• Home
  • »
  • News
  • »
  • entertainment
  • »
  • Kantara Movie: ಕಾಂತಾರ ಗುಂಗಿನಲ್ಲಿ ಕನ್ನಡಿಗರು! ಚಿತ್ರ ರಿಲೀಸ್ ಮಾಡಲು ನಿರ್ಮಾಪಕರಿಗೆ ಭಯ!

Kantara Movie: ಕಾಂತಾರ ಗುಂಗಿನಲ್ಲಿ ಕನ್ನಡಿಗರು! ಚಿತ್ರ ರಿಲೀಸ್ ಮಾಡಲು ನಿರ್ಮಾಪಕರಿಗೆ ಭಯ!

ನಿಲ್ಲದ ಕಾಂತಾರ ಗುಂಗು-ಇತರ ನಿರ್ಮಾಪಕರಿಗೆ ಭಯ

ನಿಲ್ಲದ ಕಾಂತಾರ ಗುಂಗು-ಇತರ ನಿರ್ಮಾಪಕರಿಗೆ ಭಯ

"ಕನ್ನಡ ಸಿನಿಮಾ ನಿರ್ಮಾಪಕರು ತಮ್ಮ ಚಿತ್ರಗಳನ್ನ ರಿಲೀಸ್ ಮಾಡೋಕೆ ಭಯ ಪಡುತ್ತಿದ್ದಾರೆ. ಕಾಂತಾರದ ಗುಂಗು ಇನ್ನೂ ಈಗಲೇ ಮುಗಿಯೋ ಹಾಗೆ ಕಾಣುತ್ತಿಲ್ಲ. ಇದನ್ನ ಗಮನಿಸಿದ ಬಹುತೇಕ ನಿರ್ಮಾಪಕರು ತಮ್ಮ ಚಿತ್ರಗಳನ್ನ ರಿಲೀಸ್ ಮಾಡೋಕೆ ಯೋಚನೆ ಮಾಡ್ತಾನೇ ಇದ್ದಾರೆ ಎಂದು ನ್ಯೂಸ್ 18 ಕನ್ನಡ ಡಿಜಿಟಲ್ ಗೆ ಉಮೇಶ್ ಬಣಕಾರ್ ಹೇಳಿದರು.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ (Kantara Cinema) ಕಾಂತಾರ ಕ್ರೇಜ್ ಮುಂದುರೆದಿದೆ. ಚಿತ್ರ ನೋಡಿದವ್ರೇ (Repeat Audions) ಮತ್ತೆ ಮತ್ತೆ ನೋಡುತ್ತಿದ್ದಾರೆ. ಕಾಂತಾರ ಸಿನಿಮಾ ಅಷ್ಟೊಂದು ಆವರಿಸಿಕೊಂಡಿದೆ. ಮಂಗಳೂರು ಬೆಲ್ಟ್​ ಗೆ ಮಾತ್ರ ಸೀಮಿತ ಅಂದುಕೊಂಡಿದ್ದ ಈ ಚಿತ್ರ ವಿಶ್ವವ್ಯಾಪಿ ಆವರಿಸಿಕೊಂಡಿದೆ. ಭಾಷೆ ಮತ್ತು ಕಲ್ಚರ್ ಬೇರೆ ಇದ್ದರೂ ಸಹ, ತಮಿಳು ಮತ್ತು ಆಂಧ್ರ ಪ್ರದೇಶದಲ್ಲೂ (Kantara Craze) ಕಾಂತಾರ ಚಿತ್ರ ಆವರಿಸಿಕೊಳ್ಳುತ್ತಿದೆ. ಅದ್ಹೇಗೆ ಸಾಧ್ಯ ಅನ್ನೋ ಯಕ್ಷ ಪ್ರಶ್ನೇನೂ ಇದೆ. ಕನ್ನಡದ ಕಾಂತಾರ ಸಿನಿಮಾದ ಗೆಲುವು ಹೇಗೆ ಅನ್ನೋ ಪ್ರಶ್ನೆಯೊಂದಿಗೆ ಸಿನಿಮಾ ಮಂದಿ ತಮ್ಮ ಚಿತ್ರ ರಿಲೀಸ್ ಮಾಡೋಕೆ ಪ್ಲಾನ್ ಮಾಡುತ್ತಿದ್ದಾರೆ. ಆದರೆ ಸಿನಿಮಾ ನೋಡುವ ಪ್ರೇಕ್ಷಕ (Kantara Cinema) ಕಾಂತಾರ ಚಿತ್ರದ ಗುಂಗಿನಿಂದ ಇನ್ನೂ ಹೊರ ಬಂದಿಯೇ ಇಲ್ಲ.


ಅಲ್ಲಿಂದ ಯಾವಾಗ ಬರ್ತಾರೆ ಅನ್ನೋ ಪ್ರಶ್ನೆನೂ ಇದೆ. ಕಾಂತಾರದ ಗುಂಗು ಈಗಲೇ ಮುಗಿಯುತ್ತಾ ಅನ್ನೋ ಭಯ ಮಿಶ್ರಿತ ಪ್ರಶ್ನೆ ಕೂಡ ನಿರ್ಮಾಪಕರನ್ನ ಕಾಡುತ್ತಲೇ ಇದೆ.


ಕಾಂತಾರ ಸಿನಿಮಾದ ಗುಂಗಿನಿಂದ ಜನ ಹೊರ ಬಂದಿಯೇ ಇಲ್ಲ


ಕನ್ನಡ ಕಾಂತಾರ ಸಿನಿಮಾ ತನ್ನ ಸಕ್ಸಸ್ ಯಾತ್ರೆ ಮುಂದುವರೆಸಿದೆ. ದೇಶ-ವಿದೇಶದಲ್ಲೂ ಮುಂದುವರೆದಿದೆ. ಕನ್ನಡ ನಾಡಿನ ಈ ಸಿನಿಮಾ ಕೇವಲ ತುಳುನಾಡಿಗೆ ಸೀಮತ ಅನ್ನೋ ನಂಬಿಕೆಯನ್ನ ಈಗ ಸುಳ್ಳಾಗಿದೆ.




ತುಳುನಾಡಿನ ಕಲ್ಚರ್ ಗೊತ್ತೇ ಇರದ ಮಂದಿನೂ ಈ ಚಿತ್ರವನ್ನ ಈಗ ನೋಡುತ್ತಿದ್ದಾರೆ. ಇದರ ಪವರ್ ಅಷ್ಟೊಂದು ಇದ್ದು, ಕಾಂತಾರ ಸಿನಿಮಾವನ್ನ ಜನರೇ ಗೆಲ್ಲಿಸುತ್ತಲೇ ಸಾಗುತ್ತಿದ್ದಾರೆ. ಮತ್ತೆ ಮತ್ತೆ ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ.


ಕಾಂತಾರ ಸಿನಿಮಾದ ಗೆಲುವ ನಿರ್ಮಾಪಕರಿಗೆ ಆಶ್ಚರ್ಯ


ಹೌದು, ಕಾಂತಾರ ಸಿನಿಮಾದ ನಿರ್ಮಪಕಾರದ ವಿಜಯ್ ಕಿರಗಂದೂರು ಅವರಿಗೂ ಕಾಂತಾರ ಚಿತ್ರದ ಗೆಲುವು ಆಶ್ಚರ್ಯ ಮೂಡಿಸಿದೆ. ಕಾಂತಾರ ಸಿನಿಮಾವೊಂದು ಕೇವಲ ತುಳುನಾಡಿಗೆ ಸೀಮಿತವಾದ ಚಿತ್ರ ಅಂತಲೇ ಅಂದುಕೊಂಡಿದ್ದರು.


Kantara Film Craze other film Producers are Fear to release their film
ಕಾಂತಾರ ಸಿನಿಮಾದ ಗೆಲುವ ನಿರ್ಮಾಪಕರಿಗೆ ಆಶ್ಚರ್ಯ


ಆದರೆ ಈಗ ಈ ಸಿನಿಮಾದ ಈ ಮಟ್ಟಿನ ಗೆಲುವು ಖುಷಿ ತಂದಿದೆ. ಅಷ್ಟೇ ಆಶ್ಚರ್ಯವನ್ನೂ ಮೂಡಿಸಿದೆ. ಜೊತೆಗೆ ನಿಲ್ಲದ ಇದರ ಸಕ್ಸಸ್ ಯಾತ್ರೆ ಚಿತ್ರವನ್ನ ಬೇರೆ ಬೇರೆ ಕಡೆಗೆ ರಿಲೀಸ್ ಮಾಡಲು ಹೊಸ ಹುಮ್ಮಸ್ಸು ನೀಡುತ್ತಲೇ ಇದೆ.


ನಿಲ್ಲದ ಕಾಂತಾರ ಗುಂಗು-ಇತರ ನಿರ್ಮಾಪಕರಿಗೆ ಭಯ


ಕಾಂತಾರ ಸಿನಿಮಾ ಗುಂಗು ಈ ಜನ್ಮಕ್ಕೆ ಮುಗಿಯೋ ಹಾಗೆ ಕಾಣುತ್ತಿಲ್ಲ. ಇದರ ಕ್ರೇಜ್ ಕೂಡ ಮುಗಿಯುತ್ತಾನೇ ಇಲ್ಲ. ಸಿನಿಮಾ ಬಂದು 25 ದಿನಗಳ ಮೇಲೆ ಆಗಿದೆ.ಆದರೂ ಎಲ್ಲಿ ನೋಡಿದ್ರೂ ಕಾಂತಾರದ ಗುಂಗೇ ಇದೆ. ಜನ ಆ ಹ್ಯಾಂಗೋವರ್​ ನಿಂದ ಹೊರಗೆ ಬರ್ತಾನೇ ಇಲ್ಲ.


ಇಂತಹ ಸಮಯದಲ್ಲಿ ಬೇರೆ ಚಿತ್ರಗಳ ನಿರ್ಮಾಪಕರು ಕಾಯುತ್ತಿದ್ದಾರೆ. ಲೆಕ್ಕವನ್ನೂ ಹಾಕುತ್ತಿದ್ದಾರೆ. ತಮ್ಮ ಚಿತ್ರಗಳನ್ನ ರಿಲೀಸ್ ಮಾಡಿದರೆ, ಕಾಂತಾರ ಚಿತ್ರದ ಗುಂಗಿನಲ್ಲಿರೋ ಪ್ರೇಕ್ಷಕರ ತಮ್ಮ ಚಿತ್ರ ನೋಡಲು ಬರ್ತಾರಾ ಅನ್ನೋ ಅನುಮಾನದಲ್ಲಿಯೇ ಇದ್ದಾರೆ.


Kantara Film Craze other film Producers are Fear to release their film
ಕಾಂತಾರ ಗುಂಗಿನಿಂದ ಜನ ಹೊರ ಬಂದಿಯೇ ಇಲ್ಲ


ಬಹುತೇಕ ಚಿತ್ರ ನಿರ್ಮಾಪಕರು ಇದೇ ಒಂದು ಲೆಕ್ಕಾಚಾರದಲ್ಲಿಯೇ ಇದ್ದಾರೆ. ಕಾಂತಾರ ಸಿನಿಮಾದ ಕ್ರೇಜ್ ಮುಗಿಯಲಿ, ಆ ಬಳಿಕ ತಮ್ಮ ಸಿನಿಮಾ ರಿಲೀಸ್ ಮಾಡಿದ್ರಾಯಿತು ಅನ್ನೋ ಯೋಚನೆಯಲ್ಲಿಯೇ ಇದ್ದಾರೆ.


ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಏನಂತಾರೆ?


"ಕಾಂತಾರ ಸಿನಿಮಾವನ್ನ ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ. ಈ ಹಿಂದಿನ ದೊಡ್ಡ ಸಿನಿಮಾಗಳೂ ರೀತಿ ಕ್ರೇಜ್ ಹುಟ್ಟುಹಾಕಿರಲಿಲ್ಲ. ರಾಜಕುಮಾರ್ ಸಿನಿಮಾಗಳಿಗೆ ರಿಪೀಟ್ ಆಡಿಯೆನ್ಸ್ ಇದ್ದರು. ಆದರೆ ಕಾಂತಾರ ಆ ಒಂದು ಕಮಾಲ್ ಮಾಡಿದೆ." ಎಂದು ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.


ಇದನ್ನೂ ಓದಿ:Gandhada Gudi Puneeth Rajkumar: ಹಾವು ಅಂದ್ರೆ ಮಾರು ದೂರ ಓಡ್ತಿದ್ದ ಅಪ್ಪು ಕಾಳಿಂಗ ಸರ್ಪ ಕಂಡಾಗ ಮಾಡಿದ್ದೇನು? ಇದು `ಗಂಧದ ಗುಡಿ’ಯ ವಿಚಾರ


ಚಿತ್ರದ ನಿರ್ಮಾಪಕ ವಿಜಯ್​ ಕಿರಗಂದೂರು ಅವರಿಗೆ ಗೊತ್ತಿರಲಿಲ್ಲ. ತಮ್ಮ ಸಿನಿಮಾ ಈ ಒಂದು ಹಂತಕ್ಕೆ ಹೋಗುತ್ತದೆ ಅಂತಲೇ, ಆದರೆ ಅದು ಈಗ ನಾಗಾಲೋಟದಲ್ಲಿಯೇ ಓಡುತ್ತಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಅದೃಷ್ಟ ಖುಲಾಯಿಸಿದೆ ಅಂತಲೇ ಹೇಳಬಹುದು ಎಂದು ಉಮೇಶ್ ಬಣಕಾರ್ ಹೇಳಿದರು.


ಕನ್ನಡ ಸಿನಿಮಾ ಅದರಲ್ಲೂ ತುಳುನಾಡಿನ ಈ ಸಿನಿಮಾ ಕನ್ನಡದಲ್ಲಿ ಗೆಲ್ಲುತ್ತದೆ. ಇದೇನೋ ಸರಿ, ಆದರೆ ಬೇರೆ ಭಾಷೆಯಲ್ಲೂ ಇದು ಅದೇ ರೀತಿಯ ಗುಂಗು ಹಿಡಿಸಿದೆ. ಇದು ನಿಜಕ್ಕೂ ಒಂದು ಯಕ್ಷ ಪ್ರಶ್ನೇನೆ ಆಗಿದೆ.


"ಕನ್ನಡ ಸಿನಿಮಾ ನಿರ್ಮಾಪಕರು ತಮ್ಮ ಚಿತ್ರಗಳನ್ನ ರಿಲೀಸ್ ಮಾಡೋಕೆ ಭಯ ಪಡುತ್ತಿದ್ದಾರೆ. ಕಾಂತಾರದ ಗುಂಗು ಇನ್ನೂ ಈಗಲೇ ಮುಗಿಯೋ ಹಾಗೆ ಕಾಣುತ್ತಿಲ್ಲ. ಇದನ್ನ ಗಮನಿಸಿದ ಬಹುತೇಕ ನಿರ್ಮಾಪಕರು ತಮ್ಮ ಚಿತ್ರಗಳನ್ನ ರಿಲೀಸ್ ಮಾಡೋಕೆ ಯೋಚನೆ ಮಾಡ್ತಾನೇ ಇದ್ದಾರೆ" ಎಂದು ಉಮೇಶ್ ಬಣಕಾರ್ ಹೇಳಿದರು.


ಇದನ್ನೂ ಓದಿ: Big Boss Roopesh Shetty: ಸೀದಾ-ಸಾದಾ ಬಿಗ್ ಬಾಸ್ ರೂಪೇಶ್ ಶೆಟ್ಟಿ! ಇದು ರಿಯಲ್ ಅಲ್ಲ, ರೀಲ್ ಕಥೆ


ಕಾಂತಾರ ಸಿನಿಮಾದ ಕ್ರೇಜ್ ಈಗಲೇ ಮುಗಿಯೋ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಆದರೂ ಕನ್ನಡದಲ್ಲಿ ನವೆಂಬರ್-04 ರಂದು ಬನಾರಸ್ ಬರ್ತಿದೆ.ನವೆಂಬರ್-11 ಕ್ಕೆ ದಿಲ್​ ಪಸಂದ್ ರಿಲೀಸ್ ಆಗುತ್ತಿದೆ. ನವೆಂಬರ್-18 ಕ್ಕೆ ಅಬ್ಬರ ತೆರೆಗೆ ಬರಲು ಪ್ಲಾನ್ ಆಗಿದೆ.


ಇಷ್ಟೆಲ್ಲ ಸಿನಿಮಾ ಈಗಾಗಲೇ ರಿಲೀಸ್​ ಗೆ ಪ್ಲಾನ್ ಮಾಡಿವೆ. ಆದರೂ ಈ ಹೊತ್ತಿಗೆ ಕಾಂತಾರ ಕ್ರೇಜ್ ಮುಗಿಯುತ್ತದೆಯೋ ಇಲ್ವೋ ಯಾರಿಗೂ ಗೊತ್ತಿಲ್ಲ ಅಷ್ಟೆ.

First published: