• Home
  • »
  • News
  • »
  • entertainment
  • »
  • Singara Siriye Song Secret: ಸಿಂಗಾರ ಸಿರಿಯೇ ಹಾಡು ಹಿಟ್ ಆದ ರಹಸ್ಯವಿದು! ರೈಟರ್ ಪ್ರಮೋದ್ ಮರವಂತೆ ಹೇಳೋದು ಹೀಗೆ

Singara Siriye Song Secret: ಸಿಂಗಾರ ಸಿರಿಯೇ ಹಾಡು ಹಿಟ್ ಆದ ರಹಸ್ಯವಿದು! ರೈಟರ್ ಪ್ರಮೋದ್ ಮರವಂತೆ ಹೇಳೋದು ಹೀಗೆ

ಸಿಂಗಾರ ಸಿರಿಯೇ ಹಾಡು-ನಾಯಕಿಯ ಸಖತ್ ಎಂಟ್ರಿ

ಸಿಂಗಾರ ಸಿರಿಯೇ ಹಾಡು-ನಾಯಕಿಯ ಸಖತ್ ಎಂಟ್ರಿ

ಒಂದು ಸಿನಿಮಾ ಹಿಟ್ ಆದ್ಮೇಲೆ ಅತಿ ಹೆಚ್ಚು ಸೆಳೆಯೋ ಕೆಲಸವನ್ನ ಹಾಡುಗಳೇ ಮಾಡುತ್ತವೆ. ಚಿತ್ರ ನೋಡಿ ಮನೆಗೆ ಬಂದ್ಮೇಲೆ ಹಾಡುಗಳು ಜನರನ್ನ ಕಾಡುತ್ತಲೇ ಇರುತ್ತವೆ. ಹಾಗಾಗಿಯೇ ಹಾಡುಗಳು ಹಿಟ್ ಆಗುತ್ತವೆ ಅಂತಲೇ ಪ್ರಮೋದ್ ಮರವಂತೆ ವಿಶ್ಲೇಷಣೆ ಮಾಡುತ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ ಹಿಟ್ ಆಗಿದೆ. ಡಿವೈನ್ ಹಿಟ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಚಿತ್ರದ ಪ್ರತಿ ವಿಷಯ ಈಗ ವೈರಲ್ ಆಗಿದೆ. ಸಿನಿಮಾ ಬರುವ ಮುಂಚೇನೆ ಚಿತ್ರದ (Trailer) ಟ್ರೈಲರ್ ಗಮನ ಸೆಳೆದಿತ್ತು. ಟೀಸರ್ ಭರವಸೆ ಮೂಡಿಸಿತ್ತು. ಅದಕ್ಕೂ ಹೆಚ್ಚಾಗಿಯೇ ಚಿತ್ರದ ಸಿಂಗಾರ (Singara Siriye) ಸಿರಿಯೇ ಹಾಡು ಅತಿ ಹೆಚ್ಚು ಕ್ರೇಜ್ ಹುಟ್ಟಿಸಿತ್ತು. ಸಿಂಗಾರ ಸಿರಿಯೇ ಅನ್ನೋ ಈ ಗೀತೆ ವಿಶೇಷವಾಗಿಯೇ ಗಮನ ಸೆಳೆಯುತ್ತಲೇ ಇದೆ. ಸಿನಿಮಾದಲ್ಲಿ ಈ ಹಾಡು ಬೇರೆ ರೀತಿಯ ಎನರ್ಜಿಯನ್ನ ಕ್ರಿಯೇಟ್ ಮಾಡುತ್ತದೆ. ಇಡೀ ಸಿನಿಮಾದ ಒಂದು ದಾಟಿ ಆದ್ರೆ, ಸಿನಿಮಾದ ನಾಯಕ ನಟಿ ಸಪ್ತಮಿ ಗೌಡ (Sapthami Gowda) ಆಗಮನಕ್ಕೆ ಇದು ಎಂಟ್ರಿ ಸಾಂಗ್ ರೀತಿನೆ ಫೀಲ್ ಆಗುತ್ತದೆ. ಈ ಹಾಡಿನ ಮೋಡಿಯ ಹಿಂದೆ ಒಂದು ಶ್ರಮ ಇದೆ.


ಆ ಶ್ರಮದಲ್ಲಿ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಕೂಡ ಇದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್​ಗೆ ಒಂದಷ್ಟು ವಿಷಯಗಳನ್ನೂ ಹಂಚಿಕೊಂಡಿದ್ದಾರೆ.


ಸಿಂಗಾರ ಸಿರಿಯೇ ಎಂಬ ಕಾಂತಾರದ ಲವ್ಲಿ ಸೆಳೆತ
ಕಾಂತಾರ ಸಿನಿಮಾದ ಆರಂಭದಲ್ಲಿ ಒಂದು ಸೀರಿಯೆಸ್ ಕಥೆ ಇದೆ. ಒಬ್ಬ ರಾಜ ಆ ರಾಜನಿಗೆ ನೆಮ್ಮದಿನೇ ಇಲ್ಲ. ಅದನ್ನ ಹುಡುಕಿಕೊಂಡು ಹೋಗುವ ರಾಜ..ಹೀಗೆ ಕಥೆ ಸಾಗುತ್ತೆ. ಪಂಜುರ್ಲಿ ದೈವ ಬಂದು ಹೋಗುವವರೆಗೂ ಕಾಂತಾರ ಸೀರಿಯೆಸ್ ಆಗಿಯೇ ಹೋಗುತ್ತದೆ.
1990 ಕಾಲಘಟ್ಟದ ಕಥೆ ಶುರು ಆಗೋವರೆಗೂ ಇದೇ ಫೀಲ್ ಇರುತ್ತದೆ,ಕಂಬಳ ಆಟ-ಹೊಡೆದಾಟ ಮತ್ತು ಮೆಡಲ್ ಎಲ್ಲವೂ ಇಲ್ಲಿ ಕಥೆಯಾಗಿ ನಿಮ್ಮನ್ನ ಕರೆದುಕೊಂಡು ಹೋಗುತ್ತವೆ.


Kantara Film Singara Siriye Song Lyric writer Pramod Maravanthe Talk about Song
ಸಿಂಗಾರ ಸಿರಿಯೇ ಎಂಬ ಕಾಂತಾರದ ಲವ್ಲಿ ಸೆಳೆತ


ಸಿಂಗಾರ ಸಿರಿಯೇ ಹಾಡು-ನಾಯಕಿಯ ಸಖತ್ ಎಂಟ್ರಿ
ಸಿಂಗಾರ ಸಿರಿಯೇ ಹಾಡು ವಿಶೇಷವಾಗಿಯೇ ಇದೆ. ಈ ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅದ್ಭುತ ಸಂಗೀತವನ್ನ ಕೊಟ್ಟಿದ್ದಾರೆ. ಇದು ಇಡೀ ಚಿತ್ರದ ಮೂಡ್ ಅನ್ನ ಬದಲಿಸುತ್ತದೆ. ಭೂತಕೋಲ ಸಡಗರದಲ್ಲಿ ನಾಯಕಿಯ ಎಂಟ್ರಿಗೆ ಹಿನ್ನೆಲೆಯಾಗಿ ಈ ಹಾಡಿನ ಸಂಗೀತವೂ ಬಂದು ಹೋಗುತ್ತದೆ.


ಇಂತಹ ಫೀಲ್ ಗುಡ್ ಹಾಡು ಕಥೆಯೊಟ್ಟಿಗೆ ಪ್ಲೇ ಆದಾಗ, ಬೇರೆ ಫೀಲ್ ಬರುತ್ತದೆ. ನಟಿ ಸಪ್ತಮಿ ಗೌಡರ ಪಾತ್ರದ ಒಟ್ಟು ಚಿತ್ರಣ ಇಲ್ಲಿ ಸಿಗುತ್ತದೆ. ಲೀಲಾ ಪಾತ್ರದ ಇತರ ಬಿಹೇವಿಯರ್ ಕೂಡ ಇದೇ ಗೀತೆಯಲ್ಲಿ ನಮಗೆ ತಿಳಿದು ಹೋಗುತ್ತದೆ.


ಈ ಹಾಡಿನ ಪ್ರತಿ ಸಾಲಿನಲ್ಲೂ ತುಳುನಾಡಿನ ಭಾವನೆ ಇದೆ. ಅದನ್ನ ಬರೆದ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಏನಂತಾರೆ. ಇಲ್ಲಿದೆ ಓದಿ.


ಇದನ್ನೂ ಓದಿ: Kantara Cartoon: ಕಾಂತಾರ ಭಾರೀ ಗೆಲುವು! ಬಾಲಿವುಡ್ ಸ್ಟಾರ್​​ಗಳ ಕಾರ್ಟೂನ್ ವೀಡಿಯೋ ವೈರಲ್


ಕನ್ನಡದ ಯುವ ಲಿರಿಕ್ ರೈಟರ್ ಪ್ರಮೋದ್ ಮರವಂತೆ ವಿಶೇಷವಾಗಿಯೇ ಇದ್ದಾರೆ. ತಮ್ಮ ವಿಶೇಷ ಭಾವನೆಗಳ ಹಾಡುಗಳನ್ನ ಕನ್ನಡಕ್ಕೆ ಕೊಡ್ತಾ ಬಂದಿದ್ದಾರೆ.


ಆ ಸಾಲಿನಲ್ಲಿ ಸಿಂಗಾರ ಸಿರಿಯೇ ಹಾಡು ಈಗ ಬಿಗ್ ಹಿಟ್ ಆಗಿದೆ. ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ. ಈ ಹಾಡಿನ ಕೆಲಸ 2021 ರಲ್ಲಿಯೇ ಶುರು ಆಗಿದೆ. ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ಮೇಲೆ ಮ್ಯೂಸಿಕ್ ಡೈರೆಕ್ಟರ್ ಆಗ ಕೆಲಸ ಮಾಡುತ್ತಿದ್ದರು.


ಆ ಸಮಯದಲ್ಲಿಯೇ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಸಿಂಗಾರ ಸಿರಿಯೇ ಹಾಡಿನ ಬಗ್ಗೆ ಸಂಗೀತ ನಿರ್ದೇಶಕರ ಜೊತೆಗೆ ಮಾತನಾಡಿದ್ದಾರೆ. ಅದಾಗಿ ಜನವರಿಯಿಂದಲೇ ಈ ಹಾಡಿನ ಮೇಲೆ ಕೆಲಸ ಕೂಡ ಮಾಡಿದ್ದಾರೆ. ಆದರೆ ಆ ಕೂಡಲೇ ಹಾಡು ಫೈನಲ್ ಆಗಿಲ್ಲ. ಒಂದಷ್ಟು ಬದಲಾವಣೆಗಳೂ ಆಗ್ತಾನೇ ಬಂದಿವೆ.


Kantara Film Singara Siriye Song Lyric writer Pramod Maravanthe Talk about Song
ಸಿಂಗಾರ ಸಿರಿಯೇ ಹಾಡಿನ ಹಿಂದಿನ ರಹಸ್ಯ ಬಿಚ್ಚಿಟ್ಟರು ರೈಟರ್


ಸಿಂಗಾರ ಸಿರಿಯೇ ಹಾಡು ಫೈನಲ್ ಆಗಿದ್ಯಾವಾಗ?
ಸಿಂಗಾರ ಸಿರಿಯೇ ಹಾಡು ಸೂಪರ್ ಆಗಿ ಬರಲು ಸಾಕಷ್ಟು ಟೈಮ್ ತೆಗೆದುಕೊಂಡಿದೆ. ಅದರ ಬಗ್ಗೆ ಹೇಳುವ ಲಿರಿಕ್ ರೈಟರ್ ಪ್ರಮೋದ್ ಮರವಂತೆ, ನಾನು ಕಟ್ಟಕಡೆಯ ಫೈನಲ್ ಲಿರಿಕ್ ಕೊಟ್ಟಿರೋದು ಮೇ 6 ರಂದು. ಅದಕ್ಕೂ ಮೊದಲು ಒಂದಷ್ಟು ಬದಲಾವಣೆಗಳೂ ಆಗಿವೆ.


ಕೊನೆಯದಾಗಿ ಅದು ಮೇ ತಿಂಗಳಲ್ಲಿಯೇ ಫೈನಲ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಮೋದ್ ಮರವಂತೆ ಚಿತ್ರ ಜೀವನದಲ್ಲಿ ಸಿಂಗಾರ ಸಿರಿಯೇ ತುಂಬಾ ಸ್ಪೆಷಲ್ ಸಾಂಗ್ ಆಗಿದೆ. ಇದು ಹಿಟ್ ಆಗುತ್ತದೆ ಎಂಬ ನಿರೀಕ್ಷೆ ಕೂಡ ಇತ್ತು. ಆದರೆ ಈ ಮಟ್ಟದಲ್ಲಿ ಸೂಪರ್ ಹಿಟ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಈಗ ಈ ಸಕ್ಸಸ್ ತುಂಬಾ ಖುಷಿ ತಂದಿದೆ ಎಂದು ಪ್ರಮೋದ್ ಮರವಂತೆ ಹೇಳ್ತಾರೆ.


ಒಂದು ಸಿನಿಮಾ ಹಿಟ್ ಆದ್ಮೇಲೆ ಅತಿ ಹೆಚ್ಚು ಸೆಳೆಯೋ ಕೆಲಸವನ್ನ ಹಾಡುಗಳೇ ಮಾಡುತ್ತವೆ. ಚಿತ್ರ ನೋಡಿ ಮನೆಗೆ ಬಂದ್ಮೇಲೆ ಹಾಡುಗಳು ಜನರನ್ನ ಕಾಡುತ್ತಲೇ ಇರುತ್ತವೆ. ಹಾಗಾಗಿಯೇ ಹಾಡುಗಳು ಹಿಟ್ ಆಗುತ್ತವೆ ಅಂತಲೇ ಪ್ರಮೋದ್ ಮರವಂತೆ ವಿಶ್ಲೇಷಣೆ ಮಾಡುತ್ತಾರೆ.


ಇದನ್ನೂ ಓದಿ: Kantara Movie: ಕಾಂತಾರ ಮೆಚ್ಚಿದ ಕೇಂದ್ರ ಸಚಿವೆ; ಗರುಡಮಾಲ್​ನಲ್ಲಿ ಸಿನಿಮಾ ನೋಡಿದ ನಿರ್ಮಲಾ ಸೀತಾರಾಮನ್


ಒಟ್ಟಾರೆ ಕನ್ನಡದಲ್ಲಿ ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡು ಮೋಡಿ ಮಾಡ್ತಾನೇ ಇದೆ. ಜನರನ್ನ ತನ್ನದೇ ರೀತಿಯಲ್ಲಿ ಸೆಳೆಯುತ್ತಲೇ ಇರುತ್ತದೆ. ಸಿನಿಮಾ ನೋಡಿ ಬಂದ್ಮೇಲೆ ಸಿಂಗಾರ ಸಿರಿಯೇ ಮತ್ತು ವರಾಹ ರೂಪಂ ಹಾಡು ನೆನಪಿನಂಗಳದಲ್ಲಿ ಉಳಿಯುತ್ತಿದೆ.

First published: