಗಳ ಸಿನಿಮಾಗಳ (Bollywood Superstars Cinema) ದಾಖಲೆಗಳನ್ನು (Records) ಕಾಂತಾರ ಉಡೀಸ್ ಮಾಡುತ್ತಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನ, ನಟನೆ, ಫಿಲ್ಮ್ ಮೇಕಿಂಗ್ ನೋಡಿದ ಸಿನಿ ದಿಗ್ಗಜರು ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಈ ಎಲ್ಲಾ ದಾಖಲೆಗಳ ನಡುವೆಯೇ ಕಾಂತಾರ ಸಿನಿಮಾ ಈಗಾಗಲೇ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಇನ್ನು ಕಾಂತಾರ ಸಿನಿಮಾ ಆಸ್ಕರ್‌ಗೆ (Oscar Award) ಭಾರತದಿಂದ ನಾಮನಿರ್ದೇಶನಗೊಳ್ಳಬೇಕು ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ Kantara For Oscars ಅಂತ ಭಾರೀ ಅಭಿಯಾನ ಶುರು ಮಾಡಿದ್ದಾರೆ.


ಜೋರಾಯ್ತು Kantara For Oscars ಅಭಿಯಾನ


ಕಾಂತಾರ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಸಿಗಬೇಕೆಂದು ಅಭಿಮಾನಿಗಳೆಲ್ಲ ಬಯಸುತ್ತಿದ್ದಾರೆ. KantaraForOscars ಹ್ಯಾಶ್​​ಟ್ಯಾಗ್ ಅಡಿಯಲ್ಲಿ ಅನೇಕರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಪರಭಾಷಿಗರು ಕೂಡ ‘ಕಾಂತಾರ’ ಚಿತ್ರ ಆಸ್ಕರ್​​ ಪ್ರಶಸ್ತಿ ರೇಸ್​​ಗೆ ಸೇರಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.



ಸೋಶಿಯಲ್ ಮೀಡಿಯಾಗಳಲ್ಲಿ ಅಭಿಯಾನ


ಮೈಕ್ರೋ-ಬ್ಲಾಗಿಂಗ್ ಬಳಕೆದಾರರಲ್ಲಿ ಒಬ್ಬರು, “ಕಾಂತಾರ ಯುಎಇ ಮತ್ತು ಅರೇಬಿಕ್ ಜಿಸಿಸಿ ಥಿಯೇಟರ್‌ಗಳಲ್ಲಿ ಅತ್ಯಧಿಕ ರೇಟಿಂಗ್‌ಗಳನ್ನು ಹೊಂದಿದೆ. ಉತ್ತಮ ಕಥಾವಸ್ತು, ಚಿತ್ರಕಥೆ ಮತ್ತು ಅಭಿನಯದೊಂದಿಗೆ ಶ್ರೀಮಂತ ಭಾರತೀಯ ಸಂಸ್ಕೃತಿಯ ಚಲನಚಿತ್ರ. ನನ್ನ ಎಲ್ಲಾ ಬೆಂಬಲದೊಂದಿಗೆ, ಇದು ಆಸ್ಕರ್ ಪ್ರಶಸ್ತಿಯನ್ನು ತಲುಪಲು ಅರ್ಹವಾಗಿದೆ. ಇದು ಡಿವೈನ್ ಬ್ಲಾಕ್‌ಬಸ್ಟರ್!"


ಇದನ್ನೂ ಓದಿ: Rishab Shetty: ರಿಷಬ್​​ಗೆ ಗಜಕೇಸರಿ ಯೋಗ! ಇನ್ನು 15 ವರ್ಷ ಟಚ್ ಮಾಡೋಕೇ ಆಗಲ್ಲ


ಆರ್‌ಆರ್‌ಆರ್‌, ಕಾಶ್ಮೀರ್ ಫೈಲ್ಸ್‌ ಬಗ್ಗೂ ಶುರುವಾಗಿದ್ದ ಆಂದೋಲನ


ರಾಜಮೌಳಿ ನಿರ್ದೇಶಣದ ‘ಆರ್​ಆರ್​ಆರ್’ ಸಿನಿಮಾ ಹಾಗೂ ವಿವೇಕ್​ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ಆಸ್ಕರ್​ಗೆ ನಾಮ ನಿರ್ದೇಶನಗೊಂಡಿಲ್ಲ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಂದೋಲನ ಶುರುವಾಗಿತ್ತು.  ಈ ಚಿತ್ರಗಳನ್ನು ಆಸ್ಕರ್​ಗೆ ನಾಮ ನಿರ್ದೇಶನ ಮಾಡಬೇಕು ಎಂದು ಕೆಲವರು ಟ್ವೀಟ್ ಮಾಡಿದ್ದರು.


ರಿಷಬ್ ಅಭಿನಯಕ್ಕೆ ಸಿಗಬೇಕು ರಾಷ್ಟ್ರ ಪ್ರಶಸ್ತಿ


ಇನ್ನು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಭಿನಯದ ಬಗ್ಗೆ ಹೇಳುವುದೇ ಬೇಡ. ಕ್ಲೈಮ್ಯಾಕ್ಸ್‌ನಲ್ಲಂತೂ ದೈವ ಆವಾಹನೆಯಾದಂತೆ ನಟಿಸಿದ್ದಾರೆ. ಹೀಗಾಗಿ ‘ಕಾಂತಾರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂಬ ಕೂಗು ಕೂಡ ಕೇಳಿ ಬಂದಿದೆ.


ರಿಷಬ್​​ಗೆ ಗಜಕೇಸರಿ ಯೋಗ! ಇನ್ನು 15 ವರ್ಷ ಟಚ್ ಮಾಡೋಕೇ ಆಗಲ್ಲ


Rishab Shetty: ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ರಿಷಬ್​ಗೆ ಗಜಕೇಸರಿ ಯೋಗ ಶುರುವಾಗಿದೆ ಎಂದಿದ್ದಾರೆ ಅವರ ತಂದೆ. ನೋ, ಛಾನ್ಸ್ ಟಚ್ ಮಾಡೋಕೇ ಆಗಲ್ಲ. ಗಜಕೇಸರಿ ಯೋಗ ಎಂದರೆ ಆನೆ ಕೊಂಡ್ಕೊಳ್ಳೋ ಯೋಗ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಅವರ ತಂದೆ ಮಾಹಿತಿ ಕೊಟ್ಟಿದ್ದಾರೆ.


ಇದನ್ನೂ ಓದಿ: Kantara-Upendra: ಕಾಂತಾರ ಬಗ್ಗೆ ಚೇತನ್ ಹೇಳಿಕೆಗೆ ಉಪೇಂದ್ರ ರೆಸ್ಪಾನ್ಸ್! ರಿಯಲ್ ಸ್ಟಾರ್ ಏನಂದ್ರು?


ಕಾಂತಾರ ಸೀಕ್ವೆಲ್ ಬರುತ್ತಾ? ಅಲ್ಲು ಅರವಿಂದ್ ಜೊತೆ ರಿಷಬ್ ಮೂವಿ?


ಕಾಂತಾರ ಸಿನಿಮಾ ತೆಲುಗಿನಲ್ಲಿಯೂ ಸಕ್ಸಸ್ ಆಗಿದೆ. ಗೀತಾ ಆರ್ಟ್ಸ್ ಅಡಿಯಲ್ಲಿ ಅಲ್ಲು ಅರವಿಂದ್ ಅವರು ಕಾಂತಾರ ಸಿನಿಮಾ ವರ್ಷನ್ ಸಿನಿಮಾವನ್ನು ಡಿಸ್ಟ್ರಿಬ್ಯೂಟ್ ಮಾಡಿದ್ದಾರೆ. ಅಲ್ಲು ಅರವಿಂದ್ ಅವರು ಕಾಂತಾರ ಸಕ್ಸಸ್ ಪಾರ್ಟಿಯಲ್ಲಿ ಗೀತಾ ಆರ್ಟ್ಸ್ ಜೊತೆ ರಿಷಬ್ ಅವರ ಸಿನಿಮಾ ಎನೌನ್ಸ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಿಷಬ್ ಶೆಟ್ಟಿ ಯಾವುದೇ ಸೀಕ್ವೆಲ್ ಬಗ್ಗೆ ಇನ್ನೂ ಯೋಚಿಸಿಲ್ಲ. ಸದ್ಯ ಚಿಕ್ಕ ಬ್ರೇಕ್ ತೆಗೆದುಕೊಳ್ಳುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ.

Published by:Annappa Achari
First published: