• Home
  • »
  • News
  • »
  • entertainment
  • »
  • Kantara Movie Ramya Reaction: ಕಾಂತಾರ ಸಿನಿಮಾ ಬಗ್ಗೆ ರಮ್ಯಾ ಮಾತು! ಆ ದೈವ ರೂಪ ಕಂಡು ನಟಿ ರಮ್ಯಾ ಹೇಳಿದ್ದೇನು?

Kantara Movie Ramya Reaction: ಕಾಂತಾರ ಸಿನಿಮಾ ಬಗ್ಗೆ ರಮ್ಯಾ ಮಾತು! ಆ ದೈವ ರೂಪ ಕಂಡು ನಟಿ ರಮ್ಯಾ ಹೇಳಿದ್ದೇನು?

ಕಾಂತಾರ ಸಿನಿಮಾದ ದೈವ ರೂಪಿ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ದೈವ ರೂಪಿ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಕಥೆ ಹತ್ತು ಹಲವು ವಿಷಯಗಳನ್ನ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ ಬಿಟ್ಟುಕೊಟ್ಟಿದ್ದಾರೆ. ಇಡೀ ಕಥೆಯ ಆ ರೋಚಕತೆಯನ್ನ ತೆರೆ ಮೇಲೆಯೇ ನೋಡಿ ಅಂತಲೂ ಹೇಳಿದ್ದಾರೆ.

  • Share this:

ಸ್ಯಾಂಡಲ್​​ವುಡ್​ನಲ್ಲಿ (Kantara) ಕಾಂತಾರ ಸಿನಿಮಾ ತನ್ನದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ಪೊನ್ನಿಯಿನ್ ಸೆಲ್ವನ್ (Pooniyin Selvan) ನಂತಹ ದೊಡ್ಡ ಚಿತ್ರ ಬರ್ತಾಯಿದ್ರೂ ಜಗ್ಗುತ್ತಿಲ್ಲ. ತನ್ನದೇ ರೀತಿಯಲ್ಲಿಯೇ ಮುನ್ನುಗ್ಗಲು ರೆಡಿ ಆಗಿದೆ. ಚಿತ್ರದ ಪ್ರಚಾರದಲ್ಲೂ (Promotion) ಆ ನುಗ್ಗುವಿಕೆ ಕಾಣಿಸುತ್ತಿದೆ. ಯಾರೇ ಬಂದ್ರೂ ಅಷ್ಟೆ, ಇನ್ನಾರೇ ಹೋದ್ರು ಅಷ್ಟೆ. ಕಾಂತಾರ ಚೆನ್ನಾಗಿಯೇ ಹೋಗುತ್ತದೆ ಅನ್ನೋ ನಂಬಿಕೆ ಇಡೀ ಸಿನಿಮಾ ತಂಡಕ್ಕಿದೆ. ಇಂತಹ ಇದೇ ಭರವಸೆಯಲ್ಲಿಯೇ ಚಿತ್ರದ ನಿರ್ದೇಶಕರು ಈ ಚಿತ್ರದ ಒಂದು ವಿಷಯವನ್ನ ರಿವೀಲ್ (Reveal) ಮಾಡಿದ್ದಾರೆ. ಅದೇನೂ ಅನ್ನೋದನ್ನ ನಾವು ನಿಮಗೆ ಹೇಳುತ್ತೇವೆ. ಅದು ಮುಂದಿದೆ ಓದಿ.


ಕಾಂತಾರ ಅನ್ನೋದು ಒಂದು ದಂತ ಕಥೆಯ ಸಿನಿಮಾ. ಈ ದಂತ ಕಥೆ ಅಂದ್ರೆ ಇದು ಆನೆ ದಂತದ ಕಥೇನಾ ಅನ್ನೋ ಪ್ರಶ್ನೆನೂ ಈಗ ಹುಟ್ಟುಕೊಂಡಿದೆ. ಆದರೆ ಆನೆ ದಂತದ ವಿಷಯ ಎಲ್ಲೂ ಪ್ರಸ್ತಾಪವೂ ಆಗಿಲ್ಲ. ಟ್ರೈಲರ್ ಮತ್ತು ಟೀಸರ್ ನಲ್ಲೂ ಇಲ್ಲ.


ಕಾಂತಾರ ಸಿನಿಮಾದ ದೈವ ರೂಪಿ ಪಾತ್ರದ ದೈವತ್ವ
ಇದರ ಹೊರತಾಗಿ ಈ ಚಿತ್ರದಲ್ಲಿ ಸುಮಾರು ಪಾತ್ರಗಳು ಬರುತ್ತವೆ. ಕರಾವಳಿ ಭಾಗದ ಸೊಗಡನ್ನ ಕಟ್ಟಿಕೊಡುತ್ತವೆ. ಅಂತಹ ಪಾತ್ರಗಳಲ್ಲಿ ದೈವದ ಪಾತ್ರವೂ ಒಂದಿದೆ. ಈ ಪಾತ್ರ ರೀಲಾ ರಿಯಲ್ಲಾ ಅನ್ನೋ ಅನುಮಾನ ಮೂಡೋವಷ್ಟು ಚೆನ್ನಾಗಿ ಮೂಡಿ ಬಂದಿದೆ.




Kantara Film Intresting Facts Revealed By Director-Actor Rishab Shetty
ಪ್ರಿಮಿಯರ್ ಶೋ ದಲ್ಲಿ ಚಿತ್ರ ವೀಕ್ಷಿಸಿದ ನಟಿ ರಮ್ಯ


ಚಿತ್ರದ ಟೈಲರ್ ಅನ್ನ ನೀವೂ ಒಮ್ಮೆ ಗಮನಿಸಿ ನೋಡಿ, ಈ ಟ್ರೈಲರ್ ನಲ್ಲಿ ಆ ದೈವದ ರೂಪ ಉಗ್ರವಾಗಿಯೂ ಇದೆ. ಒಮ್ಮೆ ಶಾಂತ ರೂಪ ಅಂತಲೂ ಅನಿಸಿ ಬಿಡುತ್ತದೆ.


ದೈವ ರೂಪದ ಪಾತ್ರದ ಆ ರಿಯಲ್ ಕಲಾವಿದ ಯಾರು?
ಈ ಒಂದು ಪ್ರಶ್ನೆ ಸಹಜವಾಗಿಯೇ ಈಗ ಹುಟ್ಟುಕೊಂಡಿದೆ. ಯಾಕೆಂದ್ರೆ ಈ ಒಂದು ಪಾತ್ರವನ್ನ ಮಾಡಿದವ್ರು ರಿಯಲ್ ಕಲಾವಿದ್ರೆ ಆಗಿದ್ದಾರೆ. ನಿಜವಾದ ದೈವ ರೂಪಿಗಳನ್ನೆ ಇಲ್ಲಿ ಚಿತ್ರೀಸಲಾಗಿದೆ ಅನ್ನೋ ಮಾತು ಕೂಡ ಇದೆ.


ಇದನ್ನೂ ಓದಿ: Kantara Review: ಇದು ಶಿವನ ಸಂಘರ್ಷದ ದಂತಕಥೆ: ಕಾಂತಾರದಲ್ಲಿ ರಿಷಬ್ ಹೊಸ ಅವತಾರ!


ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ರಿಷಬ್ ಶೆಟ್ಟಿ ಕೂಡ ಒಂದಷ್ಟು ವಿಷಯವನ್ನ ಬಿಟ್ಟುಕೊಟ್ಟಿದ್ದಾರೆ. ಆ ವಿಷಯದ ಸುತ್ತ ಮಾತನಾಡೋದಾದ್ರೆ, ಈ ಪಾತ್ರವನ್ನ ನಿಭಾಯಿಸಿರೋದು ರಿಯಲ್ ಕಲಾವಿದರೆ ಆಗಿದ್ದಾರೆ.

ಕಾಂತಾರ ಸಿನಿಮಾದ ಆ ದೈವ ರೀಲಾ ರಿಯಲ್ಲಾ ?
ಈ ಒಂದು ರೂಪದಲ್ಲಿ ಅಭಿನಯಿಸೋವಾಗ ಆ ಕಲಾವಿದ ಸುಸ್ತಾಗಿ ಬಿದ್ದಿರೋ ಘಟನೆನೂ ನಡೆದಿವೆ. ಈ ಒಂದು ಮಾಹಿತಿ ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ.
ಅಸಲಿಗೆ ಈ ಒಂದು ದೈವ ರೂಪದ ಪಾತ್ರ ನಿಭಾಯಿಸೋಕೆ ಎನರ್ಜಿ ಬೇಕೆ ಬೇಕು. ಅದು ಡ್ರಾಪ್ ಆಗಲೇಬಾರದು. ಅಂತಹ ಈ ಪಾತ್ರವನ್ನ ನಿಭಾಯಿಸೋವಾಗ ಎನರ್ಜಿ ಡ್ರಾಪ್ ಆಗೋದು ಸಹಜವೇ ಬಿಡಿ.


Kantara Film Intresting Facts Revealed By Director-Actor Rishab Shetty
ಕಾಂತಾರ ಸಿನಿಮಾ ವೀಕ್ಷಣೆಯ ಸಮಯದ ರಮ್ಯ ಸೆಲ್ಫಿ


ಆದರೆ ಈ ಪಾತ್ರ ನಿಭಾಯಿಸಿರೋ ಆ ಕಲಾವಿದನ ಎನರ್ಜಿಯನ್ನ ಮೆಚ್ಚಲೇಬೇಕು. ಚಿತ್ರದ ಟ್ರೈಲರ್​ ಅನ್ನ ನೋಡಿದಾಗ ಅದು ತಿಳಿಯುತ್ತದೆ. ತುಂಬಾ ದೈವ ದತ್ತವಾಗಿಯೇ ಇರೋ ಈ ಪಾತ್ರವನ್ನ ನಿಭಾಯಿಸಿರೋದು ಯಾರು ಗೊತ್ತೇ?


ಕಾಂತಾರ ಸಿನಿಮಾದಲ್ಲಿ ದೈವ ರೂಪ ತಾಳಿದ  ಡೈರೆಕ್ಟರ್ ರಿಷಬ್ ಶೆಟ್ಟಿ
ಹೌದು, ಈ ಪಾತ್ರವನ್ನ ಒಮ್ಮೆ ಸೂಕ್ಷ್ಮವಾಗಿ ಗಮನಸಿ ನೋಡಿ, ನಿಮಗೆ ಅರ್ಥವಾಗುತ್ತದೆ. ಈ ದೈವ ರೂಪಿ ಕಲಾವಿದ ಯಾರೂ ಅಂತ ತಿಳಿದು ಬಿಡುತ್ತದೆ. ಇಲ್ಲವೇ ಎಲ್ಲೋ ನೋಡಿದ ಅನುಭವ ಕೂಡ ಆಗುತ್ತದೆ.


ರಿಷಬ್ ಶೆಟ್ಟಿ ದೈವರ ರೂಪ ಪಾತ್ರದವನ್ನ ಕೊಂಡಾಡಿದ ನಟಿ ರಮ್ಯ
ಈ ಮಾತಂತೂ ಸತ್ಯ ಬಿಡಿ. ಈ ರೋಲ್​ ಅನ್ನ ಗಮನಿಸಿದ್ರೇ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನ ನೋಡಿದ ಅನುಭವ ಆಗೋದಿಲ್ವೇ ಅಂತ ನಿಮಗೆ ಅನಿಸುತ್ತದೆ.
ಹೌದು, ಅದು ಬೇರೆ ಯಾರೋ ಅಲ್ಲ. ಚಿತ್ರದ ಈ ಪ್ರಮುಖ ಪಾತ್ರವನ್ನ ರಿಷಬ್ ನಿಭಾಯಿಸಿದ್ದಾರೆ. ಇದಕ್ಕೆ ಈಗ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ. ನಟಿ ರಮ್ಯ ಕೂಡ ಈ ಪಾತ್ರವನ್ನ ಕೊಂಡಾಡಿದ್ದಾರೆ.


Kantara Film Intresting Facts Revealed By Director-Actor Rishab Shetty
ಕಾಂತಾರ ಸಿನಿಮಾ ವೀಕ್ಷಿಸಿದ ರಮ್ಯ


ಫೇಸ್ ಬುಕ್ ನಲ್ಲಿ ಕಾಂತಾರ ಬಗ್ಗೆ ಬರೆದು ಕೊಂಡ ರಮ್ಯ 


ಚಿತ್ರದ ಪ್ರಿಮಿಯರ್ ಶೋದಲ್ಲಿ ಅನೇಕ ಕಲಾವಿದರು ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಈ ಚಿತ್ರ ನೋಡಿ ಒಳ್ಳೆ ಅನುಭವ ಕೂಡ ಪಡೆದಿದ್ದಾರೆ. ಅದರಂತೆ ನಟಿ ರಮ್ಯಾ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲೂ ಸಿನಿಮಾ ಬಗ್ಗೆ ಬರೆದುಕೊಂಡು ಸಿನಿಮಾ ನೋಡಿ, ನಿಮಗೂ ಇದೇ ಅನುಭವ ಆಗುತ್ತದೆ ಅಂತಲೇ ಹೇಳಿದ್ದಾರೆ.


ಇದನ್ನೂ ಓದಿ: Ponniyin Selvan: ಸೌತ್​ನ ಟಾಪ್ ಡೈರೆಕ್ಟರ್ ಮಣಿರತ್ನಂ ಸಿನಿಮಾದಲ್ಲಿ ಹುಬ್ಬಳ್ಳಿ ಹುಡುಗ!


ಇಷ್ಟೆಲ್ಲ ಕುತೂಹಲ ಮೂಡಿಸಿರೋ ಕಾಂತಾರ ಸಿನಿಮಾ ಸೆಪ್ಟೆಂಬರ್-30 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಕರಾವಳಿ ಭಾಗದಲ್ಲಿ ಈ ಸಿನಿಮಾದ ನಿರೀಕ್ಷೆ ಇನ್ನೂ ಜಾಸ್ತಿನೇ ಇದೆ.
ಕಾಂತಾರ ಸಿನಿಮಾದ ಕಥೆ ಹತ್ತು ಹಲವು ವಿಷಯಗಳನ್ನ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ ಬಿಟ್ಟುಕೊಟ್ಟಿದ್ದಾರೆ. ಇಡೀ ಕಥೆಯ ಆ ರೋಚಕತೆಯನ್ನ ತೆರೆ ಮೇಲೆನೆ ನೋಡಿ ಅಂತಲೂ ಕೇಳಿಕೊಂಡಿದ್ದಾರೆ.

First published: