• Home
  • »
  • News
  • »
  • entertainment
  • »
  • Rishab Shetty Interview: ನಮ್ಮ ದೈವ ನಮ್ಮ ಸಿನಿಮಾ ಕೈ ಹಿಡೀತು! ನಟ, ನಿರ್ದೇಶಕ ರಿಷಬ್ ಶೆಟ್ಟಿ

Rishab Shetty Interview: ನಮ್ಮ ದೈವ ನಮ್ಮ ಸಿನಿಮಾ ಕೈ ಹಿಡೀತು! ನಟ, ನಿರ್ದೇಶಕ ರಿಷಬ್ ಶೆಟ್ಟಿ

ಕಾಂತಾರ ಚಿತ್ರಕ್ಕೆ ದೈವ ಬಲದ ಶಕ್ತಿ

ಕಾಂತಾರ ಚಿತ್ರಕ್ಕೆ ದೈವ ಬಲದ ಶಕ್ತಿ

ಕಾಂತಾರ ಸಿನಿಮಾವನ್ನ ಡಿವೈನ್ ಬ್ಲಾಕ್​ಬಸ್ಟರ್ ಅಂತಲೂ ಸಿನಿಮಾ ತಂಡ ಕರೆದುಕೊಂಡಿದೆ. ಇದು ಸತ್ಯ ಅನ್ನೋ ಅರ್ಥದಲ್ಲಿಯೇ ಜನ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ. ಇದರಿಂದ ಸಿನಿಮಾ ತಂಡ ತುಂಬಾ ಖುಷಿಯಲ್ಲಿಯೇ ಈಗ ಪ್ರಯಾಣ ಆರಂಭಿಸಿದೆ.

  • Share this:

ಕನ್ನಡದ ಕಾಂತಾರ (Kantara Cinema) ಸಿನಿಮಾದ ವೈಬ್ರೇಷನ್ (Vibration) ಜೋರಾಗಿದೆ. ಚಿತ್ರದ ಬಗ್ಗೆ ಒಂದಿಲ್ಲ ಒಂದು ಸುದ್ದಿ ಈಗ ಭಾರೀ ಗಮನ ಸೆಳೆಯುತ್ತಿದೆ. ಸಿನಿ ಪ್ರೇಮಿಗಳಿಗೆ (Film Lovers) ಚಿತ್ರದ ಕುರಿತು ಭಾರೀ ಕುತೂಹಲ ಕೂಡ ಇದೆ. ಇದನ್ನ ನೋಡಿ ಬಂದವ್ರು ಚಿತ್ರದ ವೈಬ್ರೇಷನ್ ಹೇಗಿದೆ ಅಂತಲೇ ಹೇಳ್ತಾರೆ. ಚಿತ್ರವನ್ನ ನೋಡದೇ ಇರೋರು ಸಿನಿಮಾ (Cinema) ನೋಡಬೇಕಿದೆ. ಚಿತ್ರದಲ್ಲಿ ದೈವ ಚಿತ್ರಣದ ಚೆನ್ನಾಗಿದೆ. ಇದನ್ನ ನೋಡೋಣ ಅಂದ್ರೆ ಟಿಕೆಟ್ ಸಿಗ್ತಿಲ್ಲ ಅನ್ನೋ ಅಭಿಪ್ರಾಯವನ್ನ ಹೇಳಿಕೊಳ್ತಿದ್ದಾರೆ. ಇಷ್ಟೊಂದು ಕ್ರೇಜ್ ಹುಟ್ಟು ಹಾಕಿರೋ ಕಾಂತಾರ ಸಿನಿಮಾ ಜನರನ್ನ ರೀಚ್ ಆಗಲಿಕ್ಕೆ ಏನೂ ಕಾರಣ ಗೊತ್ತೇ.  ಇದರ ಬಗೆಗಿನ ಒಂದಷ್ಟು  ಡಿಟೈಲ್ಸ್ ಇಲ್ಲಿದೆ ಓದಿ.

ಕಾಂತಾರ ಚಿತ್ರದ ಸೆಳೆತದ ಹಿಂದಿನ ರಹಸ್ಯ ಏನು?
ಕಾಂತಾರ ಸಿನಿಮಾ ಜನರನ್ನ ಸೆಳೆಯುತ್ತಲೇ ಇದೆ. ಮೊನ್ನೆ ಶುಕ್ರವಾರ ಸಿನಿಮಾ ಬಂದಿದ್ದೇ ತಡ, ಜನ ಚಿತ್ರ ಮಂದಿರಕ್ಕೂ ಹೋಗಿ ಚಿತ್ರವನ್ನ ನೋಡ್ತಾ ಇದ್ದಾರೆ. ಇದರಿಂದ ಟಿಕೆಟ್ ಕೂಡ ಸಿಗ್ತಾಯಿಲ್ಲ.


ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್​ಗೂ ಟಿಕೆಟ್ ಸಿಗ್ತಿಲ್ಲ ನೋಡಿ. ಇದನ್ನ ನಾವ್ ಹೇಳ್ತಿಲ್ಲ ಅವರೇ ನಮ್ಮೊಟ್ಟಿಗೆ ಈ ಖುಷಿ ಹಂಚಿಕೊಂಡಿದ್ದಾರೆ. ನಮಗೆ ಒಂದು ನಂಬಿಕೆ ಇದೆ. ದೈವ-ದೇವರು-ದೇವಿ ಇವೆಲ್ಲ ನಮ್ಮಲ್ಲಿ ಒಂದು ವೈಬ್ರೇಷನ್ ಕ್ರಿಯೇಟ್ ಮಾಡುತ್ತವೆ. ಪಾಸಿಟಿವ್ ವೈಬ್ರೇಷನ್ ನಿಂದ ಆಯಾ ಸಿನಿಮಾ ಬಗ್ಗೆ ಒಂದು ಸೆಳೆತ ಇದ್ದೇ ಇರುತ್ತದೆ.


Kantara Film Director-Actor Rishab Shetty Believe in Divine Power
ಕಾಂತಾರ ಸಿನಿಮಾ ಪೋಸ್ಟರ್


ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಹಿಂದಿದೆ ದೈವ ಬಲ
ಹೌದು, ಇದಂತೂ ಸತ್ಯ ಬಿಡಿ. ಇದನ್ನ ಸ್ವತಃ ರಿಷಬ್ ನಮ್ಮೊಟ್ಟಿಗೆ ಹೇಳಿಕೊಂಡಿದ್ದಾರೆ. ನಿಮ್ಮ ದೈವ ನಿಮ್ಮ ಕೈ ಹಿಡಿಯಿತೇ ಅಂತ ಕೇಳಿದ ಪ್ರಶ್ನೆಗೆ ಹೌದು ಅಂತಲೇ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.


ಇದು ಸತ್ಯವೂ ಅನಿಸೋಕೆ ಈಗೀನ ಬೆಳವಣಿಗೇನೆ ಕಾರಣ ಅಂತ ಹೇಳಬಹುದು. ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ಹಾಗೂ ಗುಳಿಗಾ ದೈವದ ಚಿತ್ರಣವೇ ಇಲ್ಲಿದೆ. ಈ ಒಂದು ಕಾರಣಕ್ಕೆ ಇಲ್ಲೊಂದು ವೈಬ್ರೇಷನ್ ಕ್ರಿಯೇಟ್ ಆಗಿದೆ.


ಚಿತ್ರದಲ್ಲಿ ದೈವದ ಶಕ್ತಿ ಸಾರುವ ಜಾನಪದ ಹಾಡುಗಳ ಬಳಕೆ
ದೇವರು-ದೇವಿ-ದೈವ ಎಲ್ಲೆಡೆ ಇರುತ್ತವೆ. ನಂಬಿಕೆಗಳೂ ಅಷ್ಟೇ ಅಪಾರವಾಗಿಯೇ ಇರುತ್ತವೆ. ಇಂತಹ ನಂಬಿಕೆಗಳ ಸುತ್ತ ಜಾನಪದ ಹಾಡುಗಳೂ ಹುಟ್ಟಿಕೊಂಡಿರುತ್ತವೆ. ಅಂತಹ ದೈವದ ಹಾಡುಗಳನ್ನ ಕಾಂತಾರ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.


ಇದನ್ನೂಓದಿ: Kantara Ajaneesh Loknath: ಕಾಂತಾರಕ್ಕಾಗಿ 2 ತಿಂಗಳು ನಾನೂ ನಾನ್​ವೆಜ್ ಬಿಟ್ಟಿದ್ದೆ! ಅಜನೀಶ್ ಲೋಕನಾಥ್


ಕಾಂತಾರ ಸಿನಿಮಾ ಆಪ್ತ ಆಗಲಿಕ್ಕೆ ದೈವದ ಬಗ್ಗೆ ನಂಬಿಕೆ ಹೆಚ್ಚಿಸಲಿಕ್ಕೆ ಜಾನಪದ ಹಾಡುಗಳೂ ಕಾರಣ ಆಗುತ್ತವೆ. ಸಹಜವಾಗಿ ಆಯಾ ವ್ಯಕ್ತಿ ಇಂತಹ ಹಾಡುಗಳನ್ನ ಕೇಳಿಯೇ ಬೆಳೆದಿರುತ್ತಾರೆ. ಆದ್ದರಿಂದಲೇ ಕರಾವಳಿ ಭಾಗದ ಜನಕ್ಕೆ ಈ ಸಿನಿಮಾ ಬಹು ಬೇಗ ಕನೆಕ್ಟ್ ಆಗುತ್ತಿದೆ.


ಕಾಂತಾರ ಒಂದು ಸಂಘರ್ಷದ ಕಥೆನೆ ಆಗಿರಬಹುದು. ಆದರೆ ಇಲ್ಲಿ ದೈವದ ನಂಬಿಕೆಯ ಅಸಲಿ ಸತ್ಯವನ್ನ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ತಂದಿದ್ದಾರೆ. ಈ ಕಾರಣಕ್ಕೂ ಸಿನಿಮಾದ ಬಗ್ಗೆ ಸೆಳೆತ ಜಾಸ್ತಿ ಆಗುತ್ತಿದೆ.


ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ಕೆಜಿಎಫ್​​ಗೆ ಹೋಲಿಕೆ
ಕಾಂತಾರ ಸಿನಿಮಾ ಕ್ಲೈಮ್ಯಾಕ್ಸ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಚಿತ್ರದ ಕೊನೆ ಈ ಸಿನಿಮಾದ ಅಸಲಿ ಜೀವಾಳ ಅನ್ನೋರು ಇದ್ದಾರೆ. ಇಡೀ ಚಿತ್ರವನ್ನೂ ಮೆಚ್ಚಿಕೊಂಡವರು ಇದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡ್ತಾ ಹೋದಂತೆ ಒಂದು ವೈಬ್ರೇಷನ್ ಕ್ರಿಯೇಟ್ ಆಗುತ್ತಿದೆ.


ಈ ಒಂದು ಕಾರಣಕ್ಕೋ ಏನೋ, ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ಮತ್ತು ಕೆಜಿಎಫ್ ಚಿತ್ರಗಳ ಕ್ಲೈಮ್ಯಾಕ್ಸ್ ಹೋಲಿಕೆ ಮಾಡಲಾಗುತ್ತಿದೆ. ಅಂದ್ರೆ ಕೆಜಿಎಫ್ ಚಿತ್ರದ ಕ್ಲೈಮ್ಯಾಕ್ಸ್ ಸೂಪರ್, ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಸೂಪರ್, ನಿಮಗೆ ಯಾವುದು ಇಷ್ಟ ಅನ್ನೋ ಅರ್ಥದಲ್ಲಿ ಪೋಸ್ಟ್​​ಗಳು ವೈರಲ್ ಆಗುತ್ತಿವೆ.


ಕಾಂತಾರ ಸಿನಿಮಾದ ಧನ್ಯವಾದ ಅರ್ಪಣೆಯ ಪ್ರಯಾಣ
ಕಾಂತಾರ ಚಿತ್ರ ತಂಡ ಈಗ ಪ್ರಯಾಣ ಆರಂಭಿಸಿದೆ. ತಮ್ಮ ಚಿತ್ರವನ್ನ ಒಪ್ಪಿಕೊಂಡು, ಅಪ್ಪಿಕೊಳ್ಳುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲೆಂದೇ ಇಡೀ ಕಾಂತಾರ ಸಿನಿಮಾ ತಂಡ, ಕುಂದಾಪುರದೆಲ್ಲೆಡೆ ಪ್ರಯಾಣ ಬೆಳೆಸಿದೆ.


Kantara Film Director-Actor Rishab Shetty Believe in Divine Power
ಕಾಂತಾರ ಸಿನಿಮಾದ ದೈವ


ಕಾಂತಾರ ಸಿನಿಮಾವನ್ನ ಡಿವೈನ್ ಬ್ಲಾಕ್​ಬಸ್ಟರ್ ಅಂತಲೂ ಸಿನಿಮಾ ತಂಡ ಕರೆದುಕೊಂಡಿದೆ. ಇದು ಸತ್ಯ ಅನ್ನೋ ಅರ್ಥದಲ್ಲಿಯೇ ಜನ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ. ಇದರಿಂದ ಸಿನಿಮಾ ತಂಡ ತುಂಬಾ ಖುಷಿಯಲ್ಲಿಯೇ ಈಗ ಪ್ರಯಾಣ ಆರಂಭಿಸಿದೆ.


ಇದನ್ನೂ ಓದಿ: Kantara Movie: ಎಲ್ಲೆಡೆ ಸೌಂಡ್ ಮಾಡ್ತಿರೋ ಸಿನಿಮಾ! ಕಾಂತಾರ ಪದದ ಅರ್ಥ ಗೊತ್ತೇ?


ಕಾಂತಾರ ಸಿನಿಮಾ ಹಬ್ಬದ ಮೊದಲೇ ರಿಲೀಸ್ ಆಗಿದೆ. ಇದರಿಂದ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಕಾರಣಕ್ಕೇನೆ ಹಬ್ಬದ ರಜೆಯಲ್ಲಿರೋ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ಗೆ ಬರ್ತಿದ್ದಾರೆ. ಇದರಿಂದ ಬಹುತೇಕ ಕಡೆಗೆ ಸಿನಿಮಾ ಹೌಸ್ ಫುಲ್ ಓಡ್ತಿದೆ.

First published: