• Home
  • »
  • News
  • »
  • entertainment
  • »
  • Sapthami Gowda: ಬದಲಾಯ್ತು ಕಾಂತಾರ ಹುಡ್ಗಿ ಲಕ್​; ಸಪ್ತಮಿ ಗೌಡಗೆ ಸಾಲು ಸಾಲು ಆಫರ್​!

Sapthami Gowda: ಬದಲಾಯ್ತು ಕಾಂತಾರ ಹುಡ್ಗಿ ಲಕ್​; ಸಪ್ತಮಿ ಗೌಡಗೆ ಸಾಲು ಸಾಲು ಆಫರ್​!

ಕಾಂತಾರದ ಲೀಲಾ ಸಪ್ತಮಿ ಗೌಡ ಈಗ ಫುಲ್ ಬ್ಯುಸಿ

ಕಾಂತಾರದ ಲೀಲಾ ಸಪ್ತಮಿ ಗೌಡ ಈಗ ಫುಲ್ ಬ್ಯುಸಿ

ಉತ್ತರಕಾಂಡ ಸಿನಿಮಾದಲ್ಲೂ ಸಪ್ತಮಿ ಗೌಡ ಅಭಿನಯಿಸ್ತಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಕಾಂತಾರ ಸಿನಿಮಾ ನಿರ್ಮಿಸಿದ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ ಅವರೇ ಉತ್ತರಕಾಂಡ ಚಿತ್ರ ನಿರ್ಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಾತು ಕೇಳಿ ಬರ್ತಿದೆ ಅಂದ್ರೂ ತಪ್ಪಿಲ್ಲ ಬಿಡಿ.

  • News18 Kannada
  • Last Updated :
  • Bangalore [Bangalore], India
  • Share this:

ಕಾಂತಾರ ಸಿನಿಮಾದ ಚೆಲುವೆ (Sapthami Gowda) ಸಪ್ತಮಿ ಗೌಡ ಬೇಡಿಕೆ ಹೆಚ್ಚುತ್ತಿದೆ. ಕಾಂತಾರ ಸಿನಿಮಾ ಹಿಟ್ ಆಗಿದ್ದೇ ತಡ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಬೇಡಿಕೆ ಬಂದಿದೆ. ಕಾಂತಾರ (Kantara Movie) ಸಿನಿಮಾ ಮಾಡಿದ ಮೋಡಿನೇ ಹಾಗಿದೆ ಅಲ್ವೇ? ಕಾಂತಾರದ ಗೆಲುವು ಇಡೀ ಇಂಡಸ್ಟ್ರೀಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಅದೇ ಸಪ್ತಮಿ ಗೌಡ ಇನ್ನು ಸಿನಿಮಾ (Cinema Promotion) ಪ್ರಚಾರ ಅಂತಲೇ ಓಡಾಡುತ್ತಿದ್ದಾರೆ. ಅದಕ್ಕೂ ಮೊದಲೇ ಸಪ್ತಮಿ ಹುಡುಕಿಕೊಂಡು ಅನೇಕ ಕಥೆಗಳು ಬಂದಿವೆ. ಆದರೆ ಯಾವುದು ಇನ್ನೂ (Finle) ಫೈನಲ್ ಆಗಿಲ್ಲ. ಆದರೂ ಕನ್ನಡ ಇಂಡಸ್ಟ್ರೀಯಲ್ಲಿ ಈಗ ಒಂದಷ್ಟು ಹೊಸ ಪ್ರೋಜೆಕ್ಟ್​ಗಳ ವಿಷಯ ಭಾರೀ ವೈರಲ್ ಆಗುತ್ತಿದೆ.


ಕಾಂತಾರ ಕಾಡಿನ ಹೂವಿಗೆ ಹೆಚ್ಚಿದೆ ಭಾರೀ ಬೇಡಿಕೆ
ಕನ್ನಡದ ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಬೇಡಿಕೆ ಹೆಚ್ಚುತ್ತಿದೆ. ಮೊದಲ ಸಿನಿಮಾ ಪಾಪ್ ಕಾರ್ನ್​ ಮಂಕಿ ಟೈಗರ್ ಚಿತ್ರದಲ್ಲಿ ಸಪ್ತಮಿ ಗೌಡ, ಗಿರಿಜಾ ಹೆಸರಿನ ಕ್ಯಾರೆಕ್ಟರ್ ನಿಭಾಯಿಸಿದ್ದರು. ಆದರೆ ಇದು ಅಷ್ಟೇನೂ ಜನಕ್ಕೆ ರೀಚ್ ಆಗಲೇ ಇಲ್ಲ.


ಕಾಂತಾರ ಸಿನಿಮಾದ ಲೀಲಾ ಪಾತ್ರ ಈಗ ಅತಿ ಹೆಚ್ಚು ಜನರನ್ನ ತಲುಪಿದೆ. ಸಿಂಗಾರ ಸಿರಿಯೇ ಹಾಡುನ್ನ ಮೆಚ್ಚಿದ ಜನ ಲೀಲಾ ಪಾತ್ರವನ್ನ ಮೆಚ್ಚಿಕೊಂಡು ಕೊಂಡಾಡಿದ್ದಾರೆ.


ಕಾಂತಾರದ ಲೀಲಾ ಸಪ್ತಮಿ ಗೌಡ ಈಗ ಫುಲ್ ಬ್ಯುಸಿ
ಕಾಂತಾರ ಸಿನಿಮಾ ಹಿಟ್ ಆದ್ಮೇಲೆ ಸಪ್ತಮಿ ಗೌಡ ಫುಲ್ ಬ್ಯುಸಿ ಆಗಿದ್ದಾರೆ. ಚಿತ್ರದ ಪ್ರಚಾರದಲ್ಲಿಯೆ ಅತಿ ಹೆಚ್ಚು ಟೈಮ್ ಹೋಗಿದೆ. ಸಿನಿಮಾ ಬಹು ಭಾಷೆಯಲ್ಲಿಯೇ ರಿಲೀಸ್ ಆಗಿದೆ.


Kantara Film Heroin Sapthami Gowda Next New Project Details
ಕಾಂತಾರ ಕಾಡಿನ ಹೂವಿಗೆ ಹೆಚ್ಚಿದೆ ಭಾರೀ ಬೇಡಿಕೆ


ಇದರಿಂದ ಜನ ಹೀರೋ ಮತ್ತು ಹೀರೋಯಿನ್ ನೋಡಲು ಇಷ್ಟಪಡ್ತಾರೆ. ಹಾಗಾಗಿಯೇ ರಿಷಬ್ ಮತ್ತು ಸಪ್ತಮಿ ಗೌಡ ಹೊರಗಡೆ ಪ್ರಚಾರಕ್ಕಾಗಿಯೇ ಇನ್ನೂ ಓಡಾಡ್ತಿದ್ದಾರೆ. ಆದರೆ, ಬೆನ್ನಲ್ಲಿಯೇ ಸಪ್ತಮಿ ಗೌಡ ರನ್ನ ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂದು ಕೆಲವು ಡೈರೆಕ್ಟರ್ಸ್ ಯೋಚನೆ ಮಾಡುತ್ತಿದ್ದಾರೆ.


ಅಭಿಷೇಕ್ ಅಂಬರೀಶ್ ಜೊತೆಯಾಗ್ತಾರಾ ಸಪ್ತಮಿ ಗೌಡ?
ಕನ್ನಡ ಇಂಡಸ್ಟ್ರೀಯಲ್ಲಿ ಸದ್ಯ ಇದೇ ಮಾತು ಹೆಚ್ಚು ಚರ್ಚೆ ಆಗುತ್ತಿದೆ. ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಒಪ್ಪಿಕೊಂಡ ಸಿನಿಮಾ ಒಂದಕ್ಕೆ ಸಪ್ತಮಿ ಗೌಡ ಅವರ ಆಯ್ಕೆ ಆಗುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ ಯಾವುದು ಅಧಿಕೃತಗೊಂಡಿಲ್ಲ ಅಷ್ಟೆ. ಈ ಬಗ್ಗೆ ಸಿನಿಮಾ ತಂಡಗಳೂ ಎಲ್ಲೂ ಅಧಿಕೃತ ಮಾಹಿತಿ ಕೊಟ್ಟಿಲ್ಲ ನೋಡಿ.


ಇದನ್ನೂ ಓದಿ: Sukesh Chandrashekhar-Jacqueline Fernandez: ಯಾಕಿನ್ನೂ ಜಾಕ್ಲಿನ್ ಅರೆಸ್ಟ್ ಆಗಿಲ್ಲ? ಇಡಿಗೆ ಕೋರ್ಟ್ ಕ್ಲಾಸ್


ಕನ್ನಡದ ಯುವ ನಿರ್ದೇಶಕರೊಬ್ಬರು ಕಾಂತಾರ ಸಿನಿಮಾ ಹಿಟ್ ಆಗೋ ಮುಂಚೇನೆ ಸಪ್ತಮಿ ಗೌಡರನ್ನ ಅಪ್ರೋಚ್ ಮಾಡಿದ್ದರು. ಚಿತ್ರದ ಟ್ರೈಲರ್ ಮತ್ತು ಹಾಡನ್ನ ನೋಡಿಯೇ ತಮ್ಮ ಚಿತ್ರದ ಪಾತ್ರಕ್ಕೆ ಈ ನಟಿ ಸೂಟೇಬಲ್ ಅಂತಲೇ ತಾವೇ ನಂಬರ್ ಕಲೆಕ್ಟ್ ಮಾಡಿಯೇ ಅಪ್ರೋಚ್ ಮಾಡಿದ್ದರು. ಸಪ್ತಮಿ ಗೌಡ ಕೂಡ ಆ ಬಗ್ಗೆ ಇಂಟ್ರಸ್ಟ್ ತೋರಿದ್ದರು.


ಉತ್ತರಕಾಂಡ ಸಿನಿಮಾದಲ್ಲಿ ಸಪ್ತಮಿ ಗೌಡ ಅಭಿನಯಿಸ್ತಾರಾ?
ಸ್ಯಾಂಡಲ್​​ವುಡ್ ಕ್ವೀನ್ ರಮ್ಯ ಹಾಗೂ ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾದಲ್ಲೂ ಸಪ್ತಮಿ ಗೌಡ ಅಭಿನಯಿಸ್ತಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಕಾಂತಾರ ಸಿನಿಮಾ ನಿರ್ಮಿಸಿದ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ ಅವರೇ ಉತ್ತರಕಾಂಡ ಚಿತ್ರ ನಿರ್ಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಾತು ಕೇಳಿ ಬರ್ತಿದೆ ಅಂದ್ರೂ ತಪ್ಪಿಲ್ಲ ಬಿಡಿ.


ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಪ್ರಚಾರದ ಕೆಲಸ ಮುಗಿದ ಮೇಲೆ ಒಂದಷ್ಟು ದಿನ ಬ್ರೇಕ್ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆ. ಅದು ಹೆಚ್ಚು ಕಡಿಮೆ ಒಂದೂವರೆ ತಿಂಗಳೂ ಆಗಬಹುದು. ಆ ಮಧ್ಯೆದಲ್ಲಿ ಒಂದಷ್ಟು ಕಥೆಯನ್ನು ಕೂಡ ಕೇಳಬಹುದು. ಸಿನಿಮಾಗಳನ್ನೂ ಒಪ್ಪಿಕೊಳ್ಳಬಹುದು.


Kantara Film Heroin Sapthami Gowda Next New Project Details
ಉತ್ತರಕಾಂಡ ಸಿನಿಮಾದಲ್ಲಿ ಸಪ್ತಮಿ ಗೌಡ ಅಭಿನಯಿಸ್ತಾರಾ?


ಸಪ್ತಮಿ ಗೌಡ ಅಧಿಕೃತವಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೆ ಈ ಹಿಂದೆ ತಮ್ಮ ಟ್ವಿಟರ್ ನಲ್ಲಿ ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಅಂತಲೇ ಬರೆದುಕೊಂಡಿದ್ದರು.


ಇದನ್ನೂ ಓದಿ: Mrunal Thakur: ನ್ಯೂಯಾರ್ಕ್​ ನಗರ ಸುತ್ತುತ್ತಿದ್ದಾರೆ ಸೀತಾ ಮಹಾಲಕ್ಷ್ಮಿ! ಸೀತಾರಾಮಂ ನಟಿಯ ವೆಕೇಷನ್ ಫೋಟೋಸ್


ನ್ಯೂಸ್-18 ಕನ್ನಡ ಡಿಜಿಟಲ್​ಗೆ ಮಾತನಾಡಿದಾಗ, ನಾನು ಒಂದು ಕ್ಲಾಸಿಕ್ ಲವ್ ಸ್ಟೋರಿ ಚಿತ್ರದಲ್ಲಿ ಅಭಿನಯಸಿಬೇಕು ಅಂತಲೂ ಹೇಳಿಕೊಂಡಿದ್ದರು ಅಷ್ಟೆ.

First published: