ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ವ್ಯಾಕ್ಸಿನ್ ವಾರ್ ಸಿನಿಮಾ ಮಾಡಿದ್ದಾರೆ. 11 ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರದ ಚಿತ್ರೀಕರಣ (Vaccine War) ಪೂರ್ಣಗೊಂಡಿದೆ. ಈ ಚಿತ್ರದ ಬಗ್ಗೆ ಕಾಂತಾರ ಚಿತ್ರದ ಚೆಲುವೆ ಸಪ್ತಮಿ ಗೌಡ (Sapthami Gowda)ಮಾತನಾಡಿದ್ದಾರೆ. ಕಾಂತಾರ (Kannada Kantara Movie) ಚಿತ್ರಕ್ಕೂ ವಿವೇಕ್ ಅವರ ವ್ಯಾಕ್ಸಿನ್ ವಾರ್ ಚಿತ್ರಕ್ಕೂ ಏನ್ ಸಂಬಂಧ ಅಂತ ಕೇಳಬೇಡಿ. ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಹೊಸ ವಿಷಯ ಏನಂದ್ರೆ, ಸಪ್ತಮಿ ಗೌಡ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ತಮ್ಮ ಈ ಚಿತ್ರದ ಅನುಭವ ಶೇರ್ ಮಾಡಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಚಿತ್ರದಲ್ಲಿ ಕಾಂತಾರ ಬೆಡಗಿ!
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅದ್ಭುತ ನಿರ್ದೇಶಕರು ಅಂತ ಗೊತ್ತೇ ಇದೆ. "ದಿ ಕಾಶ್ಮೀರಿ ಫೈಲ್ಸ್" ಚಿತ್ರದ ಮೂಲಕ ಇಡೀ ಜಗತ್ತಿಗೆ ಒಂದಷ್ಟು ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅದೇ ಚಿತ್ರದ ಮೂಲಕ ಒಂದಷ್ಟು ವಿವಾದಗಳನ್ನು ಎಳೆದುಕೊಂಡಿದ್ದರು.
ಆದರೆ ವಿವೇಕ್ ಅಗ್ನಿಹೋತ್ರಿ ಅವರು ಈ ಸಲ ವ್ಯಾಕ್ಸಿನ್ ವಾರ್ ಮೇಲೆ ಚಿತ್ರ ಮಾಡಿದ್ದಾರೆ. ಇದೇ ಚಿತ್ರವನ್ನ 11 ಭಾಷೆಯಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ.
ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಅವರಿಂದ ತುಂಬಾ ಕಲಿತಿದ್ದೇನೆ!
ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಕಾಂತಾರ ಚಿತ್ರ ಆದ್ಮೇಲೆ ದಿ ವ್ಯಾಕ್ಸಿನ್ ವಾರ್ ಚಿತ್ರ ಒಪ್ಪಿಕೊಂಡಿದ್ದರು. ಆಗ ಈ ಸುದ್ದಿ ಭಾರೀ ವೈರಲ್ ಕೂಡ ಆಗಿತ್ತು. ಅದೇ ಚಿತ್ರದ ಕೆಲಸ ಮುಗಿಸಿರೋ ನಟಿ ಸಪ್ತಮಿ ಗೌಡ ಈಗ ಒಂದಷ್ಟು ಅನುಭವ ಹಂಚಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರಿಂದ ತುಂಬಾ ಕಲಿತಿದ್ದೇನೆ. ಪಲ್ಲವಿ ಜೋಶಿ ಅವರಿಂದಲೂ ತುಂಬಾ ತಿಳಿದುಕೊಂಡಿದ್ದೇನೆ. ಅಗ್ನಿಹೋತ್ರಿ ಅವರ ಚಿತ್ರದಲ್ಲಿ ಅಭಿನಯಿಸಿರೋ ಅನುಭವ ತುಂಬಾ ವಿಶೇಷವಾಗಿದೆ ಎಂದು ನ್ಯೂಸ್-18 ಕನ್ನಡ ಡಿಜಿಟಲ್ಗೆ ಸಪ್ತಮಿ ಗೌಡ ಹೇಳಿದ್ದಾರೆ.
ದಿ ವ್ಯಾಕ್ಸಿನ್ ವಾರ್ ಸಿನಿಮಾ ಶೂಟಿಂಗ್ ಕಂಪ್ಲೀಟ್
ದಿ ವ್ಯಾಕ್ಸಿನ್ ವಾರ್ ಸಿನಿಮಾ ಶೂಟಿಂಗ್ ಹೈದ್ರಾಬಾದ್ನಲ್ಲಿ ನಡೆದಿದೆ. ಇದರ ಶೂಟಿಂಗ್ಗಾಗಿಯೇ ಸಪ್ತಮಿ ಗೌಡ ಹೈದ್ರಾಬಾದ್ಗೆ ಹೋಗಿದ್ದರು. ಅಲ್ಲಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಂಡು ಸಪ್ತಮಿ ಗೌಡ ಈಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಪ್ತಮಿ ಗೌಡ ಅವರು ಈ ಚಿತ್ರದಲ್ಲಿ ಯಾವ ರೀತಿ ಪಾತ್ರ ಮಾಡಿದ್ದಾರೆ ಅನ್ನುವ ಕುತೂಹಲ ಕೂಡ ಇದೆ. ಆದರೆ ಈ ಬಗ್ಗೆ ಈಗಲೇ ಏನೂ ಹೇಳೋಕೆ ಇಷ್ಟಪಡದ ಸಪ್ತಮಿ ಗೌಡ, ಎಲ್ಲವನ್ನೂ ಸಿನಿಮಾ ಟೀಮ್ ಶೇರ್ ಮಾಡಲಿದೆ ಅಂತಲೇ ಹೇಳುತ್ತಾರೆ.
ಸಿನಿಮಾದ ಇತರ ವಿಚಾರಗಳನ್ನು ಕೂಡ ಅಧಿಕೃತವಾಗಿ ಸಿನಿಮಾ ತಂಡವೇ ಹೇಳುತ್ತದೆ ಅನ್ನೋದು ಸಪ್ತಮಿ ಗೌಡರ ಒಟ್ಟು ಮಾತಿನ ತಾತ್ಪರ್ಯ ಆಗಿದೆ. ಇನ್ನುಳಿದಂತೆ ಸಪ್ತಮಿ ಗೌಡ ಬಾಲಿವುಡ್ ತಂಡದೊಂದಿಗೆ ಕೆಲಸ ಮಾಡಿದ ಖುಷಿಯಲ್ಲಿದ್ದಾರೆ. ಆ ಖುಷಿ ಅವರ ಮಾತಿನಲ್ಲೂ ವ್ಯಕ್ತವಾಗಿದೆ.
ದಿ ವ್ಯಾಕ್ಸಿನ್ ವಾರ್ ಚಿತ್ರ ತಂಡದಿಂದ ಸಪ್ತಮಿಗೆ ಗಿಫ್ಟ್
ದಿ ವ್ಯಾಕ್ಸಿನ್ ವಾರ್ ಚಿತ್ರದ ಶೂಟಿಂಗ್ ಮುಗಿದ ಬಳಿಕ ನಟಿ ಸಪ್ತಮಿ ಗೌಡ ಅವರಿಗೆ ಸಿನಿಮಾ ಟೀಮ್ನಿಂದ ಒಂದು ವಿಶೇಷ ಗಿಫ್ಟ್ ಕೂಡ ಕೊಡಲಾಗಿದೆ. ನಾಟ್ಯ ಮಯೂರನ ಪುಟ್ಟ ಸ್ಮರಣಿಕೆಯನ್ನ ಪಡೆದ ಸಪ್ತಮಿ ಗೌಡ ಆ ಖುಷಿಯನ್ನೂ ಈಗ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Actress Chandini: ನಾನೇ ಬೇಕು ಎಂದು ನನ್ನೇ ಸೆಲೆಕ್ಟ್ ಮಾಡಿದ್ರು ಉಪ್ಪಿ! ಆ ದಿನಗಳನ್ನು ನೆನಪಿಸಿಕೊಂಡ್ರು ಚಾಂದಿನಿ!
ದಿ ವ್ಯಾಕ್ಸಿನ್ ವಾರ್ ಸಿನಿಮಾ ಖುಷಿ ಎಲ್ಲರೊಟ್ಟಿಗೆ ಶೇರ್
ದಿ ವ್ಯಾಕ್ಸಿನ್ ವಾರ್ ಚಿತ್ರೀಕರಣ ಮುಗಿಸಿಕೊಂಡಿರೋ ಖುಷಿಯನ್ನ ಸಪ್ತಮಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಸಮೇತ ತಮ್ಮ ಅನುಭವವನ್ನ ಶೇರ್ ಮಾಡಿರೋ ಸಪ್ತಮಿ ಗೌಡ, ಅಗ್ನಿಹೋತ್ರಿ ಅವರ ಚಿತ್ರದಲ್ಲಿ ಅಭಿನಯಿಸಿರೋದಕ್ಕೆ ತುಂಬಾನೆ ಸಂತೋಷ ಆಗಿದೆ ಅಂತಲೂ ಹೇಳಿಕೊಳ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ