• Home
  • »
  • News
  • »
  • entertainment
  • »
  • Kantara Hindi Trailer: ಬಾಲಿವುಡ್​ಗೂ ಕಾಲಿಟ್ಟ ಕನ್ನಡದ ಕಾಂತಾರ! ರಿಲೀಸ್ ಯಾವಾಗ?

Kantara Hindi Trailer: ಬಾಲಿವುಡ್​ಗೂ ಕಾಲಿಟ್ಟ ಕನ್ನಡದ ಕಾಂತಾರ! ರಿಲೀಸ್ ಯಾವಾಗ?

ಕಾಂತಾರ ಹಿಂದಿ ಟ್ರೈಲರ್ ರೆಡಿ ಟು ರಿಲೀಸ್

ಕಾಂತಾರ ಹಿಂದಿ ಟ್ರೈಲರ್ ರೆಡಿ ಟು ರಿಲೀಸ್

ಕಾಂತಾರ ಚಿತ್ರದ ಹಿಂದಿ ಟ್ರೈಲರ್ ರಿಲೀಸ್​ ಗೆ ಟೈಮ್​ ಕೂಡ ಫಿಕ್ಸ್ ಆಗಿದೆ. ಅಕ್ಟೋಬರ್-09 ರಂದು ಬೆಳ್ಳಿಗ್ಗೆ 9 ಗಂಟೆ 10 ನಿಮಿಷಕ್ಕೆ ರಿಲೀಸ್ ಆಗುತ್ತಿದೆ.

  • Share this:

ಕನ್ನಡದ ಕಾಂತಾರ ಸಿನಿಮಾ ಚೆನ್ನಾಗಿ ಓಡ್ತಿದೆ. ಸಿಂಗಲ್ (Single Theatres) ಥಿಯೇಟರ್ ನಲ್ಲೂ ಚಿತ್ರ ವೀಕ್ಷಿಸಲು ಜನ ಮುಗಿ ಬೀಳುತ್ತಿದ್ದಾರೆ. ಮಲ್ಟಿಪ್ಲೆಕ್ಸ್​ಗಳಲ್ಲೂ (Multiplex)  ಕನ್ನಡದ ಕಾಂತಾರ (Kantara Film) ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಹಬ್ಬದ ರಜಾ ಬೇರೆ, ಅದಕ್ಕೇನೆ ಜನ ಥಿಯೇಟರ್​ಗೆ ಹೋಗಿಯೇ ಸಿನಿಮಾ ನೋಡುತ್ತಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಕುರಿತು ಅತಿ ಹೆಚ್ಚು ಮಾತನಾಡುತ್ತಿದ್ದಾರೆ. ಕನ್ನಡದ ಈ ಸಿನಿಮಾದ ಕ್ರೇಜ್ ಈಗ ಬೇರೆ ಭಾಷೆ ಸಿನಿಮಾ ಪ್ರೇಮಿಗಳಿಗೂ ಪಸರಿಸಿದೆ. ಈ ಚಿತ್ರವನ್ನ ಆಯಾ ಭಾಷೆಯಲ್ಲಿ ತೋರಿಸಬೇಕು ಅಂತಲೇ ವಿತರಕರೂ ರೆಡಿ ಆಗಿದ್ದಾರೆ. ಅದರ ಫಲವೇ ಕಾಂತಾರ ಬಾಲಿವುಡ್​ ಅಂಗಳಕ್ಕೂ (Kantara Bollywood Remake) ಈಗ ಕಾಲಿಟ್ಟಿದೆ. ಇದೇ ತಿಂಗಳು 09 ರಂದು ವಿಶೇಷ ನಡೆಯಲಿದೆ.

ಬಾಲಿವುಡ್​ ನಲ್ಲೂ ಕಾಂತಾರ ದೈವದ ವೈಬ್ರೇಷನ್
ಕಾಂತಾರ ಚಿತ್ರವನ್ನ ದೈವವೇ ಕೈಹಿಡಿದಿದೆ ಅಂತಲೇ ಹೇಳಬಹುದು. ಈ ಒಂದು ನಂಬಿಕೆ ಕೇವಲ ಲೆಕ್ಕಾಚಾರ ಮಾಡೋ ಮಂದಿಗೆ ಬಂದಿಲ್ಲ. ಶ್ರದ್ಧೆ ಮತ್ತು ಭಕ್ತಿಯಿಂದಲೇ ಸಿನಿಮಾ ಮಾಡಿದ ಸಿನಿಮಾ ತಂಡಕ್ಕೂ ಈ ನಂಬಿಕೆ ಬಂದಿದೆ.


ದೈವದ ಮೇಲೆ ಬರುವ ಸಿನಿಮಾಗಳು ತುಂಬಾ ಚೆನ್ನಾಗಿಯೇ ಹೋಗಿವೆ. ಜಯಮ್ಮನ ಮಗ ಸಿನಿಮಾದಲ್ಲೂ ದೇವಿಯ ಕಥೆ ಇತ್ತು. ಇದು ಕೂಡ ಜನರನ್ನ ಅಟ್ರ್ಯಾಕ್ಟ್ ಮಾಡಿತ್ತು.
ದೈವದ ಮೇಲೆ ಒಬ್ಬರಿಗೆ ಒಂದೊಂದು ರೀತಿ ನಂಬಿಕೆಗಳು ಇರುತ್ತವೆ. ಸಿನಿಮಾ ಅಂತ ಬಂದಾಗ ಆ ಎಲ್ಲ ತರ್ಕಗಳು ಪಕ್ಕಕ್ಕೆ ಸರಿದು ಬಿಡುತ್ತವೆ. ಕಾಂತಾರ ಚಿತ್ರದ ವಿಚಾರದಲ್ಲೂ ಈಗ ಅದೇ ಆಗಿದೆ.


ಕಾಂತಾರ ಚಿತ್ರದ ಕೊನೆ ದೃಶ್ಯದ ಬಗ್ಗೆ ಭಾರೀ ಪ್ರಶಂಸೆ
ಕಾಂತಾರ ಸಿನಿಮಾವನ್ನ ಎಲ್ಲರೂ ನೋಡುತ್ತಿದ್ದಾರೆ. ದೈವ ರೂಪಿ ರಿಷಬ್ ಶೆಟ್ಟಿಯವರ ಕೊನೆಯ ಆ ದೃಶ್ಯದ ಬಗ್ಗೆ ಅತಿ ಹೆಚ್ಚು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿ ದೈವವೇ ಸಿನಿಮಾ ಗೆಲುವಿಗೆ ಕಾರಣವಾದಂತಾಗಿದೆ.


ಇದನ್ನೂ ಓದಿ: Pawan Wadeyar: ಬಾಲಿವುಡ್​ಗೆ ಕಾಲಿಟ್ಟ ಪವನ್ ಒಡೆಯರ್! ಕ್ರಿಕೆಟರ್ ಹರ್ಭಜನ್ ಪತ್ನಿ ಗೀತಾ ಬಸ್ರಾ ಹೀರೋಯಿನ್


ಬಾಲಿವುಡ್​​ಗೂ ಕಾಲಿಟ್ಟ ಕಾಂತಾರ ಪಂಜುರ್ಲಿ ದೈವ
ರಿಷಬ್ ಶೆಟ್ಟಿ ತಮ್ಮ ಈ ಚಿತ್ರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗಬೇಕು ಅಂತಲೇ ಕನಸು ಕಂಡಿದ್ದರು. ದೈವ ಕೃಪೆಯಿಂದಲೇ ಅದು ಈಗ ಸಾಕಾರಗೊಂಡಿದೆ. ಚಿತ್ರದ ಮೊಟ್ಟ ಮೊದಲ ಹಿಂದಿ ಟ್ರೈಲರ್ ರಿಲೀಸ್​ಗೆ ರೆಡಿ ಆಗಿದೆ.


Kannada Kantara Film Hindi Trailer Going To Release on this October 09
ಇದೇ 09 ರಂದು ಕಾಂತಾರ ಚಿತ್ರದ ಮೊದಲ ಹಿಂದಿ ಟ್ರೈಲರ್ ರಿಲೀಸ್


ಅಕ್ಟೋಬರ್​-09 ರಂದು ಕಾಂತಾರ ಚಿತ್ರದ ಟ್ರೈಲರ್ ರಿಲೀಸ್
ಕಾಂತಾರ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತದೆ. ತೆಲುಗು,ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಡಬ್ಬಿಂಗ್ ಆಗಲಿದೆ. ಅದೇ ರೀತಿಯ ಹೊಂಬಾಳೆ ಪ್ರೋಡಕ್ಷನ್ ಹೌಸ್ ಚಿತ್ರದ ಮೊದಲ ಹಿಂದಿ ಟ್ರೈಲರ್ ಅನ್ನ ಇದೇ 9 ರಂದು ರಿಲೀಸ್ ಮಾಡುತ್ತಿದೆ.


09 ನೇ ತಾರೀಖು ಬೆಳಗ್ಗೆ 9.10ಕ್ಕೆ ಹಿಂದಿ ಟ್ರೈಲರ್ ರಿಲೀಸ್
ಹೌದು, ಕಾಂತಾರ ಚಿತ್ರದ ಹಿಂದಿ ಟ್ರೈಲರ್ ರಿಲೀಸ್​ ಗೆ ಟೈಮ್​ ಕೂಡ ಫಿಕ್ಸ್ ಆಗಿದೆ. ಅಕ್ಟೋಬರ್-09 ರಂದು ಬೆಳ್ಳಿಗ್ಗೆ 9 ಗಂಟೆ 10 ನಿಮಿಷಕ್ಕೆ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ: Rishab Shetty Son: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮುದ್ದಿನ ಮಗ ಇವನು!


ಕನ್ನಡದ ಕಾಂತಾರ ಸಿನಿಮಾ ಹಿಂದಿಯಲ್ಲೂ ಬರ್ತಾಯಿದೆ. ಸದ್ಯಕ್ಕೆ ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತಿದೆ. ಆದರೆ, ಕಾಂತಾರ ಹಿಂದಿ ಸಿನಿಮಾ ರಿಲೀಸ್ ಯಾವಾಗ ಅನ್ನೋದನ್ನ ಪ್ರೋಡಕ್ಷನ್ ಹೌಸ್ ಇನ್ನೂ ಎಲ್ಲೂ ಹೇಳಿಕೊಂಡಿಲ್ಲ. ಬದಲಾಗಿ, 9 ರಂದು ಟ್ರೈಲರ್ ರಿಲೀಸ್ ಅಂತ ಮಾತ್ರ ಈಗ ಹೇಳಿದೆ.


ಟ್ರೈಲರ್ ರಿಲೀಸ್ ದಿನವೇ ಹಿಂದಿ ಕಾಂತಾರ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಬಹುದು ವೇಟ್ ಮಾಡಿ.

First published: