• Home
  • »
  • News
  • »
  • entertainment
  • »
  • Rishab Shetty: ಹಿಂದಿ ಸಿನಿಮಾ ಮಾಡೋದಿಲ್ಲ, ನನ್ನ ಸಿನಿಮಾವನ್ನೇ ಹಿಂದಿಗೆ ಡಬ್ ಮಾಡ್ತೀನಿ! ಬಾಲಿವುಡ್‌ ಮಂದಿಗೆ ರಿಷಬ್ ದಿಟ್ಟ ಉತ್ತರ

Rishab Shetty: ಹಿಂದಿ ಸಿನಿಮಾ ಮಾಡೋದಿಲ್ಲ, ನನ್ನ ಸಿನಿಮಾವನ್ನೇ ಹಿಂದಿಗೆ ಡಬ್ ಮಾಡ್ತೀನಿ! ಬಾಲಿವುಡ್‌ ಮಂದಿಗೆ ರಿಷಬ್ ದಿಟ್ಟ ಉತ್ತರ

ಬಾಲಿವುಡ್ ಮಾಧ್ಯಮಕ್ಕೆ ರಿಷಬ್ ಏನ್ ಹೇಳಿದ್ರು ಗೊತ್ತೇ?

ಬಾಲಿವುಡ್ ಮಾಧ್ಯಮಕ್ಕೆ ರಿಷಬ್ ಏನ್ ಹೇಳಿದ್ರು ಗೊತ್ತೇ?

ರಿಷಬ್ ಶೆಟ್ಟಿ ಮಾತನಾಡಿಸಲು ಬಾಲಿವುಡ್ ಮಾಧ್ಯಮಗಳೂ ಮುಗಿ ಬೀಳುತ್ತವೆ. ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಕಾಂತಾರ ಚಿತ್ರಕ್ಕಿರೋ ಕ್ರೇಜ್ ಮತ್ತಷ್ಟು ಇನ್ನಷ್ಟು ಹೆಚ್ಚಿಸುತ್ತಿವೆ. ಮುಂಬೈ ಮಾಧ್ಯಮಗಳ ಪ್ರಶ್ನೆಗೆ ರಿಷಬ್ ಈ ರೀತಿ ಉತ್ತರಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Super Hit) ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಬಂದು ಒಂದು ತಿಂಗಳು ಕಳೆದರೂ ಅಷ್ಟೇ, ಮೊದಲ ದಿನ ಹೇಗೆ ಕ್ರೇಜ್ ಇತ್ತೋ ಅದೇ ರೀತಿನೇ ಕಾಂತಾರ (Kantara Craze) ಕ್ರೇಜ್ ಮುಂದುವರೆದಿದೆ. ಇಲ್ಲಿವರೆಗೂ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಖ್ಯಾತಿನೂ ಈ ಚಿತ್ರಕ್ಕೇನೆ ಸಲ್ಲುತ್ತದೆ. ಇಂತಹ ಈ ಚಿತ್ರದ ಜನ ಈಗ ಸಿನಿಮಾವನ್ನ ನೋಡಿ ಹೇಗೆ ರಿಯಾಕ್ಟ್ ಮಾಡ್ತಾದ್ದಾರೆ? ಈ ಒಂದು ಪ್ರಶ್ನೆ ಹಿನ್ನೆಲೆಯಲ್ಲಿಯೇ ನಟ-ನಿರ್ದೇಶಕ ರಿಷಬ್ (Rishab Shetty) ಶೆಟ್ಟಿ ಈಗ ಎಲ್ಲೆಡೆ ಸುತ್ತುತ್ತಿದ್ದಾರೆ. ಮುಂಬೈನಲ್ಲೂ ರಿಷಬ್ ಮಾಧ್ಯಮಕ್ಕೂ ಮಾತನಾಡಿದ್ದಾರೆ. ಇದೇ ವೇಳೆನೆ ರಿಷಬ್ (Rishab) ಈಗೊಂದು ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಇದು ಕನ್ನಡಿಗರೆಲ್ಲ ಹೆಮ್ಮೆ ಪಡುವೆ ರೀತಿನೇ ಇದೆ.


ಬಾಲಿವುಡ್​ ನಲ್ಲಿ ರಿಷಬ್ ಶೆಟ್ಟಿ ಫುಲ್ ಹವಾ
ಕಾಂತಾರ ಸಿನಿಮಾದ ಹವಾ ದೊಡ್ಡಮಟ್ಟದಲ್ಲಿಯೇ ಇದೆ. ಬಾಲಿವುಡ್​ ನಲ್ಲಿ ಈ ಸಿನಿಮಾ ಕಿಚ್ಚು ಜೋರಾಗಿಯೇ ಇದೆ. ಬಾಲಿವುಡ್​ ಮಂದಿನೂ ಈಗ ಕನ್ನಡದ ಹಿಂದಿ ಡಬ್ ಕಾಂತಾರ ಕಂಡು ದಿಲ್ ಖುಷ್ ಹುವಾ ಅಂತಿದ್ದಾರೆ.


ಇಷ್ಟೊಂದು ಕ್ರೇಜ್ ಹುಟ್ಟಿಸಿದ ಕಾಂತಾರ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಜನ ಥೀಯಟರ್​ಗೆ ಇಲ್ಲೂ ನುಗ್ಗಿ ಬರುತ್ತಿದ್ದಾರೆ. ದಕ್ಷಿಣದ ಸ್ಥಳೀಯ ಕಂಟೆಂಟ್​ಗಳನ್ನ ಒಪ್ಪಿಕೊಂಡು ಬಿಗಿದಪ್ಪಿದ್ದಾರೆ.


ಬಾಲಿವುಡ್​ನಲ್ಲಿ ಕಾಂತಾರ ಸಿನಿಮಾ ಕಮಾಲ್
ಬಾಲಿವುಡ್ ನಲ್ಲಿ ಕನ್ನಡ ಸಿನಿಮಾಗಳು ಓಡೋದು ಕಡಿಮೇನೆ. ಈ ಹಿಂದೆ ಕೆಆರ್​ಜಿಯ ಕೆಜಿಎಫ್ ಕಮಾಲ್ ಮಾಡಿತ್ತು. ಈಗ ಇದೇ ಕೆಆರ್​ಜಿಯ ಕಾಂತಾರ ಇಡೀ ಬಾಲಿವುಡ್ ನಲ್ಲಿ ಹೊಸ ಅಲೆಯನ್ನೆ ಎಬ್ಬಿಸಿದೆ.


Kantara Film Hero Rishab Shetty Shocking Statement
ಬಾಲಿವುಡ್​ನಲ್ಲಿ ಕಾಂತಾರ ಸಿನಿಮಾ ಕಮಾಲ್


ಕಾಂತಾರ ಸಿನಿಮಾದ ಹವಾ ನಿಜಕ್ಕೂ ರಿಯಲ್ ಆಗಿದೆ. ಇದನ್ನ ಎಲ್ಲರೂ ಈಗಾಗಲೇ ಗಮನಿಸಿದ್ದಾರೆ. ಸಿನಿಮಾ ರಿಲೀಸ್ ಮುಂಚೇನೆ ಬಾಲಿವುಡ್ ನಲ್ಲಿ ರಿಷಬ್ ಶೆಟ್ಟಿ ಪ್ರಚಾರ ಮಾಡಲು ಹೋಗಿದ್ದರು. ಈಗ ಸಿನಿಮಾ ಬಂದ್ಮೇಲೆ ಮತ್ತೆ ಬಾಲಿವುಡ್ ಪಯಣ ಬೆಳೆಸಿದ್ದಾರೆ.


ಬಾಲಿವುಡ್ ಮಾಧ್ಯಮಕ್ಕೆ ರಿಷಬ್ ಏನ್ ಹೇಳಿದ್ರು ಗೊತ್ತೇ?
ಬಾಲಿವುಡ್​ ನಲ್ಲಿ ರಿಷಬ್ ಶೆಟ್ಟಿಯ ಕ್ರೇಜ್ ತುಂಬಾ ಇದೆ. ಸಿನಿಮಾ ನೋಡಿದ ಮಂದಿ ರಿಷಬ್ ಜೊತೆಗೆ ಒಂದು ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರೆ. ಇಷ್ಟೊಂದು ಹವಾ ಕ್ರಿಯೇಟ್ ಮಾಡಿರೋ ರಿಷಬ್ ಶೆಟ್ಟಿ, ನೋಡಿದ್ರೆ ಎಲ್ಲರಿಗೂ ಅದೇನೋ ಖುಷಿ ಆಗುತ್ತಿದೆ.


ಇದನ್ನೂ ಓದಿ: Rashmika Mandanna on Kantara: ನಾ ಇನ್ನೂ ಕಾಂತಾರ ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ! ಜಾಲತಾಣದಲ್ಲಿ ಜನ್ಮ ಜಾಲಾಡಿದ ನೆಟ್ಟಿಗರು!


ರಿಷಬ್ ಶೆಟ್ಟಿ ಮಾತನಾಡಿಸಲು ಬಾಲಿವುಡ್ ಮಾಧ್ಯಮಗಳೂ ಮುಗಿ ಬೀಳುತ್ತವೆ. ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಕಾಂತಾರ ಚಿತ್ರಕ್ಕಿರೋ ಕ್ರೇಜ್ ಮತ್ತಷ್ಟು ಇನ್ನಷ್ಟು ಹೆಚ್ಚಿಸುತ್ತಿವೆ. ಮಾಧ್ಯಮಗಳು ಹಿಂದಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಹಿಂದಿಯಲ್ಲಿ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.


ನಾನು ಹಿಂದಿ ಸಿನಿಮಾ ಮಾಡೋದಿಲ್ಲ-ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಬಾಲಿವುಡ್ ಮಾಧ್ಯಮ ಪ್ರಶ್ನೆಗೆ ಸಖತ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಅದರಲ್ಲಿ ತೂರಿ ಬಂದ ಒಂದು ಪ್ರಶ್ನೆ ಬಾಲಿವುಡ್​ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ವಿಷಯವೇ ಆಗಿದೆ. ಇದಕ್ಕೆ ಸಖತ್ ಆಗಿಯೇ ರಿಷಬ್ ಉತ್ತರ ಕೊಟ್ಟಿದ್ದಾರೆ.




"ನಾನು ಹಿಂದಿ ಸಿನಿಮಾ ಮಾಡೋದಿಲ್ಲ- ನನ್ನ ಕನ್ನಡ ಸಿನಿಮಾಗಳನ್ನೆ ಹಿಂದಿಗೆ ಡಬ್ ಮಾಡುವೆ. ಹಿಂದಿ ಚಿತ್ರರಂಗಕ್ಕೆ ಬರುವ ಪ್ಲಾನ್ ಏನೂ ಇಲ್ಲ" ಅನ್ನೋ ಅರ್ಥದಲ್ಲಿಯೇ ರಿಷಬ್ ಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ.


ರಿಷಬ್ ಶೆಟ್ಟಿ ತಮ್ಮ ಈ ಚಿತ್ರದ ಬಗ್ಗೆ ತುಂಬಾ ಮಾತನಾಡಿದ್ದಾರೆ. ನಾನು ಸ್ಥಳೀಯ ಕಂಟೆಟ್ ನ ಸಿನಿಮಾ ಮಾಡಿದ್ದೇನೆ. ಇದನ್ನ ಜನರು ಒಪ್ಪಿಕೊಂಡಿದ್ದಾರೆ. ಕನ್ನಡ ಜನತೆ ಒಪ್ಪಿಕೊಂಡಂತೆ ಬಾಲಿವುಡ್ ಮಂದಿನೂ ಸಿನಿಮಾ ರಿಸೀವ್ ಮಾಡಿದ್ದಾರೆ ಅಂತಲೂ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kantara Movie Varaha Roopam Song: ವರಾಹ ರೂಪಂ ಹಾಡು ಬಳಸಬಹುದು, ಆದರೆ..! ತೈಕ್ಕುಡಂ ಬ್ರಿಡ್ಜ್​ ತಂಡ ಹೇಳಿದ್ದೇನು?


ಕನ್ನಡದ ಕಾಂತಾರ ಸಿನಿಮಾದ ತನ್ನ ಯಶಸ್ವಿ ಪಯಣವನ್ನ ಮುಂದುವರೆಸಿದೆ. ಈಗಲೇ ಏನೂ ಇದರ ಕ್ರೇಜ್ ನಿಲ್ಲುವಂತೆ ಕಾಣೋದಿಲ್ಲ. ಈ ಮೂಲಕ ಕನ್ನಡದ ಹೆಮ್ಮೆಯನ್ನೆ ಕಾಂತಾರ ಹೆಚ್ಚಿಸುತ್ತಲೇ ಸಾಗುತ್ತಿದೆ.

First published: