• Home
  • »
  • News
  • »
  • entertainment
  • »
  • Kantara Art By Vilas Nayak: ಕಲಾವಿದನ ಕಲೆಯಲ್ಲಿ ಕಾಂತಾರ! ವಿಲಾಸ್ ನಾಯಕ್ ಕುಂಚದಲ್ಲಿ ರಿಷಬ್ ಶೆಟ್ಟಿ ದೈವ ರೂಪ!

Kantara Art By Vilas Nayak: ಕಲಾವಿದನ ಕಲೆಯಲ್ಲಿ ಕಾಂತಾರ! ವಿಲಾಸ್ ನಾಯಕ್ ಕುಂಚದಲ್ಲಿ ರಿಷಬ್ ಶೆಟ್ಟಿ ದೈವ ರೂಪ!

ರಿಷಬ್ ಶೆಟ್ಟಿ ದೈವ ರೂಪ ಬಿಡಿಸಿದ ಕಲಾವಿದ ವಿಲಾಸ್

ರಿಷಬ್ ಶೆಟ್ಟಿ ದೈವ ರೂಪ ಬಿಡಿಸಿದ ಕಲಾವಿದ ವಿಲಾಸ್

ದೈವ ರೂಪದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿಯ ಈ ಪಾತ್ರ ಕೂಡ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಎಲ್ಲರಲ್ಲೂ ದೈವಿ ಭಕ್ತಿಯನ್ನ ಹೆಚ್ಚಿಸುತ್ತಿರೋ ರಿಷಬ್ ಶೆಟ್ಟಿಯ ಈ ಪಾತ್ರವನ್ನ ಚಿತ್ರ ಕಲಾವಿದ ವಿಲಾಸ್ ನಾಯಕ್ ತಮ್ಮದೇ ರೀತಿಯಲ್ಲಿಯೇ ಬಿಡಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara) ಕನ್ನಡದ ಹೆಮ್ಮೆಯ  ಸಿನಿಮಾ. ತುಳುನಾಡ ಕಲೆ-ಸಂಸ್ಕೃತಿ-ಆಚಾರ-ವಿಚಾರವನ್ನ ಇದು ಇಡೀ ನಾಡಿಗೆ ತಿಳಿಸಿದೆ. ಬಾಲಿವುಡ್​ನಲ್ಲಿ (Bollywood)  ರಿಲೀಸ್ ಆಗೋ ಮೂಲಕ ತುಳುನಾಡಿನ ಈ ಕಲ್ಚರ್ (Tulu Nadu Culture) ಅನ್ನೂ ಪರಿಚಯ ಮಾಡಿದೆ. ಕನ್ನಡದ ಈ ಸಿನಿಮಾದಲ್ಲಿ ದೈವ ರೂಪವೇ ಪ್ರಮುಖ ವಿಷಯವಾಗಿದೆ. ಚಿತ್ರಕ್ಕೆ ಕಮರ್ಷಿಯಲ್ ಟಚ್ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಚಿತ್ರವನ್ನ ವೀಕ್ಷಿಸಿದ ಪ್ರತಿಯೊಬ್ಬರು, ದೈವ ರೂಪದ ಬಗ್ಗೇನೆ ಅತಿ ಹೆಚ್ಚು ಮಾತನಾಡುತ್ತಿದ್ದಾರೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯಲ್ಲಿ ತುಳುನಾಡಿನ ದೈವದ ಕಥೆ ಅತಿ ಹೆಚ್ಚು ಚರ್ಚೆಯ ವಿಷಯವೇ ಆಗಿದೆ.


ಕಲಾವಿದನ ಕಲ್ಪನೆಯಲ್ಲಿ ರಿಷಬ್ ಶೆಟ್ಟಿ ದೈವ ರೂಪ
ಕಾಂತಾರ ಸಿನಿಮಾ ವಿಶೇಷವಾಗಿಯೇ ಇದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷವೇ ಕಥೆನೆ ಆಗಿದೆ. ಆದರೆ ಸಿನಿಮಾ ತುಂಬಾ ದೊಡ್ಡ ಮಟ್ಟದಲ್ಲಿಯೇ ಹೈಪ್ ತೆಗೆದುಕೊಂಡಿದೆ. ಇದರಿಂದ ಇಡೀ ಸಿನಿಮಾದ ಕಥೆ ಬದಲಾಗಿ, ದೈವ ರೂಪದ ಚರ್ಚೆನೆ ಅತಿ ಹೆಚ್ಚಾಗಿ ಕೇಳಿ ಬರುತ್ತಿದೆ.


ರಿಷಬ್ ಶೆಟ್ಟಿ ಚಿತ್ರ ಜೀವನದಲ್ಲಿ ಕಾಂತಾರ ಸಿನಿಮಾ ವಿಶೇಷವಾಗಿಯೇ ನಿಲ್ಲುತ್ತದೆ. ತಾವೇ ಬರೆದು, ತಾವೇ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ದೈವ ರೂಪ ವಿಶೇಷವಾಗಿಯೇ ನಿಲ್ಲುತ್ತದೆ.


ಇದನ್ನೂ ಓದಿ: Bigg Boss Joker Arun Sagar: ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅರುಣ್ ಸಾಗರ್, ಕಾರಣ ಇಲ್ಲಿದೆ


ದೈವ ರೂಪ ತಾಳಿರೋ ಬಗ್ಗೆ ರಿಷಬ್ ಹೇಳಿಕೊಳ್ಳಲೇ ಇಲ್ಲ
ಹೌದು, ಈ ವಿಷಯವಂತೂ ನಿಜವೇ ಆಗಿದೆ. ರಿಷಬ್ ಶೆಟ್ಟಿ ಎಲ್ಲೂ ಇದನ್ನ ಹೇಳಿಕೊಳ್ಳಲಿಲ್ಲ. ತಾವು ಕಾಂತಾರದಲ್ಲಿ ದೈವ ರೂಪ ತಾಳಿರೋ ಬಗ್ಗೆ ತಿಳಿಸಲೆ ಇಲ್ಲ. ಆದರೆ ಸಿನಿಮಾ ರಿಲೀಸ್ ಆಸು-ಪಾಸಿನಲ್ಲಿಯೇ ರಿಷಬ್ ಶೆಟ್ಟಿ ಈ ವಿಚಾರವನ್ನ ತಿಳಿಸಿದರು.


Kannada Kantara Film Rishab Shetty character Painted by Vilas Nayak
ದೈವ ರೂಪ ಬಿಡಿಸಿದ ಕಲಾವಿದ ವಿಲಾಸ್ ನಾಯಕ್


ರಿಷಬ್ ಶೆಟ್ಟಿ ಚಿತ್ರದ ಈ ಪಾತ್ರ ಮಾಡುವಾಗ ದೈವಾರಾಧನೆ ಮಾಡಿದ್ದಾರೆ. ನಾನ್ ವೆಜ್ ಸೇವಿಸೋದನ್ನೂ ಬಿಟ್ಟು ಬಿಟ್ಟಿದ್ದರು. ಇಷ್ಟೆಲ್ಲ ದೈವಿ ಭಕ್ತಿಯಿಂದಲೇ ಪಾತ್ರವನ್ನ ನಿರ್ವಹಿಸಿ ಈಗ ದೈವದ ಆಶೀರ್ವಾದೊಂದಿಗೆ ಸಕ್ಸಸ್ ಕಂಡಿದ್ದಾರೆ.


ಕಲಾವಿದ ವಿಲಾಸ್ ನಾಯಕ ಕಲ್ಪನೆಯಲ್ಲಿ ರಿಷಬ್ ದೈವ ರೂಪ
ದೈವ ರೂಪದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿಯ ಈ ಪಾತ್ರ ಕೂಡ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಎಲ್ಲರಲ್ಲೂ ದೈವಿ ಭಕ್ತಿಯನ್ನ ಹೆಚ್ಚಿಸುತ್ತಿರೋ ರಿಷಬ್ ಶೆಟ್ಟಿಯ ಈ ಪಾತ್ರವನ್ನ ಚಿತ್ರ ಕಲಾವಿದ ವಿಲಾಸ್ ನಾಯಕ್ ತಮ್ಮದೇ ರೀತಿಯಲ್ಲಿಯೇ ಬಿಡಿಸಿದ್ದಾರೆ.


ಲೈವ್ ಆಗಿಯೇ ದೈವ ರೂಪದ ಚಿತ್ರ ಬಿಡಿಸಿದ ಕಲಾವಿದ 


ರಿಷಬ್​ ಶೆಟ್ಟಿಯ ದೈವ ರೂಪವನ್ನ ಚಿತ್ರ ಕಲಾವಿದ ರಿಷಬ್ ಶೆಟ್ಟಿ ಲೈವ್ ಆಗಿಯೇ ಬಿಡಿಸಿದ್ದಾರೆ. ವಿಶೇಷ ಸಂಗೀತದ ಹಿನ್ನೆಲೆಯಲ್ಲಿಯೆ ಇದನ್ನ ಕ್ಯಾನ್ ವಾಸ್ ಮೇಲೆ ಬಿಡಿಸುತ್ತಲೇ ಹೋಗಿದ್ದಾರೆ.


ದೈವ ರೂಪಿ ಕಲಾವಿದ ರಿಷಬ್​ಗೆ ಧನ್ಯವಾದಗಳು-ವಿಲಾಸ್ ನಾಯಕ್ 


ಈ ಒಂದು ವೀಡಿಯೋವನ್ನ ಸ್ವತಃ ಕಲಾವಿದ ವಿಲಾಸ್ ನಾಯಕ್ ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. "ಕಾಂತಾರ ಚಿತ್ರದ ಮೂಲಕ ನಮ್ಮ ಸಂಸ್ಕೃತಿಯನ್ನ ಇಡೀ ವಿಶ್ವಕ್ಕೆ ತಿಳಿಸಿದಕ್ಕೆ ಧನ್ಯವಾದಗಳು" ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಸಂಸ್ಥೆಗೆ ಎಷ್ಟು ಧನ್ಯವಾದಗಳನ್ನ ಹೇಳಿದರು ಸಾಲದು ಅಂತಲೇ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Ramachari: ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ - ಅಮ್ಮನಿಂದ ಮಗಳ ಪ್ರಾಣಕ್ಕೆ ಬರ್ತಿದೆ ಕುತ್ತು!


ಕಾಂತಾರ ಸಿನಿಮಾದ ಈ ಒಂದು ವಿಶೇಷ ಕಲೆಯ ವೀಡಿಯೋವನ್ನ ಹೊಂಬಾಳೆ ಪ್ರೊಡಕ್ಷನ್ ಹೌಸ್ ಕೂಡ ರೀಟ್ವಿಟ್ ಮಾಡಿದೆ. ಹೀಗೆ ಕಾಂತಾರ ಸಿನಿಮಾದ ಕ್ರೇಜ್ ಎಲ್ಲೆಡೆ ಪಸರಿಸುತ್ತಲೇ ಇದೆ. ದೇಶದ ಎಲ್ಲ ಭಾಷೆಯ ಕಲಾವಿದರು ಈ ಚಿತ್ರವನ್ನ ನೋಡಿ ಪ್ರಶಂಸೆಯನ್ನ ವ್ಯಕ್ತಪಡಿಸುತ್ತಲೇ ಇದ್ದಾರೆ.

First published: