• Home
  • »
  • News
  • »
  • entertainment
  • »
  • Rishab Shetty: ತನ್ನ ಪತ್ನಿಗೆ ಥ್ಯಾಂಕ್ಸ್ ಹೇಳಿದ ರಿಷಬ್ ಶೆಟ್ಟಿ,ಯಾಕ್ ಗೊತ್ತೇ? ಈ ಸ್ಟೋರಿ ನೋಡಿ

Rishab Shetty: ತನ್ನ ಪತ್ನಿಗೆ ಥ್ಯಾಂಕ್ಸ್ ಹೇಳಿದ ರಿಷಬ್ ಶೆಟ್ಟಿ,ಯಾಕ್ ಗೊತ್ತೇ? ಈ ಸ್ಟೋರಿ ನೋಡಿ

ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಸದಾ ಸಾಥ್ ಸಾಥ್

ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಸದಾ ಸಾಥ್ ಸಾಥ್

ನನ್ನ ನಿನ್ನ ಮೊದಲ ಭೇಟಿಯಿಂದ ಹಿಡಿದು ಇಲ್ಲಿವರೆಗೂ ನನ್ನ ಬಾಳನ್ನ ಬೆಳಗಿದ್ದೀಯಾ. ನೀನು ನೀನಾಗಿಯೇ ನನ್ನ ಜೊತೆಗಿದ್ದು ನನ್ನ ಬದುಕನ್ನ ಬೆಳಗಿದ್ದೀಯಾ. ಸದಾ ನನ್ನ ಬೆನ್ನೆಲುಬಾಗಿರೋ ನಿನಗೆ ಥ್ಯಾಂಕ್ಸ್ ಅಂತಲೇ ರಿಷಬ್ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ ಕಾಂತಾರ (Kantara Cinema) ಸಿನಿಮಾ ಕಮಾಲ್ ಮಾಡ್ತಾನೇ ಇದೆ. ರಿಷಬ್ ಶೆಟ್ಟಿ ಕೂಡ ಈ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕನ್ನಡದ (Kannada Cinema) ಸಿನಿಮಾಗಳ ಗತ್ತನ್ನೂ ಕೂಡ ಕಾಂತಾರ ಚಿತ್ರದ ಮೂಲಕವೇ ಎಲ್ಲರಿಗೂ ತಿಳಿಸಿದ್ದಾರೆ. ಕಾಂತಾರ ಸಿನಿಮಾ ಹಲವು ದಾಖಲೆಗಳನ್ನ (Record) ಮಾಡ್ತಾನೇ ಸಾಗುತ್ತಿದೆ. ರಿಷಬ್​ ಕೂಡ ರಿಲೀಸ್ ಮುಂಚೆ ಮತ್ತು ರಿಲೀಸ್ ನಂತರ ಅನ್ನೋ ಹಾಗೆ ಎರಡನೇ ಬಾರಿ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್​ ನಲ್ಲಿ ಮತ್ತೊಮ್ಮೆ ಸಂಚಾರ ಮಾಡಿದ್ದಾರೆ. ಇಷ್ಟೆಲ್ಲ ಓಡಾಟ, ಪ್ರಚಾರದ ಒತ್ತಡ, ಫ್ಯಾನ್ಸ್ ಕ್ರೇಜ್ ಎಲ್ಲದರ ಮಧ್ಯೆನೂ ರಿಷಬ್ (Rishab Shetty) ಶೆಟ್ಟಿ ಈಗ ತಮ್ಮ ಪತ್ನಿಗೆ ಥ್ಯಾಂಕ್ಸ್ ಹೇಳಿದ್ದಾರೆ.


ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಸದಾ ಸಾಥ್ ಸಾಥ್
ರಿಷಬ್ ಶೆಟ್ಟಿ ಹಿಂದೆ ಒಂದು ಶಕ್ತಿ ಇದೆ. ಆ ಶಕ್ತಿಯ ಹೆಸರು ಪ್ರಗತಿ ಶೆಟ್ಟಿ. ಪತಿಯ ಪ್ರತಿ ಕೆಲಸದಲ್ಲೂ ಸಾಥ್ ಕೊಡ್ತಾರೆ. ಪ್ರತಿ ಹೆಜ್ಜೆಯಲ್ಲೂ ಜೊತೆಗೇನೆ ಇದ್ದಾರೆ. ಇಬ್ಬರು ಮಕ್ಕಳ ಜೊತೆಗೆ ಒಪ್ಪಿಕೊಂಡ ಕಾಸ್ಟೂಮ್ ಡಿಸೈನಿಂಗ್ ಪ್ರೋಜೆಕ್ಟ್​ ಗಳನ್ನೂ ಅಷ್ಟೇ ಯಶಸ್ವಿಯಾಗಿಯೇ ಪೂರ್ಣಗೊಳಿಸಿದ್ದಾರೆ.


ಕಾಂತಾರ ಚಿತ್ರಕ್ಕೆ ರಿಷಬ್ ಶೆಟ್ಟಿ ಒಬ್ರೇ ಕೆಲಸ ಮಾಡಿಲ್ಲ. ದೊಡ್ಡ ಟೀಮ್ ಈ ಚಿತ್ರಕ್ಕಾಗಿಯೇ ಕೆಲಸ ಮಾಡಿದೆ. ಇದರ ಮಧ್ಯೆ ರಿಷಬ್​ ಪತ್ನಿ ಪ್ರಗತಿ ಕೂಡ ತಂಡದ ಒನ್ ಆಫ್ ದಿ ಮೆಂಬರ್ ಆಗಿದ್ದಾರೆ.


Kantara Film Hero Rishab Shetty Says Thanks to his wife Pragathi Shetty
ಕಾಂತಾರ ಚಿತ್ರಕ್ಕೆ ಪ್ರಗತಿ ಶೆಟ್ಟಿ ಕಾಸ್ಟೂಮ್ ಡಿಸೈನ್


ಕಾಂತಾರ ಚಿತ್ರಕ್ಕೆ ಪ್ರಗತಿ ಶೆಟ್ಟಿ ಕಾಸ್ಟೂಮ್ ಡಿಸೈನ್
ಹೌದು, ಕಾಂತಾರ ಸಿನಿಮಾದಲ್ಲಿ 1847, 1970 ಮತ್ತು 1990 ರ ದಶಕದ ದಿನಗಳನ್ನ ಕ್ರಿಯೇಟ್ ಮಾಡಲಾಗಿದೆ. ಇದಕ್ಕಾಗಿಯೇ ಅಂದಿನ ಉಡುಗೆ-ತೊಡುಗೆಯನ್ನೂ ಅಷ್ಟೇ ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ನಿಜ, ಇದು ಇಡೀ ಚಿತ್ರಕ್ಕೆ ಅಂದಿನ ಫೀಲ್ ತಂದು ಕೊಟ್ಟಿದೆ.


ಇದನ್ನೂ ಓದಿ:  Yash Son: ಯಶ್ ಮಗ ಯಥರ್ವ್ ಬರ್ತ್​ಡೇ, ರಾಧಿಕಾ ಪಂಡಿತ್ ಲವ್ಲೀ ವಿಶ್


ಕಾಂತಾರ ಸಿನಿಮಾದ ಕಾಸ್ಟೂಮ್ ಡಿಸೈನಿಂಗ್ ಕೆಲಸವನ್ನ ಪ್ರಗತಿ ಶೆಟ್ಟಿ ಮಾಡಿದ್ದಾರೆ. ಸಾಕಷ್ಟು ಸಂಶೋಧನೆಯನ್ನೂ ಇದಕ್ಕಾಗಿಯೇ ಮಾಡಿದ್ದಾರೆ. ಹೀಗೆ ಕಾಂತಾರ ಸಿನಿಮಾದ ಜೊತೆಗೆ ಇದ್ದ ಪ್ರಗತಿ ಶೆಟ್ಟಿ, ಚಿತ್ರದಲ್ಲಿ ಬರುವ ರಾಜಾ-ರಾಣಿ ಕಥೆಯಲ್ಲಿ ತಮ್ಮ ಮಕ್ಕಳೊಟ್ಟಿಗೆ ರಾಣಿಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.


ಪ್ರಗತಿ ಶೆಟ್ಟಿಗೆ ತಾವು ಸಿನಿಮಾದಲ್ಲಿ ರಾಣಿ ಪಾತ್ರ ಮಾಡ್ತೀದ್ದೀನಿ ಅನ್ನೋ ಪ್ಲಾನ್ ಕೂಡ ಇರಲಿಲ್ಲ. ರಾಜಾ ಸಿಕ್ಕಿದ್ದಾನೆ. ರಾಣಿಯ ಹುಡುಕಾಟ ನಡೆದಿದೆ ಅಂತಲೇ ಹೇಳಿದ್ದರು. ಆದರೆ ಕೊನೆ ಟೈಮ್​ನಲ್ಲಿ ರಾಣಿಯ ಪಾತ್ರಕ್ಕಾಗಿ ಪ್ರಗತಿಯನ್ನೆ ರಿಷಬ್ ಫೈನಲ್ ಮಾಡಿದ್ದರು. ಅದು ಒಂದು ರೀತಿ ಪ್ರಗತಿಗೆ ಶಾಕ್ ಕೂಡ ಆಗಿತ್ತು.


Kantara Film Hero Rishab Shetty Says Thanks to his wife Pragathi Shetty
ಪ್ರಗತಿ ಶೆಟ್ಟಿಗೆ ಕೊನೆಗೂ ಥ್ಯಾಂಕ್ಸ್ ಹೇಳಿದ ಪತಿದೇವ ರಿಷಬ್ ಶೆಟ್ಟಿ


ಆದರೆ ಅಷ್ಟೇ ಖುಷಿಯನ್ನೂ ತಂದುಕೊಟ್ಟಿತ್ತು. ಮಕ್ಕಳು ಇನ್ನು ಚಿಕ್ಕವರು ಅಲ್ಲವೇ. ಎಲ್ಲರೂ ಸೇರಿ ಸೆಟ್ ಹೋಗಿದ್ದರು. ಅಭಿನಯಕ್ಕೆ ಅಭಿನಯ, ಫ್ಯಾಮಿಲಿಗೆ ಟೈಮ್ ಕೊಟ್ಟ ಖುಷಿ ಅನ್ನೋ ಹಾಗೆ ರಿಷಬ್ ಫ್ಯಾಮಿಲಿ ಜೊತೆಗೇನೆ ಕಾಂತಾರ ಸಿನಿಮಾ ಮಾಡಿದ್ದಾರೆ.


ಪತ್ನಿ ಪ್ರಗತಿ ಶೆಟ್ಟಿಗೆ ಥ್ಯಾಕ್ಸ್ ಹೇಳಿದ ರಿಷಬ್ ಶೆಟ್ಟಿ
ನನ್ನ ನಿನ್ನ ಮೊದಲ ಭೇಟಿಯಿಂದ ಹಿಡಿದು ಇಲ್ಲಿವರೆಗೂ ನನ್ನ ಬಾಳನ್ನ ಬೆಳಗಿದ್ದೀಯಾ. ನೀನು ನೀನಾಗಿಯೇ ನನ್ನ ಜೊತೆಗಿದ್ದು ನನ್ನ ಬದುಕನ್ನ ಬೆಳಗಿದ್ದೀಯಾ. ಸದಾ ನನ್ನ ಬೆನ್ನೆಲುಬಾಗಿರೋ ನಿನಗೆ ಥ್ಯಾಂಕ್ಸ್ ಅಂತಲೇ ರಿಷಬ್ ಹೇಳಿದ್ದಾರೆ.


ಇದನ್ನೂ ಓದಿ: Matte Mayamruga: ಮತ್ತೆ ಮಾಯಾಮೃಗದ ಮೊದಲ ಸಂಚಿಕೆಯಲ್ಲಿ ಏನಿತ್ತು ಗೊತ್ತೇ?


ತಮ್ಮ ಮನದಾಳದ ಮಾತನ್ನ ರಿಷಬ್ ಶೆಟ್ಟಿ ಫೇಸ್ ಬುಕ್​ ನಲ್ಲೂ ಬರೆದುಕೊಂಡಿದ್ದಾರೆ. ಈ ಒಂದು ಫೋಸ್ಟ್​ಗೆ ಸಾಕಷ್ಟು ಪಾಸಿಟಿವ್ ಪಾಯಿಂಟ್ಸ್ ಬಂದಿವೆ. ಎಲ್ಲರೂ ರಿಷಬ್-ಪ್ರಗತಿ ಜೋಡಿಗೆ ಗುಡ್ ಕಪಲ್ ಅನ್ನೋ ಅರ್ಥದಲ್ಲಿಯೇ ಕಾಮೆಂಟ್ ಹಾಕಿದ್ದಾರೆ. ಉಳಿದಂತೆ ಸದಾ ಜೊತೆಗೆ ಇರೋ ಪತ್ನಿಗೆ ರಿಷಬ್ ಮನಸಾರೆ ಥ್ಯಾಂಕ್ಸ್ ಹೇಳಿದ್ದಾರೆ.

First published: