• Home
  • »
  • News
  • »
  • entertainment
  • »
  • Kantara Kishore: ಕಾಂತಾರ ಚಿತ್ರದ ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ಯಾಕೆ?

Kantara Kishore: ಕಾಂತಾರ ಚಿತ್ರದ ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ಯಾಕೆ?

ನಟ ಕಿಶೋರ್ ಟ್ವಿಟರ್ ಬಳಿಸ್ತಾರಾ?

ನಟ ಕಿಶೋರ್ ಟ್ವಿಟರ್ ಬಳಿಸ್ತಾರಾ?

ಬಹು ಭಾಷೆಯ ಕನ್ನಡದ ನಟ ಕಿಶೋರ್ ಟ್ವಿಟರ್ ಬಳಸುತ್ತಿದ್ದರೇ ಅನ್ನೊದೇ ಡೌಟ್ ಇದೆ. ಅಂತಹದ್ರಲ್ಲಿ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಅನ್ನೋದೇ ಈಗೀನ ಇಂಟ್ರಸ್ಟಿಂಗ್ ಮ್ಯಾಟರ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಅನೇಕ ನಟರಿದ್ದಾರೆ. (Kantara Actor Kishore) ತಮ್ಮದೇ ಶೈಲಿಯಲ್ಲಿ ಅವರು ಅಭಿನಯಿಸಿದ್ದಾರೆ. ಜನರ ಮನದಲ್ಲೂ ಇದ್ದಾರೆ. ಅಂತಹ ನಟರಲ್ಲಿ ಕಾಂತಾರ ಚಿತ್ರ ಖ್ಯಾತಿಯ (Actor Kishore Twitter Account Suspended) ನಟ ಕಿಶೋರ್ ವಿಭಿನ್ನವಾಗಿಯೇ ನಿಲ್ಲುತ್ತಾರೆ. ಕನ್ನಡ ಸೇರಿದಂತೆ ಇತರ ಭಾಷೆಯ ಚಿತ್ರಗಳಲ್ಲೂ ಹೆಸರು ಮಾಡಿದ್ದಾರೆ. ತಮಿಳು, ತೆಲುಗು, ಮಲೆಯಾಳಂ ಭಾಷೆಯ (Kishore Twitter Page) ಸಿನಿಮಾಗಳಲ್ಲೂ ಅಭಿನಯಸಿದ್ದಾರೆ. ಅಲ್ಲಿಯ ಸಿನಿ ಪ್ರೇಕ್ಷಕರ ಹೃದಯವನ್ನೂ ಕದ್ದಿದ್ದಾರೆ. ಆದರೆ ಕಿಶೋರ್ ಅವರು ಈಗ ಸೋಷಿಯಲ್ ಮೀಡಿಯಾ ಟ್ವಿಟರ್ (Actor Kishore) ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.  ಆದರೆ ಇದರ ಬೆನ್ನಲ್ಲಿಯೇ  ಕಿಶೋರ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರಾ ಅನ್ನೋ ಡೌಟು ಇದೆ.? ಇದೆಲ್ಲದರ  ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.


ಕನ್ನಡದ ವಿಶೇಷ ನಟ ಕಿಶೋರ್ ಟ್ವಿಟರ್ ಬಳಿಸ್ತಾರಾ?
ಚಂದನವನದ ನಟ ಕಿಶೋರ್ ನಿಜಕ್ಕೂ ಕನ್ನಡದ ವಿಶೇಷ ನಟರೇ ಆಗಿದ್ದಾರೆ. ಇವರ ಸಿನಿಮಾ ಪ್ರೀತಿ ವಿಭಿನ್ನವಾಗಿಯೇ ಇದೆ. ರಂಗಭೂಮಿಯ ಆಸಕ್ತಿ ಕಡಿಮೆ ಆಗಿಲ್ಲ. ಒಳ್ಳೆ ಪುಸ್ತಕಗಳನ್ನ ಓದುವ ಹವ್ಯಾಸ ಕೂಡ ಇದೆ.


Kantara Film Actor Kishore Twitter Account Now Suspended
ಕಿಶೋರ್ ಸೋಷಿಯಲ್ ಮೀಡಿಯಾದಿಂದ ದೂರ ಅಲ್ವೇ?


ಕಿಶೋರ್ ಯಾವುದೇ ರೀತಿ ವಿವಾದಗಳನ್ನ ಮಾಡಿದವ್ರೇ ಅಲ್ಲ. ತುಂಬಾ ಸೂಕ್ಷ್ಮವಾಗಿಯೇ ಎಲ್ಲವನ್ನೂ ಗಮನಿಸುತ್ತಾರೆ. ಅದರ ಬಗ್ಗೆ ಅವಶ್ಯಕತೆ ಇದ್ರೇ ಮಾತ್ರ ರಿಯಾಕ್ಟ್ ಮಾಡ್ತಾರೆ.


ಕಿಶೋರ್ ಸೋಷಿಯಲ್ ಮೀಡಿಯಾದಿಂದ ದೂರ ಅಲ್ವೇ?
ನಟ ಕಿಶೋರ್ ಸುಮ್ನೆ ಏನೋ ಮಾತನಾಡೋದಿಲ್ಲ. ಮಾತನಾಡಿದ್ರೂ ತುಂಬಾ ಯೋಚ್ನೆ ಮಾಡಿಯೇ ಮಾತನಾಡುತ್ತಾರೆ. ಹಾಗಂತ ಏನೇನೋ ಹೇಳಿಕೆ ಕೊಟ್ಟು, ಯಾರಕೆಂಗಣ್ಣಿಗೆ ಗುರಿ ಆಗಿರೋದು ಇಲ್ವೇ ಇಲ್ಲ ಅಂತಲೇ ಹೇಳಬಹುದು.
ಕಿಶೋರ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರಾ?
ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಹಾಗೇನೆ ಕಿಶೋರ್ ಅವರ ಸಿನಿಮಾ ಪ್ರೀತಿಸೋ ಮತ್ತು ಕಿಶೋರ್ ಅವರ ಅಭಿನಯ ಮೆಚ್ಚೋ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್​​​ಗಳನ್ನ ಹಾಕುತ್ತಿದ್ದಾರೆ. ನಮ್ಮ ಕಿಶೋರ್ ಅವರಿಗೆ ಟ್ವಿಟರ್ ಅಗತ್ಯವೇ ಇಲ್ಲ ಅಂತಲೂ ಹೇಳುತ್ತಿದ್ದಾರೆ.


ಕಿಶೋರ್ ಚಿತ್ರ ಮೆಚ್ಚೋ ಅಭಿಮಾನಿಗಳು ಸಿಟ್ಟಾಗಿದ್ಯಾಕೆ?
ಕಿಶೋರ್ ಸಿನಿಮಾ ಮೆಚ್ಚೋ ಅಭಿಮಾನಿಗಳಿಗೆ ಈಗ ಬೇಸರ ಆಗಿದೆ. ಇದಕ್ಕೆ ಕಾರಣವೂ ಇದೆ. ಈ ಕಾರಣದ ಹೆಸರು ಟ್ವಿಟರ್ ಅಂತಲೇ ಹೇಳಬೇಕು. ಯಾಕೆಂದ್ರೆ, ಈಗ ಕಿಶೋರ್ ಅವರ ಟ್ವಿಟರ್ ಅಕೌಂಟ್ ಬಗ್ಗೇನೆ ಹೆಚ್ಚು ಚರ್ಚೆ ಆಗುತ್ತಿದೆ. ಸುದ್ದಿನೂ ಆಗುತ್ತಿದೆ.


ಹೌದು, ಕಿಶೋರ್ ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದಿಯೇ ಅಂತ ಕೇಳಬೇಡಿ. ಇದು ಹ್ಯಾಕಿಂಗ್ ವಿಷಯ ಅಲ್ವೇ ಅಲ್ಲ. ಇದು ಸಸ್ಪೆಂಡ್ ಮ್ಯಾಟರ್ ಆಗಿದೆ. ಕಿಶೋರ್ ಅವರ ಟ್ವಿಟರ್ ಅಕೌಂಟ್​ ಅನ್ನ ಸ್ವತಃ ಟ್ವಿಟರ್ ಸಸ್ಪೆಂಡ್ ಮಾಡಿದೆ ಅನ್ನೋದೇ ಒಟ್ಟು ಸಿಟ್ಟಿನ ತಿರುಳಾಗಿದೆ.


ಕಿಶೋರ್ ಹೆಸರಿನ ಟ್ವಿಟರ್ ಅಕೌಂಟ್ ಸಸ್ಪೆಂಡ್
ಬಹು ಭಾಷೆಯ ಕನ್ನಡದ ನಟ ಕಿಶೋರ್ ಟ್ವಿಟರ್ ಬಳಸುತ್ತಿದ್ದರೇ ಅನ್ನೊದೇ ಡೌಟ್ ಇದೆ. ಅಂತಹದ್ರಲ್ಲಿ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಅನ್ನೋದೇ ಈಗೀನ ಇಂಟ್ರಸ್ಟಿಂಗ್ ಮ್ಯಾಟರ್ ಆಗಿದೆ.


Kantara Film Actor Kishore Twitter Account Now Suspended
ಕಿಶೋರ್ ಚಿತ್ರ ಮೆಚ್ಚೋ ಅಭಿಮಾನಿಗಳು ಸಿಟ್ಟಾಗಿದ್ಯಾಕೆ?


ಕಿಶೋರ್ ಹೆಸರಿನಲ್ಲಿರೋ ಟ್ವಿಟರ್ ಸಸ್ಪೆಂಡ್ ಆಗಿದೆ. ಇದಕ್ಕೆ ಕಾರಣ ಏನೂ ಅನ್ನೋದನ್ನ ಕೂಡ ಹೇಳಿದೆ. ನಿಜ, ಕಿಶೋರ್ ಹೆಸರಿನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ. ಟ್ವಿಟರ್ ರೂಲ್ಸ್ ಉಲ್ಲಂಘಿಸಿದ್ದಕ್ಕೆ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಅನ್ನೋ ಮಾಹಿತಿ ಕೂಡ ಇದೆ.


ಕನ್ನಡದ ಕಲಾವಿದ ನಟ ಕಿಶೋರ್ ಏನ್ ಹೇಳ್ತಾರೆ?
ನಟ ಕಿಶೋರ್ ಈ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಅದಕ್ಕೂ ಹೆಚ್ಚಾಗಿ ಕಿಶೋರ್ ಟ್ವಿಟರ್ ಬಳಸ್ತಾರಾ ಅನ್ನೋ ಪ್ರಶ್ನೆನೂ ಇದೆ. ತಾವಾಯ್ತು ತಮ್ಮ ಕೆಲಸ ಆಯಿತು ಅಂತಲೇ ಕಿಶೋರ್ ಇರ್ತಾರೆ. ಶೂಟಿಂಗ್ ಇದ್ರೆ ಅಲ್ಲಿ ಹೋಗಿರ್ತಾರೆ. ಅದು ಬಿಟ್ರೆ, ಕಿಶೋರ್ ತಮ್ಮ ಕೃಷಿ ಕೆಲಸದಲ್ಲಿಯೇ ಹೆಚ್ಚು ಮಗ್ನರಾಗಿರುತ್ತಾರೆ.


ಇದನ್ನೂ ಓದಿ: Kishore: ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ!? ದೈವದ ಬಗ್ಗೆ ನಟ ಕಿಶೋರ್​ ಮಾತು


ಹಾಗಾಗಿಯೇ ಕಿಶೋರ್ ಅವರ ಹೆಸರಿನ ಟ್ವಿಟರ್ ಖಾತೆ ಅವರದೇನಾ? ಅನ್ನೋ ಅನುಮಾನವೂ ಇದೆ. ಜೊತೆಗೆ ಕಿಶೋರ್ ರೂಲ್ ಬ್ರೇಕ್ ಮಾಡೋ ಕೆಲಸ ಮಾಡಿರಲ್ಲ ಅಂತಲೂ ಅನಿಸುತ್ತದೆ. ಒಟ್ಟಾರೆ, ಈಗ ಕಿಶೋರ್ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

First published: