• Home
  • »
  • News
  • »
  • entertainment
  • »
  • Rishab Shetty-Rakshit Shetty: ರಕ್ಷಿತ್ ಶೆಟ್ಟಿ ಸಿನಿಮಾ ಬ್ಯಾಚುರಲ್ ಪಾರ್ಟಿಯಿಂದ ಹೊರಬಂದ ರಿಷಬ್!

Rishab Shetty-Rakshit Shetty: ರಕ್ಷಿತ್ ಶೆಟ್ಟಿ ಸಿನಿಮಾ ಬ್ಯಾಚುರಲ್ ಪಾರ್ಟಿಯಿಂದ ಹೊರಬಂದ ರಿಷಬ್!

ಬ್ಯಾಚುರಲ್ ಪಾರ್ಟಿ-ರಿಷಬ್ ಶೆಟ್ಟಿ

ಬ್ಯಾಚುರಲ್ ಪಾರ್ಟಿ-ರಿಷಬ್ ಶೆಟ್ಟಿ

ಗೆಳೆಯ ರಕ್ಷಿತ್ ಶೆಟ್ಟಿ ಸಿನಿಮಾದಿಂಲೇ ಬ್ಯಾಕೌಟ್ ಆದ್ರು ರಿಷಬ್ ಶೆಟ್ಟಿ? ಈ ದಿಢೀರ್ ನಿರ್ಧಾರಕ್ಕೆ ಏನು ಕಾರಣ? ರಕ್ಷಿತ್ ಅಪ್ಸೆಟ್? ಬ್ಯಾಚುರಲ್ ಪಾರ್ಟಿಯಿಂದ ರಿಷಬ್ ಹೊರಬಂದಿದ್ದೇಕೆ?

  • News18 Kannada
  • Last Updated :
  • Bangalore, India
  • Share this:

ಪೋಸ್ಟರ್ ಮೂಲಕ ಕುತೂಹಲ ಮೂಡಿಸಿದ್ದ ರಕ್ಷಿತ್ ಶೆಟ್ಟಿ (Rakshit Shetty) ಅವರ ಬಹು ನಿರೀಕ್ಷಿತ ಸಿನಿಮಾ ಬ್ಯಾಚುರಲ್ ಪಾರ್ಟಿಯಿಂದ (Batural Party) ಕಾಂತಾರ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ಬ್ಯಾಕೌಟ್ ಮಾಡಿದ್ದಾರೆ. ಆತ್ಮೀಯ ಸ್ನೇಹಿತರಾಗಿರುವ ರಿಷಬ್ ಹಾಗೂ ರಕ್ಷಿತ್ ನಡುವಿನ ಈ ಹೊಸ ಅಪ್ಡೇಟ್ ಸಿನಿ ಪ್ರೇಮಿಗಳ ಮಧ್ಯೆ ಹೊಸ ಚರ್ಚೆ ಹುಟ್ಟುಹಾಕಿದೆ. ಭಾರೀ ಕುತೂಹಲ ಮೂಡಿಸಿದ್ದ ಪೋಸ್ಟರ್ ಶೇರ್ ಮಾಡಿದ್ದ ರಕ್ಷಿತ್ ಶೆಟ್ಟಿ ಬ್ಯಾಚುರಲ್ ಪಾರ್ಟಿ ಸಿನಿಮಾ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಇದರಲ್ಲಿ ದಿಗಂತ್ (Diganth), ಅಚ್ಯುತ್ ಕುಮಾರ್, ರಿಷಬ್ ಶೆಟ್ಟಿ ಅವರನ್ನು ಸ್ಟೈಲಿಷ್ ಲುಕ್​​ನಲ್ಲಿ ಕಂಡು ಸಿನಿ ಪ್ರಿಯರೂ ಎಕ್ಸೈಟ್ ಆಗಿದ್ದರು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.


ಸ್ಯಾಂಡಲ್​ವುಡ್ ನಟ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿರುವ ಯುವ ಜನರ ನೆಚ್ಚಿನ ಕಾಂಬಿನೇಷನ್ ಮತ್ತೆ ಒಟ್ಟಾಗಿ ಕೆಲಸ ಮಾಡಲಿದೆ. ಹೌದು ರಕ್ಷಿತ್ ಶೆಟ್ಟಿ  ಹಾಗೂ ರಿಷಭ್ ಶೆಟ್ಟಿ ಜೊತೆಯಾಗಿ ಸಿನಿಮಾ ಮಾಡುತ್ತಿದ್ದು, ಅವರ ಸಿನಿಮಾ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ನಟ ರಕ್ಷಿತ್ ಶೆಟ್ಟಿ ತಮ್ಮ ಇನ್​​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಈ ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದರು.
ಪರಂವಾಹ್ ಸ್ಟುಡಿಯೋಸ್​ ನಿರ್ಮಾಣದ ಸಿನಿಮಾದಿಂದ ರಿಷಬ್ ಔಟ್


ಪರಂವಾಹ್ ಸ್ಟುಡಿಯೋಸ್​ನ ಮುಂದಿನ ಪ್ರಾಜೆಕ್ಟ್, ಸಾಹಸ ಹಾಸ್ಯ ಚಿತ್ರ "ಬ್ಯಾಚುಲರ್ ಪಾರ್ಟಿ" ಅನ್ನು ಘೋಷಿಸಲು ಖುಷಿಪಡುತ್ತಿದ್ದೇವೆ. ರಿಷಭ್ ಶೆಟ್ಟಿ, ದಿಗಂತ್, ಅಚ್ಚುತಣ್ಣ ತಮ್ಮ ನಿರೂಪಣೆಯೊಂದಿಗೆ ನಮ್ಮನ್ನು ಮೋಜಿನ ಸವಾರಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದು ಸೆವೆನ್ ಆಡ್ಸ್ ಮತ್ತು ಪರಂವಾಹ್‌ನ ಭಾಗವಾಗಿ ನಿಮ್ಮೊಂದಿಗೆ ಸಂತೋಷದಾಯಕ ಪ್ರಯಾಣವಾಗಲಿದೆ. ನಿಮ್ಮ ಚೊಚ್ಚಲ ಪಂದ್ಯಕ್ಕೆ ಶುಭ ಹಾರೈಸುತ್ತೇನೆ. ಯೋಜನೆಯಲ್ಲಿರುವ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ರಕ್ಷಿತ್ ಶೆಟ್ಟಿ ಶುಭ ಹಾರೈಸಿದ್ದರು.


ಸ್ಯಾಂಡಲ್​ವುಡ್ ಗೆಳೆಯರು


ಸ್ಯಾಂಡಲ್​​ವುಡ್​ನಲ್ಲಿ ಕ್ಲೋಸ್ ಫ್ರೆಂಡ್ಸ್ ಆಗಿರುವಂತಹ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೋಡಿ ಫೇಮಸ್. ಒಬ್ಬರ ಸಿನಿಮಾ ಇನ್ನೊಬ್ಬರು ಚೆನ್ನಾಗಿ ಸಪೋರ್ಟ್ ಮಾಡುತ್ತಾ, ಪರಸ್ಪರ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಬಲಿಸುತ್ತಾ ಜೊತೆಯಾಗಿ ಬೆಳೆಯುತ್ತಿದ್ದಾರೆ. ಹೀಗಿರುವಾಗ ರಕ್ಷಿತ್ ಅವರು ಬ್ಯಾಚುರಲ್ ಪಾರ್ಟಿ ಸಿನಿಮಾ ನಿರ್ಮಾಣಕ್ಕೆ ರೆಡಿಯಾಗಿದ್ದರು. ಈಗ ರಿಷಬ್ ಅವರೇ ಸಿನಿಮಾದಿಂದ ಹೊರಬಂದಿದ್ದು ರಕ್ಷಿತ್ ಶೆಟ್ಟಿ ಅಪ್ಸೆಟ್ ಆಗಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.


ಸೂಪರ್ ಆಗಿತ್ತು ಪೋಸ್ಟರ್


ಬ್ಯಾಚುರಲ್ ಪಾರ್ಟಿ ಪೋಸ್ಟರ್​ನಲ್ಲಿ ದಿಗಂತ್, ರಿಷಭ್ ಶೆಟ್ಟಿ, ಅಚ್ಚುತ್ ಕುಮಾರ್ ಜೊತೆಯಾಗಿ ಕಾರಿನ ಒಳಗೆ ಕುಳಿತಿರುವುದನ್ನು ಕಾಣಬಹುದು. ಕಾರಿನ ಹಿಂಭಾಗದ ಸೀಟಿನಲ್ಲಿ ಮೂವರು ಶಿಸ್ತಾಗಿ ಡ್ರೆಸ್ ಮಾಡಿಕೊಂಡು ಕುಳಿತಿದ್ದು ರಿಷಭ್ ಕೈಯಲ್ಲಿ ಭೂತ ಕನ್ನಡಿ ಹಿಡಿದು ಏನನ್ನೋ ಕುತೂಹಲದಿಂದ ನೋಡುತ್ತಿದ್ದರೆ, ಅಚ್ಚುತಣ್ಣ ಎಳನೀರು ಕೈಯಲ್ಲಿ ಹಿಡಿದು ಚಿಲ್ ಮಾಡಿರುವುದು ಫೋಟೋದಲ್ಲಿ ಕಂಡುಬಂದಿದೆ. ಇನ್ನು ದಿಗಂತ್ ಕೈಯಲ್ಲಿ ರೋಸ್ ಹಿಡಿದು ಬೇಸರದ ಛಾಯೆಯಲ್ಲಿ ಕಂಡುಬಂದಿದ್ದಾರೆ.


ಇದನ್ನೂ ಓದಿ: Rishabh Shetty New Movie: ಈಗಾಗ್ಲೇ ಮದ್ವೆಯಾಗಿರೋ ರಿಷಭ್ ಶೆಟ್ಟಿ 'ಬ್ಯಾಚುರಲ್ ಪಾರ್ಟಿ' ಮಾಡ್ತಿದ್ದಾರೆ!


ಫ್ಯಾನ್ಸ್​​ಗೆ ಶಾಕ್


ರಕ್ಷಿತ್ ಹಾಗೂ ರಿಷಬ್ ಶೆಟ್ಟಿ ಸಿನಿಮಾಗಳಿಗೆ ವಿಶೇಷ ಫ್ಯಾನ್ ಬೇಸ್ ಇದೆ. ಆದರೆ ಈ ರೀತಿ ದಿಢೀರ್ ಆಗಿ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ಅವರ ಸಿನಿಮಾದಿಂದ ಹೊರಬಂದಿರುವುದು ಅವರ ಅಭಿಮಾನಿಗಳಿಗ ಶಾಕ್ ಕೊಟ್ಟಿದೆ. ಇದರ ಹಿಂದಿನ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

Published by:Divya D
First published: