• Home
  • »
  • News
  • »
  • entertainment
  • »
  • Taran Adarsh On Kantara: ಕಾಂತಾರಕ್ಕೆ ಭಲೇ, ಭಲೇ ಎಂದ ಬಾಲಿವುಡ್ ವಿಶ್ಲೇಷಕ!

Taran Adarsh On Kantara: ಕಾಂತಾರಕ್ಕೆ ಭಲೇ, ಭಲೇ ಎಂದ ಬಾಲಿವುಡ್ ವಿಶ್ಲೇಷಕ!

ಕಾಂತಾರ ಖದರ್-ಟಚ್ ಮಾಡೋಕೆ ಚಾನ್ಸೇ ಇಲ್ಲ

ಕಾಂತಾರ ಖದರ್-ಟಚ್ ಮಾಡೋಕೆ ಚಾನ್ಸೇ ಇಲ್ಲ

ಪ್ರೇಕ್ಷಕರೇ ಕಿಂಗ್ ಮೇಕರ್, ಕಂಟೆಂಟೇ ಕಿಂಗ್ ಅನ್ನೋದನ್ನ ಕಾಂತಾರ ಚಿತ್ರ ಈಗ ಮತ್ತೊಮ್ಮೆ ಸಾಬೀತು ಮಾಡಿದೆ. ನಿಜ, 50 ದಿನದತ್ತ ಮುನ್ನುಗ್ಗುತ್ತಿರೋ ಕಾಂತಾರ ಸಿನಿಮಾ ಮೂರನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಇದನ್ನ ಸ್ವತಃ ತರಣ್ ಆದರ್ಶ್ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Film) ಕರ್ನಾಟಕದಲ್ಲಿ ಒಂದು ತಿಂಗಳು ಪೂರೈಸಿದೆ. ಒಂದು ತಿಂಗಳಾದರೂ ಯಾವುದೇ ರೀತಿಯ ಬದಲಾವಣೆ ಇಲ್ಲ. ಯಶಸ್ವಿ (Success Journey) ಪಯಣ ಮುನ್ನಡೆಯುತ್ತಿದೆ. ಸಾಗರೋಪಾದಿಯಲ್ಲಿಯೇ ಜನ ಥಿಯೇಟರ್​ಗೆ ಬರುತ್ತಿದ್ದಾರೆ. ಬಾಲಿವುಡ್​ (Bollywood) ವಿಚಾರದಲ್ಲೂ ಏನೂ ಬದಲಾವಣೆ ಆಗಿಲ್ಲ. ಕನ್ನಡದಿಂದ ಹಿಂದಿಗೆ ಡಬ್ ಆಗಿ ತೆರೆಗೆ ಬಂದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಲಿವುಡ್​ ನಲ್ಲಿ ಸದ್ಯಕ್ಕೆ ಕಾಂತಾರ ಟಚ್ ಮಾಡೋಕೆ ಸಾಧ್ಯವೇ ಇಲ್ಲ ಅನ್ನೋ ಮಟ್ಟಿಗೆ ಈಗ ಇಲ್ಲಿ ಕನ್ನಡದ ಕಾಂತಾರ ಚಿತ್ರ (Kantara Film Success) ಕಮಾಲ್ ಮಾಡುತ್ತಿದೆ. ಇದೇ ತಿಂಗಳ 14 ರಂದು ಕನ್ನಡದ ಕಾಂತಾರ ಹಿಂದಿಯಲ್ಲಿ ರಿಲೀಸ್ ಆಗಿತ್ತು. ಆ ಲೆಕ್ಕದಂತೆ ಹಿಂದಿ ಕಾಂತಾರ ರಿಲೀಸ್ ಆಗಿ ಈಗ ಮೂರು ವಾರಗಳೇ ಕಳೆದಿವೆ. ಆದರೂ ಸಕ್ಸಸ್ ಓಟ ಮುನ್ನುಗ್ಗುತ್ತಿದೆ.


ಬಾಲಿವುಡ್ ನಲ್ಲಿ ಕಾಂತಾರ ಖದರ್-ಟಚ್ ಮಾಡೋಕೆ ಚಾನ್ಸೇ ಇಲ್ಲ
ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್​ ನಲ್ಲಿ ಹಂಗಾಮಾ ಮಾಡುತ್ತಿದೆ. ಕನ್ನಡಿಗರಷ್ಟೇ ಅಲ್ಲ, ಬಾಲಿವುಡ್​ ಮಂದಿ ಕೂಡ ಈ ಸಿನಿಮಾ ನೋಡಿ ಕಳೆದೆ ಹೋಗಿದ್ದಾರೆ. ಕನ್ನಡದ ಕಾಂತಾರ ಚಿತ್ರವನ್ನ ಜನ ಅಷ್ಟೊಂದು ಪ್ರೀತಿಯಿಂದಲೇ ಅಲ್ಲಿ ಸ್ವೀಕರಿಸಿದ್ದಾರೆ.


ಇದನ್ನೂ ಓದಿ: Kangana Ranuat: ಬಿಜೆಪಿ ನಾನು ಸ್ಪರ್ಧಿಸ್ಬೇಕು ಅಂದ್ರೆ.. ಪಾಲಿಟಿಕ್ಸ್ ಎಂಟ್ರಿ ಬಗ್ಗೆ ಕಂಗನಾ ಹಿಂಟ್


ಕಾಂತಾರ ಸಿನಿಮಾ ಗೆಲುವಿನ ಓಟ ಎಲ್ಲ ಭಾಷೆಯಲ್ಲೂ ಇದೆ. ತುಳು ಭಾಷೆಯ ಸಂಸ್ಕೃತಿನೇ ಗೊತ್ತಿಲ್ಲದ ಜನ ಕೂಡ ಕಾಂತಾರ ಸಿನಿಮಾ ನೋಡುತ್ತಿದ್ದಾರೆ. ಉತ್ತರ ಭಾರತದ ಸಂಸ್ಕೃತಿ ಮತ್ತು ದಕ್ಷಿಣದ ಭಾರತದ ಸಂಸ್ಕೃತಿ ಎರಡೂ ಬೇರೆನೇ ಇವೆ. ಆದರೂ ಕಾಂತಾರ ಓಡ್ತಿರೋದು ಒಂದು ರೀತಿ ಯಕ್ಷಪ್ರಶ್ನೇನೆ ಆಗಿದೆ.


ಬಾಲಿವುಡ್​ನಲ್ಲಿ 3 ವಾರಗಳ ಹಿಂದೆ ಕಾಂತಾರ ರಿಲೀಸ್
ಬಾಲಿವುಡ್​ನಲ್ಲಿ ಇದೇ ತಿಂಗಳ 14 ರಂದು ರಿಲೀಸ್ ಆಗಿತ್ತು. ಒಳ್ಳೆ ಪ್ಲಾನಿಂಗ್​ ನಲ್ಲಿಯೇ ಕಾಂತಾರ ಸಿನಿಮಾ ರಿಲೀಸ್ ಆಗಿತ್ತು. ಬಾಲಿವುಡ್​​ನಲ್ಲಿ ಕನ್ನಡದ ಕಂಟೆಂಟ್ ಓಡುತ್ತದೆ ಅನ್ನೋದು ಕೂಡ ಅಷ್ಟೇ ಡೌಟ್ ಕೂಡ ಇತ್ತು. ಆದರೆ ಕನ್ನಡದ ಕಾಂತಾರ ಸಿನಿಮಾವನ್ನ ಅಲ್ಲಿಯ ಜನ ಅದ್ಭುತವಾಗಿಯೇ ತೆಗೆದುಕೊಂಡಿದ್ದಾರೆ.


Kantara Film Successful Collection was Continued in third weekend
ಬಾಲಿವುಡ್​ನಲ್ಲಿ 3 ವಾರಗಳ ಹಿಂದೆ ಕಾಂತಾರ ರಿಲೀಸ್


ಕಾಂತಾರ ಸಿನಿಮಾ ಹಿಟ್ ಆಗಿದೆ. ಸೂಪರ್ ಹಿಟ್ ಕೂಡ ಆಗಿದೆ. ಇದರಿಂದ ಇದರ ಕಲೆಕ್ಷನ್ ಭರ್ಜರಿಯಾಗಿಯೇ ಇದೆ. ಇದನ್ನ ಕಂಡ್ರೆ ಕಾಂತಾರ ಸಿನಿಮಾದ ಸಕ್ಸಸ್ ಅನ್ನ ಸದ್ಯದ ಮಟ್ಟಿಗೆ ಯಾರು ಟಚ್ ಕೂಡ ಮಾಡೋಕೆ ಆಗೋದಿಲ್ಲ. ಆ ರೀತಿ ಇದು ಓಡ್ತಾನೇ ಇದೆ.


ಬಾಲಿವುಡ್ ವಿಶ್ಲೇಷಕ ತರಣ್ ಆದರ್ಶ್ ಏನಂತಾರೆ ?
ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಕಲೆಕ್ಷನ್ ಪಕ್ಕಾ ಲೆಕ್ಕ ಕೊಡ್ತಾರೆ. ಅದು ದಕ್ಷಿಣದ ಸಿನಿಮಾನೇ ಆಗಿರಬಹುದು. ಇಲ್ಲವೇ ಉತ್ತರದ ಚಿತ್ರವೇ ಇರಬಹುದು. ಎಲ್ಲದರ ಲೆಕ್ಕ ಇವರಿಂದ ಪಕ್ಕ ಸಿಕ್ಕು ಬಿಡುತ್ತದೆ. ಅದರಂತೆ ಕಾಂತಾರ ಕಮಾಲ್ ಮಾಡಿದೆ.


ಪ್ರೇಕ್ಷಕರೇ ಕಿಂಗ್ ಮೇಕರ್, ಕಂಟೆಂಟೇ ಕಿಂಗ್ ಅನ್ನೋದನ್ನ ಕಾಂತಾರ ಚಿತ್ರ ಈಗ ಮತ್ತೊಮ್ಮೆ ಸಾಬೀತು ಮಾಡಿದೆ. ನಿಜ, 50 ದಿನದತ್ತ ಮುನ್ನುಗ್ಗುತ್ತಿರೋ ಕಾಂತಾರ ಸಿನಿಮಾ ಮೂರನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಇದನ್ನ ಸ್ವತಃ ತರಣ್ ಆದರ್ಶ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ಅದು ಇಲ್ಲಿದೆ ಓದಿ.


ಶುಕ್ರವಾರ 2.75 ಕೋಟಿ,
ಶನಿವಾರ 4.10 ಕೋಟಿ,
ಭಾನುವಾರ 4.40 ಕೋಟಿ.
ಒಟ್ಟು: 42.95 ಕೋಟಿ.


ಕಾಂತಾರ ಸಿನಿಮಾದ ಈ ಸಕ್ಸಸ್ ಫುಲ್ ಕಲೆಕ್ಷನ್ ಲೆಕ್ಕವನ್ನ ಕಂಡ ತರಣ್ ಆದರ್ಶ್, ಸದ್ಯಕ್ಕೆ ಕಾಂತಾರ ಓಟವನ್ನ ಟಚ್ ಮಾಡೋಕೂ ಆಗೋಲ್ಲ ಅನ್ನೋ ಅರ್ಥದಲ್ಲಿಯೇ ಈ ಲೆಕ್ಕ ಕೊಟ್ಟಿದ್ದಾರೆ.


ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ನವೆಂಬರ್ ಕನ್ನಡಿಗರಲ್ಲ, ರಿಯಲ್ ಕನ್ನಡಿಗ: ವಿ ಚಂದ್ರಶೇಖರ್


ಕಾಂತಾರ ಈ ಸಕ್ಸಸ್ ಫುಲ್ ಓಟದ ಹಿನ್ನೆಲೆಯಲ್ಲಿಯೇ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಮುಂಬೈಗೆ ಹೋಗಿ ಬಂದಿದ್ದಾರೆ. ಜನರ ರೆಸ್ಪಾನ್ಸ್ ಅನ್ನು ತಿಳಿದುಕೊಂಡು ಬಂದಿದ್ದಾರೆ.

First published: