• Home
  • »
  • News
  • »
  • entertainment
  • »
  • Kantara Crazy Fan: ಮೆಲ್ಬರ್ನ್​ ಕ್ರಿಕೆಟ್ ಅಂಗಳದಲ್ಲಿ ಪಾಕ್-ಭಾರತ ಪಂದ್ಯದ ವೇಳೆ ಕಾಂತಾರ ಕ್ರೇಜ್

Kantara Crazy Fan: ಮೆಲ್ಬರ್ನ್​ ಕ್ರಿಕೆಟ್ ಅಂಗಳದಲ್ಲಿ ಪಾಕ್-ಭಾರತ ಪಂದ್ಯದ ವೇಳೆ ಕಾಂತಾರ ಕ್ರೇಜ್

ಭಾರತ ಪಂದ್ಯದ ವೇಳೆ ಕಾಂತಾರ ಫ್ಯಾನ್ ಕ್ರೇಜ್

ಭಾರತ ಪಂದ್ಯದ ವೇಳೆ ಕಾಂತಾರ ಫ್ಯಾನ್ ಕ್ರೇಜ್

ಕಾಂತಾರ ಸಿನಿಮಾದ ಈ ವಿಶೇಷ ಅಭಿಮಾನಿ ತನ್ನ ವೈಟ್ ಟೀ ಶರ್ಟ್ ಮೇಲೂ ರಿಷಬ್ ಶೆಟ್ಟಿ ಹೆಸರು ಬರೆದುಕೊಂಡಿದ್ದಾರೆ. ಕಾಂತಾರ ಅಂತಲೂ ಸಿನಿಮಾ ಹೆಸರನ್ನೂ ಇದೇ ಟೀ ಶರ್ಟ್ ಮೇಲೆ ಕಾಣಬಹುದು. ರಿಷಬ್ ಶೆಟ್ಟಿ ವಿಶೇಷ ಅಭಿಮಾನಿಯ ಆ ವೀಡಿಯೋ ಈಗ ವೈರಲ್ ಆಗುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara) ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಇದರ ಜೊತೆಗೆ ಈಗ ಕನ್ನಡದ ಕಾಂತಾರ (Kantara Craze) ಕ್ರೇಜ್ ಎಲ್ಲೆಲ್ಲೂ ಹರಡಿದೆ. ದೂರದ ಮೆಲ್ಬರ್ನ್ ಗೂ ಕಾಂತಾರ ಸಿನಿಮಾದ ಕ್ರೇಜ್ ತಲುಪಿದೆ. ಭಾರತ ಮತ್ತು ಪಾಕ್ (Inida-Pack Match) ನಡುವಿನ ಪಂದ್ಯದ ವೇಳೆ ಕ್ರಿಕೆಟ್ ಮೈದಾನದಲ್ಲಿ ಕಾಂತಾರ ಕ್ರೇಜ್ ಪ್ರದರ್ಶನ ಆಗಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಪಕ್ಕಾ ಫ್ಯಾನ್ ಇಲ್ಲಿ ತನ್ನ ಅಭಿಮಾನವನ್ನ ತನ್ನದೇ ರೀತಿಯಲ್ಲಿ ಪ್ರದರ್ಶನ ಮಾಡಿದ್ದಾರೆ. ಕಾಂತಾರ ಸಿನಿಮಾ ಹೆಸರು ಮತ್ತು ರಿಷಬ್ ಶೆಟ್ಟಿ ಹೆಸರು ಇರೋ ಟೀ ಶರ್ಟ್ ಧರಿಸಿಕೊಂಡು ಖುಷಿ ಪಟ್ಟಿದ್ದಾರೆ. ಕಾಂತಾರ ಸಿನಿಮಾ (Poster) ಪೋಸ್ಟರ್ ಹಿಡಿದು ಕಾಂತಾರ ಅಂತಲೂ ಕೂಗಿದ್ದಾರೆ. ಈ ಸಮಯದ ವೀಡಿಯೋ ಈಗ ಟ್ವಿಟರ್ ನಲ್ಲೂ ಹೆಚ್ಚು ಗಮನ ಸೆಳೆಯುತ್ತಿದೆ.


ಮೆಲ್ಬರ್ನ್​ ಕ್ರಿಕೆಟ್ ಅಂಗಳದಲ್ಲೂ ಕಾಂತಾರ ಕ್ರೇಜ್
ಕಾಂತಾರ ಸಿನಿಮಾ ಈ ವರ್ಷದ ಬಿಗ್ ಹಿಟ್ ಸಿನಿಮಾ. ಹೊಸ ದಾಖಲೆಯನ್ನ ಮಾಡುತ್ತಲೇ ಮುನ್ನುಗ್ಗುತ್ತಿದೆ. ತನ್ನದೇ ರೀತಿಯಲ್ಲಿ ಜನರ ಹೃದಯ ಕದಿಯುತ್ತಲೇ ಇದೆ. ಕನ್ನಡದ ಕಾಂತಾರ ಅಂದ್ರೆ, ದೇಶ-ವಿದೇಶದ ಪ್ರೇಕ್ಷಕರು ಮೈಮರೆತು ಸಿನಿಮಾ ನೋಡ್ತಿದ್ದಾರೆ. ಅದರ ಬಗ್ಗೆ ಮಾತನಾಡುತ್ತಿದ್ದಾರೆ.




ಕಾಂತಾರ ಸಿನಿಮಾದ ಗುಳಿಗ-ಪಂಜುರ್ಲಿ ದೈವ ಎಲ್ಲ ಪ್ರೇಕ್ಷಕರಲ್ಲೂ ಒಂದು ಭಕ್ತಿಯನ್ನ ಹುಟ್ಟುಹಾಕಿದೆ. ರಿಷಬ್ ಶೆಟ್ಟಿ ನಿಜಕ್ಕೂ ದೈವ ರೂಪಿನೇ ಆಗಿದ್ದಾರೆ. ಇದರಿಂದ ಪ್ರೇಕ್ಷಕರಲ್ಲಿ ರಿಷಬ್ ಶೆಟ್ಟಿ ಅವರ ಬಗ್ಗೆ ಅಪಾರ ಗೌರವ ಹುಟ್ಟುಕೊಂಡಿದೆ.


Kantara Fan Shows his Crazy at Melbourne Cricket Stadium
ಇಂಡಿಯಾ-ಪಾಕ್ ಪಂದ್ಯದ ವೇಳೆ ಕಾಂತಾರ ಫ್ಯಾನ್ ಅಬ್ಬರ


ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ದೈವವೇ ಆಗಿ ಬಿಟ್ಟವ್ರೆ!
ಕಾಂತಾರ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ತಮ್ಮ ತುಳುನಾಡಿನ ಕಲ್ಚರ್​ ಅನ್ನ ಇಡೀ ದೇಶ-ವಿದೇಶಕ್ಕೂ ತಲುಪಿಸಿದ್ದಾರೆ. ಆದರೆ ಈ ಒಂದು ಭಾರೀ ಬೆಳವಣಿಗೆಯಿಂದ ಕನ್ನಡದ ಹೆಸರು ಎಲ್ಲೆಡೆ ಹೋಗಿದೆ. ಅಲ್ಲದೇ ರಿಷಬ್ ಶೆಟ್ಟಿಯನ್ನ ತೆರೆ ಮೇಲೆ ನೋಡಿದ ಕೆಲ ಪ್ರೇಕ್ಷಕರು ರಿಷಬ್ ಶೆಟ್ಟಿಯನ್ನ ದೈವದ ರೂಪದಲ್ಲಿಯೇ ನೋಡುತ್ತಿದ್ದಾರೆ.


ಇದನ್ನೂ ಓದಿ: Bollywood Actors: ನಾನು ಈ ಸಿನಿಮಾ ಮಾಡಿ ತಪ್ಪು ಮಾಡಿದೆ! ಬಾಲಿವುಡ್ ನಟ-ನಟಿಯರ ಮನದಾಳದ ಮಾತು


ದೈವ ರೂಪ ತಾಳಿದ ರಿಷಬ್ ಶೆಟ್ಟಿ ಒಂದು ವೇಳೆ ಎದುರಿಗೆ ಬಂದ್ರೆ, ಕಾಲು
ಮುಗಿದು ಬಿಡುತ್ತಿದ್ದೇ ಅನ್ನೋರು ಇದ್ದಾರೆ. ಇಂತಹ ದೈವದ ರೂಪದ ಕೊಡುಗೆಯನ್ನ ರಿಷಬ್ ಶೆಟ್ಟಿ ತುಂಬಾ ಜತನದಿಂದಲೇ ಕಾಯ್ದುಕೊಳ್ಳುತ್ತಿದ್ದಾರೆ. ಅಷ್ಟೆ ಪವಿತ್ರವಾಗಿಯೇ ಪಾತ್ರವನ್ನ ಮಾಡಿದ್ದಾರೆ. ಅದರ ಫಲವೇ ಈಗ ಸಕ್ಸಸ್ ಸಿಕ್ಕಿದೆ ಅನ್ನೋರು ಇದ್ದಾರೆ.


ಇಂಡಿಯಾ-ಪಾಕ್ ಪಂದ್ಯದ ವೇಳೆ ಕಾಂತಾರ ಫ್ಯಾನ್ ಅಬ್ಬರ
ಕ್ರಿಕೆಟ್ ಅಂಗಳದಲ್ಲಿ ಎಲ್ಲರೂ ಇರ್ತಾರೆ. ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಆಟಗಾರ ಫೋಟೋ ಹಿಡಿದು ಖುಷಿಪಡೋದು ಕಾಮನ್. ಆದರೆ ಇತ್ತೀಚಿಗೆ ಕ್ರಿಕೆಟ್ ಅಂಗಳದಲ್ಲಿ ಸಿನಿಮಾ ಪ್ರೇಮಿಗಳು ತಮ್ಮ ನೆಚ್ಚಿನ ನಾಯಕ ಸಿನಿಮಾದ ಪೋಸ್ಟರ್ ಗಳನ್ನೂ ಹಿಡಿದು ತಮ್ಮದೇ ರೀತಿಯಲ್ಲಿ ಸಿನಿಮಾಕ್ಕೆ ಸಫೋರ್ಟ್ ಮಾಡ್ತಾರೆ.


ಮೆಲ್ಬರ್ನ್ ನಲ್ಲಿ ಭಾರತ ಮತ್ತು ಪಾಕ್ ಪಂದ್ಯ ನಡೆದಿತ್ತು. ಆ ವೇಳೆ ಗ್ಯಾಲರಿಯಲ್ಲಿದ್ದ ಕುಂದಾಪುರದ ಅಚ್ಚುತ್ ಅನ್ನೋರು ಕಾಂತಾರ ಸಿನಿಮಾದ ಮೇಲಿನ ತಮ್ಮ ಅಭಿಮಾನವನ್ನ ಪ್ರದರ್ಶಿಸಿದ್ದಾರೆ. ಕಾಂತಾರ ಸಿನಿಮಾದ ಪೋಸ್ಟರ್ ಅನ್ನೂ ಇಲ್ಲಿ ಪ್ರದರ್ಶಿಸಿ ಸಂತೋಷ ಪಟ್ಟಿದ್ದಾರೆ.


ಟೀ ಶರ್ಟ್ ಮೇಲೂ ರಿಷಬ್ ಶೆಟ್ಟಿ-ಕಾಂತಾರ ಹೆಸರು
ಕಾಂತಾರ ಸಿನಿಮಾದ ಈ ವಿಶೇಷ ಅಭಿಮಾನಿ ತನ್ನ ವೈಟ್ ಟೀ ಶರ್ಟ್ ಮೇಲೂ ರಿಷಬ್ ಶೆಟ್ಟಿ ಹೆಸರು ಬರೆದುಕೊಂಡಿದ್ದಾರೆ. ಕಾಂತಾರ ಅಂತಲೂ ಸಿನಿಮಾ ಹೆಸರನ್ನೂ ಇದೇ ಟೀ ಶರ್ಟ್ ಮೇಲೆ ಕಾಣಬಹುದು. ರಿಷಬ್ ಶೆಟ್ಟಿ ವಿಶೇಷ ಅಭಿಮಾನಿಯ ಆ ವೀಡಿಯೋ ಈಗ ವೈರಲ್ ಆಗುತ್ತಿದೆ.


ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ರಿಲೀಸ್ ಆಗಿದೆ. ಮಲೆಯಾಳಂ, ಹಿಂದಿ, ತೆಲುಗು, ತಮಿಳು ಹೀಗೆ ಎಲ್ಲೆಡೆ ರಿಲೀಸ್ ಆಗಿರೋ ಕಾಂತಾರ ಸಿನಿಮಾ, ಎಲ್ಲರನ್ನೂ ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ.


ಇದನ್ನೂ ಓದಿ: Ajai Rao in Dil Pasand Cinema: ಒಂದೇ ಚಿತ್ರದಲ್ಲಿ ಇಬ್ಬರು ಕೃಷ್ಣರು- ಹೊರಬಿತ್ತು ದಿಲ್​ಪಸಂದ್ ಹೊಸ ಮ್ಯಾಟರ್


ಕನ್ನಡದ ಹೆಸರನ್ನ, ಕನ್ನಡ ಸಿನಿಮಾ ಮೇಕಿಂಗ್​ನ ಕ್ವಾಲಿಟಿಯನ್ನೂ ಎಲ್ಲರಿಗೂ ತಿಳಿಸಿದೆ. ಕನ್ನಡ ಸಿನಿಮಾ ಮೇಕಿಂಗ್ ಸ್ಟೈಲ್ ಬದಲಾಗಿದೆ. ಇದನ್ನ ಕಾಂತಾರ ಈಗ ಇಡೀ ದೇಶಕ್ಕೆ ತಿಳಿಸಿದೆ. ವಿದೇಶದಲ್ಲೂ ಕಾಂತಾರ ತನ್ನ ಕ್ರೇಜ್ ಅನ್ನ ಮುಂದುವರೆಸಿದೆ.

First published: